Journalists Training-ಮಹಿಳಾ ಪತ್ರಕರ್ತೆಯರಿಗೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಹೈಟೆಕ್ ತರಬೇತಿಗೆ ಅರ್ಜಿ ಆಹ್ವಾನ!

March 6, 2026 | Siddesh
Journalists Training-ಮಹಿಳಾ ಪತ್ರಕರ್ತೆಯರಿಗೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಹೈಟೆಕ್ ತರಬೇತಿಗೆ ಅರ್ಜಿ ಆಹ್ವಾನ!
Share Now:

ಆಧುನಿಕ ಮಾಧ್ಯಮ ರಂಗದ ಸವಾಲುಗಳನ್ನು ಎದುರಿಸಲು ಮತ್ತು ವೃತ್ತಿ ಕೌಶಲವನ್ನು ಮೇಲ್ದರ್ಜೆಗೇರಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿಯು(Journalists Training) ಒಂದು ವಿಶಿಷ್ಟ ಹೆಜ್ಜೆ ಇಟ್ಟಿದೆ. ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್(Infosys Springboard) ಸಿ.ಎಸ್.ಆರ್. ಕಾರ್ಯಕ್ರಮದ ಸಹಯೋಗದೊಂದಿಗೆ, ರಾಜ್ಯದ ಅರ್ಹ ಮಹಿಳಾ ಪತ್ರಕರ್ತೆಯರಿಗಾಗಿ ಮೂರು ದಿನಗಳ ವಿಶೇಷ ವಸತಿಯುತ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಮೈಸೂರಿನ ಸುಸಜ್ಜಿತ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಈ ತರಬೇತಿ ನಡೆಯಲಿದ್ದು, ಪತ್ರಕರ್ತೆಯರ ಬೌದ್ಧಿಕ ಮತ್ತು ವೃತ್ತಿಪರ ವಿಕಸನಕ್ಕೆ ಇದು ವೇದಿಕೆಯಾಗಲಿದೆ.

ಈ ತರಬೇತಿ ಕಾರ್ಯಕ್ರಮವು ಕೇವಲ ಸೈದ್ಧಾಂತಿಕ ಚರ್ಚೆಗಳಿಗೆ ಸೀಮಿತವಾಗದೆ, ಇಂದಿನ ಅನಿವಾರ್ಯತೆಯಾಗಿರುವ ಡಿಜಿಟಲ್ ಮಾಧ್ಯಮದ(Digital Media) ಆಳ-ಅಗಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆ ಹಾಗೂ ನಾಯಕತ್ವ ಗುಣಗಳ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲಲಿದೆ. ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರುವ ಮಹಿಳಾ ಪತ್ರಕರ್ತೆಯರಿಗೆ(Free Journalists Training In Karnataka) ಈ ಸುವರ್ಣಾವಕಾಶ ಕಲ್ಪಿಸಲಾಗಿದ್ದು, ವೃತ್ತಿಜೀವನದಲ್ಲಿ ಹೊಸ ಆಯಾಮ ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ಪ್ರಯಾಣ ಭತ್ಯೆಯ ಸೌಲಭ್ಯವನ್ನೂ ನೀಡಲಾಗುತ್ತಿರುವುದು ವಿಶೇಷ.

ಇದನ್ನೂ ಓದಿ: Shop Insurance-ಅತೀ ಕಡಿಮೆ ಪ್ರೀಮಿಯಂ ನಲ್ಲಿ ಅಂಗಡಿ ಮಾಲೀಕರಿಗೆ ವಿಮೆ!

ಆಸಕ್ತ ಪತ್ರಕರ್ತೆಯರು(Journalists Training Application)ಮಾರ್ಚ್ 10, 2026ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗೂಗಲ್ ಫಾರ್ಮ್ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಜ್ಞಾನದ ಹಬ್ಬದಲ್ಲಿ ಭಾಗವಹಿಸಬಹುದಾಗಿದೆ. ತಾಂತ್ರಿಕ ನೈಪುಣ್ಯತೆ ಮತ್ತು ಮೃದು ಕೌಶಲಗಳ (Soft Skills) ಸಮ್ಮಿಲನವಾಗಿರುವ ಈ ತರಬೇತಿಯು, ಮಹಿಳಾ ಪತ್ರಕರ್ತೆಯರನ್ನು ಭವಿಷ್ಯದ ಮಾಧ್ಯಮ ಲೋಕದ ಸವಾಲುಗಳಿಗೆ ಸಜ್ಜುಗೊಳಿಸುವ ಗುರಿ ಹೊಂದಿದೆ.

Journalists Training Details-ತರಬೇತಿಯ ಮುಖ್ಯಾಂಶಗಳು:

ತರಬೇತಿ ನಡೆಯುವ ದಿನಾಂಕ: ಮಾರ್ಚ್ 25 ರಿಂದ 27, 2026 (3 ದಿನಗಳು)

ಸ್ಥಳ: ಇನ್ಫೋಸಿಸ್ ಕ್ಯಾಂಪಸ್, ಮೈಸೂರು.

ತರಬೇತಿ ವಿಷಯಗಳು: ಡಿಜಿಟಲ್ ಮಾಧ್ಯಮ, ಎಐ (AI) ಬಳಕೆ, ಸಾಫ್ಟ್‌ಸ್ಕಿಲ್ ಮತ್ತು ನಾಯಕತ್ವ ತರಬೇತಿ.

ಅರ್ಹತೆ: ಮಾಧ್ಯಮ ಸಂಸ್ಥೆಗಳಲ್ಲಿ ಕನಿಷ್ಠ 5 ವರ್ಷಗಳ ಸೇವಾನುಭವ.

ಸೌಲಭ್ಯ: ವಸತಿಯುತ ತರಬೇತಿ ಹಾಗೂ ನಿಯಮಾನುಸಾರ ಪ್ರಯಾಣ ಭತ್ಯೆ.

ಇದನ್ನೂ ಓದಿ: Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

Journalists Training Online Application-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅರ್ಜಿದಾರರು ಈ ಕೆಳಗಿನ ವಿಧಾನವನ್ನು ಅಧಿಕೃತ ಗೂಗಲ್ ಪಾರ್ಮ ಅರ್ಜಿ ನಮೂನೆ ಪೇಜ್ ಅನ್ನು ಭೇಟಿ ಮಾಡಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಸಲ್ಲಿಸಿ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

Step-1: ಅರ್ಜಿದಾರರು ಮೊದಲಿಗೆ ಈ Register Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪಾರ್ಮ ಅನ್ನು ಒಪನ್ ಮಾಡಿ.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಅಗತ್ಯ ವಿವರ ಮಾಹಿತಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Gas Level Check-ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 10, 2026

Required Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಕಲೆಗಳು:

ಈ ಉಚಿತ ತರಬೇತಿಯಲ್ಲಿ ಭಾಗವಹಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

  • ಅರ್ಜಿದಾರರ ಪೋಟೋ.
  • ಆಧಾರ್ ಕಾರ್ಡ.
  • ಸಂಸ್ಥೆಯ ಮುಖ್ಯಸ್ಥರ ದೃಢೀಕರಣ/ID ಕಾರ್ಡ್.
  • 5 ವರ್ಷದ ಅನುಭವ ಪ್ರಮಾಣ ಪತ್ರ.
Journalists Training

Journalists Training Benefits-ಈ ತರಬೇತಿ ಪಡೆಯುವುದರ ಪ್ರಯೋಜನಗಳು:

1) ತಾಂತ್ರಿಕ ನೈಪುಣ್ಯತೆ (Technological Skills):

AI (ಕೃತಕ ಬುದ್ಧಿಮತ್ತೆ) ಬಳಕೆ: ಇಂದಿನ ವೇಗದ ಯುಗದಲ್ಲಿ ಸುದ್ದಿಯನ್ನು ವಿಶ್ಲೇಷಿಸಲು, ಬರೆಯಲು ಮತ್ತು ಎಡಿಟ್ ಮಾಡಲು AI ಉಪಕರಣಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಕಲಿಯಬಹುದು.

ಡಿಜಿಟಲ್ ಮಾಧ್ಯಮದ ಅರಿವು: ಸಾಂಪ್ರದಾಯಿಕ ಪತ್ರಿಕೋದ್ಯಮದಿಂದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನಗಳ ಜ್ಞಾನ ಲಭ್ಯವಾಗುತ್ತದೆ.

ಇದನ್ನೂ ಓದಿ: RTE Online Application-RTE ಕಾಯ್ದೆ ಸೀಟು ಹಂಚಿಕೆಗೆ ದಿನಾಂಕ ಪ್ರಕಟ: ನಿಮ್ಮ ಮಗುವಿಗೆ ಖಾಸಗಿ ಶಾಲೆ ಪ್ರವೇಶಕ್ಕೆ ಉಚಿತ ಸೀಟ್!

2) ವೃತ್ತಿಪರ ಬೆಳವಣಿಗೆ (Professional Growth):

ನಾಯಕತ್ವ ತರಬೇತಿ (Leadership): ಮಾಧ್ಯಮ ಸಂಸ್ಥೆಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮತ್ತು ತಂಡವನ್ನು ಮುನ್ನಡೆಸುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇದು ಸಹಕಾರಿ.

ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿ: ಸಂವಹನ ಕಲೆ (Communication), ಸಮಯ ನಿರ್ವಹಣೆ ಮತ್ತು ಒತ್ತಡ ನಿರ್ವಹಣೆಯಂತಹ ವೃತ್ತಿಪರ ಕೌಶಲಗಳು ವೃದ್ಧಿಯಾಗುತ್ತವೆ.

3) ನೆಟ್‌ವರ್ಕಿಂಗ್ ಮತ್ತು ಸಂಪರ್ಕ (Networking):

ರಾಜ್ಯದ ವಿವಿಧ ಭಾಗಗಳಿಂದ ಬರುವ ಅನುಭವೀ ಮಹಿಳಾ ಪತ್ರಕರ್ತೆಯರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಮತ್ತು ವೃತ್ತಿಪರ ಬಾಂಧವ್ಯ ಬೆಳೆಸಿಕೊಳ್ಳಲು ಇದೊಂದು ಉತ್ತಮ ವೇದಿಕೆ.

4) ಇನ್ಫೋಸಿಸ್ ಕ್ಯಾಂಪಸ್ ಅನುಭವ:

ವಿಶ್ವದರ್ಜೆಯ ಸೌಲಭ್ಯವಿರುವ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ತರಬೇತಿ ಪಡೆಯುವುದು ಒಂದು ವಿಶೇಷ ಅನುಭವ. ಕಾರ್ಪೊರೇಟ್ ಶಿಸ್ತು ಮತ್ತು ಕೆಲಸದ ಸಂಸ್ಕೃತಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!

5) ಆರ್ಥಿಕ ಮತ್ತು ವಸತಿ ಸೌಲಭ್ಯ:

ಇದು ಸಂಪೂರ್ಣ ವಸತಿಯುತ ತರಬೇತಿಯಾಗಿದ್ದು, ತರಬೇತಿಯ ಅವಧಿಯಲ್ಲಿ ಯಾವುದೇ ಖರ್ಚಿಲ್ಲದೆ ಸುಸಜ್ಜಿತ ಸೌಲಭ್ಯ ದೊರೆಯುತ್ತದೆ.

ಜೊತೆಗೆ, ನಿಯಮಾನುಸಾರ ಪ್ರಯಾಣ ಭತ್ಯೆ (Travel Allowance) ಸಿಗುವುದರಿಂದ ಪತ್ರಕರ್ತೆಯರಿಗೆ ಆರ್ಥಿಕ ಹೊರೆಯಾಗುವುದಿಲ್ಲ.

6) ಮಾನ್ಯತೆ ಮತ್ತು ಪ್ರಮಾಣೀಕರಣ:

ಕರ್ನಾಟಕ ಮಾಧ್ಯಮ ಅಕಾಡೆಮಿಯಂತಹ ಪ್ರತಿಷ್ಠಿತ ಸಂಸ್ಥೆಯಿಂದ ಸಿಗುವ ಈ ತರಬೇತಿಯು ನಿಮ್ಮ ಪ್ರೊಫೈಲ್ ಅಥವಾ CV (ಜೀವನವೃತ್ತ) ಮೌಲ್ಯವನ್ನು ಹೆಚ್ಚಿಸುತ್ತದೆ.

ಪತ್ರಕರ್ತೆಯರ ಆಯ್ಕೆಯ ಕುರಿತು ಅಕಾಡೆಮಿಯ ನಿರ್ಧಾರವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ಜಾಲತಾಣವನ್ನು ಗಮನಿಸಬಹುದು.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: