Colgate Keep India Smiling Scholarship 2024 – ಕೋಲ್ ಗೇಟ್ ಕಂಪನಿಯು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗುವಂತೆ ಭರ್ಜರಿ 75,000 ರೂ. ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ವಿದ್ಯಾರ್ಥಿ ವೇತನದ ಹೆಸರು ” ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿ ವೇತನ “. ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈ ಒಂದು ವಿದ್ಯಾರ್ಥಿ ವೇತನವನ್ನು ಪ್ರಮುಖವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ನಲ್ಲಿ ಪದವಿ (BDS) ಅಥವಾ ಸ್ನಾತಕೋತ್ತರ ಪದವಿ (MDS) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ: Gruhalakshmi Status-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!
Colgate Scholarship -ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವರ್ಷದಲ್ಲಿ BDS ಅಥವಾ MDS ಕೋರ್ಸ್ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕಿಂತ ಪ್ರಮುಖವಾಗಿ ಅರ್ಜಿ ಸಲ್ಲಿಸುವವರು ತಮ್ಮ 12ನೇ ತರಗತಿಯಲ್ಲಿ ಕನಿಷ್ಠ 65% ಅಂಕಗಳೊಂದಿಗೆ ಪಾಸ್ ಆಗಿರುವುದು ಕಡ್ಡಾಯ. ಅದೇ ರೀತಿ ಅರ್ಜಿ ಸಲ್ಲಿಸುವವರ ಕುಟುಂಬ ವಾರ್ಷಿಕ ಆದಾಯವು 8 ಲಕ್ಷ ರೂಪಾಯಿ ಒಳಗಿರಬೇಕು.
ಇದನ್ನೂ ಓದಿ: Horticulture Diploma- ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!
ಇದನ್ನೂ ಓದಿ: Krishi honda subsidy-ಶೇ 80% ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅರ್ಜಿ!
Colgate Scholarship documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು :
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಪ್ರವೇಶಾತಿ ದಾಖಲಾತಿ ಪುರಾವೆ
- 12ನೇ ತರಗತಿಯ ಅಂಕಪಟ್ಟಿ
- ಕಾಲೇಜು ಶುಲ್ಕ ಪಾವತಿ ರಶೀದಿ
Last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಅಕ್ಟೋಬರ್ 2024
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣದಲ್ಲಿ ಕ್ಲಿಕ್ ಮಾಡಿ ಅಥವಾ ಗೂಗಲ್ ನಲ್ಲಿ Buddy4study ಅಧಿಕೃತ ಜಲತಾಣಕ್ಕೆ ಭೇಟಿ ನೀಡಿ 31 ಅಕ್ಟೋಬರ್ 2024 ರ ಒಳಗಾಗಿ ಅರ್ಜಿ ಸಲ್ಲಿಸಿರಿ.
Application link-ಅರ್ಜಿ ಲಿಂಕ್ – Apply Now