Driving Licence Application-ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ ಮಾಡಿಸುವುದು ಇನ್ನು ಭಾರೀ ಸುಲಭ!

October 26, 2025 | Siddesh
Driving Licence Application-ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ ಮಾಡಿಸುವುದು ಇನ್ನು ಭಾರೀ ಸುಲಭ!
Share Now:

ಸಾರಿಗೆ ಇಲಾಕೆಯ ಸೇವೆಗಳನ್ನು ಪಡೆಯಲು ಬ್ರೋಕರ್ ಮೂಲಕವೇ ಅತೀ ಹೆಚ್ಚು ಹಣ ನೀಡಿ ಸೌಲಭ್ಯವನ್ನು ಪಡೆಯಬೇಕು ಎನ್ನುವ ದೂರು ಎಲ್ಲೆಡೆ ಕೇಳಿ ಬರುತ್ತದೆ, ಈ ಎಲ್ಲಾ ದೂರುಗಳಿಗೆ ಕೊಂಚ ವಿರಾಮವನ್ನು ಹಾಕಲು ಇನ್ನು ಮುಂದೆ ಸಾರಿಗೆ ಇಲಾಖೆಯ 32 ಸೇವೆಯನ್ನು ಪಡೆಯಲು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದರಲ್ಲಿ ಹೊಸ ಡ್ರೈವಿಂಗ್ ಲೈಸೆನ್ಸ್(DL) ಮತ್ತು ತಿದ್ದುಪಡಿಗೂ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಸಾರಿಗೆ ಇಲಾಕೆಯ(RTO)ಸೇವೆಗಳನ್ನು ಸರಳ ಮತ್ತು ಸುಲಭ ಹಂತಗಳನ್ನು ಅನುಸರಿಸಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಕೆಯ 32 ಸೇವೆಯನ್ನು ಡಿಜಿಟಲೀಕರಣ ಮಾಡಲಾಗಿದ್ದು ಇವುಗಳಲ್ಲಿ ಅತೀ ಮುಖ್ಯವಾಗಿ ಅಗತ್ಯ ವಿವರುವ ಡ್ರೈವಿಂಗ್ ಲೈಸೆನ್ಸ್ ಪಡೆಯುವುದರ ಬಗ್ಗೆ ಇಂದಿನ ಅಂಕಣದಲ್ಲಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ ರೂ 62,500/- ಸ್ಕಾಲರ್‌ಶಿಪ್!

ಸಾರಿಗೆ ಇಲಾಖೆಯ ಯಾವೆಲ್ಲ ಸೇವೆಗಳನ್ನು ಪಡೆಯಲು ಆನ್ಲೈನ್(RTO Online Application) ಮೂಲಕ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? ಮೊಬೈಲ್ ಮೂಲಕ ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸುದಾದರೆ ಹೇಗೆ ಸಲ್ಲಿಸಬೇಕು ಎನ್ನುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು, ಈ ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ನಮ್ಮ ಪುಟವನ್ನು ಬೆಂಬಲಿಸಿ.

RTO Online Services In Karnataka-ಸಾರಿಗೆ ಇಲಾಖೆಯ 32 ಸೇವೆಗಳಿಗೆ ಆನ್ಲೈನ್ ವ್ಯವಸ್ಥೆ:

ಸಾರ್ವಜನಿಕರು ಇನ್ನು ಮುಂದೆ ಸಾರಿಗೆ ಇಲಾಖೆಯ ವಿವಿಧ ಬಗ್ಗೆಯ ದಾಖಲೆಗಳನ್ನು ಪಡೆಯಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿದ್ದು ದಾಖಲೆಗಳನ್ನು ತೆಗೆದುಕೊಂಡು ಕಚೇರಿಯನ್ನು ಅಲೆದಾಡುವ ಅವಶ್ಯಕತೆ ಇರುವುದಿಲ್ಲ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವ ಕೆಲವು ಪ್ರಮುಖ ಸೇವೆಗಳ ಪಟ್ಟಿ ಹೀಗಿದೆ:

ಪರವಾನಗಿ ರದ್ದತಿ/ಶರಣಾಗತಿ
ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ
ಎಲ್.ಎಲ್ ನಲ್ಲಿ ಹೆಸರು/ವಿಳಾಸ ತಿದ್ದುಪಡಿ
ನಕಲು ಡ್ರೈವಿಂಗ್ ಲೈಸೆನ್ಸ್ ಪ್ರತಿ
ಆರ್.ಸಿ ನಕಲು ಪ್ರತಿ ವಿತರಣೆ
ರಿಕ್ಷಾ ಪರ್ಮಿಟ್ ನವೀಕರಣ

ಇದನ್ನೂ ಓದಿ: BPL Card Eligibility-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು!
ಆರ್.ಸಿ ಬದಲಾವಣೆ
ಗೂಡ್ಸ್ ವಾಹನ ಪರವಾನಗಿ
ಲಕ್ಷುರಿ ಟ್ಯಾಕ್ಸಿಗೆ ಪರವಾನಗಿ
ನ್ಯಾಷನಲ್ ಪರ್ಮಿಟ್ ಗೆ ಅನುಮತಿ
ಕಂಡಕ್ಟರ್ ಲೈಸೆನ್ಸ್ ನವೀಕರಣ ಇತರೆ ಒಟ್ಟು 32 ಸೇವೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.

Driving Licence Online Application-ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ ಮಾಡಿಸುವುದು ಇನ್ನು ಭಾರೀ ಸುಲಭ:

ವಾಹನ ಮಾಲೀಕರು ತಮ್ಮ ಹಾಲಿ ಡ್ರೈವಿಂಗ್ ಲೈಸೆನ್ಸ್(DL) ನಲ್ಲಿರುವ ವಿವರವನ್ನು ತಿದ್ದುಪಡಿ ಮಾಡಿಸಲು ಅಥವಾ ಹೊಸ ಡ್ರೈವಿಂಗ್ ಲೈಸೆನ್ಸ್ (DL) ಅನ್ನು ಪಡೆಯಲು ಆನ್ಲೈನ್ ಮೂಲಕವೇ ನಿಮ್ಮ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಸಾರಿಕೆ ಇಲಾಕೆಯ ಅಧಿಕೃತ Parivahan.gov.in ವೆಬ್ಸೈಟ್ ಅನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.

Step-1: ಅರ್ಜಿದಾರರು ಪ್ರಥಮ ಹಂತದಲ್ಲಿ ಈ "Driving Licence Online Apply "ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಾರಿಗೆ ಇಲಾಖೆಯ Parivahan.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Dairy Shed Subsidy-ಹೈನುಗಾರಿಕೆ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ರೂ 57,000/- ಸಹಾಯಧನ!

Driving Licence Application

ಇದನ್ನೂ ಓದಿ: E-Swathu-ಗ್ರಾಮೀಣ ಜನರಿಗೆ ಭರ್ಜರಿ ಸಿಹಿ ಸುದ್ದಿ: ಇನ್ಮುಂದೆ ಕೇವಲ 15 ದಿನದಲ್ಲಿ ಸಿಗಲಿದೆ ಇ-ಸ್ವತ್ತು!

Step-2: ನಂತರ ಈ ಪೇಜ್ ನಲ್ಲಿ Please Select The State ಎನ್ನುವ ಆಯ್ಕೆ ವಿಭಾಗದಲ್ಲಿ "Karnataka" ಎಂದು ಆಯ್ಕೆ ಮಾಡಿಕೊಳ್ಳಿ.

Step-3: ತದನಂತರ ಈ ಪುಟದಲ್ಲಿ Apply For Driving Licence ಮತ್ತು Apply For Change Of Address, Apply For DL Renewal ಎನ್ನುವ ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಹೊಸ ಡ್ರೈವಿಂಗ್ ಲೈಸೆನ್ಸ್ ಪಡೆಯಲು "Apply For Driving Licence" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

Step-4: ಇಲ್ಲಿ "Continue" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಬಳಿಕ ಅಗತ್ಯ ದಾಖಲೆಯನ್ನು ಅಪ್ಲೋಡ್ ಮಾಡಬೇಕು, ನಂತರ ಟೆಸ್ಟ್ ಡ್ರೈವಿಂಗ್ ಮಾಡಲು ದಿನಾಂಕವನ್ನು ಬುಕ್ ಮಾಡಿ ಶುಲ್ಕವನ್ನು ಪಾವತಿ ಮಾಡಿ ಕೊನೆಯಲ್ಲಿ ಸ್ವೀಕೃತಿಯನ್ನು ಪ್ರಿಂಟ್ ಮಾಡಿಕೊಳ್ಳಿ.

ಇದನ್ನೂ ಓದಿ: Free Photography Training-ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

Documents For DL Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಹೊಸ ಡ್ರೈವಿಂಗ್ ಲೈಸೆನ್ಸ್ ಮತ್ತು ತಿದ್ದುಪಡಿ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಾಗಿ ಒದಗಿಸಬೇಕಾದ ದಾಖಲೆಗಳ ಪಟ್ಟಿ:

ಅರ್ಜಿದಾರರ ಆಧಾರ್ ಕಾರ್ಡ/Adhar Card
ಪೋಟೋ/Photo
ನಿವಾಸಿ ದೃಡೀಕರಣಕ್ಕೆ ವಿಳಾಸ ಪುರಾವೆ/Voter Id ect..
ಅರ್ಜಿ ಸಲ್ಲಿಸಿ ಪಡೆಯಬೇಕಾದ ದಾಖಲೆಗೆ ಒದಗಿಸಬೇಕಾದ ಪೂರಕ ದಾಖಲೆಗಳು/Others Doc
ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Taxi Subsidy Scheme-ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಶೇ 50% ಸಹಾಯಧನದಲ್ಲಿ ಟ್ಯಾಕ್ಸಿ ಖರೀದಿಸಲು ಅರ್ಜಿ ಆಹ್ವಾನ!

RTO Website Link-ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಮುಖ ವೆಬ್ಸೈಟ್ ಲಿಂಕ್-

ರಾಜ್ಯ ಸಾರಿಗೆ ಇಲಾಖೆಯ ಜಾಲತಾಣ/Karnataka RTO Website- Click Here
ಕೇಂದ್ರ ಸಾರಿಗೆ ಇಲಾಖೆಯ ಜಾಲತಾಣ/Central RTO Website- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: