Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeGovt SchemesFID Number: ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಫ್.ಐ.ಡಿ. (FID) ನಂಬರ್ ಕಡ್ಡಾಯ! ನಿಮ್ಮ ಮೊಬೈಲ್...

FID Number: ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಫ್.ಐ.ಡಿ. (FID) ನಂಬರ್ ಕಡ್ಡಾಯ! ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದು ಎಫ್.ಐ.ಡಿ.

ರೈತರು ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು “ಪ್ರೂಟ್ಸ್”-FRUITS(Farmer Registration and Unified beneficiary InformaTion System) ನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿರುತ್ತದೆ. 

ಪ್ರೂಟ್ಸ್ ಎಂದರೆ ಫಾರ್ಮರ್ ರೆಜಿಸ್ಟ್ರೇಷನ್ ಆಂಡ್ ಯುನಿಫೈಡ್ ಬೆನೆಫಿಶಿಯರಿ ಇನ್ಫಾರ್ಮೇಷನ್ ಸಿಸ್ಟಮ್. ಇದು ಕೃಷಿ ಇಲಾಖೆಗೆ ಸಂಬಂಧಿಸಿದ, ಕೃಷಿಕರ ಮಾಹಿತಿಗಳನ್ನು ಒಂದೇ ಸೂರಿನಡಿ ಹಿಡಿದಿಟ್ಟುಕೊಳ್ಳುವ ಪೋರ್ಟಲ್ ಅಗಿದೆ. 

ಇದರ ಮೂಲಕ ಕೃಷಿಕರು ಹಲವು ಪ್ರಯೋಜನ ಪಡೆಯಬಹುದಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಈ ವೆಬ್ ಪೋರ್ಟಲ್ ನಲ್ಲಿ ಎಲ್ಲಾ ತರಹದ ವಾಣಿಜ್ಯ ಬೆಳೆ,ಆಹಾರದ ಬೆಳೆಯನ್ನು ಒಳಗೊಂಡ ಎಲ್ಲಾ ವರ್ಗದ ಕೃಷಿಕರು ತಮ್ಮ ವಿವರ ಹಾಗೂ ಜಮೀನಿನ ವಿವರವನ್ನು ನೋಂದಾಯಿಸಿಕೊಳ್ಳುವುದು ಅತ್ಯಗತ್ಯ.

ಏನಿದು “ಪ್ರೂಟ್ಸ್” ನಂಬರ್?

ಕೃಷಿಕ ತಮ್ಮ ಕೃಷಿ ಜಮೀನಿನ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ರೈತನಿಗೆ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ. ಹೇಗೆ ಒಬ್ಬ ವ್ಯಕ್ತಿಗೆ ಆಧಾರ ಗುರುತಿನ ಚೀಟಿಯಾಗಿದೆಯೋ ಅಂತೆಯೇ ಕೃಷಿಕನಿಗೆ ಎಫ್.ಆಯ್.ಡಿ.ಗುರುತಿನ ಚೀಟಿ ಇದ್ದಂತೆ. ಇದು ಕೃಷಿಕನ ಜಮೀನಿನ ವಿವರ ಹಾಗೂ ತಾನು ಬೆಳೆದ ಬೆಳೆಗಳ ವಿವರವನ್ನು ಒಳಗೊಂಡ ವೆಬ್ ಪೋರ್ಟಲ್ ಆಗಿದೆ. ಸರಕಾರದಿಂದ ದೊರೆಯುವ ಕೃಷಿ ಸೌಲಭ್ಯ ಪಡೆದುಕೊಳ್ಳಲು ಕೃಷಿಕ ಇಲ್ಲಿ ಮಾಹಿತಿ ನೋಂದಾಯಿಸಿಕೊಳ್ಳಬೇಕಿದೆ.  

ಇದನ್ನೂ ಓದಿ: Pouthi Khate- ಹಾಳೆ ಖಾತೆದಾರರಿಂದ ಹಾಲಿ ಸಾಗುವಳಿದಾರರ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಳ್ಳುವುದೇಗೆ?

ನೋಂದಣಿ ಹೇಗೆ?

ಸಮೀಪದ ಕೃಷಿ ಇಲಾಖೆ(ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ), ತೋಟಗಾರಿಕೆ ಇಲಾಖೆ, ಭೇಟಿ ನೀಡಿ ಕೃಷಿಕನ ಆರ್.ಟಿ.ಸಿ/ಪಹಣಿ/ಉತಾರ್, ಆಧಾರ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ ನ ಪಾಸ್ ಪುಸ್ತಕ ಪ್ರತಿ, ಪಾಸಪೋರ್ಟ್ ಅಳತೆಯ ಫೋಟೊ, ಮೊಬೈಲ್ ನಂಬರ್ ನೀಡಿದರೆ ನಿಮ್ಮ ಹೆಸರು ಪೋರ್ಟಲ್ ನಲ್ಲಿ ಸೇರ್ಪಡೆಗೊಂಡು ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.

ಏಕೆ ನೋಂದಾಯಿಸಬೇಕು?

ಸರ್ಕಾರದ ಆದೇಶದಂತೆ ಈ ಪೋರ್ಟಲ್ ನಲ್ಲಿ ಕೃಷಿಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೇ ಇದ್ದರೆ ಆತನಿಗೆ ವಿವಿಧ ಕೃಷಿ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬರ ಪರಿಹಾರದ ಹಣ ಪಡೆಯಲು, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಬೆಂಬಲ್ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ   ಹಾಗೂ ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುವುದಿಲ್ಲ. ಎಲ್ಲ ದಾಖಲೆಗಳಿದ್ದರೂ “ಪ್ರೂಟ್ಸ್” ಪೋರ್ಟಲ್ ನಲ್ಲಿ ಹೆಸರು ನೊಂದಾವಣೆ ಮಾಡಿಕೊಳ್ಳದಿದ್ದರೆ ಕೃಷಿಕ ಸರಕಾರದಿಂದ ಪಡೆಯುವ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ.

ಇದನ್ನೂ ಓದಿ: Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

FID Number ತಿಳಿಯಲು ವೆಬ್ಸೈಟ್ ಲಿಂಕ್:

ಈಗಾಗಲೇ ಬಹುತೇಕ ರೈತರು ನೊಂದಣಿ ಮಾಡಿಕೊಂಡಿದ್ದು ಈ ಲಿಂಕ್  ಮೇಲೆ ಕ್ಲಿಕ್ ಮಾಡಿ https://fruitspmk.karnataka.gov.in 12 ಅಂಕಿಯ ಆಧಾರ್ ನಂಬರ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿ “FID” ನಂಬರ್ ಪಡೆಯಬವುದು.

FID application link- ನಿಮ್ಮ ಮೊಬೈಲ್ ನಲ್ಲೇ ಎಫ್.ಐ.ಡಿ ಗಾಗಿ ಅರ್ಜಿ ಸಲ್ಲಿಸಬವುದು:

Step-1: https://fruits.karnataka.gov.in/Login.aspx ಈ ವೆಬ್ಸೈಟ್ ಭೇಟಿ ಮಾಡಿ Citizen Login ಮೇಲೆ ಕ್ಲಿಕ್ ಮಾಡುವುದು.

Step-2: ನಿಮ್ಮ ಅನುಕೂಲಕ್ಕೆ ಅನುಸಾರವಾಗಿ ಕನ್ನಡ ಮತ್ತು ಇಂಗ್ಲೀಷ್ ಬಾಷೆಯನ್ನು
 ಅಯ್ಕೆ ಮಾಡಿಕೊಳ್ಳಬವುದಾಗಿದೆ, Citizen Registration ಮೇಲೆ ಕ್ಲಿಕ್ ಮಾಡಿ.

Step-3: ನಿಮ್ಮ ಅಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಹೇಗೆ ಇದಿಯೋ ಅದೇ ರೀತಿ ಹೆಸರು ಮತ್ತು ಅಧಾರ್ ನಂಬರ್ ಹಾಕಿ ಸ್ವಯಂ ದೃಡೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಿ.

Step-4: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಇಮೇಲ್ ವಿಳಾಸವಿದಲ್ಲಿ ನಮೂದಿಸಿ, ಇಲ್ಲದಿದಲ್ಲಿ “NO” ಎಂದು ಕ್ಲಿಕ್ ಮಾಡಿ “PROCEED” ಬಟನ್ ಮೇಲೆ ಒತ್ತಿ.

Step-5: ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ “OTP” ಬಂದಿರುತ್ತದೆ ಅದನ್ನು ಹಾಕಿ “Submit” ಮೇಲೆ ಒತ್ತಿ

Step-6: ನಿಮ್ಮ ಪ್ರೂಟ್ಸ್ ಖಾತೆಗೆ ಪಾಸ್ ವರ್ಡ್ ರಚನೆ ಮಾಡಿಕೊಳ್ಳಿ ಉದಾಹರಣೆ: Siddesh@123345.

Step-7: ನಂತರ Citizen Login ಮೂಲಕ ನಿಮ್ಮ ಪ್ರೂಟ್ಸ್ ಖಾತೆಗೆ ಲಾಗಿನ್ ಹಾಗಿ   .

Step-8: ಲಾಗಿನ್ ಅದ ನಂತರ “REGISTRATION” ಆಯ್ಕೆಯಲ್ಲಿ Online Registration ಮೇಲಿ ಕ್ಲಿಕ್ ಮಾಡುವುದು.

Step-9: Registration New Farmer ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ, ನಿಮ್ಮ ಹೆಸರು, ಜನ್ಮ ದಿನಾಂಕ,ತಂದೆಯ ಹೆಸರು,ನಿಮ್ಮ ಮೊಬೈಲ್ ಸಂಖ್ಯೆ,ವಿಳಾಸ, Land Details ಆಯ್ಕೆಯಲ್ಲಿ-ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಸೆರ್ಪಡಿಸಿ, ನಿಮ್ಮ ಬ್ಯಾಂಕ್ ಖಾತೆ ವಿವರ ನಮೂದಿಸಿ ನಂತರ ನಿಮ್ಮ ಪೋಟೋ ಅಪ್ಲೋಡ್ ಮಾಡಿ. (ಪೋಟೋ ಸೈಜ್ 20 kbಯಿಂದ 50kb ಒಳಗೆ ಇರಬೇಕು).

Step-10: ಎಲ್ಲಾ ವಿವರ ಭರ್ತಿ ಮಾಡಿದ ನಂತರ “save and Forward” ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ, ಎಫ್.ಐ.ಡಿ. (FID) ನಂಬರ್ ಅನ್ನು ನೀವು ಒಂದು ಕಡೆ ನಮೂದಿಸಿ ಇಟ್ಟುಕೊಳ್ಳಿ ಮುಂದೆ ಅರ್ಜಿ ಸ್ಥಿತಿ ಪರೀಶಿಲಿಸಲು ಬೇಕಾಗುತ್ತದೆ, ನೀವು ಸಲ್ಲಿಸಿದ ಅರ್ಜಿ ವಿವರಗಳು ಸರಿಯಾಗಿದಲ್ಲಿ Approval officer ಲಾಗಿನ್ ಮೂಲಕ ಪರೀಶಿಲನೆಗೊಂಡು ನಿಮ್ಮ ಅರ್ಜಿ approval ಹೊಂದುತ್ತದೆ.

ನೀವು ಸಲ್ಲಿಸಿದ ಅರ್ಜಿ ಸ್ಥಿತಿ ತಿಳಿಯಲು ನಿಮ್ಮ ಪ್ರೂಟ್ಸ್ ಖಾತೆಗೆ ಲಾಗಿನ್ ಹಾಗಿ status check ಆಯ್ಕೆಯಲ್ಲಿ ನೋಡಬವುದು ಅಥವಾ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಸಂಪೂರ್ಣ ಮಾಹಿತಿ ಪಡೆಯಬವುದಾಗಿದೆ.

Most Popular

Latest Articles

- Advertisment -

Related Articles