Fertilizer Price List-2025: ಪರಿಷ್ಕೃತ ರಸಗೊಬ್ಬರ ದರ ಪಟ್ಟಿ ಬಿಡುಗಡೆ!

August 6, 2025 | Siddesh
Fertilizer Price List-2025: ಪರಿಷ್ಕೃತ ರಸಗೊಬ್ಬರ ದರ ಪಟ್ಟಿ ಬಿಡುಗಡೆ!
Share Now:

ಕೇಂದ್ರ ಸರಕಾರವು ಇತ್ತೀಚೆಗೆ ಪರಿಷ್ಕೃತ ರಸಗೊಬ್ಬರ ದರ ಪಟ್ಟಿಯನ್ನು(Updated Fertilizer Price List) ಬಿಡುಗಡೆ ಮಾಡಿದ್ದು ಇಂದಿನ ಅಂಕಣದಲ್ಲಿ ಕಂಪನಿ ಮತ್ತು ಗೊಬ್ಬರವಾರು ನಿಗದಿಪಡಿಸಿರುವ MRP ದರ ವಿವರದ ಪಟ್ಟಿ ಮತ್ತು ರಸಗೊಬ್ಬರವನ್ನು ಬಳಕೆ ಮಾಡುವಾಗ ರೈತರು ಅವಶ್ಯವಾಗಿ ತಿಳಿದುಕೊಂಡಿರಬೇಕಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಮುಂಗಾರು ಹಂಗಾಮಿನ ಪೂರ್ವದಲ್ಲಿ ಪ್ರತಿ ವರ್ಷ ಅಧಿಕೃತವಾಗಿ ರಸಗೊಬ್ಬರದ MRP ದರವನ್ನು ಕೇಂದ್ರ ಸರಕಾರವು ನಿಗದಿಪಡಿಸಲಾಗುತ್ತದೆ. ಈ ದರಕ್ಕಿಂತ ಹೆಚ್ಚಿನ ದರಲ್ಲಿ(Fertilizer MRP Price List) ಯಾರದರು ಗೊಬ್ಬರ ಮಾರಾಟ ಮಾಡಿದ್ದರೆ ರೈತರು ಕೂಡಲೇ ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ದೂರು ಸಲ್ಲಿಸಬಹುದು.

ಇದನ್ನೂ ಓದಿ: Bhu Suraksha Yojana-ರೈತರಿಗೆ ಡಿಜಿಟಲ್ ಸೌಲಭ್ಯ: ಜಮೀನಿನ ದಾಖಲೆ ಈಗ ಒಂದೇ ಕ್ಲಿಕ್ಕಿನಲ್ಲಿ ಲಭ್ಯ!

ಇಂದಿನ ಲೇಖನದಲ್ಲಿ ಪರಿಷ್ಕೃತ ರಸಗೊಬ್ಬರ ದರ ಪಟ್ಟಿ(Fertilizer Price List), ರಸಗೊಬ್ಬರದಲ್ಲಿನ NPK ಎಂದರೆ ಏನು? DAP,ಯೂರಿಯಾ,10:26:26 ಗೊಬ್ಬರದಲ್ಲಿ ಎಷ್ಟು ಪ್ರಮಾಣದ ಪೋಷಕಾಂಶಗಳು ಇರುತ್ತವೆ ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

The most important things farmers should know about fertilizer-ರಸಗೊಬ್ಬರದ ಕುರಿತು ರೈತರು ಅತಿ ಮುಖ್ಯವಾಗಿ ತಿಳಿದಿರಬೇಕಾದ ಅಂಶಗಳು:

NPK ಎಂದರೆ ಏನು?

ಎನ್- ಸಾರಜನಕ (Nitrogen) ಪಿ- ರಂಜಕ(Phosphorus) ಕೆ- ಗಂಧಕ(Potassium) ಅಂಶವೂ ಸಾಮಾನ್ಯವಾಗಿ ಇರುತ್ತದೆ. ನೀವು ಯಾವುದೇ ರಸಗೊಬ್ಬರ ಖರೀದಿ ಮಾಡಿದರೂ ಅದರಲ್ಲಿ ಈ 3 ಅಂಶಗಳು ಇದ್ದೇ ಇರುತ್ತವೆ. ಒಂದು ವೇಳೆ 3 ಅಂಶಗಳು ಇಲ್ಲವಾದಲ್ಲಿ, ಒಂದು ಅಂಶವಂತೂ ಇದ್ದೇ ಇರುತ್ತದೆ. ಯಾಕೇಂದರೆ ಈ ಮೂರರಲ್ಲಿ ಒಂದು ಅಂಶ ಮಿಶ್ರಣ ಇರದಿದ್ದಲ್ಲಿ ಅದು ರಸಗೊಬ್ಬರ ಎನಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: SSLC ಮತ್ತು PUC ಅಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ!

DAP ಎಂದರೆ ಏನು?

ಭಾರತದಲ್ಲಿ ಹೆಚ್ಚಾಗಿ ಪ್ರಚಲಿತವಾಗಿರುವ ರಸಗೊಬ್ಬರಗಳು ಯಾವುವೆಂದರೆ DAP ಮತ್ತು ಯೂರಿಯಾ. ಡಿಎಪಿ ಎಂದರೆ ಡೈ ಅಮೋನಿಯಂ ಫಾಸ್ಪೇಟ್ ಎಂದರ್ಥ. ಇದು ಬಹಳ ಉಪಯೋಗಿ ರಸಗೊಬ್ಬರ ಎಂದು ಹೇಳಬಹುದು. ಈ ಡಿಎಪಿ ಒಳಗೆ 18% ಸಾರಜನಕ ಮತ್ತು 46 % ರಂಜಕದ ಅಂಶ ಒಳಗೊಂಡಿರುತ್ತದೆ. ಅದರಂತೆ ಫಾಸ್ಪೇಟ್ ಅಂಶವು ಸೊನ್ನೆ ಇರುತ್ತದೆ. ಯಾವ ಭೂಮಿಗೆ ಅತಿ ಹೆಚ್ಚು ರಂಜಕದ ಅಂಶ ಕಡಿಮೆ ಇರುತ್ತದೆಯೋ ಅಂಥ ಭೂಮಿಗೆ ಡಿಎಪಿ ರಸಗೊಬ್ಬರ ಬಳಸಬೇಕು.

What is Urea-ಯೂರಿಯಾ:

ಇದರಲ್ಲಿ ಸಾರಜನಕ 46% ಇರುತ್ತದೆ. ಇದು ಮುಖ್ಯವಾಗಿ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ ಅಥವಾ ಕಾಂಡಗಳು ಚೆನ್ನಾಗಿ ಸದೃಢವಾಗಲು ಬಳಸಲಾಗುವುದು. ಇದರ ಜೊತೆಗೆ ಹಲವಾರು ಬಗೆಯ ರಸಗೊಬ್ಬರಗಳು ಇವೆ.

ನೀವು ರಸಗೊಬ್ಬರ ಚೀಲಗಳ ಮೇಲೆ 10-26-26 ನಂತಹ ಸಂಖ್ಯೆಗಳನ್ನು ನೋಡಿಯೇ ಇರುತ್ತೀರಿ. ಇದರ ಅರ್ಥ ಸಾರಜನಕ 10%, ರಂಜಕ-26% ಮತ್ತು ಪೊಟ್ಯಾಷಿಯಂ -26 % ಇರುತ್ತದೆ. ಈ ರಸಗೊಬ್ಬರವನ್ನು ಸಾಮಾನ್ಯವಾಗಿ ಕಬ್ಬಿನ ಬೆಳೆಗೆ ಬಳಸಲಾಗುವುದು.

ಇದನ್ನೂ ಓದಿ: Post Matric Scholarship-ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

UREA

20-20-20 – ಇದರಲ್ಲಿ ಎನ್.ಪಿ.ಕೆ ಅಂಶವು ಸಮಪ್ರಮಾಣದಲ್ಲಿ ಇದ್ದು ಇದನ್ನು ಹೆಚ್ಚಾಗಿ ಕಡಿಮೆ ಅವಧಿಯ ಬೆಳೆಗಳಾದ ಹೆಸರು, ಉದ್ದು, ರಾಜ್ಮಾ, ಕುಸುಬೆ ಬೆಳೆಗಳಿಗೆ ಬಳಸಲಾಗುವುದು.

17-17-17 ಇದರಲ್ಲಿ ಎನ್.ಪಿ.ಕೆ ಅಂಶವು ಸಮಪ್ರಮಾಣದಲ್ಲಿ ಇದ್ದು, ಇದನ್ನು ಹೆಚ್ಚಾಗಿ ದೀರ್ಘಕಾಲದ ಬೆಳೆಗಳಾದ ಕಬ್ಬು, ಪಪ್ಪಾಯ, ತೊಗರಿ ಮತ್ತು ಬಾಳೆಯಲ್ಲಿ ಬಳಸಲಾಗುವುದು.

Farmers should know about fertilizer-ರೈತರು ರಸಗೊಬ್ಬರಗಳನ್ನು ಬಳಕೆ ಮತ್ತು ಖರೀದಿ ಮಾಡುವ ಸಮಯದಲ್ಲಿ ತಪ್ಲದೇ ಅವಶ್ಯವಾಗಿ ತಿಳಿದಿರಬೇಕಾದ ಮಾಹಿತಿಗಳ ವಿವರ ಈ ಕೆಳಗಿನಂತಿವೆ:

  • ಅಧಿಕೃತ ಮಾರಾಟಗಾರದಿಂದ ರಸಗೊಬ್ಬರ ಖರೀದಿಸಿ ತಪ್ಪದೇ ರಶೀದಿ ಪಡೆಯಿರಿ.
  • ರಸಗೊಬ್ಬರಗಳ ಬಳಕೆ ಹಿತ-ಮಿತವಾಗಿರಲಿ. ಯಾಕೆಂದರೆ ಅತಿ ಹೆಚ್ಚಿನ ರಸಗೊಬ್ಬರದ ಬಳಕೆ ದೀರ್ಘಕಾಲಕ್ಕೆ ಭೂಮಿಯನ್ನು ಬಂಜರು ಮಾಡಬಹುದು.
  • ಸಾಧ್ಯವಾದಷ್ಟು ಸಾವಯವ ಗೊಬ್ಬರ ಬಳಕೆ ಉತ್ತಮ.
  • ಯಾವುದೇ ಗೊಬ್ಬರ ಹಾಕುವ ಮೊದಲು, ಹೊಲದಲ್ಲಿರುವ ಕಳೆ ತೆಗೆಯಬೇಕು.
  • ಹೊಲಕ್ಕೆ ನೀರುಣಿಸಿದ ನಂತರ ಅಥವಾ ಮಳೆ ಬಂದ ನಂತರ ರಸಗೊಬ್ಬರ ಬಳಸಿದರೆ ಉತ್ತಮ.

ಇದನ್ನೂ ಓದಿ: Registered Post-ಅಂಚೆ ಇಲಾಖೆಯಲ್ಲಿ ಇನ್ನುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್!

10-26-26

Neem Coated Urea/ಯೂರಿಯಾ (45 kg bag) is available from RCF, MCF, IFFCO, Paradeep Phosphates Ltd, GSFC, MFL, SPIC, Kribhco, CIL, NFCL, IPL, and NFL.- 266 rs per 45Kg Bag

🔷 1. Muriate of Potash (MOP)

Company NameMRP (₹/50kg)
Mosaic India Ltd₹1525
Mangalore Chemicals & Fertilisers Ltd (MCF)₹1600
Coromandel International Ltd (CIL)₹1550
GSFC₹1550
Mahadhan Agri Tech Ltd₹1525
FACT₹1550
NFL₹1625
Narmada Biochem Ltd₹1625
Paradeep Phosphates Ltd₹1600
Indian Potash Ltd (IPL)₹1535
RCF₹1550

ಇದನ್ನೂ ಓದಿ: PM Kisan Status-ಪಿಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹2,000 ಆರ್ಥಿಕ ನೆರವು ವರ್ಗಾವಣೆ!

🔷 2. Diammonium Phosphate (DAP)

Company NameMRP (₹/50kg)
IFFCO₹1700
Mahadhan (Smartchem Tech Ltd)₹1700
RCF₹1725
MCF₹1750
CIL₹1725
Kribhco₹1720
Paradeep Phosphates Ltd₹1800

🔷 3. N:P Complex 20:20:0:13

Company NameMRP (₹/50kg)
IFFCO₹1350
IPL₹1350
MCF₹1350
CIL₹1350
Mahadhan₹1350
Greenstar₹1350
RCF₹1350
Kribhco₹1350
GSFC₹1350
PPL₹1350

ಇದನ್ನೂ ಓದಿ: PM Kisan Farmer List-ಪಿಎಂ ಕಿಸಾನ್ 20ನೇ ಕಂತಿನ ಅರ್ಹ ರೈತರ ಪಟ್ಟಿ ಪ್ರಕಟ! ಇಂದೇ ಪರಿಶೀಲಿಸಿ!

🔷 4. N:P:K Complex Fertilizers (Various Grades)

Fertilizer TypeCompanyMRP (₹/50kg)
14:35:14CIL, PPL₹1800
14:35:15-ZnIFFCO₹1700
15:15:15RCF₹1650
15:15:15 (Imported)FACT₹985
12:32:16FACT₹1250
19:19:19PPL₹1800
14:28:0PPL₹1700
24:24:0:08CIL₹1700
16:16:16IPL₹1475
20:20:0CIL₹1400
14:28:14PPL₹1795

🔷 5. Fortified NPK Fertilizers (with Mg, S, Zn, B)

Fertilizer TypeCompanyMRP (₹/40kg)
8:21:21Mahadhan₹1800
11:30:14Mahadhan₹1800
9:24:24Mahadhan₹1900

ಇದನ್ನೂ ಓದಿ: Muskaan Scholarship-ಮುಸ್ಕಾನ್ ಸ್ಕಾಲರ್‌ಶಿಪ್ ಯೋಜನೆಯಡಿ ₹12,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

🔷 6. Ammonium Sulphate

CompanyMRP
CIL₹1500
PPL₹1700
IFFCO₹1720

🔷 7. Single Super Phosphate (SSP)

  • Powdered SSP:
    • Coromandel (CIL): ₹575
    • Greenstar: ₹640
    • Coimbatore Pioneer: ₹650
  • Granular SSP:
    • Greenstar: ₹700
    • Coromandel (CIL): ₹615

Updated Fertilizer MRP Price List-ಅಧಿಕೃತ ಪರಿಷ್ಕೃತ ರಸಗೊಬ್ಬರ ದರ ಪಟ್ಟಿ PDF ಪೈಲ್-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: