Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!

April 26, 2025 | Siddesh
Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!
Share Now:

ಜಿಲ್ಲಾವಾರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲು ಉಚಿತವಾಗಿ ಲಾಪ್ ಟಾಪ್(free laptop distribution scheme in karnataka) ಅನ್ನು ವಿತರಣೆ ಮಾಡಲು ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪ್ರತಿ ವರ್ಷ SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಾಪ್ ಟಾಪ್(Free Laptop Scheme) ಅನ್ನು ವಿತರಣೆ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಇದಕ್ಕೆ ಅವಶ್ಯವಿರುವ ಕ್ರಮವನ್ನು ತೆಗೆದುಕೊಳ್ಳಲು ವೈ ಸಿ ರವಿ ಕುಮಾರ್ ವಿಶೇಷಾಧಿಕಾರಿ ಮತ್ತು ಪದನಿಮಿತ್ತ ಸರ್ಕಾರ ಅಧೀನ ಕಾರ್ಯದರ್ಶಿ ಶಾಲಾ ಶಿಕ್ಷಣ ಇಲಾಖೆ ಅವರು ಅನುದಾನ ಬಿಡುಗಡೆ ಮತ್ತು ಅಗತ್ಯ ಕ್ರಮಗಳ ಕುರಿತು ಅಧಿಕೃತವಾಗಿ ಆದೇಶವನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: Farmers Market-ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ ರೈತ ಸಂತೆ!

ಈ ಲೇಖನದಲ್ಲಿ ಉಚಿತವಾಗಿ ಲಾಪ್ ಟಾಪ್(Free Laptop distribution) ಪಡೆಯಲು ಯಾರೆಲ್ಲ ಅರ್ಹರು? ಮತ್ತು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಪ್ರಸ್ತುತ ಎಷ್ಟು ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Laptop Yojana-2025: ಉಚಿತ ಲಾಪ್ ಟಾಪ್ ವಿತರಣೆ ಅನುದಾನ ಬಿಡುಗಡೆ:

ಒಟ್ಟು ಅಗತ್ಯವಿರುವ ಅನುದಾನ:- 3,25 ಕೋಟಿ

ಈಗಾಗಲೇ ಬಿಡುಗಡೆಯಾಗಿರುವುದು: 80 ಲಕ್ಷ

ಪ್ರಸ್ತುತ ಬಿಡುಗಡೆಯಾದ ಅನುದಾನ: 2 ಕೋಟಿ ಮತ್ತು ಕೆ ಎಸ್ ಕ್ಯೂ ಎ ಎ ಸಿ ವಿಭಾಗದಿಂದ 35 ಲಕ್ಷ

ಇದನ್ನೂ ಓದಿ: Free School admission-ಉಚಿತ ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ!

Who Can Apply for Free Laptop Scheme-ಯಾರೆಲ್ಲ ಉಚಿತ ಲಾಪ್ ಟಾಪ್ ಪಡೆಯಲು ಅರ್ಹರು:

  • ಏಪ್ರಿಲ್-2024 ನೇ ಸಾಲಿನ ಅಂದರೆ ಕಳೆದ ವರ್ಷದ SSLC ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲಾವಾರು ಟಾಪ್ 3 ಅಂದರೆ ಮೊದಲ ಮೂರು ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಉಚಿತ ಲಾಪ್ ಟಾಪ್ ಪಡೆಯಲು ಅರ್ಹರು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
  • ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಜಿಲ್ಲಾ ಮಟ್ಟದಲ್ಲಿ ಈ ಯೋಜನೆಯ ಪ್ರಯೋಜನ ಪಡೆದಿದ್ದರೆ ವಲಯ ಮಟ್ಟದಲ್ಲಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

Required Documents For Free Laptop-ಅಗತ್ಯ ದಾಖಲೆಗಳು:

1) ವಿದ್ಯಾರ್ಥಿಯ ಅಂಕಪಟ್ಟಿ
2) ವಿದ್ಯಾರ್ಥಿಯ ಆಧಾರ್ ಕಾರ್ಡ
3) ಪೋಟೋ
4) ಶಾಲಾ ದಾಖಲಾತಿ ವಿವರ
5) ನಿವಾಸ ದೃಡೀಕರಣ ಪ್ರಮಾಣ ಪತ್ರ

ಇದನ್ನೂ ಓದಿ: Yashaswini Yojane-ಯಶಸ್ವಿನಿ ಯೋಜನೆಯಡಿ ಮಹತ್ವ ಬದಲಾವಣೆಗೆ ಶಿಫಾರಸು!

Free Laptop Scheme Guidelines-ಲಾಪ್ ಟಾಪ್ ವಿತರಣೆ ಕುರಿತು ಅಧಿಕೃತ ಆದೇಶದಲ್ಲಿ ತಿಳಿಸಿರುವ ಪ್ರಮುಖ ಮಾಹಿತಿ ಹೀಗಿದೆ:

1) ಒದಗಿಸಲಾದ ಅನುದಾನದಲ್ಲಿ ನಿಯಮಾನುಸಾರ ಅರ್ಹ ಪ್ರತಿಭಾವಂತ ಫಲಾನುಭವಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು, ಇವರು ಕ್ರಮವಹಿಸಲು ಸೂಚಿಸಲಾಗಿದೆ.

2) ಜಿಲ್ಲಾಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರೋತ್ಸಾಹಕವಾಗಿ ಲ್ಯಾಪ್‌ಟಾಪ್ ಪಡೆದಂತಹ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ವಲಯ ಮಟ್ಟಕ್ಕೆ ಪರಿಗಣಿಸಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ತಿಳಿಸಲಾಗಿದೆ.

3) ಬಿಡುಗಡೆಯಾದ ಅನುದಾನಕ್ಕೆ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಇವರು ನಿಯಮಾನುಸಾರ ಲೆಕ್ಕ ಪತ್ರಗಳನ್ನು ಇಡಲು ತಿಳಿಸಲಾಗಿದೆ.

4) ಎಲ್ಲಾ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಶೀಘ್ರವಾಗಿ ವಿತರಿಸತಕ್ಕದ್ದು ಹಾಗೂ ವಿತರಣೆ ಪೂರ್ಣಗೊಂಡ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!

5) ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲು ಹೊರಡಿಸಲಾದ ಕಛೇರಿ ಜ್ಞಾಪನವನ್ನು ಹಾಗೂ ಸದರಿ ಸರ್ಕಾರಿ ಆದೇಶವನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಹಾಗೂ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಈ ಕಛೇರಿಯ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

6) ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ನಿಯಮಗಳು ಮತ್ತು ತತ್ಸಂಬಂಧ ಕಾಲಕಾಲಕ್ಕೆ ಹೊರಡಿಸಲಾದ/ಹೊರಡಿಸಲಾಗುವ ಆದೇಶ/ಸುತ್ತೋಲೆಗಳ ಸೂಚನೆಗಳನ್ನು ಹಾಗೂ ಲ್ಯಾಪ್ಟಾಪ್ ಖರೀದಿ ಇ-ಟೆಂಡರ್ ಪ್ರಕ್ರಿಯೆಯ ದಸ್ತಾವೇಜಿನಲ್ಲಿ ನಿಗದಿಪಡಿಲಾಗಿರುವ ಪ್ರಚಲಿತ ನಿಯಮಗಳನ್ನು ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು ಎಂದು ಸೂಚಿಸಲಾಗಿದೆ.

ಅಧಿಕೃತ ಆದೇಶ ಪ್ರತಿಗಳು:

free laptop scheme

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: