Gas Level Check-ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

March 4, 2026 | Siddesh
Gas Level Check-ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!
Share Now:

ಇಂದಿನ ವೇಗದ ಜೀವನದಲ್ಲಿ ಅಡುಗೆ ಮನೆ ಎಂದರೆ ಅಲ್ಲಿ ಗ್ಯಾಸ್ ಸಿಲಿಂಡರ್ ಇರಲೇಬೇಕು. ಆದರೆ, ಈ ಸಿಲಿಂಡರ್ ಯಾವಾಗ ಖಾಲಿಯಾಗುತ್ತದೆ(How to Check Gas Level) ಎಂದು ಊಹಿಸುವುದು ಅಷ್ಟು ಸುಲಭವಲ್ಲ. ಬಹುತೇಕ ಮನೆಗಳಲ್ಲಿ ಅಡುಗೆ ಮಾಡುವ ಅವಸರದಲ್ಲಿರುವಾಗಲೇ ಗ್ಯಾಸ್ ಪೂರೈಕೆ ಸ್ಥಗಿತಗೊಂಡು ಕೈಕೊಡುತ್ತದೆ. ಗ್ಯಾಸ್ ಸಂಪೂರ್ಣವಾಗಿ ಆಫ್ ಆದ ಮೇಲೆಯೇ ನಮಗೆ ವಿಷಯ ತಿಳಿಯುವುದು. ಇದರಿಂದ ಸಮಯಕ್ಕೆ ಸರಿಯಾಗಿ ಅಡುಗೆ ಪೂರೈಸಲಾಗದೆ ಫಜೀತಿಗೆ ಸಿಲುಕುವಂತಾಗುತ್ತದೆ.

ಗ್ಯಾಸ್ ಸಿಲಿಂಡರ್ ಅತಿ ಅವಶ್ಯಕ ವಸ್ತುವಾಗಿದ್ದರೂ, ಅದರ ಒಳಗೆ ಎಷ್ಟು ಅನಿಲ ಬಾಕಿ ಉಳಿದಿದೆ ಎಂಬುದನ್ನು ಪತ್ತೆ ಹಚ್ಚುವುದು ಹಲವರಿಗೆ ತಲೆನೋವಿನ ಕೆಲಸ. ಮಾರುಕಟ್ಟೆಯಲ್ಲಿ ಗ್ಯಾಸ್ ಇಂಡಿಕೇಟರ್‌ಗಳು(LPG Gas Cylinder Tricks) ಲಭ್ಯವಿದ್ದರೂ, ಅವುಗಳನ್ನು ಎಲ್ಲರೂ ಖರೀದಿಸಿ ಅಳವಡಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಇರುವ ಅತ್ಯಂತ ಸರಳ ಮತ್ತು ಯಾವುದೇ ಖರ್ಚಿಲ್ಲದ ಉಪಾಯಗಳ ಮೂಲಕ ಕೇವಲ ಎರಡೇ ನಿಮಿಷದಲ್ಲಿ ಗ್ಯಾಸ್ ಮಟ್ಟವನ್ನು ನೀವು ಪತ್ತೆ ಮಾಡಬಹುದು.

ಇದನ್ನೂ ಓದಿ: RTE Online Application-RTE ಕಾಯ್ದೆ ಸೀಟು ಹಂಚಿಕೆಗೆ ದಿನಾಂಕ ಪ್ರಕಟ: ನಿಮ್ಮ ಮಗುವಿಗೆ ಖಾಸಗಿ ಶಾಲೆ ಪ್ರವೇಶಕ್ಕೆ ಉಚಿತ ಸೀಟ್!

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಸರಳ ತಂತ್ರವು ಗೃಹಿಣಿಯರ ಸಂಕಷ್ಟಕ್ಕೆ ಪರಿಹಾರ ನೀಡಿದೆ. ಒದ್ದೆ ಬಟ್ಟೆಯ ಸಹಾಯದಿಂದ ಸಿಲಿಂಡರ್‌ನ ಒಳಗಿರುವ ಗ್ಯಾಸ್ ಮಟ್ಟವನ್ನು(Gas Level Indicator) ನಿಖರವಾಗಿ ಗುರುತಿಸಲು ಸಾಧ್ಯವಿದೆ. ಈ ಸಣ್ಣ ಟ್ರಿಕ್ ಬಳಸುವ ಮೂಲಕ ಗ್ಯಾಸ್ ಖಾಲಿಯಾಗುವ ಮೊದಲೇ ನೀವು ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಹೊಸ ಸಿಲಿಂಡರ್ ಬುಕ್ ಮಾಡಿ ಅಡುಗೆ ಮನೆಯ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದು.

How to Check Gas Level-ಗ್ಯಾಸ್ ಮಟ್ಟ ತಿಳಿಯಲು ಸರಳ ಮಾರ್ಗಗಳು:

ಗೃಹಿಣಿಯರು ತಮ್ಮ ಮನೆಯಲ್ಲಿ ದಿನನಿತ್ಯ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ನಲ್ಲಿ ಎಷ್ಟು ಪ್ರಮಾಣದ ಗ್ಯಾಸ್ ಇದೆ ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

1) ಒದ್ದೆ ಬಟ್ಟೆಯ ತಂತ್ರ (Wet Cloth Method):

ಮೊದಲು ಒಂದು ಬಟ್ಟೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಹಿಂಡಿಕೊಳ್ಳಿ.

ಈ ಒದ್ದೆಯಾದ ಬಟ್ಟೆಯಿಂದ ಸಿಲಿಂಡರ್ ಅನ್ನು ಸಂಪೂರ್ಣವಾಗಿ ಒರೆಸಿ.

ಸುಮಾರು ಎರಡು ನಿಮಿಷಗಳ ಕಾಲ ಗಮನಿಸಿ.

ಫಲಿತಾಂಶ: ಸಿಲಿಂಡರ್‌ನಲ್ಲಿ ಎಷ್ಟು ಭಾಗದ ನೀರು ಬೇಗ ಒಣಗುತ್ತದೆಯೋ ಆ ಭಾಗ ಖಾಲಿಯಾಗಿದೆ ಎಂದರ್ಥ. ಗ್ಯಾಸ್ ಇರುವ ಭಾಗವು ತಂಪಾಗಿರುವುದರಿಂದ ಅಲ್ಲಿನ ತೇವಾಂಶ ಹಾಗೆಯೇ ಇರುತ್ತದೆ.

ಇದನ್ನೂ ಓದಿ: Mudra Yojane-ಮುದ್ರಾ ಯೋಜನೆ ಗ್ಯಾರಂಟಿಯಿಲ್ಲದೆ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ!

Check Gas Level at Home

ಇದನ್ನೂ ಓದಿ: FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!

2) ನೀರಿನ ಸುರಿತದ ವಿಧಾನ:

ಒಂದು ಮಗ್ ನೀರಿನಲ್ಲಿ ಸಿಲಿಂಡರ್‌ನ ಒಂದು ಬದಿಯಿಂದ ಮೇಲಿನಿಂದ ಕೆಳಕ್ಕೆ ಸುರಿಯಿರಿ.

ನಂತರ ಕೈಯಿಂದ ಸಿಲಿಂಡರ್ ಅನ್ನು ಸ್ಪರ್ಶಿಸಿ.

ಯಾವ ಭಾಗ ತಂಪಾಗಿರುತ್ತದೆಯೋ ಅಲ್ಲಿಯವರೆಗೆ ಗ್ಯಾಸ್ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು.

3) ತೂಕ ಮಾಡುವ ಮೂಲಕ:

ಪ್ರತಿ ಸಿಲಿಂಡರ್ ಮೇಲೆ ಅದರ ಖಾಲಿ ತೂಕ (Tare Weight) ಮತ್ತು ಒಟ್ಟು ತೂಕ ನಮೂದಾಗಿರುತ್ತದೆ.

ತೂಕದ ಯಂತ್ರದ ಮೇಲೆ ಸಿಲಿಂಡರ್ ಇಟ್ಟು ಬಂದ ಒಟ್ಟು ತೂಕದಲ್ಲಿ ಖಾಲಿ ತೂಕವನ್ನು ಕಳೆದರೆ ನಿಖರವಾದ ಅನಿಲದ ಪ್ರಮಾಣ ತಿಳಿಯುತ್ತದೆ.

ಇದನ್ನೂ ಓದಿ: Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!

Cylinder Safety Precautions-ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತಾ ಕ್ರಮಗಳು:

ಗ್ಯಾಸ್ ಸಿಲಿಂಡರ್ ಅನ್ನು ದಿನನಿತ್ಯ ಬಳಕೆ ಮಾಡುವಾಗ ಜಾಗರೂಕತೆ ಇರುವುದು ಅತೀ ಮುಖ್ಯವಾಗಿದೆ ಈ ಕುರಿತು ಒಂದಿಷ್ಟು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಪಟ್ಟಿ ಕೆಳಗೆ ಹಂಚಿಕೊಳ್ಳಲಾಗಿದೆ:

ವಾಸನೆ ಬಂದಾಗ: ಗ್ಯಾಸ್ ಸೋರಿಕೆಯ ವಾಸನೆ ಕಂಡುಬಂದ ತಕ್ಷಣ ರೆಗ್ಯುಲೇಟರ್ ಆಫ್ ಮಾಡಿ, ಕಿಟಕಿ ಬಾಗಿಲುಗಳನ್ನು ತೆರೆಯಿರಿ.

ವಿದ್ಯುತ್ ಸ್ವಿಚ್: ಸೋರಿಕೆಯಾದಾಗ ಯಾವುದೇ ಕಾರಣಕ್ಕೂ ವಿದ್ಯುತ್ ಸ್ವಿಚ್‌ಗಳನ್ನು ಹಾಕಬೇಡಿ ಅಥವಾ ಆಫ್ ಮಾಡಬೇಡಿ.

ಇದನ್ನೂ ಓದಿ: Sheep And Goat Farming-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 10+1 ಕುರಿ ಸಾಕಾಣಿಕೆ ಸಬ್ಸಿಡಿ!

ಪೈಪ್ ತಪಾಸಣೆ: ಐಎಸ್‌ಐ (ISI) ಮುದ್ರೆ ಇರುವ ರಬ್ಬರ್ ಟ್ಯೂಬ್ ಬಳಸಿ ಮತ್ತು ಪ್ರತಿ 2 ವರ್ಷಕ್ಕೊಮ್ಮೆ ಅದನ್ನು ಬದಲಾಯಿಸಿ.

ಲಂಬ ಸ್ಥಿತಿ: ಸಿಲಿಂಡರ್ ಅನ್ನು ಯಾವಾಗಲೂ ನೇರವಾಗಿ (Vertical) ಇರಿಸಿ, ಮಲಗಿಸಬೇಡಿ.

Cylinder Expiry Date-ಸಿಲಿಂಡರ್ Expairy Date (ಅವಧಿ ಮುಕ್ತಾಯ) ತಿಳಿಯುವುದು ಹೇಗೆ?

ಸಿಲಿಂಡರ್‌ನ ಮೇಲ್ಭಾಗದ ಕಬ್ಬಿಣದ ಪಟ್ಟಿಯ ಮೇಲೆ ಕೆಲವು ಕೋಡ್‌ಗಳನ್ನು ಬರೆಯಲಾಗಿರುತ್ತದೆ (ಉದಾಹರಣೆಗೆ: A-26, B-25). ಇದನ್ನು ಓದುವ ವಿಧಾನ ಇಲ್ಲಿದೆ:

A: ಜನವರಿ - ಮಾರ್ಚ್

B: ಏಪ್ರಿಲ್ - ಜೂನ್

C: ಜುಲೈ - ಸೆಪ್ಟೆಂಬರ್

D: ಅಕ್ಟೋಬರ್ - ಡಿಸೆಂಬರ್

ಸಂಖ್ಯೆ: ಇದು ವರ್ಷವನ್ನು ಸೂಚಿಸುತ್ತದೆ (25 ಎಂದರೆ 2025).

ಗಮನಿಸಿ: ಒಂದು ವೇಳೆ ನಿಮ್ಮ ಸಿಲಿಂಡರ್ ಮೇಲೆ A-25 ಎಂದಿದ್ದರೆ, ಅದು 2025ರ ಮಾರ್ಚ್ ತಿಂಗಳಿಗೆ ಅವಧಿ ಮುಕ್ತಾಯವಾಗುತ್ತದೆ ಎಂದರ್ಥ. ಇಂತಹ ಸಿಲಿಂಡರ್‌ಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: