HomeNew postsElectricity bill- ನಿಮ್ಮ ಮನೆಯಲ್ಲಿ ಪ್ರತಿ ತಿಂಗಳು ಬಳಕೆಯಾದ ವಿದ್ಯುತ್ ಯೂನಿಟ್ ಎಷ್ಟು, ಬಿಲ್ ಮೊತ್ತವೇಷ್ಟು?ಎಂದು...

Electricity bill- ನಿಮ್ಮ ಮನೆಯಲ್ಲಿ ಪ್ರತಿ ತಿಂಗಳು ಬಳಕೆಯಾದ ವಿದ್ಯುತ್ ಯೂನಿಟ್ ಎಷ್ಟು, ಬಿಲ್ ಮೊತ್ತವೇಷ್ಟು?ಎಂದು ತಿಳಿಯಲು ಇಲ್ಲಿದೆ ಡೈರೆಕ್ಟ್ ಲಿಂಕ್

ಗ್ರಾಹಕರು ಪ್ರತಿ ತಿಂಗಳು ತಮ್ಮ ಮನೆಯಲ್ಲಿ ಉಪಯೋಗಿಸಿರುವ ಒಟ್ಟು ವಿದ್ಯುತ್ ಯೂನಿಟ್ ಎಷ್ಟು? ಬಿಲ್ ಮೊತ್ತ ಎಷ್ಟು ಬಂದಿದೆ? ಎಂದು ನಿಮ್ಮ ಮೊಬೈಲ್ ನಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ತಿಳಿದುಕೊಳ್ಳಬವುದು.

ರಾಜ್ಯದ ಇ-ಆಡಳಿತ ವಿಭಾಗದಿಂದ ಸರಕಾರದ ವಿವಿಧ ಇಲಾಖೆಯ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ಮಾಹಿತಿ ಲಭ್ಯವಾಗುವಂತೆ ಮಾಡಲು “ಮಾಹಿತಿ ಕಣಜ” ಜಾಲತಾಣದ ಮೂಲಕ ಎಲ್ಲಾ ಬಗ್ಗೆಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ಮನೆ ಬಳಕೆ ವಿದ್ಯುತ್ ಪ್ರತಿ ತಿಂಗಳು ಎಷ್ಟು ಬಳಕೆ ಮಾಡಲಾಗಿದೆ? ಗೃಹಜ್ಯೋತಿ ಯೋಜನೆಯಡಿ ಸರಾಸರಿ ಉಚಿತ ಬಿಲ್ ಹೊರತುಪಡಿಸಿ ಎಷ್ಟು ಹಣ ಬಿಲ್ ಬಂದಿದೆ? ಎಂದು ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ಎಲ್ಲಾ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Gruha jyothi Yojana-ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್!

Electricity bill status- ಯಾವ ತಿಂಗಳು ಎಷ್ಟು ಯೂನಿಟ್ ಮತ್ತು ಬಿಲ್ ಮೊತ್ತವೇಷ್ಟು? ಎಂದು ತಿಳಿಯುವ ವಿಧಾನ:

ಬೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯ ಗ್ರಾಹಕರ ಪ್ರತಿ ತಿಂಗಳು ಎಷ್ಟು ಯೂನಿಟ್ ಬಳಕೆ ಮಾಡಲಾಗಿದೆ ಮತ್ತು ವಿದ್ಯುತ್ ಬಿಲ್ ಮೊತ್ತ ಎಷ್ಟು ಬಂದಿದೆ ಎಂದು ಇ-ಆಡಳಿತ ವಿಭಾಗದ “ಮಾಹಿತಿ ಕಣಜ” ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಒಂದೆರಡು ಕ್ಲಿಕ್ ನಲ್ಲಿ ತಿಳಿದುಕೊಳ್ಳಬವುದಾಗಿದೆ.

Step-1: ಮೊದಲಿಗೆ ಈ ಲಿಂಕ್ Bescom bill status: click here  Hescom bill status: Click here (ಬೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯ  ಗ್ರಾಹಕರು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ) ಮೇಲೆ ಕ್ಲಿಕ್ ಮಾಡಿ ಇ-ಆಡಳಿತ ವಿಭಾಗದ ಅಧಿಕೃತ “ಮಾಹಿತಿ ಕಣಜ” ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. 

ಇದನ್ನೂ ಓದಿ: Motor repair training-ಉಚಿತ ವಸತಿ ಸಹಿತ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Step-2: ಇದಾದ ಬಳಿಕ “Account ID” ಕಾಲಂ ನಲ್ಲಿ ನಿಮ್ಮ ಮನೆಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ಗ್ರಾಹಕರ ಐಡಿ ಸಂಖ್ಯೆಯನ್ನು ಹಾಕಬೇಕು. ನಂತರ ನೀವು ಯಾವ ತಿಂಗಳ ಬಿಲ್ ವಿವರವನ್ನು ನೋಡಬೇಕೋ ಆ ತಿಂಗಳನ್ನು From Date* ಮತ್ತು To Date* ಆಯ್ಕೆಯಲ್ಲಿ ಕ್ಲಿಕ್ ಮಾಡಿಕೊಂಡು “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “Submit” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಪೇಜ್ ನಲ್ಲಿ ನೀವು ಆಯ್ಕೆ ಮಾಡಿದ ತಿಂಗಳಲ್ಲಿ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದಿರಾ? ಎಂದು” consumption” ಕಾಲಂ ನಲ್ಲಿ ಯೂನಿಟ್ ವಿವರ ತೋರಿಸುತ್ತದೆ. ಇದರ ಪಕ್ಕ ಕಾಲಂನಲ್ಲಿ ಹಿಂದಿನ ತಿಂಗಳ ಮೀಟರ್ ರೀಡಿಂಗ್ ಮತ್ತು ಪ್ರಸ್ತುತ ತಿಂಗಳ ಮೀಟರ್ ರೀಡಿಂಗ್ , ಬಿಲ್ ದಿನಾಂಕ, ಒಟ್ಟೂ ಪಾವತಿ ಮಾಡಬೇಕಾದ ಮೊತ್ತದ ವಿವರ ತೋರಿಸುತ್ತದೆ.

ಇದನ್ನೂ ಓದಿ: Yashaswini yojana-2024: ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಆಹ್ವಾನ! 5.00 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಗೆ ಅವಕಾಶ.

ಪ್ರಮುಖ ಉಪಯುಕ್ತ ಲಿಂಕ್ ವಿವರ:

ಬೆಸ್ಕಾಂ ವಿದ್ಯುತ್ ಬಿಲ್ ಚೆಕ್ ಮಾಡಲು ಲಿಂಕ್: Click here

ಹೆಸ್ಕಾಂ ವಿದ್ಯುತ್ ಬಿಲ್ ಚೆಕ್ ಮಾಡಲು ಲಿಂಕ್: Click here

ಮಾಹಿತಿ ಕಣಜ ಅಧಿಕೃತ ವೆಬ್ಸೈಟ್ ಲಿಂಕ್: Click here

Most Popular

Latest Articles

Related Articles