Last updated on December 9th, 2024 at 12:51 pm
ಅತೀ ಕಡಿಮೆ ಪ್ರೀಮಿಯಂ ಪಾವತಿ ಮಾಡಿ ಒಂದು ವರ್ಷಕ್ಕೆ ಅಪಘಾತ ವಿಮೆಯನ್ನು(Best health insurance plan) ಮಾಡಿಸಲು ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
“ಆಕ್ಸಿಡೆಂಟ್ ಕೇಸ್ ಪ್ಲಸ್” ಯೋಜನೆಯಡಿ ಗ್ರಾಮ ಒನ್/ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸಾರ್ವಜನಿಕರು ಈ ಅಪಘಾತ ವಿಮೆ(health insurance plan) ಸೌಲಭ್ಯವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್!
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಈ ಯೋಜನೆಯ(insurance plan) ಪ್ರಯೋಜನ ಪಡೆದುಕೊಳ್ಳುವುದು ಹೇಗೆ? ಈ ಕುರಿತು ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Best health insurance plan- “ಆಕ್ಸಿಡೆಂಟ್ ಕೇಸ್ ಪ್ಲಸ್” ವಿಮೆ ಯೋಜನೆಯಡಿ 599(+GST)ಕ್ಕೆ 5.00 ಲಕ್ಷ ಅಪಘಾತ ವಿಮೆ:
ಇಂದಿನ ದಿನಮಾನದಲ್ಲಿ ಯಾವ ಸಮಯಕ್ಕೆ ಏನು ಅಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ದ್ವಿಚಕ್ರ ವಾಹನ ಇತರೆ ವಾಹನಗಳಲ್ಲಿ ಓಡಾಟ ನಡೆಸುವವರು ತಪ್ಪದೇ ಅಪಘಾತ ವಿಮೆಯನ್ನು ಮಾಡಿಸಿಕೊಳ್ಳಬೇಕು.
“ಆಕ್ಸಿಡೆಂಟ್ ಕೇಸ್ ಪ್ಲಸ್” ವಿಮೆ ಯೋಜನೆಯಡಿ ರೂ 599 ಪ್ರೀಮಿಯಂ ಪಾವತಿ ಮಾಡಿ 5.00 ಲಕ್ಷ ಅಪಘಾತ ವಿಮೆ ಕವರೇಜ್ ಅನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!
Insurance plan details-ಯಾವೆಲ್ಲ ಸಮಯದಲ್ಲಿ ಈ ಸೌಲಭ್ಯ ಪಡೆಯಬಹುದು:
ಒಮ್ಮೆ ಪ್ರೀಮಿಯಂ ಪಾವತಿ ಮಾಡಿ ಆ ಒಂದು ವರ್ಷದಲ್ಲಿ ಅರ್ಜಿದಾರನ್ನು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಲು ದಿನಕ್ಕೆ ರೂ 500 ರಂತೆ ಒಂದು ವರ್ಷದಲ್ಲಿ ಗರಿಷ್ಥ 30 ದಿನಗಳ ವರೆಗೆ ಹಣ ಪಾವತಿ ಮಾಡಲಾಗುತ್ತದೆ.
ಅಪಘಾತದಿಂದ ಮರಣ ಅಥವಾ ಶಾಶ್ಚತ ಅಂಗವೈಕಲ್ಯಕ್ಕೆ ತುತ್ತಾದರೆ 5 ಲಕ್ಷದವರೆಗೆ ವಿಮೆಯನ್ನು ಪಡೆಯಬಹುದು.
ಆರೋಗ್ಯ ತೊಂದರೆ/ಸಮಸ್ಯೆ ಕುರಿತು ವೈದ್ಯರೊಂದಿಗೆ ಕರೆ ಮತ್ತು ಚಾಟ್ ಸಮಾಲೋಚನೆ ನಡೆಸಲು ಸಹ ಅವಕಾಶವಿರುತ್ತದೆ.
ಇದನ್ನೂ ಓದಿ: Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Insurance Application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅಗತ್ಯ ದಾಖಲಾತಿಗಳ ಸಮೇತ ಆಸಕ್ತ ಸಾರ್ವಜನಿಕರು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Documents-ಅರ್ಜಿ ಸಲ್ಲಿಸಲು ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
ಬ್ಯಾಂಕ್ ಪಾಸ್ ಬುಕ್
ಪೋಟೋ
ಮೊಬೈಲ್ ಸಂಖ್ಯೆ
ಇದನ್ನೂ ಓದಿ: Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000!