Best Farmer Award-ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ!

October 21, 2025 | Siddesh
Best Farmer Award-ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ!
Share Now:

ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿಗೆ(Best Horticulture Farmer Award) ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಲ್ಲಿ(Thotagarike Mele) 2025-26ರ ಸಾಲಿನಲ್ಲಿ 21 ಡಿಸೆಂಬರ್ 2025 ರಿಂದ 23 ಡಿಸೆಂಬರ್ 2025 ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ಮೇಳವನ್ನು ಆಯೋಜನೆ ಮಾಡಲಾಗಿದ್ದು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳ ಪ್ರತಿಯೊಂದು ಜಿಲ್ಲೆಗೆ ಒಬ್ಬರಂತೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲು ಅರ್ಹ ರೈತರಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ನೋಂದಣಿ ಪ್ರಾರಂಭ!

ಶ್ರೇಷ್ಠ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ(Best Farmer Award Application) ಸಲ್ಲಿಸುವ ವಿಧಾನ ಹೇಗೆ? ಅಗತ್ಯ ದಾಖಲೆಗಳು ಯಾವುವು? ಶ್ರೇಷ್ಠ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಯಾವುವು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Best Horticulture Farmer Award-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ಸಾಧಕ ರೈತ ಅಥವಾ ರೈತ ಮಹಿಳೆ ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಛಾಯಾ ಚಿತ್ರಗಳ ಮೂಲಕ ದೃಢೀಕರಿಸಿ ಸಲ್ಲಿಸಬೇಕು. ಬಾಗಲಕೋಟ ಜಿಲ್ಲೆಯ ರೈತ ಅಥವಾ ರೈತ ಮಹಿಳೆ ಅರ್ಜಿ ನಮೂನೆಯನ್ನು ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಛೇರಿಯಿಂದ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೇಶನಾಲಯದಿಂದ ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್ಜಾಲ www.uhsbagalkot.edu.in ಮೂಲಕವು ಪಡೆಯಬಹುದು.

ಇದನ್ನೂ ಓದಿ: Parihara Farmers List-ಕಳೆದ ಸಾಲಿನಲ್ಲಿ ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಬಿಡುಗಡೆ!

Best Farmer Award Application

ಇದನ್ನೂ ಓದಿ: Gas Subsidy 2025-ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

Horticulture Farmer Award Application-ಅರ್ಜಿ ನಮೂನೆ ಡೌನ್ಲೋಡ್ ಮಾಡಲು ಲಿಂಕ್-Download Now

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತ ರೈತರು ಭರ್ತಿ ಮಾಡಿದ ಅರ್ಜಿಗಳನ್ನು 05 ನವೆಂಬರ್ 2025 ರೊಳಗಾಗಿ ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಚೇರಿಗೆ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Horticulture Farmer Award Guidelines-ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಹೀಗಿದೆ:

ಅರ್ಜಿದಾರರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಯಾವುದೇ ಕೃಷಿ/ ತೋಟಗಾರಿಕೆ/ಪಶು ಸಂಗೋಪನೆ / ಐಸಿಎಆರ್ ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಪಡೆದಿರಬಾರದು.

ಅರ್ಜಿದಾರರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಛಾಯಾಚಿತ್ರಗಳೊಂದಿಗೆ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿ ಪರೀಶಿಲಿಸಿ ಕಿರುಪಟ್ಟಿ ಮಾಡಿದ ಮೂರು ಕ್ಷೇತ್ರಗಳಿಗೆ ಮಾತ್ರ ಕ್ಷೇತ್ರ ವಿಕ್ಷಣೆ ಕೈಗೊಳ್ಳಲಾಗುವುದು. ಆಯ್ಕೆಯು ವಿಶ್ವವಿದ್ಯಾಲಯದ ನಿಯಮ ಹಾಗೂ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: SBI Scholarship Application-ಎಸ್.ಬಿ.ಐ ಫೌಂಡೇಶನ್ ವತಿಯಿಂದ ₹75,000/- ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಕೆ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ. ಬಾಲಾಜಿ ಕುಲಕರ್ಣಿ, ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ ಇವರ ಮೊಬೈಲ್ 9845655856 ಅಥವಾ ಡಾ. ಡಿ. ಎಲ್. ರುದ್ರೇಶ್., ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೇಶನಾಲಯ, ಇವರ ಮೊಬೈಲ್: 9538243305 ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಲಾಗಿದೆ.

Horticulture Mele 2025-ಡಿಸೆಂಬರ್ ನಲ್ಲಿ ತೋಟಗಾರಿಕೆ ಮೇಳ:

ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 21 ಡಿಸೆಂಬರ್ 2025 ರಿಂದ 23 ಡಿಸೆಂಬರ್ 2025 ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ಮೇಳ 2025 ಅನ್ನು ಆಯೋಜನೆ ಮಾಡಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: