- Advertisment -
HomeNew postsGruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಎಷ್ಟು? ಜಮಾ ಅಗಿದೆ ಎಂದು...

Gruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಎಷ್ಟು? ಜಮಾ ಅಗಿದೆ ಎಂದು ತಿಳಿಯಬವುದು.

Last updated on September 28th, 2024 at 08:05 am

ರಾಜ್ಯ ಸರಕಾರದ ಮಾಹಿತಿ ಕಣಜ ತಂತ್ರಾಂಶ ವಿಭಾಗದಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಮತ್ತು ಕಂತಿನವಾರು ಹಣ ವರ್ಗಾವಣೆ ವಿವರವನ್ನು ತಿಳಿಯಲು ಹೊಸ ವೆಬ್ ಲಿಂಕ್ ಬಿಡುಗಡೆ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಮಾಹಿತಿ ಕಣಜ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ ನಿಮ್ಮ ಅರ್ಜಿ ಸ್ಥಿತಿ ಮತ್ತು ಎಷ್ಟು ಕಂತು ಹಣ ಜಮಾ ಅಗಿದೆ? ವರ್ಗಾವಣೆ ದಿನಾಂಕ ಯಾವುದು? ಎನ್ನುವ ಸಂಪೂರ್ಣ ಮಾಹಿತಿಯನ್ನು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬವುದಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯ ಸರಕಾರದಿಂದ ಪಡಿತರ ಚೀಟಿಯ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ 2,000 ಅರ್ಥಿಕ ನೆರವು ನೀಡಲಾಗುತ್ತಿದ್ದು ಅರ್ಜಿ ಸಲ್ಲಿಸಿರುವ ಅನೇಕ ಜನರಿಗೆ ನಮಗೆ ಹಣ ಜಮಾ ಅಗಿರುವ ವಿವರವನ್ನು ಆನ್ಲೈನ್ ನಲ್ಲಿ ಹೇಗೆ ಚೆಕ್ ಮಾಡಬವುದು? ಮತ್ತು ನಮ್ಮ ಅರ್ಜಿ ಸ್ಥಿತಿ ತಿಳಿಯುವು ಹೇಗೆ ಎಂದು ತಿಳಿದಿರುವುದಿಲ್ಲ ಅಂತಹ ಫಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಲಭ ಮತ್ತು ಸರಳ ವಿಧಾನ ಅನುಸರಿಸಿ ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಚೆಕ್ ಮಾಡುವ ವಿಧಾನವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Gruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಜಮಾ ವಿವರ ತಿಳಿಯುವ ವಿಧಾನ:

ಅರ್ಜಿದಾರರು ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ ನಂಬರ್ ಅನ್ನು ನಮೂದಿಸಿ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿರುವುದನ್ನು ತಿಳಿಯಬವುದಾಗಿದೆ.

Step-1: ನಿಮ್ಮ ಮೊಬೈಲ್ ನಲ್ಲಿ ಮೊದಲಿಗೆ ಈ ಲಿಂಕ್ Gruhalakshmi status check ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ ಇ-ಆಡಳಿತ ವಿಭಾಗದ ಮಾಹಿತಿ ಕಣಜ ಜಾಲತಾಣವನ್ನು ಪ್ರವೇಶ ಮಾಡಬೇಕು. 

Step-2: ಈ ಮೇಲಿನ ವಿಧಾನವನ್ನು ಅನುಸರಿಸಿ ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಿದ ಬಳಿಕ ಈ ಪುಟದಲ್ಲಿ ಕಾಣುವ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bara parihara-ರೈತರ ಖಾತೆಗೆ 105.00 ಕೋಟಿ ಬರ ಪರಿಹಾರ ಬಿಡುಗಡೆ! ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ?

Step-3: ತದನಂತರ ಅರ್ಜಿದಾರರ 12 ಅಂಕಿಯ ರೇಷನ್ ಕಾರ್ಡ ನಂಬರ್ ಅನ್ನು ಸರಿಯಾಗಿ ನಮೂದಿಸಿ ಪಕ್ಕದಲ್ಲೇ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಈ ರೀತಿ ಕ್ಲಿಕ್ ಮಾಡಿದ ನಂತರ ಈ ಪುಟದಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ(Applied date), ನಿಮ್ಮ ಅರ್ಜಿ ಸ್ಥಿತಿ(Status), ಅರ್ಜಿ ಅನುಮೋದನೆಯಾದ ದಿನಾಂಕ(Approved date) ಮತ್ತು ಕೊನೆಯಲ್ಲಿ ಹಣ ವರ್ಗಾವಣೆ ವಿವರ(Payment date and amount) ಎಂದು ತೋರಿಸುತ್ತದೆ ಬಳಿಕ ಇಲ್ಲಿ “Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-5: “Details” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳುವಾರು ಯಾವ ಯಾವ ದಿನದಂದು 2000 ರೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ತೋರಿಸುತ್ತದೆ.

ಇದನ್ನೂ ಓದಿ: Labour card application-ಲೇಬರ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ! ಒಂದು ಕಾರ್ಡ ಅನೇಕ ಪ್ರಯೋಜನಗಳು.

ಗಮನಿಸಿ: ಈ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ ಅರ್ಜಿ ಸ್ಥಿತಿ ಚೆಕ್ ಮಾಡುವಾಗಿ ಯಾವುದೇ ವಿವರ ತೋರಿಸದಿದ್ದರೆ ನಿಮಗೆ ಈ ಯೋಜನೆಯಡಿ ಹಣ ಜಮಾ ಅಗಿರುವುದಿಲ್ಲ ಎಂದು ಅಂತಹ ಅರ್ಜಿದಾರರು ಒಮ್ಮೆ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ(CDPO) ಕಚೇರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಕುರಿತು ವಿಚಾರಿಸಬೇಕು.

ಇದನ್ನೂ ಓದಿ: Gruhalakshmi new application: ಗ್ರಾಮ ಒನ್ ನಲ್ಲಿ ಹೊಸ ಗೃಹಲಕ್ಷ್ಮಿ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ!

- Advertisment -
LATEST ARTICLES

Related Articles

- Advertisment -

Most Popular

- Advertisment -