kaludhari-ಕಾಲುದಾರಿ ಮತ್ತು ಬಂಡಿದಾರಿ ಕುರಿತು ರೈತರಿಗೆ ಸಿಹಿ ಸುದ್ದಿ ನೀಡಿದ ಹೈಕೂರ್ಟ್!
ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ(kaludhari) ಸಮಸ್ಯೆಯು ಸರ್ವೆ ಸಾಮಾನ್ಯವಾಗಿದೆ ಈ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್ ರೈತ ಪರವಾಗಿ ಮಹತ್ವದ ಆದೇಶವನ್ನು ನೀಡಿದೆ. kaludhari News-2024, Village map download link, kaludhari, land records, RTc, pahani, bandidari, B-kharab land, Village map download link, revenue department, kandaya elake
ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ(kaludhari) ಸಮಸ್ಯೆಯು ಸರ್ವೆ ಸಾಮಾನ್ಯವಾಗಿದೆ ಈ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್ ರೈತ ಪರವಾಗಿ ಮಹತ್ವದ ಆದೇಶವನ್ನು ನೀಡಿದೆ.
ಕಾಲುದಾರಿ, ಬಂಡಿದಾರಿ(bandidari) ಕೂಡ ರಸ್ತೆಗಳೇ,ಯಾರೂ ಕೂಡ ಅದಕ್ಕ ಅಡೆ-ತಡೆ ಮಾಡುವ ಹಾಗಿಲ್ಲ ಎಂದು ಹೈಕೊರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಕುರಿತು ನೀಡಿರುವ ಆದೇಶದ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಕೃಷಿ ಜಮೀನಿಗೆ ಹೋಗುವ ದಾರಿಯನ್ನು "ಬಿ ಖರಾಬು ಜಮೀನು" ಎಂದು ಜಮೀನಿನ ಪಹಣಿ/RTC ಅಲ್ಲಿ ಗುರುತಿಸಿರುತ್ತಾರೆ ಈ ಜಮೀನನ್ನು ಕಾಲುದಾರಿ ಮತ್ತು ಬಂಡಿದಾರಿಗೆ ಮೀಸಲಿಡಲಾಗಿರುತ್ತದೆ.
ಇದನ್ನೂ ಓದಿ: Agriculture Land information: ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು ಎಂದು ತಿಳಿಯುವುದು ಹೇಗೆ?
B-kharab land-'ಬಿ ಖರಾಬ್' ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ: ಹೈಕೋರ್ಟ್
ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಕಾಲುದಾರಿ, ಬಂಡಿ ಹಾಡು ಕೂಡಾ ಒಳಗೊಂಡಿರುತ್ತವೆ' ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭೂಸ್ವಾಧೀನ ಕಾಯ್ದೆಯಡಿ ಜಮೀನು ಸ್ಮಾಧೀನಪಡಿಸಿಕೊಂಡ ಮಾತ್ರಕ್ಕೆ 'ಬಿ ಖರಾಬ್' ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
'ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 67ರ(land records) ಪ್ರಕಾರ ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಒಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ ಅಥವಾ ಬಂಡಿ ದಾರಿ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳೆನಿಸಿವೆ' ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: Mini Tractor subsidy- ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಹಾಯಧನ ಪಡೆಯಲು ಇಲಾಖೆಯಿಂದ ಅರ್ಜಿ ಆಹ್ವಾನ!
'ಕಾಲುದಾರಿ, ಬಂಡಿ ದಾರಿ ಸ್ಥಳವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು 'ಬಿ ಖರಾಬ್' ಎಂದು ಗುರುತಿಸಲಾಗಿದ್ದು. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನೂ ನೀಡಲಾಗಿರುತ್ತದೆ' ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68ರ ಪ್ರಕಾರ ಬಿ ಖರಾಬ್'ನಲ್ಲಿ(revenue department) ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ ಬಳಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು' ಎಂದು ನ್ಯಾಯಪೀಠ ವಿವರಿಸಿದೆ.
ಇದನ್ನೂ ಓದಿ: Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು!
Village map download link-ನಿಮ್ಮ ಹಳ್ಳಿಯ ಬಂಡಿದಾರಿ ಮತ್ತು ಕಾಲುದಾರಿ ನಕ್ಷೆಯನ್ನು ಗುರುತಿಸುವ ನಕ್ಷೆಯನ್ನು ಡೌನ್ಲೋಡ್ ಮಾಡುವ ವಿಧಾನ:
ರೈತರು ತಮ್ಮ ಹಳ್ಳಿಯ ಬಂಡಿದಾರಿ ಮತ್ತು ಕಾಲುದಾರಿ ನಕ್ಷೆಯನ್ನು ಗುರುತಿಸುವ ನಕ್ಷೆಯನ್ನು ಮೊಬೈಲ್ ನಲ್ಲಿ ಹೇಗೆ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.
Step-1: ಮೊದಲಿಗೆ ಈ Village map download ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಂದಾಯ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣುವ "ಕಂದಾಯ ನಕ್ಷೆಗಳು" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: HESCOM Job application- ಹೆಸ್ಕಾಂ ನಿಂದ 338 ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ!
Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, cadastral maps ಎಂದು ಆಯ್ಕೆ ಮಾಡಿಕೊಂಡು "Pdf file" ವಿಭಾಗದಲ್ಲಿ ಕಾಣುವ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಕಂದಾಯ ನಕ್ಷೆ ಡೌನ್ಲೋಡ್ ಅಗುತ್ತದೆ.