Bhu Suraksha Yojana-ರೈತರಿಗೆ ಡಿಜಿಟಲ್ ಸೌಲಭ್ಯ: ಜಮೀನಿನ ದಾಖಲೆ ಈಗ ಒಂದೇ ಕ್ಲಿಕ್ಕಿನಲ್ಲಿ ಲಭ್ಯ!

August 6, 2025 | Siddesh
Bhu Suraksha Yojana-ರೈತರಿಗೆ ಡಿಜಿಟಲ್ ಸೌಲಭ್ಯ: ಜಮೀನಿನ ದಾಖಲೆ ಈಗ ಒಂದೇ ಕ್ಲಿಕ್ಕಿನಲ್ಲಿ ಲಭ್ಯ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯಿಂದ(Karnataka Revenue Department) ರೈತರ ಜಮೀನಿನ ಹಳೆಯ ಮೂಲ ದಾಖಲೆಗಳನ್ನು ಪಡೆಯಲು ಕಚೇರಿ ಅಲೆದಾಟಕ್ಕೆ ಬ್ರೇಕ್ ಹಾಕಲು ‘ಭೂ ಸುರಕ್ಷಾʼ ಎನ್ನುವ ವಿನೂತನ ಯೋಜನೆಯನ್ನು(Bhu Suraksha Yojana) ಜಾರಿಗೆ ತಂದಿದ್ದು ಇನ್ನು ಮುಂದೆ ಸರಳ ಮತ್ತು ವೇಗವಾಗಿ ರೈತರು ತಮ್ಮ ಜಮೀನಿನ ಮೂಲ ದಾಖಲೆಗಳನ್ನು ಪಡೆಯಲು ಅವಕಾಶವಿದ್ದು, ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಸರ್ಕಾರಿ ಕಚೇರಿಗಳಿಗೆ ಅನಗತ್ಯ ಓಡಾಟ ಸೇರಿದಂತೆ ರೈತರನ್ನು ಶೋಷಿಸುವ ಎಲ್ಲಾ ವಿಚಾರಗಳಿಗೂ ಶಾಶ್ವತ ಪರಿಹಾರ ನೀಡುವುದು ಹಾಗೂ ಬೆರಳ ತುದಿಗೆ ರೆಕಾರ್ಡ್ ರೂಂ(Land Records) ತಲುಪಿಸುವುದೇ ‘ಭೂ ಸುರಕ್ಷಾʼ ಅಭಿಯಾನದ(Bhu Suraksha Abhiyana) ಮೂಲ ಧ್ಯೇಯ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಇದನ್ನೂ ಓದಿ: SSLC ಮತ್ತು PUC ಅಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ!

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಡಳಿತ ಕಚೇರಿಯಲ್ಲಿರುವ ರೆಕಾರ್ಡ್ ರೂಂ(Records Room) ದಾಖಲೆಗಳನ್ನು “ಭೂ ಸುರಕ್ಷಾ” ಯೋಜನೆ ಅಡಿಯಲ್ಲಿ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಅಭಿಯಾನಕ್ಕೆ ಇಂದು ಚಾಲನೆ ನೀಡಿ ಮಾತನಾಡಿದರು.

ಭೂ ಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು(Agriculture Land Records)ಬಚ್ಚಿಡುವ ಹಾಗೂ ತಿದ್ದುವ ಮೂಲಕ ಬಡ ರೈತರನ್ನು ಶೋಷಿಸುವ ಕೆಲಸ ದಶಕಗಳಿಂದಲೂ ನಡೆಯುತ್ತಿದೆ. ಸರ್ಕಾರಿ ಕಚೇರಿ ಹಾಗೂ ಕೋರ್ಟು ಕೇಸು ಅಂತ ಅಲೆಯುವುದೇ ನೈಜ ರೈತರಿಗೆ ತಲೆನೋವಿನ ಕೆಲಸವಾಗಿದೆ. ಮತ್ತೊಂದೆಡೆ ಮಧ್ಯವರ್ತಿಗಳೂ ಸಹ ರೈತರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದಾರೆ.

ಈ ಎಲ್ಲಾ ಶೋಷಣೆಗಳಿಂದ ಅನ್ನದಾತರಿಗೆ ನೆಮ್ಮದಿ ನೀಡಬೇಕು. ರೆಕಾರ್ಡ್ ರೂಂ ಅನ್ನು ಜನರ ಬೆರಳ ತುದಿಗೆ ತರಬೇಕು. ಜನರಿಗೆ ಸಿಗಬೇಕಾದ ಸೌಲಭ್ಯ ಸರಳ ಸುಳಲಿತವಾಗಿ ತೊಂದರೆ ಇಲ್ಲದಂತೆ ಲಭ್ಯವಾಗುವಂತಿರಬೇಕು ಎಂಬುದೇ ನಮ್ಮ ಉದ್ದೇಶ. ಹೀಗಾಗಿಯೇ “ಭೂ ಸುರಕ್ಷಾ” ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Post Matric Scholarship-ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

Minister Krishna Byregowda

ಇದನ್ನೂ ಓದಿ: Registered Post-ಅಂಚೆ ಇಲಾಖೆಯಲ್ಲಿ ಇನ್ನುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್!

Land Records Digital Method-ಡಿಜಿಟಲ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?

ರೈತರು ತಮ್ಮ ಜಮೀನಿನ ಮಾಲೀಕತ್ವಕ್ಕೆ ಸಂಬಂಧಪಟ್ಟ ಮೂಲ ಮತ್ತು ಹಳೆಯ ದಾಖಲೆಗಳನ್ನು ಪಡೆಯಲು ಈ ಹಿಂದೆ ತಹಶೀಲ್ದಾರ್ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪಡೆಯಬೇಕಿತ್ತು ಅದರೆ ಈಗ ಈ ವಿಧಾನಕ್ಕೆ ಬ್ರೇಕ್ ಬೀಳಲಿದ್ದು ರೈತರೇ ಸ್ವಂತ ಮೊಬೈಲ್ ಅಥವಾ ನಾಡಕಚೇರಿಯಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಶೀಘ್ರವಾಗಿ ಜಮೀನಿನ ಮೂಲ ದಾಖಲೆಗಳನ್ನು ಪಡೆಯಬಹುದು.

How To Apply For Online Land Records-ಆನ್ಲೈನ್ ಮೂಲಕ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?

ಕಂದಾಯ ಇಲಾಖೆಯ ಅಧಿಕೃತ "ಭೂ ಸುರಕ್ಷಾ" ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಲು ಅವಕಾಸವಿರುತ್ತದೆ.

Step-1: ಮೊದಲಿಗೆ ಇಲ್ಲಿ ಕ್ಲಿಕ್ "Apply Online For Land Records" ಮಾಡಿ ಅಧಿಕೃತ ಭೂ ಸುರಕ್ಷಾ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PM Kisan Status-ಪಿಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹2,000 ಆರ್ಥಿಕ ನೆರವು ವರ್ಗಾವಣೆ!

Bhu Suraksha Abhiyana

ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ 20ನೇ ಕಂತಿನ ಅರ್ಹ ರೈತರ ಪಟ್ಟಿ ಪ್ರಕಟ! ಇಂದೇ ಪರಿಶೀಲಿಸಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಅನ್ನು ನಮೂದಿಸಿ "ಓಟಿಪಿ ರಚಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ಹಾಕಿ "ಲಾಗಿನ್" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪುಟದಲ್ಲಿ ಮೊಬೈಲ್ ನಂಬರ್ ಪಕ್ಕದ ಕಾಲಂ ನಲ್ಲಿ ಕಾಣುವ "Generate OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಪಕ್ಕದ ಕಾಲಂ ನಲ್ಲಿ OTP ಅನ್ನು ಹಾಕಿ "OTP ಪರಿಶೀಲಿಸಿ/Verify OTP" ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ ನಿಮ್ಮ ಹೆಸರು ಮತ್ತು ವಿಳಾಸ,ಮೈಲ್ ಐಡಿಯನ್ನು ಹಾಕಿ "ಉಳಿಸಿ/Save" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರೊಪೈಲ್ ವಿವರವನ್ನು ರಚನೆ ಮಾಡಿಕೊಳ್ಳಿ.

Step-4: ನಂತರ "ಕಡತ ವಿನಂತಿಯನ್ನು ನಮೂದಿಸಿ /Enter File Request" ಕಾಲಂ ನಲ್ಲಿ ಕಡತದ ವಿವರವನ್ನು ಭರ್ತಿ ಮಾಡಿ "Next" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "ಗ್ರಾಮದಲ್ಲಿ ಶೋಧಿಸಿ/Search withi the village" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ/ತಾಲೂಕು/ಹೋಬಳಿ/ಗ್ರಾಮ/ಪೈಲ್/ರಿಜಿಸ್ಟರ್ ಆಯ್ಕೆಯನ್ನು ಮಾಡಿಕೊಂಡು ಸರ್ವೆ ನಂಬರ್ ಹಾಕಿ ಹುಡುಕಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೇಕಾದ ದಾಕಲೆಯನ್ನು ಅಯ್ಕೆ ಮಾಡಿಕೊಂಡು "Next" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-5: ಬಳಿಕ ಕೊನೆಯಲ್ಲಿ finish ಆಯ್ಕೆಯೆ ಮೇಲೆ ಕ್ಲಿಕ್ ಮಾಡಿ ದಾಖಲೆಯನ್ನು ಪಡೆಯಲು ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸ್ವೀಕೃತಿಯನ್ನು ಪಡೆಯಿರಿ.

ವಿಶೇಷ ಸೂಚನೆ: ಭೂ ಸುರಕ್ಷಾ ಯೋಜನೆಯು ಇತ್ತೀಚೆಗೆ ಪ್ರಾರಂಭವಾಗಿರುವ ಕಾರಣ ಎಲ್ಲಾ ಗ್ರಾಮದ ದಾಖಲೆಗಳು ಇನ್ನು ಸಹ ಆನ್ಲೈನ್ ನಲ್ಲಿ ದಾಖಲಾಗಿರುವುದಿಲ್ಲ ಮೇಲಿನ ವಿಧಾನವನ್ನು ಅನುಸರಿಸಿ ದಾಖಲೆ ಪಡೆಯಲು ಸಾಧ್ಯವಾಗದೇ ಇದ್ದರೆ ನಿಮ್ಮ ಹೋಳಿಯ ನಾಡಕಚೇರಿಯಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ಸ್ಕಾಲರ್‌ಶಿಪ್ ಯೋಜನೆಯಡಿ ₹12,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ರಾಜ್ಯದಲ್ಲಿದೆ 100 ಕೋಟಿ ಪುಟ ದಾಖಲೆ ಈ ಪೈಕಿ 35.36 ಕೋಟಿ ಪುಟಗಳ ಸ್ಕ್ಯಾನ್ ಪೂರ್ಣ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಭೂ ದಾಖಲೆಗೆ ಸಂಬಂಧಿಸಿ 100 ಕೋಟಿಗೂ ಅಧಿಕ ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 35 ಕೋಟಿ ಪುಟಗಳು ಸ್ಕ್ಯಾನ್ ಬಾಕಿ ಇದೆ. ಈ ಕೆಲಸ ತಹಶೀಲ್ದಾರ್ ಕಚೇರಿಗಳಿಗೆ ಸೀಮಿತವಾಗದೆ ಉಪವಿಭಾಗಾಧಿಕಾರಿ-ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ. ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಈ ಕೆಲಸಕ್ಕೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: Kusum-B Yojana- ರೈತರಿಗೆ ಬಂಪರ್ ಸುದ್ದಿ! ಅಕ್ರಮ ಪಂಪ್ ಸೆಟ್ ಗಳಿಗೆ ಸೌರವಿದ್ಯುತ್!

Bhu Suraksha Yojana-ವಾರಂತ್ಯದೊಳಗೆ ಸ್ಕ್ಯಾನ್ ಪೂರ್ಣ:

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿದಿನ ಸರಾಸರಿಯಾಗಿ 10 ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಮತ್ತಷ್ಟು ವೇಗ ಪಡೆಯಲಿದ್ದು, ಮುಂದಿನ ಡಿಸೆಂಬರ್ ಒಳಗೆ ತಹಶೀಲ್ದಾರ್ ಕಚೇರಿಯ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು. 2026 ಮಾರ್ಚ್ ವೇಳೆಗೆ ಉಪ ವಿಭಾಗಾಧಿಕಾರಿ ಕಚೇರಿ ರೆಕಾರ್ಡ್ ರೂಂ ಗಳಲ್ಲಿರುವ ದಾಖಲೆಗಳ ಸ್ಕ್ಯಾನ್ ಮುಗಿಸಲಾಗುವುದು ಎಂದು ತಿಳಿಸಿದರು.

Online Agriculture Land Records-ಕಚೇರಿಗೆ ಅಲೆಯದೆ ಮನೆಯಿಂದಲೇ ದಾಖಲೆ ಪಡೆಯಿರಿ:

ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಿದ ದಾಖಲೆಗಳನ್ನು ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯದೆ ಮನೆಯಿಂದಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ರೈತರಿಗೆ ಮೊಬೈಲ್‍ನಲ್ಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಗೊತ್ತಿಲ್ಲದಿದ್ದರೂ ಅವರು ಇನ್ಮುಂದೆ ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ. ಪಕ್ಕದ ನಾಡ ಕಚೇರಿಗೆ ಬೇಕಿದ್ದರೂ ಹೋಗಿ ಅಲ್ಲಿನ ಅಧಿಕಾರಿಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು.

ಸ್ಥಳೀಯವಾಗಿ ಜನರಿಗೆ ಸಹಾಯವಾಗಬೇಕು ಎಂಬ ಕಾರಣಕ್ಕೆ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ನೀಡಲಾಗಿದೆ. ಅಲ್ಲದೆ, ಈವರೆಗೆ ರಾಜ್ಯಾದ್ಯಂತ 4 ಲಕ್ಷ ದಾಖಲೆಗಳನ್ನು ಹೀಗೆ ಡಿಜಿಟಲ್ ರೂಪದಲ್ಲಿ ಜನರಿಗೆ ನೀಡಿದ್ದೇವೆ. ಜನ ಯಾವ ದಾಖಲೆ ಅರ್ಜಿ ಸಲ್ಲಿಸುತ್ತಾರೆ ಆ ದಾಖಲೆಯನ್ನೇ ಮೊದಲು ಸ್ಕ್ಯಾನ್ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: DL and RC Card- ವಾಹನ ಚಾಲಕರಿಗೆ ಸಿಹಿ ಸುದ್ದಿ! DL ಮತ್ತು RC ಡೆಲಿವರಿ ಈಗ ಮತ್ತಷ್ಟು ಬೇಗ! ಬಂದಿದೆ ಸ್ಮಾರ್ಟ್ ಕಾರ್ಡ್?

Karnataka Revenue Minister Krishna Byre Gowda-ಬೆಂಗಳೂರು ಸುತ್ತಮುತ್ತ ಅನೇಕ ದಾಖಲೆಗಳಲ್ಲಿ ಬೋಗಸ್ ಎಂಟ್ರಿ ಮಾಡಲಾಗಿದೆ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ಸುತ್ತಮುತ್ತ ಅನೇಕ ದಾಖಲೆಗಳಲ್ಲಿ ಬೋಗಸ್ ಎಂಟ್ರಿ ಮಾಡಲಾಗಿದೆ. ಈ ಕೃತ್ಯದಲ್ಲಿ ಕೆಲವು ಅಧಿಕಾರಿಗಳ ಕೈವಾಡವೂ ಇದ್ದು, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಅಲ್ಲದೆ, ಇಂತಹ ನಕಲಿ ದಾಖಲೆಗಳ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸರ್ಕಾರಕ್ಕೂ ಸತತ ಸೋಲಾಗುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಕೆಲವು ಅಧಿಕಾರಿಗಳ ಕುಕ್ರುತ್ಯದಿಂದ ಸಾರ್ವಜನಿಕ ಆಸ್ತಿ ವ್ಯವಸ್ಥಿತವಾಗಿ ಭೂ ದೋಚುವವರ ಪಾಲಾಗಿದೆ. ಇನ್ಮುಂದೆ ಇಂತಹ ಅನಾಹುತ ಆಗದಂತೆ ತಡೆಯಬೇಕು. ಈ ದಂಧೆಗೆ ಭೂ ಸುರಕ್ಷಾ ಯೋಜನೆಯ ಮೂಲಕ ಕಡಿವಾಣ ಹಾಕುತ್ತಿದ್ದೇವೆ. ಹಿಂದೆ ಆಗಿರುವ ನಕಲಿ ವ್ಯವಹಾರಗಳಿಗೆ ಸೋತು ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ದಾಖಲೆಗಳು ನಕಲಿ ಅಂತ ಗೊತ್ತಾದ್ರೆ ಫೋರೆನ್ಸಿಕ್ ಡಿಪಾರ್ಟ್‍ಮೆಂಟ್‍ಗೆ ನೀಡಿ ಅದನ್ನು ತನಿಖೆ ಮಾಡಿ ಸತ್ಯ-ಸುಳ್ಳನ್ನು ಸಾಬೀತು ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಲಾಗಿದೆ.

ಎಫ್‍ಎಸ್‍ಎಲ್ ತಂಡ ಅಧ್ಯಯನ ನಡೆಸುವುದಕ್ಕೆ ಸಹಾಯವಾಗಲು ಪ್ರಾಯೋಗಿಕ ಕೊಠಡಿಗೆ ಅಗತ್ಯ ಹಣ ಸಹಾಯ ನೀಡಲೂ ಸಹ ನಾವು ಸಿದ್ದರಿದ್ದೇವೆ. ಸೋಲನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಬೋಗಸ್ ದಾಖಲೆ ಎಂದು ಗೊತ್ತಾದರೆ ಸುಪ್ರೀಂ ಕೋರ್ಟ್‍ವರೆಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಉಪಸ್ಥಿತರಿದ್ದರು.

For More Information-ಹೆಚ್ಚಿನ ಮಾಹಿತಿಗಾಗಿ:

Helpline Mail Id-ಅಧಿಕೃತ ಸಹಾಯವಾಣಿ ಮೇಲ್ ವಿಳಾಸ-bhoomi@karnataka.gov.in
Helpline-ಸಹಾಯವಾಣಿ-080-22113255

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: