HomeNew postsBest vegetables for monsoon: ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿ ಯಾವುವು?

Best vegetables for monsoon: ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿ ಯಾವುವು?

ಬದಲಾಗುತ್ತಿರುವ ಹವಾಮಾನದಲ್ಲಿ ತರಕಾರಿ ಬೆಳೆ ಬೆಳೆಯಲು ರೈತರಿಗೆ ಅನೇಕ ಕಷ್ಟಕರ ಸನ್ನಿವೇಶಗಳು ಅಡ್ಡಬರುತ್ತಿವೆ ಉದಾಹರಣೆಗೆ ಬೇಸಿಗೆ ಅಲ್ಲಿ ಹೆಚ್ಚು ಬಿಸಿಲು ಮಳೆಗಾಲದಲ್ಲಿ ಒಂದೇ ಬಾರಿಗೆ ಹೆಚ್ಚು ಮಳೆ ಬಂದು ಬೆಳೆ ಹಾನಿಯಾಗುವುದು, ಅನೀರಿಕ್ಷಿತ ರೋಗ ಮತ್ತು ಕೀಟ ಭಾದೆಗಳು ಹೀಗೆ ಅನೇಕ ಸಮಸ್ಯೆಗಳಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದಿನ ದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.

ಈಗ ರಾಜ್ಯದಲ್ಲಿ ಎಲ್ಲಾ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮುಂಗಾರು ಮಳೆ ಅವರಿಸಿದ್ದು ಅನೇಕ ರೈತರು ಮೆಕ್ಕೆಜೋಳ ಇತರೆ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ ಇದರ ಜೊತೆಗೆ ತರಕಾರಿ ಬೆಳೆಯಲು ಅಸಕ್ತಿ ಹೊಂದಿರುವ  ರೈತರು ಯಾವ ತರಕಾರಿ ಬೆಳೆದರೆ ಸೂಕ್ತ ಮತ್ತು ಅ ಬೆಳೆಯಲ್ಲಿ ಯಾವ ತಳಿ ಆಯ್ಕೆ ಮಾಡಬೇಕು ಎಂದು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿಗಳ ವಿವರ-Best vegetable seeds for monsoon:

ಟೊಮೆಟೋ(Tomato) – ಅರ್ಕ ರಕ್ಷಕ್, ಅರ್ಕಾ ಅಭೇದ , ಅಭಿನವ್, ಅಭಿಲಾಷ್, ಸಾಹೋ, ಶಕ್ಸಂ, 440, ಅನ್ಸಾಲ್, ಮೆಗದುತ, JK-811.

ಹಸಿ ಮೆಣಸಿನಕಾಯಿ(Green chili): ಆರ್ಕಾ ಹರಿತ, ಅರ್ಕ ಕ್ಯಾತಿ, ಸಿತಾರ್ ಗೋಲ್ಡ್ , ಸೋನಾಲ್, ಬಂಗಾರಂ,  syngenta -5531, ಅರಮರ್, DDLG.

ಒಣ ಮೆಣಸಿನಕಾಯಿ(Dry chili): syngenta -2043, syngenta -5531, indama-5,  Buyer-341

ಬದನೆ(eggplant): Mahyco-10,11, East-West,-Lalith, Meghan , Seminis -Manjari

ಉಳ್ಳಾಗಡ್ಡಿ/ಈರುಳ್ಳಿ(Onion): ಅರ್ಕ ಕಲ್ಯಾಣ್, ಭೀಮಾ ಸೂಪರ್, ಪಂಚಗಂಗಾ, N-53, ನಾಸಿಕ್ ರೆಡ್, ತೆಲಗಿ ಲೋಕಲ್. ಬಳ್ಳಾರಿ ರೆಡ್.
ಪ್ರೇಮಾ, ಮಾರ್ಷಲ್.

ಬೆಂಡೆ(Lady finger): ಅರ್ಕ ಅನಾಮಿಕ, ರಾಧಿಕಾ, ಸಾಹಿಬ್,ಶಕ್ತಿ, ಸಾಮ್ರಾಟ, ಮೋನಿಕಾ, etc

ಸೌತೆಕಾಯಿ(Cucumber): Dharwad green, chitra, Malini, ನೇತ್ರಾ, ಗಂಗೋತ್ರಿ,  ತ್ರಿಶಾ, ಸೈರಾ, ಜೆಬಾ, ಜಂಬೋ ಗ್ರೀನ್.

ಹಾಗಲಕಾಯಿ(Bitter gourd): ಶ್ರೇಯಾ, ಪ್ರಗತಿ, 1515, US, ಮೋನಿಕಾ, etc

ಸ್ವೀಟ್ ಕಾರ್ನ್(Sweet corn): ಶುಗರ್ -75, ಹೈ ಬ್ರಿಕ್ಸ್, 

ಡೊಣ್ಣೆ ಮೆಣಸಿನಕಾಯಿ(capsicum): ಇಂದ್ರಾ, ಬೆಳಗಾಂವ ಪಾಪ್ಟೆ, ಆಶಾ.

ಇದನ್ನೂ ಓದಿ: Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

ತರಕಾರಿ ಬೀಜಗಳನ್ನು(Vegetables seeds) ಎಲ್ಲಿ ಖರೀದಿ ಮಾಡಬೇಕು?

ರೈತರು ತಮ್ಮ ಹತ್ತಿರದ ಗೊಬ್ಬರ ಮತ್ತು ಬೀಜ ಮಾರಾಟ ಮಾಡುವ ಅಂಗಡಿಯಲ್ಲಿ ವಿಚಾರಣೆ ಮಾಡಿ ತರಕಾರಿ ಬೀಜಗಳನ್ನು ಖರೀದಿ ಮಾಡಬವುದು ಅಥವಾ ನೇರವಾಗಿ ಈ https://www.bighaat.com/collections/vegetables ಲಿಂಕ್ ಮೇಲೆ ಕ್ಲಿಕ್ ಮಾಡಿ ಬಿಗ್ ಹಾತ್(Big haat) ಅನ್ಲೈನ್ ಕೃಷಿ ಪರಿಕರ ಮಾರಾಟ ಅಂಗಡಿಯಲ್ಲಿ ಎಲ್ಲಾ ತರಹದ ತರಕಾರಿ ಬೀಜಗಳನ್ನು ಬುಕಿಂಗ್ ಮಾಡಿ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬವುದಾಗಿದೆ.

ಮಾಹಿತಿ ಕೃಪೆ: ಡಾ,ಮಹಾಂತೇಶ್ ಜೋಗಿ 
ಮೊಬೈಲ್ ಸಂಖ್ಯೆ-8105453873

Most Popular

Latest Articles

Related Articles