Crop Details-2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ! ಇಲ್ಲಿದೆ ಪಹಣಿಯ ಬೆಳೆ ಮಾಹಿತಿ!

November 8, 2025 | Siddesh
Crop Details-2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ! ಇಲ್ಲಿದೆ ಪಹಣಿಯ ಬೆಳೆ ಮಾಹಿತಿ!
Share Now:

2025 ನೇ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಎಲ್ಲಾ ಹಳ್ಳಿಯ ರೈತರ ಜಮೀನನ್ನು ಭೇಟಿ ಮಾಡಿ ಬೆಳೆ ಸಮೀಕ್ಷೆ(Crop Survey Information) ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಗ್ರಹಣೆ ಮಾಡಲಾದ ಬೆಳೆ ಮಾಹಿತಿಯನ್ನು Crop Survey ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಕೃಷಿ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಮೊಬೈಲ್ ಅಪ್ಲಿಕೇಶನ್(Bele Samikshe App)ಆಧಾರಿತ ಬೆಳೆ ಸಮೀಕ್ಷೆಯನ್ನು ಮಾಡಿ ರಾಜ್ಯದ ಎಲ್ಲಾ ಹಳ್ಳಿಯ ರೈತರ ಜಮೀನಿನ ಬೆಳೆ ಮಾಹಿತಿಯನ್ನು ನಿಖರವಾಗಿ ದಾಖಲಿಸಿ ಅಧಿಕೃತ ಜಾಲತಾಣದಲ್ಲಿ ಸಂಗ್ರಹ ಮಾಡಲಾಗುತ್ತದೆ, ಈ ದತ್ತಾಂಶದ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ ಸೌಲಭ್ಯವನ್ನು ಒದಗಿಸಲು ನಿರ್ಣಯ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: Free TV Repair Training-ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಪ್ರಸ್ತುತ ಲೇಖನದಲ್ಲಿ ರೈತರು ತಮ್ಮ ಸರ್ವೆ ನಂಬರ್ ಅನ್ನು ಹಾಕಿ 2025 ಮುಂಗಾರು ಹಂಗಾಮಿಗೆ(Crop Survey Details 2025)ನಿಮ್ಮ ಸರ್ವೆ ನಂಬರ್ ನಲ್ಲಿ ದಾಖಲಾಗಿರುವ ಬೆಳೆ ಮಾಹಿತಿ ಯಾವುದು? ಮತ್ತು ಇಲ್ಲಿ ದಾಖಲಾದ ಮಾಹಿತಿಗೂ ನೀವು ಬೆಳೆದಿರುವ ಬೆಳೆಗೂ ತಾಳೆಯಾಗದೇ ಇದ್ದರೆ ಇದನ್ನು ಸರಿಪಡಿಸಿ ಸರಿಯಾದ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಮಾಹಿತಿ ಸೇರಿದಂತೆ ಬೆಳೆ ಸಮೀಕ್ಷೆಯಿಂದ ರೈತರಿಗೆ ಯಾವೆಲ್ಲ ಲಾಭಗಳಿವೆ? ಎನ್ನುವ ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

Crop survey Benefits- ಬೆಳೆ ಸಮೀಕ್ಷೆಯಿಂದ ರೈತರಿಗೆ ಆಗುವ ಲಾಭಗಳೇನು?

ಕೃಷಿ ಮತ್ತು ಕಂದಾಯ ಇಲಾಖೆಯಿಂದ ರಾಜ್ಯದ್ಯಂತ ಪ್ರತಿ ಹಂಗಾಮಿನಲ್ಲಿ ಪ್ರತಿ ವರ್ಷ ರೈತರ ಜಮೀನನ್ನು ನೇರವಾಗಿ ಭೇಟಿ ಮಾಡಿ ಜಿಪಿಎಸ್ ಆಧಾರಿತ ಬೆಳೆ ಪೋಟೋವನ್ನು ತೆಗೆದು ಬೆಳೆ ಸಮೀಕ್ಷೆಯನ್ನು ಮಾಡುವುದರಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ:

ರೈತರು ಬೆಳೆ ಸಮೀಕ್ಷೆಯಲ್ಲಿ ಸರಿಯಾದ ಬೆಳೆ ಮಾಹಿತಿಯನ್ನು ದಾಖಲಿಸುವುದರಿಂದ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದು ಉದಾಹರಣೆಗೆ : ರಾಗಿ,ಭತ್ತ,ಜೋಳ,ಹತ್ತಿ,ಹೆಸರುಕಾಳು ನಿಮ್ಮ ಪಹಣಿಯಲ್ಲಿ ಈ ಬೆಳೆಗಳು ದಾಖಲಾಗದೇ ಇದ್ದರೆ ಬೆಂಬಲ ಬೆಲೆಯಲ್ಲಿ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Sprayer Subsidy-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಸಹಾಯಧನದಲ್ಲಿ ಪಡೆಯಲು ಅರ್ಜಿ ಆಹ್ವಾನ!

ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರವನ್ನು ಪಡೆಯಲು ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿಯನ್ನೇ ಪರಿಗಣಿಸುವುದರಿಂದ ಈ ಸಮೀಕ್ಷೆಯಿಂದ ರೈತರಿಗೆ ಬೆಳೆ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಸಹಕಾರಿಯಾಗಿದೆ.

ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಯಿಂದ ಬೆಳೆ ಆದಾರಿತ ಸಹಾಯಧನವನ್ನು ಪಡೆಯಲು ಬೆಳೆ ಸಮೀಕ್ಷೆ ನೆರವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಮಾಡುವಾಗ ತಪ್ಪದೇ ಖುದ್ದು ಹಾಜರಿದ್ದು ಸರಿಯಾದ ಬೆಳೆ ಮಾಹಿತಿಯನ್ನು ದಾಖಲಿಸುವಂತೆ ಸಮೀಕ್ಷೆದಾರಿಗೆ ಸೂಚಿಸಬೇಕು.

Crop Survey Details Check- 2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ:

ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಯಲ್ಲಿ 2025 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು "https://cropsurvey.karnataka.gov.in" ಅಧಿಕೃತ ಬೆಳೆ ಸಮೀಕ್ಷೆ ವೆಬ್ಸೈಟ್ ನಲ್ಲಿ ಸರ್ವೆ ನಂಬರ್ ವಾರು ಬೆಳೆ ಮಾಹಿತಿ ವರದಿಯನ್ನು ಬಿಡುಗಡೆ ಮಾಡಲಾಗಿದ್ದು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ಮಾಹಿತಿಯನ್ನು ಪಡೆದು ಸರಿಯಾದ ಬೆಳೆ ದಾಖಲಾಗಿದಿಯಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.

Step-1: ರೈತರು ಮೊದಲು RTC Crop Information ಇಲ್ಲಿ ಕ್ಲಿಕ್ ಮಾಡಿ ಅಧಿಕೃತ Crop Survey ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: PUC ಮತ್ತು SSLC ಅಂತಿಮ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ!

Crop Details

ಇದನ್ನೂ ಓದಿ: Narega Scheme Subsidy-ನರೇಗಾ ಯೋಜನೆಯಡಿ 5.0 ಲಕ್ಷದವರೆಗೆ ಆರ್ಥಿಕ ನೆರವು! ಇಲ್ಲಿದೆ ಸಂಪೂರ್ಣ ಮಾಹಿತಿ!

Step-2: ನಂತರ ಇಲ್ಲಿ ವರ್ಷ/Year: "2025-26" ಹಂಗಾಮು/Season: "ಮುಂಗಾರು" ಎಂದು ಆಯ್ಕೆ ಮಾಡಿ "GO" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ಈ ಪುಟದಲ್ಲಿ ಮೇಲೆ ಕಾಣಿಸುವ "View PR Uploaded Crop Info" ಆಯ್ಕೆಯೆ ಮೇಲೆ ಒತ್ತಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ಅನ್ನು ಹಾಕಿ "Get Crop Survey Details" ಬಟನ್ ಮೇಲೆ ಕ್ಲಿಕ್ ಮಾಡಿದರೆ ಆ ಸರ್ವೆ ನಂಬರ್ ನಲ್ಲಿರುವ ಎಲ್ಲಾ ಮಾಲೀಕರ ಹೆಸರು ಮತ್ತು ಹಿಸ್ಸಾ ನಂಬರ್ ಕಾಣಿಸುತ್ತದೆ.

Step-4: ಬಳಿಕ ನಿಮ್ಮ ಹೆಸರಿನ ಮುಂದೆ ಇರುವ ಟಿಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇದೇ ಪೇಜ್ ನಲ್ಲಿ ಕೆಳಗೆ ಸ್ರ್ಕೋಲ್ ಮಾಡಿದರೆ "Crop Information" ಎಂದು ತೋರಿಸಿ ನಿಮ್ಮ ಜಮೀನಿನ ಬೆಳೆ ಮಾಹಿತಿ ವಿಸ್ತೀರ್ಣ ಇತ್ಯಾದಿ ವಿವರವನ್ನು ನೋಡಬಹುದು.

ಇದನ್ನೂ ಓದಿ: SSLC Exam Registration-ಎಸ್​ಎಸ್​ಎಲ್​​ಸಿ ಪರೀಕ್ಷೆ-1 ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ!

Bele Darshaka App-ಬೆಳೆ ವಿವರ ತಪ್ಪಾಗಿ ದಾಖಲಾಗಿದ್ದರೆ ಹೀಗೆ ಮಾಡಿ:

ರೈತರು ಈ ಮೇಲೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಸರ್ವೆ ನಂಬರ್ ನಲ್ಲಿ ದಾಖಲಾಗಿರುವ ಬೆಳೆ ಮಾಹಿತಿಯನ್ನು ಚೆಕ್ ಮಾಡಿದಾಗ ಅಲ್ಲಿ ನಮೂದಿಸಿರುವ ಬೆಳೆ ಮಾಹಿತಿಯು ತಪ್ಪಾಗಿದ್ದರೆ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಸರ್ವೆ ನಂಬರ್ ವಿವರ ಸಮೇತ ಅಕ್ಷೇಪಣೆ ಅರ್ಜಿ ಸಲ್ಲಿಸಿ ಮರು ಸಮೀಕ್ಷೆ ಮಾಡಲು ತಿಳಿಸಿ ಅಥವಾ ಈ Bele Darshaka Mobile App ಲಿಂಕ್ ಮೇಲೆ ಕ್ಲಿಕ್ ಮಾಡಿ "ಬೆಳೆ ದರ್ಶಕ" ಮೊಬೈಲ್ ಅಪ್ಲಿಕೇಶನ್ ಮೂಲಕವು ಸಹ ಮರುಸಮೀಕ್ಷೆಗೆ ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: