Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯ!ಯಾವ ಜಿಲ್ಲೆಗೆ ಎಷ್ಟು ಅನುದಾನ?

August 8, 2025 | Siddesh
Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯ!ಯಾವ ಜಿಲ್ಲೆಗೆ ಎಷ್ಟು ಅನುದಾನ?
Share Now:

ಕರ್ನಾಟಕ ರಾಜ್ಯ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು(Karnataka Cabinet Meeting Highlights) ತೆಗೆದುಕೊಳ್ಳಲಾಗಿದ್ದು ಜಿಲ್ಲಾವಾರು ಹಂಚಿಕೆಯಾದ ಅನುದಾನದ ಕುರಿತು ವಾರ್ತಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದ್ದು ಇದರ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಈ ಅಂಕಣದಲ್ಲಿ ನಿನ್ನೆ ನಡೆದ ಅಂದರೆ 07 ಆಗಸ್ಟ್ 2025 ರಂದು ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ(Karnataka Cabinet Meeting)ತೆಗೆದುಕೊಂಡ ಪ್ರಮುಖ ನಿರ್ಣಯಗಳ ಪಟ್ಟಿ, ಜಿಲ್ಲಾವಾರು ಹಂಚಿಕೆಯಾದ ಅನುದಾನದ ವಿವರ ಮತ್ತು ಕಾಮಗಾರಿ ಮಾಹಿತಿ, ಸೇರಿದಂರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Atal Pension Scheme-ಕೇಂದ್ರ ಸರ್ಕಾರದಿಂದ ವೃದ್ಧರಿಗೆ ತಿಂಗಳಿಗೆ 5000 ಪೆನ್ಷನ್! ನೀವು ಕೂಡ ಅಪ್ಲೈ ಮಾಡಿ!

Karnataka Cabinet Decisions-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ವಿವರ ಹೀಗಿದೆ:

ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ಅದರಡಿ ಬರುವ ವಿತರಣಾ ನಾಲೆಗಳ ಆಧುನಿಕ ಕಾಮಗಾರಿಯ 790 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಟ್ಟೆಮಳವಾಡಿ ಅಣೆಕಟ್ಟು ನಾಲೆ ಮತ್ತು ವಡಕೆಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ ಕಾಮಗಾರಿಗಳ ಹಾಗೂ ಅಡ್ಡಮೋರಿಗಳ ಅಭಿವೃದ್ಧಿ ಕಾಮಗಾರಿಗಳನ್ನು ₹49.85 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಅಗತ್ಯತೆಗಳಿಗೆ ಅನುಗುಣವಾಗಿ ₹10 ಕೋಟಿ ವೆಚ್ಚದಲ್ಲಿ ಹಾಸಿಗೆ ಮತ್ತು ₹40 ಕೋಟಿ ವೆಚ್ಚದಲ್ಲಿ ಕಾಟ್‌ಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ: Lalbagh Flower Show-ನಾಳೆಯಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ! ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿ!

ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ವಿದ್ಯುತ್ ಚಾಲಿತ ನಾಲ್ಕು ಚಕ್ರಗಳ ವಾಹನ ಖರೀದಿಸಲು ತಲಾ 13 ಲಕ್ಷ ಸಹಾಯಧನದ ಮಿತಿಯಲ್ಲಿ ಒಟ್ಟು 1,103 ವಾಹನಗಳನ್ನು ₹33.09 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ 50 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಹೊಸದಾಗಿ ಟೆಂಡ‌ರ್ ಕರೆದು 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ₹33.78 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ.

ಕರ್ನಾಟಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯನ್ನು 'ಸೊಸೈಟಿ ನೋಂದಣಿ ಕಾಯ್ದೆ 1860 ರ ಅಡಿಯಲ್ಲಿ ನೋಂದಾಯಿಸಿ 'ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ'ಯನ್ನಾಗಿ ರೂಪಿಸಲು ಆಡಳಿತಾತ್ಮಕ ಅನುಮೋದನೆ.

ಬೀದ‌ರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯನ್ನು ₹36 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ: Fertilizer Price List-2025: ಪರಿಷ್ಕೃತ ರಸಗೊಬ್ಬರ ದರ ಪಟ್ಟಿ ಬಿಡುಗಡೆ!

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮ ಪಂಚಾಯಿತಿಯನ್ನು 'ತಲಕಾಡು ಪಟ್ಟಣ ಪಂಚಾಯಿತಿ'ಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ.

ಉತ್ತರ ಕನ್ನಡ ಜಿಲ್ಲೆಯ ಹಾಲಿ ಭಟ್ಕಳ ಪುರಸಭೆಯ ವ್ಯಾಪ್ತಿಗೆ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಿ 'ಭಟ್ಕಳ ನಗರಸಭೆ ಪ್ರದೇಶ'ವೆಂದು ಘೋಷಿಸಲು ನಿರ್ಧಾರ.

ವಿಜಯಪುರ ಜಿಲ್ಲೆಯ ಇಂಡಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ಇಂಡಿ ನಗರಸಭೆ ಪ್ರದೇಶವೆಂದು ಘೋಷಿಸಲು ನಿರ್ಧಾರ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ, ಮೇಲ್ದರ್ಜೆಗೇರಿಸಿ ಕೈವಾರ ಪಟ್ಟಣ ಪಂಚಾಯಿತಿ ಪ್ರದೇಶವೆಂದು ಘೋಷಿಸಲು ನಿರ್ಧಾರ.

ಇದನ್ನೂ ಓದಿ: Bhu Suraksha Yojana-ರೈತರಿಗೆ ಡಿಜಿಟಲ್ ಸೌಲಭ್ಯ: ಜಮೀನಿನ ದಾಖಲೆ ಈಗ ಒಂದೇ ಕ್ಲಿಕ್ಕಿನಲ್ಲಿ ಲಭ್ಯ!

Karnataka Cabinet

ಇದನ್ನೂ ಓದಿ: SSLC ಮತ್ತು PUC ಅಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ!

District Wise Cabinet Approvals-ಜಿಲ್ಲಾವಾರು ಹಂಚಿಕೆಯಾದ ಅನುದಾನದ ವಿವರ ಮತ್ತು ಕಾಮಗಾರಿ ಮಾಹಿತಿ:

1) ಹಾರಂಗಿ(ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹುದ್ಗೂರು ಗ್ರಾಮ):

ಅನುದಾನ: ₹790 ಕೋಟಿ
ಕಾಮಗಾರಿ: ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ಅದರಡಿ ಬರುವ ವಿತರಣಾ ನಾಲೆಗಳ ಆಧುನಿಕ ಕಾಮಗಾರಿಯ 790 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

2) ಮೈಸೂರು ಜಿಲ್ಲೆ (Hunsur ತಾಲೂಕು)

ಅನುದಾನ: ₹49.85 ಕೋಟಿ. A) ಕಾಮಗಾರಿ: ಕಟ್ಟೆಮಳವಾಡಿ ಅಣೆಕಟ್ಟು ನಾಲೆ ಮತ್ತು ವಡಕೆಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ, ಅಡ್ಡಮೋರಿಗಳ ಅಭಿವೃದ್ಧಿ.

B) ಕಾಮಗಾರಿ: ತಲಕಾಡು ಗ್ರಾಮ ಪಂಚಾಯಿತಿಯನ್ನು 'ತಲಕಾಡು ಪಟ್ಟಣ ಪಂಚಾಯಿತಿ'ಯಾಗಿ ಮೇಲ್ದರ್ಜೆಗೇರಿಸುವುದು.

ಇದನ್ನೂ ಓದಿ: Registered Post-ಅಂಚೆ ಇಲಾಖೆಯಲ್ಲಿ ಇನ್ನುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್!

3) ರಾಜ್ಯಾದ್ಯಂತ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ)

A) ಅನುದಾನ: ₹50 ಕೋಟಿ (₹10 ಕೋಟಿ + ₹40 ಕೋಟಿ):
ಕಾಮಗಾರಿ: ವಿದ್ಯಾರ್ಥಿ ನಿಲಯಗಳಲ್ಲಿ ಹಾಸಿಗೆ (₹10 ಕೋಟಿ) ಮತ್ತು ಕಾಟ್‌ಗಳ (₹40 ಕೋಟಿ) ಖರೀದಿ.

B) ಅನುದಾನ: ₹33.09 ಕೋಟಿ:
ಕಾಮಗಾರಿ: ನಿರುದ್ಯೋಗಿಗಳಿಗೆ ವಿದ್ಯುತ್ ಚಾಲಿತ ನಾಲ್ಕು ಚಕ್ರಗಳ ವಾಹನ ಖರೀದಿ (1,103 ವಾಹನಗಳು, ತಲಾ ₹13 ಲಕ್ಷ ಸಹಾಯಧನ).

4) ಬೆಳಗಾವಿ ಜಿಲ್ಲೆ (Kittur ತಾಲೂಕು):

ಅನುದಾನ: ₹33.78 ಕೋಟಿ
ಕಾಮಗಾರಿ: 50 ಹಾಸಿಗೆ ಆಸ್ಪತ್ರೆಯನ್ನು 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ನಿರ್ಮಾಣ ಕಾಮಗಾರಿ.

ಇದನ್ನೂ ಓದಿ: Post Matric Scholarship-ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

5) ಬೀದರ್ ಜಿಲ್ಲೆ:

ಅನುದಾನ: ₹36 ಕೋಟಿ
ಕಾಮಗಾರಿ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ.

6) ಉತ್ತರ ಕನ್ನಡ ಜಿಲ್ಲೆ (Bhatkal:

ಭಟ್ಕಳ ಪುರಸಭೆಯ ವ್ಯಾಪ್ತಿಗೆ ಜಾಲಿ ಮತ್ತು ಹೆಬಳೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ, 'ಭಟ್ಕಳ ನಗರಸಭೆ' ಘೋಷಣೆ.

7) ವಿಜಯಪುರ ಜಿಲ್ಲೆ (Indi):

ಕಾಮಗಾರಿ: ಇಂಡಿ ಪುರಸಭೆಯನ್ನು 'ಇಂಡಿ ನಗರಸಭೆ'ಯಾಗಿ ಮೇಲ್ದರ್ಜೆಗೇರಿಸುವುದು.

8) ಚಿಕ್ಕಬಳ್ಳಾಪುರ ಜಿಲ್ಲೆ (Chintamani ತಾಲೂಕು):

ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳ ಸೇರ್ಪಡೆ, 'ಕೈವಾರ ಪಟ್ಟಣ ಪಂಚಾಯಿತಿ' ಘೋಷಣೆ.

9) ರಾಜ್ಯಾದ್ಯಂತ (ಕರ್ನಾಟಕ ರಾಜ್ಯ ವಿಮಾ ಯೋಜನೆ):

'ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ'ಯನ್ನು ಸ್ಥಾಪಿಸುವುದು (ಸೊಸೈಟಿ ನೋಂದಣಿ ಕಾಯ್ದೆ 1860ರಡಿ).

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: