HomeNew postsGrama panchayat: ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿ,ಅಧ್ಯಕ್ಷ, ಸದಸ್ಯರುಗಳ ಮೊಬೈಲ್ ಸಂಖ್ಯೆ ಸಹಿತ ಎಲ್ಲಾ ಮಾಹಿತಿ...

Grama panchayat: ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿ,ಅಧ್ಯಕ್ಷ, ಸದಸ್ಯರುಗಳ ಮೊಬೈಲ್ ಸಂಖ್ಯೆ ಸಹಿತ ಎಲ್ಲಾ ಮಾಹಿತಿ ಪಡೆಯುವ ವೆಬ್ಸೈಟ್ ಲಿಂಕ್.

ಸಾರ್ವಜನಿಕರು ರಾಜ್ಯ ಸರಕಾರದ ಮಾಹಿತಿ ಕಣಜ (Mahiti kanaja website), ಪಂಚತಂತ್ರ(panchatantra), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR website)  ಜಾಲತಾಣ ಭೇಟಿ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಗ್ರಾಮ ಪಂಚಾಯತಿಯಲ್ಲಿ(Grama panchayath) ಕಾರ್ಯನಿರ್ವಹಿಸುವ ಅಧಿಕಾರಿಗಳ ಮತ್ತು ಅಧ್ಯಕ್ಷರು, ಸದಸ್ಯರುಗಳ ಮೊಬೈಲ್ ನಂಬರ್ ಗಳನ್ನು ಮತ್ತು ಯೋಜನೆ(Grama panchayat yojanegalu), ಇತ್ಯಾದಿ ಮಾಹಿತಿಯನ್ನು ಪಡೆಯಬವುದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕುಂದು-ಕೊರತೆ ಉಂಟಾದ ಸಂದರ್ಭದಲ್ಲಿ ಅಥವಾ ಲಭ್ಯ ಫಲಾನುಭವಿಗಳ ಯೋಜನೆಗಳ ಕುರಿತು ಮಾಹಿತಿ ತಿಳಿಯಲು ತುರ್ತು ಸಮಯದಲ್ಲಿ ನಿಮ್ಮ ಬಳಿ ನಿಮ್ಮ ಭಾಗದ ಗ್ರಾಮ ಪಂಚಾಯತಗೆ ಸಂಬಂಧಪಟ್ಟ ಅಧಿಕಾರಿ, ಚುನಾಯಿತ ಪ್ರತಿನಿಧಿಗಳ ಮತ್ತು ಸಿಬ್ಬಂದಿಗಳ ಮೊಬೈಲ್ ಸಂಖ್ಯೆಯನ್ನು ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ಪಡೆಯಬವುದು.

ಯಾವೆಲ್ಲ ಮೊಬೈಲ್ ಸಂಖ್ಯೆಗಳು ಲಭ್ಯ: ರಾಜ್ಯ ಸರಕಾರದ ಈ ಮಾಹಿತಿ ಕಣಜ ಪೋರ್ಟಲ್ ನಿಮ್ಮ ಗ್ರಾಮ ಪಂಚಾಯತಿಯ 1) ಅಧ್ಯಕ್ಷ 2) ಸದಸ್ಯರು 3) ಬಿಲ್ ಕಲೆಕ್ಟರ್ 4) ಕಂಪ್ಯೂಟರ್ ಅಪರೇಟರ್ 5) ಪಂಚಾಯತ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಇಲ್ಲಿ ಲಭ್ಯ.

Grama panchayat mobile numbers- ಗ್ರಾಮ ಪಂಚಾಯತಿನ ಮೊಬೈಲ್ ಸಂಖ್ಯೆಗಳನ್ನು ಪಡೆಯುವ ವಿಧಾನ:

Step- 1: ಸಾರ್ವಜನಿಕರು ಈ https://mahitikanaja.karnataka.gov.in/ ಲಿಂಕ್ ಮೇಲೆ ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಬೇಕು.
Step- 2: ನಂತರ ಗ್ರಾಮ ಪಂಚಾಯತಿ ಕಾರ್ಯನಿರ್ವಹಕರು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step- 3: ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಬೇಕು.
Step- 4: ಇಲ್ಲಿ ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿಗಳ,ಅಧ್ಯಕ್ಷ, ಸದಸ್ಯರುಗಳ, ಸಿಬ್ಬಂದಿಗಳ ಹೆಸರು, ಮೊಬೈಲ್ ನಂಬರ್ ಮತ್ತು ಹುದ್ದೆ ಇಮೇಲ್ ಐಡಿ ವಿವರಗಳ ಪಟ್ಟಿ ಗೋಚರಿಸುತ್ತದೆ.

ಗಮನಿಸಿ: ಈ ಪುಟದಲ್ಲಿ ಮೊದಲ ಪೇಜ್ ನಲ್ಲಿ ಕೇಲವು ನಂಬರ್ ಮಾತ್ರ ತೋರಿಸುತ್ತದೆ ನೀವು ಈ ಪೇಜ್ ನ ಕೆಳಗೆ 1,2,3 ಎಂದು ಪುಟ ಸಂಖ್ಯೆ ನಮೂದಿಸಿರುತ್ತಾರೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮೊಬೈಲ್ ಸಂಖ್ಯೆಗಳನ್ನು ಪಡೆಯಬವುದು.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

Grama panchayat schemes- ಗ್ರಾಮ ಪಂಚಾಯತಿಯ ಯೋಜನೆಗಳ ಮಾಹಿತಿಯನ್ನು ತಿಳಿಯುವುದು ಹೇಗೆ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR website) ಅಧಿಕೃತ ವೆಬ್ಸೈಟ್- https://rdpr.karnataka.gov.in/ ಭೇಟಿ ಮಾಡಿ ಗ್ರಾಮ ಪಂಚಾಯತಿಯ ಯೋಜನೆ, ನೂತನ ಅಧಿಸೂಚನೆ, ಯೋಜನೆ ಮಾರ್ಗಸೂಚಿ, ಸಹಾಯವಾಣಿ(grama panchayat helplines) ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಈ ಜಾಲಾತಾಣದಲ್ಲಿ ಪಡೆಯಬವುದು.

Panchatantra website link: ನಿಮ್ಮ ಗ್ರಾಮ ಪಂಚಾಯತಿಯ ಅಂಕಿ-ಸಂಖ್ಯೆ ಮಾಹಿತಿಯನ್ನು ಇಲ್ಲಿ ಪಡೆಯಬವುದು:

https://panchatantra.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಪಂಚತಂತ್ರ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಪಂಚಾಯತಿಯ ಒಟ್ಟು ಅನುದಾನ, ಬೌಗೋಳಿಕ ನಕ್ಷೆ, ಸಲ್ಲಿಕೆಯಾದ ಅರ್ಜಿಗಳ ವಿವರ, ಗ್ರಾಮ ಪಂಚಾಯತಿಯಲ್ಲಿ ನಡೆದ ವಾರ್ಡ ಸಭೆ, ಸಾಮಾನ್ಯ ಸಭೆ, ಗ್ರಾಮ ಸಭೆ ಇತ್ಯಾಧಿ ಸಭೆಗಳ ದಿನಾಂಕ  ಚರ್ಚೆಯ ಮಾಹಿತಿಯ ವಿವರ ಇಲ್ಲಿ ಪಡೆಯಬವುದು.

ಆದಾಯ ಸಂಗ್ರಹ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಳ್ಳಿವಾರು ಸಂಗ್ರಹವಾದ ಆದಾಯದ ವಿವರ ಗೋಚರಿಸುತ್ತದೆ.

Most Popular

Latest Articles

Related Articles