BGM Foundation-ಬಿಜಿಎಂ ಫೌಂಡೇಶನ್ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ!

January 21, 2026 | Siddesh
BGM Foundation-ಬಿಜಿಎಂ ಫೌಂಡೇಶನ್ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ!
Share Now:

2025-2026 ನೇ ಸಾಲಿನ BGM ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನದ ಅಡಿಯಲ್ಲಿ(BGM Foundation Scholarship) ಬಿಜಿಎಂ ಫೌಂಡೇಶನ್‌ನ ವತಿಯಿಂದ ಸಾಮಾನ್ಯ ಅಥವಾ ವೃತ್ತಿಪರ ಸ್ತಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹36,000 ದಿಂದ ₹75,000 ದ ವರೀಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ಪೂರ್ಣ ಸಮಯದ ಪದವಿಪೂರ್ವ(BGM Foundation)ಅಥವಾ ಸ್ನಾತಕೋತ್ತರ (ಸಾಮಾನ್ಯ/ವೃತ್ತಿಪರ) ಕೋರ್ಸ್‌ಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಹಾಗೂ ಪಶುವೈದ್ಯಕೀಯ ವಿಜ್ಞಾನ, ಪಶುಸಂಗೋಪನೆ, ಕೃಷಿ, ಡೈರಿ ವಿಜ್ಞಾನ, ಜಾನುವಾರು (ಕೊಂಬಿನ ದನ) ನಿರ್ವಹಣೆ, ಪ್ಯಾರಾ ಪಶುವೈದ್ಯಕೀಯ, ಮೇವು ನಿರ್ವಹಣೆ ಮತ್ತು ಇತರ ಸಂಬಂಧಿತ ವಲಯಗಳಲ್ಲಿ ಡಿಪ್ಲೊಮಾ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ಈ ವಿದ್ಯಾರ್ಥಿವೇತನವನ್ನು ರೂಪಿಸಲಾಗಿದೆ.

ಇದನ್ನೂ ಓದಿ: Best Savings Plan-ಸುಕನ್ಯಾ ಸಮೃದ್ಧಿ ಯೋಜನೆ: ₹1.5 ಲಕ್ಷ ಹೂಡಿಕೆಗೆ ₹69 ಲಕ್ಷ ರಿಟರ್ನ್ಸ್!

ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ? ಅರ್ಜಿ ಸಲ್ಲಿಸಲು ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಕೊನೆಯ ದಿನಾಂಕ ಯಾವುದು? ಇನ್ನಿತರ ಇನ್ನೂ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Ending Date For Scholorship-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಫೆಬ್ರವರಿ 2026

ಇದನ್ನೂ ಓದಿ: Ujjwala Scheme-ಉಜ್ವಲ ಯೋಜನೆ 2.0: ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ!

Who Can Apply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ‍ ಅಭ್ಯರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಪಶುವೈದ್ಯಕೀಯ ವಿಜ್ಞಾನ, ಪಶುಸಂಗೋಪನೆ, ಕೃಷಿ, ಡೈರಿ ವಿಜ್ಞಾನ, ಜಾನುವಾರು (ಕೊಂಬುಳ್ಳ ದನ) ನಿರ್ವಹಣೆ, ಪ್ಯಾರಾ ಪಶುವೈದ್ಯಕೀಯ, ಮೇವು ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಯಾವುದೇ ವರ್ಷ ಪೂರ್ಣಾವಧಿಯ ಸ್ನಾತಕೋತ್ತರ ಕೋರ್ಸ್ (ಸಾಮಾನ್ಯ/ವೃತ್ತಿಪರ) ಮಾಡುತ್ತಿರಬೇಕು.

ಕಳೆದ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು (ಅಥವಾ ಸಮಾನವಾದ CGPA) ಪಡೆದಿರಬೇಕು. ಗಮನಿಸಿ: ಆದ್ಯತೆಯ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ 5% ವಿನಾಯಿತಿ.

ಅಭ್ಯರ್ಥಿಯಾ ವಾರ್ಷಿಕ ಆದಾಯದ ಮಿತಿಯು 8 ಲಕ್ಷ ಮೀರಿರಬಾರದು.

ಬಡ್ಡಿ4ಸ್ಟಡಿ ಅಥವಾ ಬಿಜಿಎಂ ಫೌಂಡೇಶನ್‌ನ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಧವಿರುವುದಿಲ್ಲ.

ವಿದ್ಯಾರ್ಥಿನಿಯರು, ಅಂಗವಿಕಲರು, ಒಂಟಿ-ಪೋಷಕ ಮಗು, ಅನಾಥರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Prize Money-2025-26ನೇ ಸಾಲಿನ ಮೆಟ್ರಿಕ್ ನಂತರದ ಮತ್ತು SSLC ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!

Scholorship Amount-ಈ ಯೋಜನೆಯ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

BGM ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ

ಸಾಮಾನ್ಯ ಸ್ನಾತಕೋತ್ತರ ಪದವಿಗೆ: ₹36,000 ರೂ ಗಳು
ವೃತ್ತಿಪರ ಸ್ನಾತಕೋತ್ತರ ಪದವಿಗೆ: ₹75,000 ರೂ ಗಳು

ಹೆಚ್ಚಿನ ಮಾಹಿತಿಗಾಗಿ: ವಿದ್ಯಾರ್ಥಿವೇತನ ನಿಧಿಯು ಬೋಧನಾ ಶುಲ್ಕ, ವಸತಿ, ಆಹಾರ, ಸಾರಿಗೆ, ಪರೀಕ್ಷಾ ಶುಲ್ಕಗಳು ಮತ್ತು ಇತರ ಶೈಕ್ಷಣಿಕ ವೆಚ್ಚಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Bhoo Odetana Yojana-ಭೂ ಒಡೆತನ ಯೋಜನೆಯಡಿ ಸ್ವಂತ ಜಮೀನು ಖರೀದಿಗೆ 12.5 ಲಕ್ಷ ಸಹಾಯಧನ!

How To Apply-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವೆಲ್ಲ ಹಂತಗಳನ್ನು ಅನುಸರಿಸಬೇಕು?

BGM ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ BGM ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಬೇಕು.

Step-1: ವಿದ್ಯಾರ್ಥಿಯು ಮೊದಲು ಈ ಲಿಂಕ್ ಮೇಲೆ ಕ್ಲಿಕ್ "Scholorship Appliation" ಮಾಡಿ ಅಧಿಕೃತ ವಿದ್ಯಾರ್ಥಿವೇತನದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಈ ಪುಟದಲ್ಲಿ ಕಾಣುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. “Create an Account” ಬಟನ್ ಮೇಲೆ ಪ್ರೆಸ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಹೊಸ ಖಾತೆಯನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ಓಪನ್ ಆಗುತ್ತದೆ.

Step-4: ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಸಕೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Anabe Krishi Subsidy-ಅಣಬೆ ಕೃಷಿಯನ್ನು ಪ್ರಾರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

BGM Foundation Scholarship

ಇದನ್ನೂ ಓದಿ: Free Neurology Treatment-ನರಮಂಡಲ ರೋಗಿಗಳಿಗೆ ಸರ್ಕಾರದಿಂದ 2 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ವಿದ್ಯಾರ್ಥಿಯ ಆಧಾರ್ ಕಾರ್ಡ
ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶದ ಪುರಾವೆ
ಹಿಂದಿನ ತರಗತಿಯ ಅಂಕಪಟ್ಟಿ
ಸಂಸ್ಥೆಯಿಂದ ಶುಲ್ಕ ರಶೀದಿ
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಪುಸ್ತಕ
ಪಾಸ್‌ಪೋರ್ಟ್ ಸೈಜ್ ಫೋಟೊ

ಇದನ್ನೂ ಓದಿ: Re-Marriage Assistance-ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆಯಡಿ ₹3.0 ಲಕ್ಷ ಆರ್ಥಿಕ ನೆರವು!

More Information about Scholorship-ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read More

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: