Crop Insurance Status-ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಹಣ ಜಮಾ ವಿವರ ಚೆಕ್ ಮಾಡಿ!

April 30, 2025 | Siddesh
Crop Insurance Status-ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಹಣ ಜಮಾ ವಿವರ ಚೆಕ್ ಮಾಡಿ!
Share Now:

2024-25 ನೇ ಸಾಲಿನಲ್ಲಿ ಬೆಳೆವಿಮೆ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿದ ರೈತರು ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಮತ್ತು ಕಳೆದ ಸಾಲಿನಲ್ಲಿ ಬೆಳೆ ವಿಮೆ(Bele vime) ಯೋಜನೆಯಡಿ ಎಷ್ಟು ಮೊತ್ತದ ಪರಿಹಾರ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರವನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವ ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(Fasal bhima yojana) ಪ್ರತಿ ವರ್ಷ ರೈತರು ತಾವು ಬೆಳೆದಿರುವ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗುತ್ತದೆ ಇದರಂತೆ ಕಳೆದ ವರ್ಷದಲ್ಲಿ ಬೆಳೆ ವಿಮೆಯನ್ನು(Bele vime Amount) ಕಟ್ಟಿದವರು ತಮ್ಮ ಅರ್ಜಿಯು ಸಲ್ಲಿಕೆಯಾಗಿದೆಯೇ ಅಥವಾ ಪ್ರಸ್ತುತ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ರಾಜ್ಯ ಸರ್ಕಾರದ ಅಧಿಕೃತ samrakshane ಪೋರ್ಟಲ್ ಅನ್ನು ಪ್ರವೇಶ ಮಾಡಿ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರವನ್ನು ಪ್ರತಿ ವರ್ಷ ಮೇ-ಆಗಸ್ಟ್ ತಿಂಗಳ ಮಧ್ಯದಲ್ಲಿ ಹಿಂದಿನ ವರ್ಷದ ಪರಿಹಾರದ ಹಣವನ್ನು ಅರ್ಹ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗುತ್ತದೆ.

Crop Insurance Status Check-ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿ ಸ್ಥಿತಿ ಮತ್ತು ಹಣ ಜಮಾ ವಿವರವನ್ನು ಚೆಕ್ ಮಾಡಿ:

ರೈತರು ಯಾವುದೇ ಸರ್ಕಾರಿ ಕಚೇರಿಯನ್ನು ಭೇಟಿ ಮಾಡದೇ ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿಯ ಸ್ಥಿತಿ ಮತ್ತು ಪರಿಹಾರದ ಹಣ ಜಮಾ ವಿವರವನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಮನೆಯಲ್ಲೇ ಇದ್ದು ಚೆಕ್ ಮಾಡಿಕೊಳ್ಳಬಹುದು.

Step-1: ರೈತರು ಇಲ್ಲಿ ಕ್ಲಿಕ್ Bele Vime Status ಮಾಡಿ ಅಧಿಕೃತ ರಾಜ್ಯ ಸರ್ಕಾರದ ಬೆಳೆ ವಿಮೆ ಸಂರಕ್ಷಣೆ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Bangalore university-ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿವಿಧ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

bele vime

ಇದನ್ನೂ ಓದಿ: Life Insurance- LIC ಜೀವನ್ ಲಾಭ್ ಯೋಜನೆ: ದಿನಕ್ಕೆ ₹80 ಪಾವತಿಸಿ ₹10 ಲಕ್ಷ ಪಡೆಯಿರಿ!

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ವರ್ಷದ ಆಯ್ಕೆ / Select Insurance Year : "2024-25" ಎಂದು ವರ್ಷವನ್ನು ಆಯ್ಕೆ ಮಾಡಿ ಬಳಿಕ ಋತು "Kharif/ಮುಂಗಾರು" ಎಂದು ಆಯ್ಕೆ ಮಾಡಿ ಕೆಳಗೆ ಕಾಣುವ "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪೇಜ್ ನಲ್ಲಿ ಕೆಳಗೆ "Farmers" ಕಾಲಂ ನಲ್ಲಿ ಮೂರನೆಯ ಆಯ್ಕೆ ಅಂದರೆ "Check Status" ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ "Mobile No" ಸೆಲೆಕ್ಟ್ ಮಾಡಿಕೊಂಡು ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಖ್ಯೆ , ವಿಮಾ ಕಂಪನಿಯ ಹೆಸರು, ಅರ್ಜಿದಾರರ ಹೆಸರು ಮತ್ತು ನಿಮ್ಮ ಅರ್ಜಿಯ ಸ್ಥಿತಿ ತೋರಿಸುತ್ತದೆ. ಈ ಮಾಹಿತಿ ತೋರಿಸದೇ NO DATA FOUND ಎಂದು ಗೋಚರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಅರ್ಥ.

Step-4: ಬೆಳೆ ವಿಮೆ ಹಣ ಜಮಾ ವಿವರವನ್ನು ತಿಳಿಯಲು ಹೀಗೆ ಮಾಡಿ ಇದೇ ಪೇಜ್ ನಲ್ಲಿ ಕೊನೆಯಲ್ಲಿ ಕಾಣುವ "Select" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ ಕೊನೆಯಲ್ಲಿ UTR Details ಕಾಲಂ ಕೆಳಗೆ ನಿಮಗೆ ಬೆಳೆ ವಿಮೆ ಹಣ ಜಮಾ ಅಗಿದ್ದರೆ ಯಾವ ದಿನಾಂಕದಂದು ಜಮಾ ಅಗಿದೆ? ಎಷ್ಟು ಮೊತ್ತ? ಬ್ಯಾಂಕ್ ಖಾತೆಯ ಕೊನೆಯ 4 ಸಂಖ್ಯೆಯ ವಿವರ ಮತ್ತು ಹೆಸರು ತೋರಿಸುತ್ತದೆ.

ಇದರ ಜೊತೆಗೆ "Proposal Status" ಕಾಲಂನಲ್ಲಿ ಬೆಳೆ ವಿಮೆ ಅರ್ಜಿಯ ವಿಲೇವಾರಿ ವಿವರವನ್ನು ಸಹ ರೈತರು ನೋಡಬಹುದು.

ಇದನ್ನೂ ಓದಿ: Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!

Bele Vime Mahiti-ಬೆಳೆ ವಿಮೆ ಅರ್ಜಿ ಕುರಿತು ತಪ್ಪದೇ ಈ ಮಾಹಿತಿ ತಿಳಿಯಿರಿ:

ರೈತರು ಬೆಳೆ ವಿಮೆಯನ್ನು ಪಡೆಯಲು ತಪ್ಪದೇ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡಿರಬೇಕು.

ಬೆಳೆ ವಿಮೆ ಅರ್ಜಿಯಲ್ಲಿ ನಮೂದಿಸಿದ ಬೆಳೆ ವಿವರ ಮತ್ತು ಬೆಳೆ ಸಮೀಕ್ಷೆಯ ಬೆಳೆ ವಿವರ ತಾಳೆಯಾದರೆ ಮಾತ್ರ ಬೆಳೆ ವಿಮಾ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ಪರಿಹಾರದ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

ಈ ಅಂಶವು ಅನೇಕ ರೈತರಿಗೆ ತಿಳಿದಿಲ್ಲ ಏನೆಂದರೆ? ಫಸಲ್ ಭೀಮಾ ಯೋಜನೆಯಡಿ ವೈಯಕ್ತಿಕವಾಗಿ ಅಂದರೆ ನಿಮ್ಮ ಒಬ್ಬರ ಜಮೀನಿನ ಬೆಳೆಯು ಅಕಸ್ಮಿಕವಾಗಿ ಪ್ರಕೃತಿ ವಿಕೋಪದಿಂದ ಹಾನಿಯಾದರು ಸಹ ಬೆಳೆ ವಿಮೆ ಪರಿಹಾರ ಪಡೆಯಲು ಅರ್ಜಿಯನ್ನು ಸಲ್ಲಿಸಲು ಪರಿಹಾರವನ್ನು ಪಡೆಯಲು ಅವಕಾಶವಿರುತ್ತದೆ.

Fasal Bhima Yojana-ವೈಯಕ್ತಿಕ ಬೆಳೆ ಹಾನಿಗೆ ವಿಮೆಯನ್ನು ಪಡೆಯುವುದು ಹೇಗೆ?

ರೈತರು ಬೆಳೆ ವಿಮೆಯನ್ನು ಮಾಡಿಸಿದ ಜಮೀನಿನಲ್ಲಿ ಬೆಳೆದ ಬೆಳೆಯು ಅಕಸ್ಮಿಕವಾಗಿ ಪ್ರಕೃತಿ ವಿಕೋಪದಿಂದ ಹಾನಿಯಾದರೆ ಇಂತಹ ಸಮಯದಲ್ಲಿ ಕೂಡಲೇ 48 ಗಂಟೆಯ ಒಳಗಾಗಿ ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲಾಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಇದೆ ಕಚೇರಿಯಲ್ಲಿ ಬೆಳೆ ವಿಮಾ ಕಂಪನಿಯ ಪ್ರತಿನಿಧಿಯ ಮೊಬೈಲ್ ಸಂಖ್ಯೆಯನ್ನು ಪಡೆದು ಹಾನಿಗೆ ಒಳಗಾದ ಜಮೀನಿನನ್ನು ಭೇಟಿ ಮಾಡಿ ಸಮೀಕ್ಷೆ ಮಾಡುವಂತಿ ತಿಳಿಸಬೇಕು.

ಸಮೀಕ್ಷೆಯ ಆಧಾರದ ಮೇಲೆ ಬೆಳೆ ವಿಮೆ ಪರಿಹಾರ ವಿತರಣೆ ನಿರ್ಧಾರ ಮಾಡಲಾಗುತ್ತದೆ ಇದಕ್ಕಾಗಿ ವಿಮೆ ಕಟ್ಟಿದ ಸಮಯದಲ್ಲಿ ನೀಡುವ ಪಾವತಿ ರಶೀದಿಯನ್ನು ತಪ್ಪದೇ ನಿಮ್ಮ ಬಳಿ ಇಟ್ಟುಕೊಳ್ಳಬೇಕು.

Crop Survey Details-ಬೆಳೆ ವಿಮೆ ಅರ್ಜಿ ಬೆಳೆ ವಿವರ ಮತ್ತು ಬೆಳೆ ಸಮೀಕ್ಷೆ ಬೆಳೆ ಮಾಹಿತಿ ಎಂದರೇನು?

ರೈತರು ಮುಂಗಾರು ಹಂಗಾಮಿನಲ್ಲಿ ತಾವು ಜಮೀನಿನಲ್ಲಿ ಬೆಳೆದಿರುವ ಬೆಳೆಯ ಹೆಸರಿನ ಬೆಳೆ ವಿಮೆಯನ್ನು ಮಾಡಿಸಿದಾಗ ನಂತರ ಕೃಷಿ ಇಲಾಖೆಯಿಂದ ಮೊಬೈಲ್ ಅಪ್ಲಿಕೇಶನ್ ಮೂಲಕ ಖಾಸಗಿ ವ್ಯಕ್ತಿಗಳ ಮೂಲಕ ನಡೆಸುವ ಬೆಳೆ ಸಮೀಕ್ಷೆಯಲ್ಲಿಯು ಸಹ ಎರಡರಲ್ಲಿಯು ಒಂದೆ ಬೆಳೆ ವಿವರ ದಾಖಲಾಗಿರಬೇಕು ಹೀಗಿದರೆ ಮಾತ್ರ ವಿಮಾ ಪರಿಹಾರವನ್ನು ಪಡೆಯಬಹುದು.

WhatsApp Group Join Now
Telegram Group Join Now
Share Now: