HomeNew postsGruhalaksmi latest updates- ಗೃಹಲಕ್ಷ್ಮಿ ನೋಂದಣಿ ಯಶಸ್ವಿ ಮೆಸೇಜ್‌ ಬಂದಿದ್ದರು 2000 ರೂ. ಬಂದಿಲ್ಲ! ಕಾರಣವೇನು?

Gruhalaksmi latest updates- ಗೃಹಲಕ್ಷ್ಮಿ ನೋಂದಣಿ ಯಶಸ್ವಿ ಮೆಸೇಜ್‌ ಬಂದಿದ್ದರು 2000 ರೂ. ಬಂದಿಲ್ಲ! ಕಾರಣವೇನು?

ರಾಜ್ಯದಲ್ಲಿ ನೂತನ ಸರಕಾರ ಜಾರಿಯಾಗಿ ಹೊಸ ಗ್ಯಾರಂಟಿ ಯೋಜನೆಯನ್ನು ಅನುಷ್ಥಾನ ಮಾಡಲು ಪ್ರಾರಂಭದಲ್ಲಿ ಇದ ಉತ್ಸಹ ಈಗ ಸ್ವಲ್ಪ ತಗ್ಗಿದಂತೆ ಕಾಣುತ್ತಿದೆ ಎಲ್ಲಾ ಸೂಕ್ತ ದಾಖಲಾತಿಗಳನ್ನು ಒದಗಿಸಿ ನಿಮ್ಮ ಗೃಹಲಕ್ಷ್ಮಿ ನೋಂದಣಿ ಯಶಸ್ವಿಯಾಗಿ ಅರ್ಜಿ ಸಲ್ಲಿಕೆ ಅಗಿದೆ ಎಂದು ಮೆಸೇಜ್ ಸ್ವೀಕರಿಸಿದರು ಇನ್ನೂ ಸಹ ದೊಡ್ಡ ಸಂಖ್ಯೆಯ ಮಹಿಳೆಯರಿಗೆ ಮೊದಲನೇಯ ಕಂತಿನ ಹಣ ಬಂದಿರುವುದಿಲ್ಲ.

ಅರ್ಜಿ ಸಲ್ಲಿಸುವಾಗ ನಾವು ಸಲ್ಲಿಸಿದ ಎಲ್ಲಾ ದಾಖಲೆಗಳು ಸರಿಯಾಗಿಲ್ಲದಿದ್ದರೆ ದೃಢೀಕರಣದ ಸಂಖ್ಯೆ, ಸಂದೇಶ ಏಕೆ ಬರುತ್ತದೆ? ಕೆಲವು ಅರ್ಜಿದಾರರಿಗೆ ಹಣ ಕೊಟ್ಟಂತೆ ಕೊಟ್ಟು, ಇತರರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದೆ ಸರಕಾರ ಎಂದು ಯೋಜನೆ ವಂಚಿತ ಮಹಿಳಾ ವಲಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ. ಸುಮಾರು 9.44 ಲಕ್ಷ ಮಂದಿ ನೋಂದಾಯಿತರಿಗೆ ಹಣ ಹಾಕದೆ ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲಎಂದು ಸರಕಾರ ನೆಪ ಹೇಳುತ್ತಿದೆ ಎಂದು ಅನೇಕ ಅರ್ಜಿದಾರರು ಆರೋಪಿಸಿದ್ದಾರೆ.

E-kyc Status- ಇ-ಕೆವೈಸಿ ಮಾಡಿಸಿದರು ಸಲ್ಲಿಕೆಯಾಗುತ್ತಿಲ್ಲ ಅರ್ಜಿ!

ಇದು ಅರ್ಜಿ ಸಲ್ಲಿಸಿದವರ ಕಥೆಯಾದರೆ ಇನ್ನು ಈ ಯೋಜನೆಗೆ ಅರ್ಹರಿರುವ ಇನ್ನು ಅರ್ಜಿ ಸಲ್ಲಿಸದಿರುವವರು ಇ-ಕೆವೈಸಿ ಮಾಡಿಕೊಂಡು ಅರ್ಜಿ ಸಲ್ಲಿಸಿ ಎಂದು ಪ್ರಥಮದಲ್ಲಿ ತೋರಿಸುತ್ತದೆ ನಂತರ ನಾವು ನಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಭೇಟಿ ಮಾಡಿ ಇ-ಕೆವೈಸಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಲು ಗ್ರಾಮ್ ಒನ್ ಕೇಂದ್ರಕ್ಕೆ ಹೋದರೆ ಇನ್ನುಇ-ಕೆವೈಸಿ ಅಗಿಲ್ಲ ಎಂದು ಬರುತ್ತದೆ. ಅಲ್ಲಿ ಕೇಳಿದರೆ ಇ-ಕೆವೈಸಿ ಅಗಿದೆ ಎಂದು ಹೇಳುತ್ತಾರೆ ಇಲ್ಲಿ ಬಂದು ಅರ್ಜಿ ಸಲ್ಲಿಸಲು ಅಗುತ್ತಿಲ್ಲ ಯಾರನ್ನು ಭೇಟಿ ಮಾಡಿ ನಾವು ನಮ್ಮ ಅರ್ಜಿ ಸಲ್ಲಿಸಬೇಕೋ ಎಂದು ಹೇಳುತ್ತಾರೆ ಸೌಭಾಗ್ಯ ಎನ್ನುವ ಮಹಿಳೆ.

ರಾಜ್ಯ ಸರ್ಕಾರದ ಜನಪ್ರಿಯ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಕೂಂಡವರಲ್ಲಿ ಇನ್ನು 9.44ಲಕ್ಷ ಲಕ್ಷ ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ. ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸುತ್ತಿಲ್ಲ. ಇತ್ತ ಆಸೆ ತೋರಿಸಿ ಕೈಕೊಟ್ಟ ಸರ್ಕಾರದ ವಿರುದ್ಧ ಮಹಿಳೆಯರು ಬೇಸರಗೊಂಡಿದ್ದಾರೆ. 

ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲಎಂದು ಸರ್ಕಾರ ನೆಪ ಇಚ್ಛಾಶಕ್ತಿಯ ಕೊರತೆಯಿಂದ ಈ ರೀತಿ ತಪ್ಪಿಸಿಕೊಳ್ಳುವ ಪ್ರಯತ್ನವಿದು ಎಂಬ ಆರೋಪ ನೋಂದಣಿಯಾದ ಗೃಹಲಕ್ಷ್ಮಿ ಯೋಜನೆಗೆ ದೃಢೀಕರಣಕ್ಕೆ ಬೆಲೆ ಇಲ್ಲವೇ ಎಂದು ಕೇಳುತ್ತಿರುವ ಮಹಿಳೆಯರು.

ಅರ್ಜಿದಾರರು ತಮ್ಮ ಅರ್ಜಿ ಸ್ಥಿತಿ ಕುರಿತು ವಿಚಾರಿಸಿದಾರ ಎಲ್ಲಾ ದಾಖಲಯೂ ಸರಿಯಾಗಿದೆ ಆದರೆ ನಿಮಗೆ ತಾಂತ್ರಿಕ ದೋಷಗಳಿಂದ ಹಣ ಬಂದಿಲ್ಲವೆಂದು ಅಥವಾ ಆಧಾರ್‌ ಜೋಡಣೆಯಾಗಿಲ್ಲಎಂದು ಒಂದೇ ಉತ್ತರವನ್ನು ನೀಡುತ್ತಿದ್ದಾರೆ.

Gruhalakshmi Yojana-2023: ಇನ್ನೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಈ ಕುರಿತು ಇಲಾಖೆಯಿಂದ ಟಿಪ್ಪಣಿ ಬಿಡುಗಡೆ.

Bank account adhar link- ಒಂದಕ್ಕಿಂತ ಹೆಚ್ಚು ಖಾತೆ ನಂತರ ಹೊಸ ಖಾತೆ ತೆರೆದ್ದಿದವರಿಗೆ ಹಣ ಜಮಾ ಅಗಿಲ್ಲ!

ಉದಾಹರಣೆಗೆ ಅರ್ಜಿದಾರರು ಮೂರ್ನಾಲ್ಕು ವರ್ಷಗಳ ಹಿಂದ್ದೆ ಕರ್ನಾಟಕ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನು ತೆರೆದಿರುತ್ತಾರೆ. ಕೆಲವು ತಿಂಗಳ ಬಳಿಕ ಬೇರೆ ಕಾರಣಗಳಿಂದ ಮತ್ತೊಂದು ಬ್ಯಾಂಕ್ ಅಂದತೆ ವಿಜಯ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದು ನಂತರ ಇದೇ ಬ್ಯಾಂಕ್ ನಲ್ಲಿ ಹಣದ ವಹಿವಾಟು ಮಾಡುತ್ತಾ ಬಂದಿರುತ್ತೀರಿ ಕರ್ನಾಟಕ ಬ್ಯಾಂಕ್ ನಲ್ಲಿ ಯಾವುದೇ ಹಣದ ವಹಿವಾಟು ನಡೆಸಿಯೇ ಇರುವುದಿಲ್ಲ ಇಂಹತ ಸನ್ನಿವೇಶದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಅದು ಅಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಣ ಹೋಗಿರುತ್ತದೆ.

ಅಂದರೆ ನೀವು ಮೊದಲು ಅಧಾರ್ ಕಾರ್ಡ ಲಿಂಕ್ ಅಗಿರುವ ಕರ್ನಾಟಕ ಬ್ಯಾಂಕ್ ಖಾತೆಗೆ ಹಣ ಹೋಗಿರುತ್ತದೆ ಅದರೆ ಅಲ್ಲಿ ನೀವು ಕಳೆದ ಮೂರ್ನಾಲ್ಕು ವರ್ಷದಿಂದ ವಹಿವಾಟು ಮಾಡದ ಕಾರಣ ನಿಮ್ಮ ಬ್ಯಾಂಕ್ ಖಾತೆ ನಿಷ್ತ್ರಿಯವಾಗಿರುತ್ತದೆ. ಈ ಮಾಹಿತಿ ಗೊತ್ತಿಲ್ಲದೇ ಅನೇಕ ಅರ್ಜಿದಾರರು ಈ ಯೋಜನೆಯ ಹಣ ಬಂದಿಲ್ಲ ಎಂದು ತಿಳಿಯುತ್ತಾರೆ. ಈ ಕಾರಣ ಅರ್ಜಿ ಸಲ್ಲಿಸಿದವರು ಒಮ್ಮೆ ನೀವು ಎಲ್ಲಿಯಾದರು ಈ ರೀತಿ ಅಕೌಂಟ್ ಹೊಂದಿರುವುದನ್ನು ಪರೀಶಿಲಿಸಿಕೊಳ್ಳಿ.

NPCI mapping- ಆಧಾರ್‌ ಸಂಖ್ಯೆ ಮತ್ತು ಪಡಿತರ ಚೀಟಿ ಹೆಸರು ಹೊಂದಾಣಿಕೆ ಸಮಸ್ಯೆ!

ಇನ್ನು ಕೆಲವರಿಗೆ ತಮ್ಮ ರೇಷನ್ ಕಾರ್ಡನಲ್ಲಿ ಒಂದು ರೀತಿ ಹೆಸರು ಅಧಾರ್ ಕಾರ್ಡನಲ್ಲಿ ವಿಬಿನ್ನ ರೀತಿಯ ಹೆಸರು ಇರುವುದರಿಂದ ಹೆಸರು ಹೊಂದಾಣಿಕೆ(Name mismatch) ಅಗದೆ ಹಣ ಜಮಾ ಅಗಿರುವುದಿಲ್ಲ. ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಅಗದಿರುವುದು.

Gruhalakshmi latest Update- ಈ ವರ್ಗದವರಿಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಬರಲಿದೆ!

Gruhalakshmi yojana statistics- ಹಣ ವರ್ಗಾವಣೆ ಅಗದವರ ಅಂಕಿ-ಅಂಶ ವಿವರ ಹೀಗಿದೆ:

ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 9,44,155 ಅರ್ಜಿದಾರರಿಗೆ ಹಣ ಸಂದಾಯವಾಗಿಲ್ಲ. ಇದರಲ್ಲಿ 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಮತ್ತಿ 1,59,356 ಅರ್ಜಿದಾರರ ಆಧಾರ್‌ ಕಾರ್ಡ ಮತ್ತು ಬ್ಯಾಂಕ್‌ ಖಾತೆಯಲ್ಲಿರುವ ಹೆಸರಿನಲ್ಲಿ ವ್ಯತ್ಯಾಸದಿಂದ ಹಣ ಸಂದಾಯವಾಗಿಲ್ಲ. 5,96,268 ಫಲಾನುಭವಿಗಳ ಬ್ಯಾಂಕ್ ಖಾತೆಯೊಂದಿಗೆ ಆಧಾರ್‌ ಜೋಡಣೆಯಾಗಿಲ್ಲ. 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ಹೊಂದಾಣಿಕೆಯಲ್ಲಿ ವ್ಯತ್ಯಾಸ. 

Gruhalakshmi grants- ಅನುದಾನ ಬಿಡುಗಡೆ ವಿವರ:

ಈ ಯೋಜನೆಯಡಿ ಅರ್ಜಿದಾರರಿಗೆ ಮೊದಲ ಕಂತಿನ 2,000 ರೂ ವರ್ಗಾವಣೆ ಮಾಡಲು  1.08 ಕೋಟಿ ಅರ್ಹ ಅರ್ಜಿದಾರನಿಗೆ 2169 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿತ್ತು. ನಂತರ ಎರಡನೆ ಕಂತಿನ ಹಣವನ್ನು ಸಂದಾಯ ಮಾಡಲು ಸೆಪ್ಟಂಬರ್‌ ತಿಂಗಳಲ್ಲಿ1.14 ಕೋಟಿ ಫಲಾನುಭವಿಗಳಿಗೆ 2280 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. 

ಗೃಹಲಕ್ಷ್ಮಿ ಯೋಜನೆಯ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

Gruhalakshmi Yojana-2023: ಇನ್ನೂ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಈ ಕುರಿತು ಇಲಾಖೆಯಿಂದ ಟಿಪ್ಪಣಿ ಬಿಡುಗಡೆ.

Gruhalakshmi latest Update- ಈ ವರ್ಗದವರಿಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಬರಲಿದೆ!

Gruhalakshmi 2nd Installment- ರಾಜ್ಯ ಸರಕಾರದಿಂದ ನವರಾತ್ರಿ ಹಬ್ಬಕ್ಕೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ!

How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

Most Popular

Latest Articles

Related Articles