Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

December 1, 2025 | Siddesh
Fast Food Business-ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ(Canara rseti) ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಆರಂಭಿಸಲು ಹಾಗೂ ಫಾಸ್ಟ್ ಫುಡ್ ತಯಾರಿಕೆಯಲ್ಲಿ ಕೌಶಲ್ಯವನ್ನು ರೂಪಿಸಿಕೊಳ್ಳಲು ಉಚಿತ ತರಬೇತಿಯನ್ನು ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಜನ ಸಂಖ್ಯೆಗೆ ಅನುಗುಣವಾಗಿ ಆಹಾರ ತಯಾರಿಕೆ ಮತ್ತು ವಿತರಣೆ ಕ್ಷೇತ್ರದಲ್ಲಿ ಉದ್ದಿಮೆಯನ್ನು(Fast Food Business) ಆರಂಭಿಸುವವರಿಗೂ ಉತ್ತಮ ಅವಕಾಶಗಳು ಇರುತ್ತವೆ ಈ ನಿಟ್ಟಿನಲ್ಲಿ ಪ್ರಸ್ತುತ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದಿಂದ ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ನೀಡಲು ಮುಂದಾಗಿದೆ.

ಇದನ್ನೂ ಓದಿ: Online Land Records-ರೈತರಿಗೆ ಇನ್ನುಂದೆ ಪಹಣಿ ಜೊತೆಗೆ ಸಿಗಲಿವೆ ಹೆಚ್ಚುವರಿ ಭೂ ದಾಖಲೆಗಳು!

ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು? ತರಬೇತಿಯಲ್ಲಿ(Free Fast Food Training) ಭಾಗವಹಿಸಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತದೆ? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Fast Food Training-ಯಾವೆಲ್ಲ ಫಾಸ್ಟ್ ಫುಡ್ ತಯಾರಿಕೆ ಬಗ್ಗೆ ತಿಳಿಸಲಾಗುತ್ತದೆ?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ಆಹಾರ ಪದಾರ್ಥಗಳ ತಯಾರಿಕೆ ಕುರಿತು ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ.

ಪಾನಿಪುರಿ, ಮಸಾಲ ಪುರಿ, ಗೋಬಿ ಮಂಚೂರಿ, ಕಚೋರಿ, ನೊಡಲ್ಸ್, ಕೇಕ್, ಪಪ್ಸ್ ಹಾಗೂ ಸಿಹಿ ತಿಂಡಿಗಳನ್ನು ತಯಾರಿಸುವುದರ ಬಗ್ಗೆ ಪ್ರಾಯೋಗಿಕವಾಗಿ ಕಲಿಕಾ ತರಬೇತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Mekkejola Kharidi- ಕೆಎಂಎಫ್‌ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್‌ಗೆ ₹2,400 ರಂತೆ ಮೆಕ್ಕೆಜೋಳ ಖರೀದಿಗೆ ಆದೇಶ ಪ್ರಕಟ!

Fast Food Training Date-ತರಬೇತಿ ದಿನಾಂಕ:

ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯು 08 ಡಿಸೆಂಬರ್ 2025 ರಿಂದ ಪ್ರಾರಂಭವಾಗಿ 19 ಡಿಸೆಂಬರ್ 2025ಕ್ಕೆ ಮುಕ್ತಾಯವಾಗಲಿದ್ದು, ಒಟ್ಟು 12 ದಿನದ ತರಬೇತಿ ಇದಾಗಿರುತ್ತದೆ.

Full Free Fast Food Training-ಉಚಿತ ತರಬೇತಿ:

ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ತರಬೇತಿಯನ್ನು ಪಡೆಯಲು ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಈ ತರಬೇತಿಯು ಸಂಪೂರ್ಣ ಉಚಿತ ತರಬೇತಿ ಅಗಿದ್ದು, ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ Diploma, ITI ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Fast Food Business

ಇದನ್ನೂ ಓದಿ: Labour Welfare Scholarship-ಕಾರ್ಮಿಕ ಇಲಾಖೆಯ ವತಿಯಿಂದ ₹20,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Who Can Apply For Fast Food Training-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಆಯೋಜನೆ ಮಾಡಿರುವ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿಯಲ್ಲಿ ಯಾರೆಲ್ಲ ಭಾಗವಹಿಸಬಹುದು ಎನ್ನುವ ವಿವರ ಹೀಗಿದೆ:

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರ ಅಭ್ಯರ್ಥಿಯು 18 ರಿಂದ 50 ವರ್ಷ ವಯೋಮಾನದವರಾಗಿರಬೇಕು.
ಬಿಪಿಎಲ್ ಕಾರ್ಡ ಹೊಂದಿರುವ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯಿರುತ್ತದೆ.
ಸ್ವಂತ ಉದ್ದಿಮೆಯನ್ನು ಆರಂಭಿಸುವವರಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bele Parihara-2025: ರೈತರ ಖಾತೆಗೆ ₹1,033 ಕೋಟಿ ಬೆಳೆ ಹಾನಿ ಪರಿಹಾರ ಬಿಡುಗಡೆ!

Fast Food Training Center-ತರಬೇತಿ ಏರ್ಪಡಿಸಿರುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343

How To Apply For Fast Food Training-ಅರ್ಜಿ ಸಲ್ಲಿಸುವುದು ಹೇಗೆ?

ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು 07 ಡಿಸೆಂಬರ್ 2025 ರ ಒಳಗಾಗಿ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.

Step-1: ಮೊದಲಿಗೆ ಇಲ್ಲಿ ಕ್ಲಿಕ್ "Apply Now" ಮಾಡಿ ನಿಗದಿತ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿ ಮತ್ತು ತರಬೇತಿಯಲ್ಲಿ ಭಾಗವಹಿಸುವುದರ ಬಗ್ಗೆ ಮಾಹಿತಿ ತಿಳಿಯಲು ಸಂಪರ್ಕಿಸಿ: 9449860007, 9538281989, 9916783825

ಇದನ್ನೂ ಓದಿ: Toilet Construction Subsidy -ಸ್ವಚ್ಚ ಭಾರತ್ ಯೋಜನೆಯ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನಕ್ಕೆ ಅರ್ಜಿ!

Documents For Fast Food Training-ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲೆಗಳು:

  • ಅಭ್ಯರ್ಥಿಯ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ
  • ಪಾನ್ ಕಾರ್ಡ್
  • ಅಭ್ಯರ್ಥಿಯ ನಾಲ್ಕು ಫೋಟೋ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: