Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!

January 1, 2026 | Siddesh
Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!
Share Now:

ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಉದ್ಯೋಗ ಎಂಬುದು ಬಹು ಮುಖ್ಯ ಪಾತ್ರವಾಗಿದೆ. (UAN number forgot)ಹಾಗೆಯೇ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಉದ್ಯೋಗಿಗೂ EPF ಖಾತೆ ಸಂಖ್ಯೆ ಪ್ರಮುಖವಾಗಿದೆ. ಈ EPF ಖಾತೆಗೆ ಸಂಬಂಧಿಸಿದಂತೆ ಇರುವ ಪ್ರಮುಖ ಸಂಖ್ಯೆಯೇ UAN (Universal Account Number).

EPF ಖಾತೆ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಗೂ UAN ಸಂಖ್ಯೆ ಅತ್ಯಂತ ಅಗತ್ಯವಾದ ದಾಖಲೆ. ಅನೇಕ(EPF login without UAN) ಉದ್ಯೋಗಿಗಳು ಉದ್ಯೋಗ ಬದಲಾವಣೆ, ಮೊಬೈಲ್ ನಂಬರ್ ಬದಲಾವಣೆ ಅಥವಾ ದಾಖಲೆಗಳ ನಿರ್ಲಕ್ಷ್ಯದಿಂದ ಅನೇಕರು ತಮ್ಮ UAN ಸಂಖ್ಯೆಯನ್ನು ಮರೆತುಬಿಡುತ್ತಾರೆ.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

ಈ UAN ನಂಬರ್ ಇಲ್ಲದೆ EPF ಸೇವೆಗಳನ್ನು EPF ಬ್ಯಾಲೆನ್ಸ್ ಚೆಕ್ ಮಾಡುವುದು, ಹಣ ವಿತ್‌ಡ್ರಾ ಮಾಡುವುದು, KYC ಅಪ್‌ಡೇಟ್ ಮಾಡುವುದು ಸಾಧ್ಯವಾಗುವುದಿಲ್ಲ. ನಿಮ್ಮ UAN ಸಂಖ್ಯೆ ನಿಮ್ಮ ಕೈಯಲ್ಲಿಲ್ಲವೇ? ಚಿಂತಿಸಬೇಡಿ ಈ ಲೇಖನದಲ್ಲಿ ನಿಮ್ಮ UAN ಸಂಖ್ಯೆಯನ್ನು ಹೇಗೆ ಮರುಪಡೆಯುವುದು ಎಂದು ತಿಳಿಸಿಕೊಡುತ್ತೇನೆ.

What is Universal Account Number-ಏನಿದು UAN ಸಂಖ್ಯೆ?

UAN (Universal Account Number) ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees' Provident Fund Organisation) ಯ ವತಿಯಿಂದ ನೀಡಲಾಗಿರುವ 12 ಅಂಕಿಯ ಶಾಶ್ವತ ಗುರುತು ಸಂಖ್ಯೆಯಾಗಿದ್ದು, ಎಲ್ಲಾ PF ಖಾತೆಗಳನ್ನು ಒಂದೇ ಸಂಖ್ಯೆಯಡಿ ಜೋಡಿಸುವ ಐಡಿ‌ ಎನ್ನಬಹುದು.

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

ನಿಮ್ಮ PF ಖಾತೆಗೆ UAN ನಂಬರ್ ಏಕೆ ಬೇಕು ?

ಯುಎಎನ್ ಸಂಖ್ಯೆ ಇಲ್ಲದೆ ನಿಮ್ಮ ಭವಿಷ್ಯ ನಿಧಿ (EPF) ಖಾತೆಗೆ ಲಾಗಿನ್ ಆಗುವುದು ಸಾಧ್ಯವಿಲ್ಲ. ಅಲ್ಲದೆ, ನಿಮ್ಮ EPF ಬ್ಯಾಲೆನ್ಸ್ ಪರಿಶೀಲನೆ, ಪಿಎಫ್ ಹಣ ಹಿಂಪಡೆಯುವುದು, KYC ಅಪ್‌ಡೇಟ್ ಮಾಡುವುದು ಮುಂತಾದ ಯಾವುದೇ ಆನ್‌ಲೈನ್ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಇದಲ್ಲದೆ, ನೀವು ಉದ್ಯೋಗ ಬದಲಾಯಿಸಿದ ಸಂದರ್ಭದಲ್ಲಿ, ನಿಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸಲು ಯುಎಎನ್ ಸಂಖ್ಯೆ ಅನಿವಾರ್ಯ. ಒಟ್ಟಾರೆ, ನಿಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಯುಎಎನ್ ಸಂಖ್ಯೆ ಉದ್ಯೋಗಿಗೆ ಅತ್ಯಂತ ಅಗತ್ಯವಾದ ಪ್ರಮುಖ ಮಾಹಿತಿ ಆಗಿದೆ.

ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

Uses Of This UAN Number-UAN ಸಂಖ್ಯೆಯಿಂದಾಗುವ ಪ್ರಯೋಜನಗಳು?

ಉದ್ಯೋಗಿಗಳ EPF ಖಾತೆಯನ್ನು ಸುಲಭವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಕೆಲಸಗಾರರು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹೋಗುವಾಗ PF ಟ್ರಾನ್ಸ್‌ಫರ್ ಆಗಲು ಈ ನಂಬರ್ ನ ಅವಶ್ಯಕತೆ ಇರುತ್ತದೆ.

ಉದ್ಯೋಗಿಗಳು ಆನ್‌ಲೈನ್ ಮೂಲಕ EPF ಸೇವೆಗಳನ್ನು ಪಡೆಯಲು ಅಗತ್ಯವಾಗಿದೆ.

ಈ UAN ಯಾರು ನೀಡುತ್ತಾರೆ?

ನೀವು ಕೆಲಸಕ್ಕೆ ಸೇರಿದ ಸಮಯದಲ್ಲಿ ನಿಮ್ಮ ಕಂಪನಿಯ HR ಮೂಲಕ EPFO UAN ಸಂಖ್ಯೆಯನ್ನು ಪಡೆಯಬೇಕು.

ಇದನ್ನೂ ಓದಿ: Ashraya Vasati Yojana-ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2.0 ಲಕ್ಷ ಸಹಾಯಧನ!

How to retrieve UAN number-UAN ಸಂಖ್ಯೆಯನ್ನು ಪುನಃ ಪಡೆಯುವುದು ಹೇಗೆ?

Step-1: UAN ಸಂಖ್ಯೆಯನ್ನು ಮರಳಿ ಪಡೆಯಲು ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ "Click Here" ಮೇಲೆ ಕ್ಲಿಕ್ ಮಾಡಿ ಅಧಿಕೃತ ಇಪಿಎಫ್‌ಒ ವೆಬ್‌ಸೈಟ್ ಗೆ ಭೇಟಿ ನೀಡಿ.

Step-2: ವೆಬ್‌ಸೈಟ್ ಗೆ ಭೇಟಿ ನೀಡಿದ ನಂತರ “Know Your UAN” ಅಥವಾ “Forgot UAN” ಆಯ್ಕೆಯನ್ನು ಕ್ಲಿಕ್ ಮಾಡಿ "Get Started" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಮೂರು ಹಂತಗಳನ್ನು ಅನುಸರಿಸಿ ನಿಮ್ಮ UAN ನಂಬರ್ ಅನ್ನು ಪಡೆಯಬಹುದು, ಮೊದಲು ಅಲ್ಲಿ ಕೇಳಲಾಗಿರುವ ನಿಮ್ಮ ಮೊಬೈಲ್ ನಂಬರ್, ಐಡಿ ಪ್ರೂಫ್ (Aadhar Number, Pan number, Member ID) , ಹಾಗೂ ಅಲ್ಲಿ ನೀಡಿರುವ Captcha ಕೋಡ್ ಅನ್ನು ಭರ್ತಿ ಮಾಡಿ "Send OTP & Verify" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ OTP ಅನ್ನು ನಮೂದಿಸಿದಾಗ UAN ಸಂಖ್ಯೆಯನ್ನು ಪಡೆಯಬಹುದು.

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

uan activate

ಇದನ್ನೂ ಓದಿ: Solar Pumpset Helpline-ಸೋಲಾರ್ ಪಂಪ್ ಸೆಟ್ ಸಹಾಯಧನ ಪಡೆಯಲು ಸಹಾಯವಾಣಿ ಸ್ಥಾಪನೆ!

How To Activate UAN-UAN ಆಕ್ಟಿವೇಟ್ ಮಾಡುವುದು ಹೇಗೆ?

Step-1: ಮೊದಲು ನಿಮ್ಮ ಮೊಬೈಲ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ "UMANG" ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ EPFO ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ಭೇಟಿ ಮಾಡಿದ ನಂತರ “Activate UAN” ಆಯ್ಕೆಯನ್ನು ಕ್ಲಿಕ್ ಮಾಡಿ ಅಲ್ಲಿ ಕೇಳಿರುವ UAN ನಂಬರ್, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ನಮೂದಿಸಿಬೇಕು.

Step-3: ನಿಮ್ಮ ಮೊಬೈಲ್ ಫೋನ್ ಗೆ ಬಂದಿರುವ OTP ಯನ್ನು ನಮೂದಿಸಿ Verify ಮಾಡಿದಾಗ ನಿಮ್ಮ UAN ನಂಬರ್ Activate ಆಗುತ್ತದೆ.

ಇದನ್ನೂ ಓದಿ: Federal Bank Scholarship-ಫೆಡರಲ್ ಬ್ಯಾಂಕ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

For More Information-ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: