Free Medical Equipment-60 ವರ್ಷ ಮೇಲ್ಪಟವರಿಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಪಡೆಯಲು ಅರ್ಜಿ ಆಹ್ವಾನ!

August 24, 2025 | Siddesh
Free Medical Equipment-60 ವರ್ಷ ಮೇಲ್ಪಟವರಿಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಪಡೆಯಲು ಅರ್ಜಿ ಆಹ್ವಾನ!
Share Now:

ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುವ ಸಾಮಾಜಿಕ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರಿಗೆ ಸಹಾಯದ ಯೋಜನೆ(RVY Yojana) ಅಡಿಯಲ್ಲಿ 60 ವರ್ಷ ಮೇಲ್ಪಟ ಹಿರಿಯ ನಾಗರಿಕರಿಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಒದಗಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಾಜ್ಯದಲ್ಲಿರುವ 60 ವರ್ಷ ಮೇಲ್ಪಟ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ವಿವಿಧ ಬಗ್ಗೆಯ ವೈದ್ಯಕೀಯ ಸಾಧನಗಳನ್ನು ಉಚಿತವಾಗಿ ನೀಡಲು ಸಾಮಾಜಿಕ ಸಬಲೀಕರಣ ಇಲಾಖೆಯಿಂದ ಆರ್ ವಿ ವೈ ಯೋಜನೆಯಡಿಯಲ್ಲಿ(Free Medical Equipment Application) ಅರ್ಜಿಯನ್ನು ಸಲ್ಲಿಸಲು ಅರ್ಹ ನಾಗರಿಕರಿಗೆ ಅವಕಾಶ ನೀಡಲಾಗಿದೆ. ಅನೇಕ ಜನರಿಗೆ ಈ ಯೋಜನೆಯ ಕುರಿತು ಮಾಹಿತಿ ಇರುವುದಿಲ್ಲ ಅದ್ದರಿಂದ ಅಗತ್ಯವಿರುವ ಹಿರಿಯ ನಾಗರಿಕರಿಗೆ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ.

ಇದನ್ನೂ ಓದಿ: Reliance Foundation Scholarship-ರಿಲಯನ್ಸ್ ಫೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಇಂದಿನ ಈ ಅಂಕಣದಲ್ಲಿ ವೈದ್ಯಕೀಯ ಸಾಧನಗಳನ್ನು ಪಡೆಯಲು(Alimco) ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply For Free Medical Equipment Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು.

60 ವರ್ಷ ಮೇಲ್ಪಟ ಹಿರಿಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಈ ಹಿಂದೆ ಆರ್ ವಿ ವೈ ಯೋಜನೆಯಡಿ ಸಹಾಯಧನವನ್ನು ಪಡೆದಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Subsidy Schemes Application-ವಿಕಲಚೇತನರ ಇಲಾಖೆಯಿಂದ ಟಾಕಿಂಗ್ ಲ್ಯಾಪ್ ಟಾಪ್ ವಿತರಣೆ ಸೇರಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!

Free Medical Equipment-ಯಾವೆಲ್ಲ ವೈದ್ಯಕೀಯ ಸಾಧನಗಳನ್ನು ಉಚಿತವಾಗಿ ಪಡೆಯಬಹುದು?

ಸಾಮಾಜಿಕ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರಿಗೆ ಸಹಾಯದ ಯೋಜನೆ(RVY Yojana) ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಅರ್ಹ ಫಲಾನುಭವಿಗಳು ಈ ಕೆಳಗಿನ ಪಟ್ಟಿಯಲ್ಲಿರುವ ವೈದ್ಯಕೀಯ ಸಾಧನಗಳನ್ನು ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ.

  • ಶ್ರವಣ ಸಾಧನ
  • ಕಾಲರ್
  • ಎಲ್ ಎಸ್ ಬೆಲ್ಟ್
  • ಮೊಣಕಾಲು ಕಟ್ಟು ಪಟ್ಟಿ
  • ಸಿಲಿಕಾನ್ ಕುಶನ್
  • ವೀಲ್ ಚೇರ್(ಅಡಲ್ಟ್)
  • ವೀಲ್ ಚೇರ್(ಕಮೋಡ್)
  • ಚೇರ್/ಸ್ಟೋಲ್(ಕಮೋಡ್)
  • ಟೆಟ್ರಾಪಾಡ್/ಟ್ರೈಪಾಡ್
  • ಆಕ್ಸಿಲ್ ಕ್ರಚನ್
  • ಎಲ್ಬೋ ಕ್ರಚನ್
  • ವಾಕಿಂಗ್ ಸ್ಟಿಕ್
  • ವಾಕರ್

ಇದನ್ನೂ ಓದಿ: Bele Samikshe App-2025: ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಪ್ರಾರಂಭ!ಈಗಲೇ ನಿಮ್ಮ ಬೆಳೆ ವಿವರ ದಾಖಲಿಸಿ!

Free Medical Equipment

How To Apply For Free Medical Equipment Yojana-ಅರ್ಜಿ ಸಲ್ಲಿಸುವುದು ಹೇಗೆ?

ಮೇಲೆ ತಿಳಿಸಿರುವ ಪಟ್ಟಿಯಲ್ಲಿರುವ ವೈದ್ಯಕೀಯ ಸಾಧನಗಳನ್ನು ಪಡೆಯಲು ಅರ್ಹ ನಾಗರಿಕರು ಅರ್ಜಿಯನ್ನು ಸಲ್ಲಿಸಲು ಮೊದಲಿಗೆ ಈ ಕೆಳಗೆ ನೀಡಿರುವ ಸಹಾಯವಾಣಿಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಅರ್ಜಿ ನಮೂನೆಯನ್ನು ಪಡೆದು ಅವಶ್ಯಕ ದಾಖಲೆಗಳ ಸಮೇತ ಈ ಲೇಖನದ ಕೊನೆಯಲ್ಲಿ ನೀಡಿರುವ ಕಚೇರಿ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.

Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಸಾಮಾಜಿಕ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರಿಗೆ ಸಹಾಯದ ಯೋಜನೆ(RVY Yojana) ಅಡಿಯಲ್ಲಿ 60 ವರ್ಷ ಮೇಲ್ಪಟ ಹಿರಿಯ ನಾಗರಿಕರಿಗೆ ಉಚಿತವಾಗಿ ವೈದ್ಯಕೀಯ ಸಾಧನಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲೆಗಳು ಹೀಗಿದೆ:

  • ಅರ್ಜಿದಾರರ ಆಧಾರ್ ಕಾರ್ಡ
  • ಆಧಾರ ಪಮಾಣ ಪತ್ರ(ಎಲ್ಲಾ ಮೊಲಗಳಿಂದ ತಿಂಗಳಿಗೆ ರೂ 22,500/- ವರೆಗೆ ಇರಬೇಕು)
  • ರೇಶನ್ ಕಾರ್ಡ ಪ್ರತಿ
  • ಪಾಸ್ ಪೋರ್ಟ್ ಸೈಟ್ ಪೋಟೋ
  • ಮೊಬೈಲ್ ನಂಬರ್

ಇದನ್ನೂ ಓದಿ: Valmiki Nigama Subsidy Yojane-ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

For More Information-ಹೆಚ್ಚಿನ ಮಾಹಿತಿಗಾಗಿ:

ಕಚೇರಿ ವಿಳಾಸ- ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ(ಆಲಿಂಕೋ)
ಪ್ಲಾಟ್ ನಂ.08, ಜಲವಾಯು ಹೈಟ್ಸ್ ಎದುರು(ಜಲ ಸೌಧ ಹತ್ತಿರ),ಹೆಚ್.ಎಂ.ಟಿ ಲಿಂಕ್ ರಸ್ತೆ,ಜಾಲಹಳ್ಳಿ ಅಂಚೆ, ಬೆಂಗಳೂರು-560013

Helpline-ಸಹಾಯವಾಣಿ ಸಂಖ್ಯೆ- 1800 180 5129
ಕಚೇರಿ ದೂರವಾಣಿ ಸಂಖ್ಯೆ- 8197977456
Webiste-ಆಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: