Godown Subsidy-ಹಳ್ಳಿಯಲ್ಲಿ ಗೋಡೌನ್ ನಿರ್ಮಾಣಕ್ಕೆ ಶೇ 33% ಸಬ್ಸಿಡಿ ಪಡೆಯಲು ಅವಕಾಶ!

September 3, 2025 | Siddesh
Godown Subsidy-ಹಳ್ಳಿಯಲ್ಲಿ ಗೋಡೌನ್ ನಿರ್ಮಾಣಕ್ಕೆ ಶೇ 33% ಸಬ್ಸಿಡಿ ಪಡೆಯಲು ಅವಕಾಶ!
Share Now:

ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಒಂದು ಕಡೆ ಸುರಕ್ಷಿತವಾಗಿ ಶೇಖರಣೆ ಮಾಡಿ ಉತ್ತಮ ದರ ಬಂದ ಬಳಿಕ ಮಾರಾಟ ಮಾಡಲು ಗೋಡೌನ್ ಗಳು(Godown Subsidy) ಮುಖ್ಯವಾಗಿ ಅತೀ ಅವಶ್ಯಕವಾಗಿವೆ ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ರೈತರಿಗೆ ನಬಾರ್ಡ್ ಸಹಯೋಗದಲ್ಲಿ ಸಹಾಯಧನದಲ್ಲಿ ಗೋಡೌನ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ಇಂದಿನ ಲೇಖನದಲ್ಲಿ ಇದರ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮೀಣ ಭಂಡಾರಣ್ ಯೋಜನೆಯು(Godown Subsidy Scheme) ಗ್ರಾಮೀಣ ಪ್ರದೇಶಗಳಲ್ಲಿ ಗೋದಾಮುಗಳನ್ನು ನಿರ್ಮಿಸಲು ಅಥವಾ ನವೀಕರಿಸಲು ರೈತರು, ಸಹಕಾರಿ ಸಂಘಗಳು ಮತ್ತು ಇತರ ಸಂಸ್ಥೆಗಳಿಗೆ ಸಬ್ಸಿಡಿಗಳು ಮತ್ತು ಸಾಲಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಯೋಜನೆ ಇದಾಗಿದೆ. ಈ ಯೋಜನೆಯು ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಹಾಯ ಮಾಡುತ್ತದೆ, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅವರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Pearl Farming-ಕೃಷಿ ವಿಶ್ವವಿದ್ಯಾಲಯದಿಂದ ಮುತ್ತು ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

ಪ್ರಸ್ತುತ ಲೇಖನದಲ್ಲಿ ಗ್ರಾಮೀಣ ಭಂಡಾರಣ್ ಯೋಜನೆ(Nabard) ಅಡಿಯಲ್ಲಿ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?ಎಷ್ಟು ಸಬ್ಸಿಡಿ ಪಡೆಯಲು ಅವಕಾಶವಿದೆ?ಗೋಡೌನ್ ನಿರ್ಮಾಣಕ್ಕೆ ಸಬ್ಸಿಡಿ ದರಗಳ ವಿವರ ಸೇರಿದಂತೆ ಅರ್ಜಿ ಯನ್ನು ಸಲ್ಲಿಸುವುದರ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply For Godown Subsidy Yojana-ಗ್ರಾಮೀಣ ಭಂಡಾರಣ್ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು:

ಗ್ರಾಮೀಣ ಭಾಗದಲ್ಲಿ ಸಹಾಯಧನವನ್ನು ಪಡೆದು ಗೋಡೌನ್ ಅನ್ನು ನಿರ್ಮಾಣ ಮಾಡಲು ಕೆಳಗಿನ ಪಟ್ಟಿಯಲ್ಲಿರುವ ಅರ್ಹರ ಫಲಾನುಭವಿಗಳು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

  • ರೈತರು ಮತ್ತು ರೈತ ಗುಂಪುಗಳು
  • ಸಹಕಾರಿ ಸಂಘಗಳು
  • ಕೃಷಿ ಸಂಸ್ಕರಣಾ ನಿಗಮಗಳು
  • ಸರ್ಕಾರೇತರ ಸಂಸ್ಥೆಗಳು (NGO)
  • ಸ್ವಸಹಾಯ ಗುಂಪುಗಳು (SHG Groups)
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (APMC)
  • ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳು

ಇದನ್ನೂ ಓದಿ: Computer Training-ಕೆನರಾ ಬ್ಯಾಂಕ್ ವತಿಯಿಂದ 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ!

Godown Subsidy-ಎಷ್ಟು ಸಬ್ಸಿಡಿ ಪಡೆಯಲು ಅವಕಾಶವಿದೆ?

ಗ್ರಾಮೀಣ ಭಂಡಾರಣ್ ಯೋಜನೆ ಅಡಿಯಲ್ಲಿ ಅರ್ಹ ಅರ್ಜಿದಾರರು ವರ್ಗವನ್ನು ಅವಲಂಬಿಸಿ ಒಟ್ಟು ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ 15% ರಿಂದ 33.33% ವರೆಗೆ ಸಬ್ಸಿಡಿಯನ್ನು ಪಡೆಯಬಹುದು.

Godown Subsidy Yojana Details-ಗೋಡೌನ್ ನಿರ್ಮಾಣಕ್ಕೆ ಸಬ್ಸಿಡಿ ದರಗಳು:

ಎಸ್‌ಸಿ/ಎಸ್‌ಟಿ ಉದ್ಯಮಿಗಳು ಮತ್ತು ಸಹಕಾರಿ ಸಂಸ್ಥೆಗಳು: ಬಂಡವಾಳ ವೆಚ್ಚದ 33.33%, ₹3 ಕೋಟಿಗಳವರೆಗೆ

ರೈತರು, ಕೃಷಿ ಪದವೀಧರರು ಮತ್ತು ಸಹಕಾರಿ ಸಂಸ್ಥೆಗಳು: ಬಂಡವಾಳ ವೆಚ್ಚದ 25%, ₹2.25 ಕೋಟಿಗಳವರೆಗೆ

ವ್ಯಕ್ತಿಗಳು, ಕಂಪನಿಗಳು ಮತ್ತು ನಿಗಮಗಳು: ಬಂಡವಾಳ ವೆಚ್ಚದ 15%, ₹1.35 ಕೋಟಿಗಳವರೆಗೆ

ಇದನ್ನೂ ಓದಿ: CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!

Godown Subsidy Scheme Benefits-ಈ ಯೋಜನೆಯ ಪ್ರಯೋಜನಗಳು:

  • ರೈತರಿಗೆ ಹೆಚ್ಚಿದ ಸಂಗ್ರಹಣಾ ಸಾಮರ್ಥ್ಯ
  • ಕೃಷಿ ಉತ್ಪನ್ನಗಳ ಸುಧಾರಿತ ಮಾರುಕಟ್ಟೆ
  • ಸಂಕಷ್ಟದ ಮಾರಾಟ ತಡೆಗಟ್ಟುವಿಕೆ ಸಹಕಾರಿಯಾಗಿದೆ.
  • ರೈತರಿಗೆ ಹೆಚ್ಚಿನ ಆದಾಯ ಪಡೆಯಲು ಸಹಕಾರಿ.
  • ಕೃಷಿ ಮೂಲ ಸೌಕರ್ಯದಲ್ಲಿ ಖಾಸಗಿ ಮತ್ತು ಸಹಕಾರಿ ವಲಯದ ಹೂಡಿಕೆಗೆ ಪ್ರೋತ್ಸಾಹ ನೀಡುವುದು.

How To Apply For Rural Godown Scheme-ಅರ್ಜಿ ಸಲ್ಲಿಸುವುದು ಹೇಗೆ?

ಗೋಡೌನ್ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿರುವ ಫಲಾನುಭವಿಗಳು ಈ ಯೋಜನೆ ಅಡಿಯ ಪ್ರಯೋಜನವನ್ನು ಪಡೆಯಲು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನಬಾರ್ಡ ಸಂಸ್ಥೆಯ ಅಧಿಕಾರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Karmika Mandali Kit-ಕಾರ್ಮಿಕ ಮಂಡಳಿಯಿಂದ ಸುರಕ್ಷತಾ ಕಿಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ!

Godown Subsidy

ಇದನ್ನೂ ಓದಿ: Beauty Parlour-ಉಚಿತ ಬ್ಯೂಟಿಪಾರ್ಲರ್ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಿ!

Documents For Godown Subsidy Yojana-ಅಗತ್ಯ ದಾಖಲೆಗಳು:

ಗೋಡೌನ್ ನಿರ್ಮಾಣ ಮಾಡಲು ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ ಹೀಗಿದೆ:

  • ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ.
  • ಪೋಟೋ
  • ಗೋದಾಮಿನ ಗಾತ್ರ ಮತ್ತು ನಿರ್ಮಾಣ ವೆಚ್ಚವನ್ನು ವಿವರಿಸುವ ಯೋಜನಾ ಪ್ರಸ್ತಾವನೆ
  • ಗೋದಾಮು ನಿರ್ಮಾಣಕ್ಕಾಗಿ ಭೂಮಿಯ ಮಾಲೀಕತ್ವದ ದಾಖಲೆಗಳು
  • ಬ್ಯಾಂಕಿನ ಸಾಲ ಅನುಮೋದನೆ ದಾಖಲೆಗಳು
  • ಸಹಕಾರಿ ಸಂಸ್ಥೆಗಳು ಅಥವಾ ಕಂಪನಿಗಳಂತಹ ಸಂಸ್ಥೆಗಳಿಗೆ ನೋಂದಣಿ ವಿವರಗಳು
  • ಸಬ್ಸಿಡಿ ಕ್ಲೈಮ್‌ಗಳಿಗೆ ಅನ್ವಯವಾಗಿದ್ದರೆ ಅಫಿಡವಿಟ್
  • ಬ್ಯಾಂಕ್ ಪಾಸ್ ಬುಕ್ ಪ್ರತಿ

ಇದನ್ನೂ ಓದಿ: Krishi Mela Dharwad-ಧಾರವಾಡ ಕೃಷಿ ಮೇಳ 2025: ರೈತರ ಹಬ್ಬಕ್ಕೆ ದಿನಾಂಕ ಘೋಷಣೆ!

For More Information-ಈ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿ ಪಡೆಯಲು:

Rural Godown Scheme-ಗ್ರಾಮೀಣ ಭಂಡಾರಣ್ ಯೋಜನೆಯ ಅಧಿಕೃತ ವೆಬ್‌ಸೈಟ್-Click Here
Rural Godown Scheme Guidelines-ಗ್ರಾಮೀಣ ಭಂಡಾರಣ್ ಯೋಜನೆ/ಗ್ರಾಮೀಣ ಗೋಡೌನ್ ಯೋಜನೆಯ ಮಾರ್ಗಸೂಚಿ- Download Now
NABARD-ನಬಾರ್ಡ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪೋರ್ಟಲ್‌-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: