Indira Kit Karnataka-ರೇಶನ್ ಕಾರ್ಡದಾರರಿಗೆ ಈ ತಿಂಗಳಿನಿಂದ ಇಂದಿರಾ ಕಿಟ್‌ ವಿತರಣೆ: ಸಚಿವ ಮುನಿಯಪ್ಪ!

November 26, 2025 | Siddesh
Indira Kit Karnataka-ರೇಶನ್ ಕಾರ್ಡದಾರರಿಗೆ ಈ ತಿಂಗಳಿನಿಂದ ಇಂದಿರಾ ಕಿಟ್‌ ವಿತರಣೆ: ಸಚಿವ ಮುನಿಯಪ್ಪ!
Share Now:

ರೇಶನ್ ಕಾರ್ಡದಾರರಿಗೆ(Ration Card) ಪ್ರತಿ ತಿಂಗಳು ವಿತರಣೆ ಮಾಡುವ ಪಡಿತರದ ಜೊತೆಗೆ ಅಂದರೆ ಅಕ್ಕಿ ಇನ್ನಿತರೆ ಧಾನ್ಯದ ಒಟ್ಟಿಗೆ ಇಂದಿರಾ ಕಿಟ್(Indira Kit) ವಿತರಣೆ ಮಾಡಲು ರಾಜ್ಯ ಸರಕಾರ ತಿರ್ಮಾನಿಸಿದ್ದು ಈಗಾಗಲೇ ಈ ಕುರಿತು ಅಧಿಕೃತ ಆದೇಶವನ್ನು ಸಹ ಪ್ರಕಟಿಸಲಾಗಿತ್ತು, ಆದರೆ ಗ್ರಾಹಕರಿಗೆ ಇಂದಿರಾ ಕಿಟ್ ವಿತರಣೆ ಯಾವಾಗಿನಿಂದ ಎನ್ನುವ ಪ್ರಶ್ನೆಗೆ ಸಚಿವ ಮುನಿಯಪ್ಪ ಅವರು ಹಂಚಿಕೊಂಡಿರುವ ಅಧಿಕೃತ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಸಾಮಾನ್ಯವಾಗಿ ಈಗಾಗಲೇ ಅನೇಕ ಜನರಿಗೆ ತಿಳಿದಿರುವ ಹಾಗೆಯೇ ರಾಜ್ಯ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ(Annabhagya) ಅಕ್ಕಿ ಜೊತೆಗೆ ಇಂದಿರಾ ಕಿಟ್ ಅನ್ನು ವಿತರಣೆ ಮಾಡುವ ನೂತನ ಯೋಜನೆಗೆ ಸರ್ಕಾರ ಅಧಿಕೃತ ಅನುಮೋದನೆಯನ್ನು ನೀಡಲಾಗಿದ್ದು, ಪಡಿತರ ಚೀಟಿದಾರರಿಗೆ ಇಂದಿರಾ ಕಿಟ್ ವಿತರಣೆ ಯಾವಾಗ? ಎನ್ನುವ ಪ್ರಶ್ನೆಗೆ ಆಹಾರ ಇಲಾಖೆ ಸಚಿವರು ಅಧಿಕೃತ ಮಾಹಿತಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: CCTV Training-ಉಚಿತ ಸಿಸಿಟಿವಿ ಅಳವಡಿಕೆ ಮತ್ತು ರಿಪೇರಿ ತರಬೇತಿಗೆ ಅರ್ಜಿ ಅಹ್ವಾನ!

ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ನೀಡುವ ಅಕ್ಕಿಯೊಂದಿಗೆ ಇಂದಿರಾ ಕಿಟ್(Indira Kit Scheme In Karnataka) ವಿತರಣೆ ಮಾಡಲು ರಾಜ್ಯ ಸರಕಾರ ನಿರ್ಧಾರಿಸಿದ್ದು ಈ ಕಿಟ್ ಅನ್ನು ಯಾವಾಗಿನಿಂದ ವಿತರಣೆ ಮಾಡಲಾಗುತ್ತದೆ? ಇಂದಿರಾ ಕಿಟ್ ಯಾವ ಯಾವ ಧಾನ್ಯಗಳಿಂದ ಕೂಡಿರುತ್ತದೆ? ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Indira Kit-ಫೆಬ್ರುವರಿಯಿಂದ ಅನ್ನಭಾಗ್ಯ ಯೋಜನೆಯ ಇಂದಿರಾ ಕಿಟ್‌ ವಿತರಣೆ: ಸಚಿವ ಮುನಿಯಪ್ಪ

ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕಿಲೋ ಅಕ್ಕಿಯ ಬದಲು ಪ್ರತಿ ಪಡಿತರ ಚೀಟಿಗೆ ‘ಇಂದಿರಾ’ ಆಹಾರ ಕಿಟ್ ವಿತರಣೆ ಯೋಜನೆಯನ್ನು ಜನವರಿ ಅಥವಾ ಫೆಬ್ರುವರಿಯಿಂದ ಜಾರಿಗೊಳಿಸಲು ತಯಾರಿ ಮಾಡಿಕೊಂಡಿದ್ದೇವೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಅಧಿಕೃತ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Raagi Bembala Bele Kharidi-ಜನವರಿಯಿಂದ ಹೊಸ ರಾಗಿ ಖರೀದಿ! ಬಾಕಿ ಹಣ ಬಿಡುಗಡೆಗೆ ಮನವಿ: ಸಚಿವ ಮುನಿಯಪ್ಪ

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮತ್ತು ಬಾಕಿ ಹಣ ಬಿಡುಗಡೆ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಮಾಹಿತಿ ಹೀಗಿದೆ, ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಎಂಎಸ್‌ಪಿಯಲ್ಲಿ ಆರು ಲಕ್ಷ ಟನ್‌ ರಾಗಿ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ಈ ಖರೀದಿ ಪ್ರಕ್ರಿಯೆ ನಡೆಸಲಾಗಿತ್ತು.

ನಮಗೆ ನಾಲ್ಕು ಲಕ್ಷ ಟನ್‌ ರಾಗಿ ಸಾಕಾಗುತ್ತದೆ. ಕೇಂದ್ರ ಸರ್ಕಾರದಿಂದ ₹2 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ. ಜನವರಿಯಿಂದ ಹೊಸ ಖರೀದಿ ಆರಂಭವಾಗಲಿದೆ. ಬಾಕಿ ಹಣ ನೀಡಿದರೆ ಈ ಖರೀದಿಗೆ ಅನುಕೂಲವಾಗಲಿದೆ‘ ಎಂದರು.

ಇದನ್ನೂ ಓದಿ: FFE Scholarship-ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸ್ಕಾಲರ್‌ಶಿಪ್ ಅಡಿಯಲ್ಲಿ ₹50,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ!

Indira Kit In Karnataka-ಇಂದಿರಾ ಕಿಟ್ ನಲ್ಲಿ ಏನೆಲ್ಲ ಇರಲಿದೆ?

ಪಡಿತರ ಚೀಟಿದಾರರಿಗೆ ರಾಜ್ಯ ಸರಕಾರದಿಂದ ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ 5 ಕೆಜಿ ಅಕ್ಕಿಯ ಬದಲು ಈ ಕೆಳಗಿನ ಪಟ್ಟಿಯಲ್ಲಿರುವ ಆಹಾರ ಧಾನ್ಯಗಳನ್ನು ವಿತರಣೆ ಮಾಡಲು ಸರಕಾರ ನಿರ್ಧರಿಸಿದೆ.

1) ತೊಗರಿ ಬೇಳೆ- 1 ಕೆ.ಜಿ (1 ರಿಂದ 3 ಸದಸ್ಯರಿಗೆ 1/4 ಕೆ.ಜಿ, 3 ರಿಂದ 4 ಸದಸ್ಯರಿರುವ ಕುಟುಂಬಕ್ಕೆ 1/2 ಕೆ.ಜಿ. ಹಾಗೂ 5 ಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ¾ ಕೆ.ಜಿ)
2) ಅಡುಗೆ ಎಣ್ಣೆ- 1 ಲೀ
3) ಸಕ್ಕರೆ- 1 ಕೆ.ಜಿ
4) ಉಪ್ಪು- 1 ಕೆ.ಜಿ

ಇದನ್ನೂ ಓದಿ: Uchita Meenu Mari-ಮೀನುಗಾರಿಕೆ ಇಲಾಕೆಯಿಂದ ಉಚಿತ ಮೀನು ಮರಿ ಪಡೆಯಲು ಅರ್ಜಿ ಆಹ್ವಾನ!

Ration Card Details-ನಿಮ್ಮ ರೇಶನ್ ಕಾರ್ಡನ ಎಲ್ಲಾ ಮಾಹಿತಿಯನ್ನು ಮೊಬೈಲ್ ನಲ್ಲೇ ಪಡೆಯಿರಿ:

ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳು ತಮ್ಮ ರೇಶನ್ ಕಾರ್ಡ ವಿವರ ಮತ್ತು ಇನ್ನಿತರೆ ಅಗತ್ಯ ಮಾಹಿತಿಯನ್ನು ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಸಂಪೂರ್ಣ ವಿವರವನ್ನು ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದು. ಇದರ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

  • ರೇಶನ್ ಕಾರ್ಡ ಸದಸ್ಯರ ಇ-ಕೆವೈಸಿ ಸ್ಥಿತಿ ಚೆಕ್ ಮಾಡಬಹುದು.
  • ಹೊಸ ರೇಶನ್ ಕಾರ್ಡ ಅರ್ಜಿ ಸ್ಥಿತಿ ವಿವರ.
  • ತಿಂಗಳುವಾರು ರದ್ದಾದ ತಾಲ್ಲೂಕುವಾರು ರೇಶನ್ ಕಾರ್ಡದಾರರ ಪಟ್ಟಿ.
  • ರೇಶನ್ ಕಾರ್ಡ ತಿದ್ದುಪಡಿ ಅರ್ಜಿ ಸ್ಥಿತಿ.
  • ಹಳ್ಳಿವಾರು ರೇಶನ್ ಕಾರ್ಡದಾರರ ಪಟ್ಟಿ.

ಇದನ್ನೂ ಓದಿ: PMEGP Application-ಸ್ವಂತ ಉದ್ದಿಮೆಗೆ ಈ ಯೋಜನೆಯಡಿ ಸಿಗುತ್ತದೆ 35% ಸಬ್ಸಿಡಿ! ಇಲ್ಲಿದೆ ಸಂಪೂರ್ಣ ವಿವರ!

Ration Status Check-ರೇಶನ್ ಕಾರ್ಡ ವಿವರ ಚೆಕ್ ಮಾಡುವ ವಿಧಾನ:

ಪಡಿತರ ಚೀಟಿದಾರರು ಆಹಾರ ಇಲಾಖೆಯ ಅಧಿಕೃತ ahara.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲೇ ಪಡಿತರ ಚೀಟಿಯ ಎಲ್ಲಾ ವಿವರವನ್ನು ಪಡೆಯಬಹುದು.

Step-1: ಮೊದಲಿಗೆ Click Here ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "ಇ-ಸೇವೆಗಳು" ಬಟನ್ ಮೇಲೆ ಕ್ಲಿಕ್ ಮಾಡಬೇಕು ಇಲ್ಲಿ ಎಡಬದಿಯಲ್ಲಿ ಕಾಣುವ Menu ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಇಲ್ಲಿ ಕಾಣಿಸುವ ಒಂದೊಂದು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪಡಿತರ ಚೀಟಿ ಕುರಿತು ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: