Gruhalakshmi DBT amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!

November 26, 2024 | Siddesh
Gruhalakshmi DBT amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!
Share Now:

ಆಹಾರ ಇಲಾಖೆಯಿಂದ ನೀಡುವ ಬಿಪಿಎಲ್(BPL card) ಕಾರ್ಡ ರದ್ದುಪಡಿಸಿದರೆ ಅಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುವ ರೂ 2,000 ಹಣ ಪಡೆಯಲು ಅಗುತ್ತದೆಯೇ? ಇಲ್ಲವೇ? ಎನ್ನುವ ಅನೇಕ ಜನರ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡಗಳಾಗಿ ಪರಿವರ್ತನೆ ಮಾಡುವ ಕಾರ್ಯ ನಡೆಯುತ್ತಿದ್ದು ಮಾರ್ಗಸೂಚಿ ಪ್ರಕಾರ ಬಿಪಿಎಲ್ ಕಾರ್ಡ ರದ್ದಾದರೆ ಗೃಹಲಕ್ಷ್ಮಿ ಯೋಜನೆಯಡಿ ನೀಡುತ್ತಿರುವ ಹಣ ಹಣ ಜಮಾ ಆಗಲ್ಲವಾ? ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(laxmi hebbalkar) ನೀಡಿರುವ ಸ್ಪಷ್ಟನೆ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

ಪ್ರಸ್ತುತ ಆಹಾರ ಇಲಾಖೆಯಿಂದ ಮಾರ್ಗಸೂಚಿಯ ಪ್ರಕಾರ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡುತ್ತಿರುವುದರಿಂದ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ರೂ 2,000 ಅರ್ಥಿಕ ನೆರವನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಗೊಂದಲ ಉಂಟಾಗಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Gruhalakshmi amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ:

ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಕುರಿತು ಬುದವಾರ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಕುರಿತು ಈಗಾಗಲೇ ನಾವು ಸ್ಪಷ್ಟವಾಗಿ ತಿಳಿಸಿದ್ದೇನೆ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ ಹೊಂದಿರುವವರಲ್ಲಿ ಯಾರು ಆದಾಯ ತೆರಿಗೆ ಪಾವತಿ ಮಾಡುತ್ತಾರೋ ಅಂತಹ ಫಲಾನುಭವಿಗಳಿಗೆ ಈ ಯೋಜನೆಯ ಹಣ ಜಮಾ ಅಗುವುದಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಆದಾಯ ತೆರಿಗೆ ಪಾವತಿದಾರರಾಗಿರುವ(IT payers) ಕಾರಣದಿಂದಾಗಿ ನಿಮ್ಮ ಬಿಪಿಎಲ್ ಕಾರ್ಡ ರದ್ದು ಮಾಡಿ ಎಪಿಎಲ್ ಕಾರ್ಡ ಅಗಿ ಬದಲಾವಣೆ ಮಾಡಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಅಗುವುದಿಲ್ಲ.

ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Gruhalakshmi status- ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತಿಳಿಯುವ ವಿಧಾನ:

ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ ಯಾವ ಯಾವ ತಿಂಗಳು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಇದ್ದು ತಿಳಿದುಕೊಳ್ಳಬಹುದು.

Step-1: Gruhalakshmi status check ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ "DBT Karnataka" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಡೌನ್ಲೋಡ್ ಮಾಡಿಕೊಂಡ ಬಳಿಕ ಫಲಾನುಭವಿ 12 ಅಂಕಿಯ ಆಧಾರ್ ಸಂಖ್ಯೆಯನ್ನು ಹಾಕಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಹಾಕಿ ಲಾಗಿನ್ ಅಗಲು Password ಅನ್ನು ರಚನೆ ಮಾಡಿಕೊಳ್ಳಿ.

Gruhalakshmi scheme

ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

Step-3: ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ Password ಅನ್ನು ಹಾಕಿ ಲಾಗಿನ್ ಅಗಬೇಕು. ಲಾಗಿನ್ ಅಗಿ ಮುಖಪುಟದಲ್ಲಿ ಕಾಣುವ ಪಾವತಿ ಸ್ಥಿತಿ/Payment Status ಆಯ್ಕೆಯ ಮೇಲೆ ಒತ್ತಿ.

Gruhalakshmi

Step-4: ಪಾವತಿ ಸ್ಥಿತಿ/Payment Status ಬಟನ್ ಮೇಲೆ ಕ್ಲಿಕ್ ಮಾಡಿ "ಗೃಹಲಕ್ಷ್ಮಿ" ಎಂದು ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಈ ಯೋಜನೆಯಡಿ ಯಾವ ಯಾವ ತಿಂಗಳು ನಿಮಗೆ ಹಣ ಜಮಾ ಅಗಿದೆ UTR ನಂಬರ್ ಬ್ಯಾಂಕ್ ಖಾತೆಯ ಕೊನೆಯ 4 ಸಂಖ್ಯೆ ಮತ್ತು ಬ್ಯಾಂಕಿನ ಹೆಸರನ್ನು ನೋಡಬಹುದು.

ಇದನ್ನೂ ಓದಿ: Power tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: