Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsGift Deed- ದಾನಪತ್ರ ಎಂದರೇನು? ಹೇಗೆ ಬರೆಯಬೇಕು? ಬೇಕಾಗುವ ದಾಖಲೆಗಳು.

Gift Deed- ದಾನಪತ್ರ ಎಂದರೇನು? ಹೇಗೆ ಬರೆಯಬೇಕು? ಬೇಕಾಗುವ ದಾಖಲೆಗಳು.

ಜಮೀನಿನ ಆಸ್ತಿ ದಾಖಲೆಗಳಿಗೆ ಸಂಬಂದಿಸಿದಂತೆ ದಾನಪತ್ರ ಎಂದರೇನು? ಇದನ್ನು ಎಲ್ಲಿ ಮತ್ತು ಹೇಗೆ ಮಾಡಿಸಬೇಕು? ಬೇಕಾಗುವ ದಾಖಲೆಗಳಾವುವು? ದಾನಪತ್ರ ಬರೆಯಿಸುವುದು ಹೇಗೆ? ಈ ಎಲ್ಲಾ ಮಾಹಿತಿಯನ್ನು ರೈತರು ತಿಳಿಯುವುದು ಅತ್ಯಗತ್ಯ ಈ ಕುರಿತು ಇಂದು ತಿಳಿಯೋಣ.

Gift Deed- ದಾನಪತ್ರ ಎಂದರೇನು?

ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿ ಅಂದರೆ ಅದು ಸ್ಥಿರಾಸ್ತಿಯಾಗಲಿ ಅಥವಾ ಚರಾಸ್ತಿಯಾಗಲಿ ಅದನ್ನು ತಮ್ಮ ಇಷ್ಟ ಬಂದ ವ್ಯಕ್ತಿಗೆ ಪುಕ್ಕಟೆಯಾಗಿ ಹಕ್ಕು ವರ್ಗಾವಣೆ ಮೂಲಕ ನೀಡುವುದಕ್ಕೆ ದಾನ ಎಂದು ಕರೆಯುತ್ತಾರೆ. ಬಾಯಿಮಾತಿನಲ್ಲಿ ದಾನವಾಗಿ ಕೊಟ್ಟಿದ್ದೇನೆ ಎಂದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಸಿಗುವುದಿಲ್ಲ.  ಅದರಿಂದ ಮುಂದೆ ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ದಾನ ಪತ್ರ ಬರೆಯಿಸಿ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದರೆ ಮಾತ್ರ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುತ್ತದೆ.

ದಾನಪತ್ರ ನೋಂದಣಿಗೆ ಬೇಕಾಗುವ ದಾಖಲೆಗಳು:

1) ದಾನ ಮಾಡಬೇಕೆಂದಿರುವ ವ್ಯಕ್ತಿಯ ಜಮೀನು ಅಥವಾ ಸ್ಥಿರಾಸ್ತಿಯ ಹಕ್ಕುಪತ್ರ/ ಪಹಣಿ ಪತ್ರ 
2) ದಾನ ಮಾಡಬೇಕಾದವರ ಹಾಗೂ ದಾನ ಪಡೆಯಬೇಕೆಂದಿರುವವರ ಆಧಾರ ಕಾರ್ಡ್
3) ಕುಟುಂಬ ಸದಸ್ಯರಿಗೆ ದಾನ ಮಾಡಲು ಇಚ್ಚಿಸಿದ್ದಲ್ಲಿ ವಂಶಾವಳಿ ಪತ್ರ
4) ದಸ್ತಾವೇಜು ಹಾಳೆಗಳಲ್ಲಿ ದಾನಪತ್ರ ಬರೆದು ನೋಟರಿಯವರ ದೃಢೀಕರಣ.

ಇದನ್ನೂ ಓದಿ: mgnreg yojana- ವೈಯಕ್ತಿಕ ಫಲಾನುಭವಿಗಳಿಗೆ ನರೇಗಾ ನೆರವು ದ್ವಿಗುಣ! ಕಾಮಗಾರಿ ಮಿತಿ 5 ಲಕ್ಷಕ್ಕೆ ಏರಿಕೆ!

ದಾನಪತ್ರ ಹೇಗೆ ಬರೆಯಬೇಕು?

ಪಾರ್ಟಿ ನಂ.1 ದಾನ ಕೊಡುವವರ ಹೆಸರು, ಪಾರ್ಟಿ ನಂ.-2 ದಾನ ಪಡೆಯುವವರ ಹೆಸರನ್ನು ಬರೆದು ದಾನ ಮಾಡುವವರ ಆಸ್ತಿಯ ಸಂಕ್ಷಿಪ್ತ ವರದಿಯನ್ನು ಮುದ್ರಿಸಬೇಕಾಗುತ್ತದೆ.

ಉದಾಹರಣೆಗೆ: ಸನ್ 2022 ನೇ ಇಸ್ವಿ, ಜನೆವರಿ ಮಾಹೆ, ತಾರಿಖು 25 ರಂದು ಪಾರ್ಟಿ ನಂ: 1 X, ಪಾರ್ಟಿ ನಂ:2 Y ಇದ್ದು, ಈ ದಾನ ಪತ್ರ ಬರೆದ ಉದ್ದೇಶವೇನೆಂದರೆ, 1ನೇ ಪಾರ್ಟಿಯವನಾದ ನಾನು (–ವಯಸ್ಸು) A ಗ್ರಾಮದ ನಿವಾಸಿಯಾಗಿದ್ದು, ಸದರಿ ಗ್ರಾಮದಲ್ಲಿ 2 ಎಕರೆ 2 ಗುಂಟೆ ನನ್ನ ಸ್ವಯಾರ್ಜಿತ ಜಮೀನು ಇದ್ದಿರುತ್ತದೆ. ಈ ಕೆಳಗಿನ ಶೆಡ್ಯೂಲ್ ನಲ್ಲಿ ಕಂಡಂತಹ ಆಸ್ತಿಯನ್ನು ನಾನು ಎರಡನೇ ಪಾರ್ಟಿಯಾದ Y ಇವರಿಗೆ ಸ್ವ ಮನಸ್ಸಿನಿಂದ ದಾನವಾಗಿ ಕೊಟ್ಟಿರುತ್ತೇನೆ. ಇನ್ನು ಮುಂದೆ ಶೆಡ್ಯೂಲನಲ್ಲಿ ಕಂಡಂತಹ ಆಸ್ತಿಗೆ ಅವರೇ ಹಕ್ಕುದಾರ ಆಗುತ್ತಾರೆ. ಮತ್ತು ಸದರಿ ಸ್ವತ್ತುಗಳ ಕಂದಾಯ ವಸೂಲಿ ಅಥವಾ ಇನ್ನೀತರ ತೆರಿಗೆಗಳನ್ನು 2ನೇ ಪಾರ್ಟಿಯವರಿಂದಲೇ ವಸೂಲಿ ಮಾಡತಕ್ಕದ್ದು. 

ಈ ರೀತಿಯಾಗಿ ದಾನ ಕೊಡುವವರು ಸಂಕ್ಷಿಪ್ತವಾಗಿ ಅವರ ಆಸ್ತಿ ವಿವರಣೆ ಕೊಡಬೇಕು. 

ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

ಶೆಡ್ಯೂಲನ ವಿವರಣೆ:

1 ಮತ್ತು 2 ನ್ನು ಕ್ರಮಬದ್ಧವಾಗಿ ಅ, ಆ ಎಂದು ತಿಳಿದುಕೊಳ್ಳುವುದು.
‘ಅ’ ಶೆಡ್ಯೂಲ್: 1ನೇ ಪಾರ್ಟಿ X ಅವರ ಸ್ವಯಾರ್ಜಿತ ಸ್ವತ್ತಿನ ವಿವರ. ಅಂದರೆ ಯಾವ ಗ್ರಾಮದಲ್ಲಿ, ಯಾವ ಸರ್ವೇ ನಂಬರಿನಲ್ಲಿರುವ ಎಷ್ಟು ವಿಸ್ತೀರ್ಣ ಹೊಂದಿರುತ್ತಾರೆ. ಮುಖ್ಯವಾಗಿ ದಾನ ಮಾಡಬೇಕೆಂದಿರುವ ಜಮೀನಿನ ಸುತ್ತಮುತ್ತಲಿರುವ ಚಕ್ಕುಬಂದಿ (ಸರ್ವೆ ನಕಾಶೆ ಪ್ರಕಾರ)ಯ ವಿವರವನ್ನು ಸಂಕ್ಷಿಪ್ತವಾಗಿ ವಿಸ್ತರಿಸಿ ಬರೆಯಬೇಕು. 

‘ಆ’ ಶೆಡ್ಯೂಲ್: 2ನೇ ಪಾರ್ಟಿ Y ಅವರ ಆಸ್ತಿಯ ವಿವರ ಅಂದರೆ ದಾನ ಪಡೆದುಕೊಳ್ಳುವವರ ಆಸ್ತಿಯ ವಿವರಣೆ ದಾನಪತ್ರದ ಪ್ರಕಾರ ಗ್ರಾಮ, ಸರ್ವೆ ನಂ, ವಿಸ್ತಿರ್ಣ ಮತ್ತು ಚೆಕ್ಕುಬಂದಿ(ಸರ್ವೆ ನಕಾಶೆ ಪ್ರಕಾರ)ಯ ವಿವರವನ್ನು ಸಂಕ್ಷಿಪ್ತವಾಗಿ ವಿಸ್ತರಿಸಿ ಬರೆಯಬೇಕು. 

ಈ ದಸ್ತಾವೇಜು 2 ಹಾಳೆಗಳ ಮೇಲೆ ಮುದ್ರಿಸಿ ಮುದ್ರಾಂಕದ ಶುಲ್ಕವನ್ನು ಬರೆಯಬೇಕು. ದಾನ ಮಾಡುವವರ ಹಾಗೂ ದಾನ ಮಾಡಿಸಿಕೊಳ್ಳುವವರ ಹೆಸರು ಬರೆಯಿಸಿ ಸಹಿ ಮಾಡಿಸಿಕೊಳ್ಳಬೇಕು.  ಜೊತೆಗೆ ಸಾಕ್ಷಿಗಳ ಸಹಿಗಳನ್ನು ಮಾಡಿಸಿಕೊಳ್ಳಬೇಕು. 

ಹೀಗೆ ದಾನಪತ್ರವನ್ನು ಬರೆಯಿಸಿಕೊಂಡು ವಕೀಲರಿಂದ ನೋಟರಿ ಮಾಡಿಸಿಕೊಂಡು ದಾನ ಮಾಡುವವರು ಮತ್ತು ದಾನ ತೆಗೆದುಕೊಳ್ಳುವವರು, ಸಾಕ್ಷಿದಾರರು ಎಲ್ಲರೂ ಸೇರಿ ಉಪನೋಂದಣಿ ಕಚೇರಿಗೆ ಭೇಟಿ ನೀಡಿ ಎಲ್ಲಾ ದಾಖಲೆಗಳನ್ನು ನೀಡಿ, ದಾನ ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು. 

ಇದನ್ನೂ ಓದಿ: free tailoring machine-ಉಚಿತ ಹೊಲಿಗೆ ಯಂತ್ರ,ಕುಶಲಕರ್ಮಿಗಳು ಉಪಕರಣ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

ದಾನಪತ್ರದ ಬಹುಮುಖ್ಯ ಅಂಶಗಳು:

  • ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಅಥವಾ ಕ್ರಯ ಮಾಡಬಹುದು
  • ಹೊರಗಿನವರು ಅಂದರೆ ರಕ್ತ ಸಂಬಂಧಿಕರಲ್ಲದವರಿಗೆ ಆಸ್ತಿ ದಾನ ನೀಡಲು ಇಚ್ಚಿಸಿದರೆ ಆ ಆಸ್ತಿಯ ಮೌಲ್ಯದ 5% ರಷ್ಟು ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕು. 
  • ಕುಟುಂಬದೊಳಗೆ ದಾನ ಕೊಡಲು ಇಚ್ಚಿಸಿದ್ದಲ್ಲಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.
  • ದಾನ ಪತ್ರದಲ್ಲಿ ಮುಖ್ಯವಾಗಿ ಸಾಕ್ಷಿದಾರರ ಸಹಿ ಇರಲೇ ಬೇಕು. 
  • ಖಾತಾ ಹಕ್ಕು ಬದಲಾವಣೆ ಪ್ರಕ್ರಿಯೆ ಇದ್ದು, ಸದರಿ ದಾನಪತ್ರ ಪಡೆದು ‘ಜೆ’ ಫಾರ್ಮ ಪಡೆದು ಮ್ಯುಟೇಷನ್ ಪ್ರಕ್ರಿಯೆಗೆ ಒಳಪಡಲೆಬೇಕು.  
Most Popular

Latest Articles

- Advertisment -
- Advertisment -

Related Articles