Best Organic Farmer-ಉತ್ತಮ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡ ರೈತರಿಗೆ 50,000/- ಮೊತ್ತದ ಪ್ರಶಸ್ತಿ!

December 6, 2025 | Siddesh
Best Organic Farmer-ಉತ್ತಮ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡ ರೈತರಿಗೆ 50,000/- ಮೊತ್ತದ ಪ್ರಶಸ್ತಿ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜೀವ ವೈವಿದ್ಯ ಮಂಡಳಿಯಿಂದ 2025-26 ನೇ ಸಾಲಿನ "ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿ" ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸುವುದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಯಾವೆಲ್ಲ ವಿಭಾಗದಲ್ಲಿ ಅರ್ಜಿ ಆಹ್ವಾನಿಸಲಾಗಿದೆ? ಪ್ರಶಸ್ತಿ ಮೊತ್ತ ಎಷ್ಟು? ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Solar Pumpset Subsidy-ಶೇ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಇಂದೇ ಅರ್ಜಿ ಸಲ್ಲಿಸಿ!

Best Organic Farmer Award-ಯಾವೆಲ್ಲ ವಿಭಾಗದಲ್ಲಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ?

ಕರ್ನಾಟಕ ಜೀವ ವೈವಿದ್ಯ ಮಂಡಳಿಯಿಂದ ಈ ಕೆಳಗಿನ ಪಟ್ಟಿಯಲ್ಲಿರುವ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಅರ್ಜಿಯನ್ನ ಆಹ್ವಾನಿಸಲಾಗಿದೆ.

1) ಜೀವವೈವಿಧ್ಯತೆ ಸಂರಕ್ಷಣೆ
2) ಸಾವಯವ-ಪಾರಂಪರಿಕ ಕೃಷಿ ಪದ್ದತಿ
3) ಅತ್ಯತ್ತಮ ಜೀವ ವೈವಿದ್ಯ ನಿರ್ವಹಣಾ ಸಮಿತಿ
4) ಅತ್ಯುತ್ತಮ ಜೀವವೈವಿಧ್ಯ ಸಾಕ್ಷಚಿತ್ರ
5) ವೈದ್ಯ ಶರಣ ಸಂಗಣ್ಣ ಪ್ರಶಸ್ತಿ

ಸಾವಯವ-ಪಾರಂಪರಿಕ ಕೃಷಿ ಪದ್ದತಿ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯಲು ಸಾವಯವ-ಪಾರಂಪರಿಕ ಕೃಷಿ ಪದ್ಧತಿ' ವಿಭಾಗದಲ್ಲಿ ಸಾವಯವ ಅಥವಾ ಪಾರಂಪರಿಕ ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿರುವ ವ್ಯಕ್ತಿ/ಸಂಘ/ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಇದನ್ನೂ ಓದಿ: TATA Scholarship-ಟಾಟಾ ಗ್ರೂಪ್‌ ಕಂಪನಿ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ 15,000/- ವಿದ್ಯಾರ್ಥಿವೇತನ!

ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ, ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕ ಕಳೆನಾಶಕಗಳನ್ನು ಬಳಸಿರುವುದಿಲ್ಲವೆಂದು ಅಧಿಕೃತ ಸಂಸ್ಥೆಯಿಂದ/ಸರ್ಕಾರಿ ಕಛೇರಿಯಿಂದ ಪಡೆದಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

Best Organic Farmer Award Amount-ಪ್ರಶಸ್ತಿ ಮೊತ್ತ ಎಷ್ಟು?

ಕರ್ನಾಟಕ ಜೀವ ವೈವಿದ್ಯ ಮಂಡಳಿಯಿಂದ "ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿ"ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಂಡಳಿಯಿಂದ ಪ್ರತಿ ಪ್ರಶಸ್ತಿಗೆ ರೂ 50,000/- ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2025

ಇದನ್ನೂ ಓದಿ: Free Photoghrapy Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

Best Organic Farmer Award

ಇದನ್ನೂ ಓದಿ: AHFL Scholarship-ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Apply Method-ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಮತ್ತು ಆಸಕ್ತ ಅರ್ಜಿದಾರರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಜೀವವೈವಿದ್ಯ ಮಂಡಳಿ, ನೆಲಮಹಡಿ, ವನವಿಕಾಸ ಕಟ್ಟಡ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-560003 ವಿಳಾಸಕ್ಕೆ ಮುಚ್ಚಿದ ಲಕೋಟೆಯಲ್ಲಿ ಖುದ್ದು ಕಚೇರಿ ಹಾಜರಾಗಿ ಅಥವಾ ಅಂಚೆಯ ಮೂಲಕ ಅರ್ಜಿ ಸಲ್ಲಿಸಬಹುದು.

Best Organic Farmer Award Eligibility-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಮಾನದಂಡಗಳು:

ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಜೀವ ವೈವಿದ್ಯ ಮಂಡಳಿಯಿಂದ ನಿಗದಿಪಡಿಸಿರುವ ಅರ್ಹತ ಮಾನದಂಡಗಳ ಪಟ್ಟಿ ಹೀಗಿದೆ:

1) ಅರ್ಜಿ ಸಲ್ಲಿಸುವ ವ್ಯಕ್ತಿಯು ಕರ್ನಾಟಕದಲ್ಲಿ ವಾಸವಾಗಿರುವವರಾಗಿರಬೇಕು ಅಥವಾ ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯಾಗಿರತಕ್ಕದ್ದು.

2) ವ್ಯಕ್ತಿ/ಸಂಘ/ಸಂಸ್ಥೆಯು ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಇದುವರೆಗೆ ಯಾವುದೇ 'ಜೀವವೈವಿಧ್ಯ ಪ್ರಶಸ್ತಿ'ಯನ್ನು ಪಡೆದಿರಬಾರದು.

3) ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸಿಬ್ಬಂದಿ/ನೌಕರರಿಗೆ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: E- Swathu Website-ಪಂಚಾಯತ್ ರಾಜ್ ಇಲಾಖೆಯಿಂದ ಇ-ಸ್ವತ್ತು 2.0 ತಂತ್ರಾಂಶ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

4) ಒಂದು ಸಂಸ್ಥೆ/ಒಬ್ಬ ವ್ಯಕ್ತಿ ಈ ಮೇಲಿನ ನಾಲ್ಕು ವಿಭಾಗಗಳಲ್ಲಿ ಒಂದು ವಿಭಾಗಕ್ಕೆ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

5) ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಕನಿಷ್ಠ ಮೂರು ವರ್ಷಗಳ ಕಾರ್ಯಸಾಧನೆಯನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

6) ಅರ್ಜಿದಾರರು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಮಂಡಳಿಗೆ ಸಲ್ಲಿಸಬಹುದು ಅಥವಾ ಅರ್ಜಿದಾರರ ಹೆಸರುಗಳನ್ನು ಸೂಕ್ತ ದಾಖಲೆ & ಅರ್ಜಿದಾರರ ಒಪ್ಪಿಗೆಯ ಮೇರೆಗೆ (ಅರ್ಜಿದಾರರ ಒಪ್ಪಿಗೆ ಪತ್ರವನ್ನು ಸಲ್ಲಿಸುವುದು) ಇತರರು ನಾಮನಿರ್ದೇಶನ ಮಾಡಬಹುದಾಗಿರುತ್ತದೆ.

7) ಸರ್ಕಾರೇತರ ಸಂಸ್ಥೆಯಾಗಿದ್ದಲ್ಲಿ ಪ್ರಶಸ್ತಿ ನೀಡುವ ವರ್ಷಕ್ಕೆ ನೋಂದಾಯಿತವಾಗಿ ಕನಿಷ್ಠ ಮೂರು ವರ್ಷಗಳಾಗಿರಬೇಕು.

ಇದನ್ನೂ ಓದಿ: Indira Kit-ಇಂದಿರಾ ಆಹಾರ ಕಿಟ್ ವಿತರಣೆಗೆ ಕ್ಯೂಆರ್ ಕೋಡ್!

8) ಸರ್ಕಾರಿ ಅನುದಾನದೊಂದಿಗೆ ನಿರ್ವಹಿಸಲಾದ ಕಾರ್ಯಗಳು/ಯೋಜನೆಗಳು/ಕಾರ್ಯಕ್ರಮಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ('ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ' ವಿಭಾಗಕ್ಕೆ ಈ ಮಾನದಂಡವು ಅನ್ವಯಿಸುವುದಿಲ್ಲ)

9) ಸರ್ಕಾರದಿಂದ/ಮಂಡಳಿಯಿಂದ ರಚನೆಗೊಂಡಿರುವ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ನಂತರ ಅರ್ಹರನ್ನು ಆಯ್ಕೆ ಮಾಡಲಾಗುವುದು ಅಂತಿಮವಾಗಿರುತ್ತದೆ. ಹಾಗೂ ಆಯ್ಕೆ ಸಮಿತಿಯ ತೀರ್ಮಾನವೇ)

10) ಅರ್ಜಿದಾರರನ್ನು ಪ್ರಶಸ್ತಿ ಸಮಿತಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಲು ಆಹ್ವಾನಿಸಲಾಗುವುದಿಲ್ಲ. ಆದುದರಿಂದ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಮರ್ಪಕ ರೀತಿಯಲ್ಲಿ ಲಗತ್ತಿಸಿರಬೇಕು. ಅಪೂರ್ಣವಾದ ಹಾಗೂ ಕಾರ್ಯನಿರ್ವಹಿಸಿರುವುದರ ಬಗ್ಗೆ ಆಧಾರವಾಗಿರುವ ದಾಖಲೆ/ಸಾಕ್ಷ್ಯಾಧಾರ/ರುಜುವಾತುಗಳು ಇಲ್ಲದೇ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

11) ಪ್ರಶಸ್ತಿ ಆಯ್ಕೆ ಸಮಿತಿಯು ಅಗತ್ಯವಿದ್ದಲ್ಲಿ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಕ್ಷೇತ್ರಭೇಟಿ/ ಸಮೀಕ್ಷೆ ನಡೆಸುವ ಅಧಿಕಾರವನ್ನು ಹೊಂದಿರುತ್ತದೆ.

12) ಜೀವವೈವಿಧ್ಯ ಪ್ರಶಸ್ತಿಯ ಪ್ರತಿ ವಿಭಾಗಕ್ಕೆ ಒಬ್ಬ ವ್ಯಕ್ತಿ/ಒಂದು ಸಂಸ್ಥೆಯನ್ನು ಮಾತ್ರವೇ ಆಯ್ಕೆ ಮಾಡಲಾಗುವುದು. ಪ್ರಶಸ್ತಿಗೆ ಅರ್ಹರಾದ ವ್ಯಕ್ತಿ/ಸಂಸ್ಥೆಗೆ ರೂ.50,000/- ನಗದು ಬಹುಮಾನದೊಂದಿಗೆ ಪ್ರಮಾಣ ಪ್ರ ಪತ್ರವನ್ನು ಹಾಗೂ ಅತ್ಯುತ್ತಮ ಅರ್ಜಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಗುವುದು.

For More Information-ಅರ್ಜಿ ಸಲ್ಲಿಸುವುದರ ಕುರಿತು ಹೆಚ್ಚಿನ ಮಾಹಿತಿಗಾಗಿ:

ಮಂಡಳಿಯ ಅಧಿಕೃತ ಪ್ರಕಟಣೆ ಮತ್ತು ಅರ್ಜಿ ನಮೂನೆ ಡೌನ್ಲೋಡ್ ಲಿಂಕ್- Download Now
ಸಹಾಯವಾಣಿ- 080-23448783
ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: