Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

July 18, 2025 | Siddesh
Free Skill Training-ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ!
Share Now:

ಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗವನ್ನು ಪಡೆಯಲು ಶಿಕ್ಷಣದ ಜೊತೆಗೆ ಕೆಲಸಕ್ಕೆ ತಕ್ಕಂತೆ ಕೌಶಲ್ಯವನ್ನು(Free Skill Training) ಹೊಂದುವುದು ಅತ್ಯಗತವಾಗಿದ್ದು ಈ ನಿಟ್ಟಿನಲ್ಲಿ ಸ್ಕೊಡ್ ವೆಸ್ ಕೌಶಲ್ಯ ತರಬೇತಿ ಕೇಂದ್ರದಿಂದ ಉಚಿತವಾಗಿ ವಿವಿಧ ಬಗ್ಗೆಯ ಕೌಶಲ್ಯಗಳನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕೌಶಲ್ಯ ತರಬೇತಿಯಲ್ಲಿ ಉದ್ಯೋಗವನ್ನು ಪಡೆಯಲು ಪ್ರಸ್ತುತ ಅವಶ್ಯವಿರುವ ಕೌಶಲ್ಯಗಳಾದ(Free Skill Training Application) ಆರ್ಟಿಫಿಷಿಯಲ್ ಇಂಟಲಿಜೆನ್ಸಿ(AI), ಇಂಗ್ಲಿಷ್ ಕಮ್ಯುನಿಕೇಶನ್ ಸ್ಕಿಲ್,ಅಡ್ವಾನ್ಸ್ ಇಂಗ್ಲಿಷ್,ರಿಟೇಲ್ ಅಂಡ್ ಕಸ್ಟಮರ್ ಸ್ಕಿಲ್,ಡಿಜಿಟಲ್ ಸ್ಕಿಲ್,ಪೈನಾನ್ಸಿಯಲ್ ಲಿಟ್ರೀಸಿ ಸೇರಿದಂತೆ ಇನ್ನಿತರೆ ಅಗತ್ಯ ವಿಷಯಗಳ ಕುರಿತು ಪ್ರಯೋಗಿಕವಾಗಿ ಅಭ್ಯರ್ಥಿಅಳಿಗೆ ಕಳಿಸಿಕೊಡಲಾಗುತ್ತದೆ.

ಇದನ್ನೂ ಓದಿ: Ganga Kalyana-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!

ಸ್ಕೊಡ್ ವೆಸ್ ಕೌಶಲ್ಯ ತರಬೇತಿ ಕೇಂದ್ರದಿಂದ ಆಯೋಜನೆ ಮಾಡಿರುವ ಉಚಿತ ಕೌಶಲ್ಯ(Free AI Training)ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು? ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ? ಈ ತರಬೇತಿಯನ್ನು ಪಡೆಯುವುದರಿಂದ ನಿಮಗೆ ಯಾವೆಲ್ಲ ಪ್ರಯೋಜನಗಳನ್ನು ಸಿಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Skill Training Benefits-ತರಬೇತಿಯ ವಿಶೇಷತೆಗಳು:

  • 21ನೇ ಶತಮಾನದ ವೃತ್ತಿಪರ ಕೌಶಲ್ಯಗಳು.
  • ಯಶಸ್ವಿ ಶಿಬಿರಾರ್ಥಿಗಳಿಗೆ ಉದ್ಯೋಗಾವಕಾಶ ನೀಡಲಾಗುವುದು.
  • ಆಯ್ಕೆಯಾದ ಶಿಬಿರಾರ್ಥಿಗಳಿಗೆ ತರಬೇತಿ ಪೂರ್ಣಗೊಳಿಸಿದ ಬಳಿಕ ಕೊನೆಯಲ್ಲಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
  • ವಿವಿಧ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಲು ಇಂಟರ್ವ್ಯೂ ನೀಡಲು ಸೂಕ್ತ ತರಬೇತಿ ಮತ್ತು ಕೌಶಲ್ಯವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Education Loan-ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ 50.00 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

60 ಜನರಿಗೆ ಮಾತ್ರ ಅವಕಾಶ:

ಮೊದಲು ನೋಂದಣಿಯನ್ನು ಮಾಡಿಕೊಳ್ಳುವ 60 ಜನ ಅಭ್ಯರ್ಥಿಗಳಿಗೆ ಮಾತ್ರ ತರಬೇತಿಯನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Training Center Address-ತರಬೇತಿ ಕೇಂದ್ರದ ವಿಳಾಸ:

ಉಚಿತ ತರಬೇತಿಯು ಸ್ಕೊಡ್ ವೆಸ್ ಕೌಶಲ್ಯ ತರಬೇತಿ ಕೇಂದ್ರ,ಮರಾಠಿಕೊಪ್ಪ, ಶಿರಸಿಯಲ್ಲಿ ನಡೆಯಲಿದೆ.

Who Can Apply-ತರಬೇತಿಯನ್ನು ಪಡೆಯಲು ಅರ್ಹರು:

ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷದ ಒಳಗಿರಬೇಕು.
ಅಭ್ಯರ್ಥಿಯು ಕನಿಷ್ಠ 10ನೇ ತರಗತಿಯನ್ನು ಪಾಸಾಗಿರುವುದು ಕಡ್ಡಾಯವಾಗಿದೆ.
ಕೌಶಲ್ಯವನ್ನು ಪಡೆದುಕೊಂಡು ಉದ್ಯೋಗವನ್ನು ಸೇರಲು ಆಸಕ್ತಿಯನ್ನು ಹೊಂದಿರಬೇಕು.
ನಿರುದ್ಯೋಗಿಗಳಿಗೆ ಮೊದಲ ಆಧ್ಯತೆ.

ಇದನ್ನೂ ಓದಿ: Scholarship-HDFC ಬ್ಯಾಂಕಿನಿಂದ Parivartan ಯೋಜನೆಯಡಿ ₹75,000 ವಿದ್ಯಾರ್ಥಿವೇತನ!

Free Skill Training Application

Free Skill Training Details-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ?

ಆರ್ಟಿಫಿಷಿಯಲ್ ಇಂಟಲಿಜೆನ್ಸಿ - Artificial Intelligence
ಇಂಗ್ಲಿಷ್ ಕಮ್ಯುನಿಕೇಶನ್ ಸ್ಕಿಲ್ - English Communication Skills
ಅಡ್ವಾನ್ಸ್ ಇಂಗ್ಲಿಷ್ - Advanced English
ರಿಟೇಲ್ ಅಂಡ್ ಕಸ್ಟಮರ್ ಸ್ಕಿಲ್ - Retail and Customer Skills
ಡಿಜಿಟಲ್ ಸ್ಕಿಲ್ - Digital Skills
ಪೈನಾನ್ಸಿಯಲ್ ಲಿಟ್ರೀಸಿ - Financial Literacy
ಹಾಗೂ ಇನ್ನು ಹಲವಾರು ಕೌಶಲ್ಯಗಳ ಕುರಿತು ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Free Hostel Admission-ಉಚಿತ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಕೊನೆಯ ದಿನಾಂಕ ವಿಸ್ತರಣೆ!

Free Skill Training Registration-ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ?

ಉಚಿತ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ಅಭ್ಯರ್ಥಿಗಲು ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು ಈ 9110863425, 9900195285 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: