Karnataka Jati Ganati-ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಅಧಿಕೃತ ಆದೇಶ ಪ್ರಕಟ!

September 20, 2025 | Siddesh
Karnataka Jati Ganati-ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಅಧಿಕೃತ ಆದೇಶ ಪ್ರಕಟ!
Share Now:

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ತೀರ್ವ ಚರ್ಚೆಯಲ್ಲಿರುವ ಜಾತಿಗಣತಿ ನಡೆಸುವ ಕುರಿತಂತೆ ಸಮೀಕ್ಷೆ ನಡೆಸಲು ರಾಜ್ಯ ಸರಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಸರಕಾರಿ ಶಾಲೆಯ ಶಿಕ್ಷಕರಿಂದ ಸಮೀಕ್ಷೆಯನ್ನು ನಡೆಸಲು ರಾಜ್ಯ ಸರಕಾರ ತಿರ್ಮಾನಿಸಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆಯನ್ನು ನಡೆಸಲು ರಾಜ್ಯ ಸರಕಾರವು ಅಧಿಕೃತವಾಗಿ ಅನುಮೋದನೆಯನ್ನು ನೀಡಿದ್ದು ಈ ಅಂಕಣದಲ್ಲಿ ಅಧಿಕೃತ ಆದೇಶದ ವಿವರವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bank Account KYC-ನಿಮ್ಮ ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಇ-ಕೆವೈಸಿ ಮಾಡಿಸಲು ಸೂಚನೆ!

ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಜಾತಿಗಣತಿ ಸಮೀಕ್ಷಾದಾರರಿಗೆ ತರಬೇತಿಯನ್ನು ಹಮ್ಮಿಕೊಳ್ಳುವುದರ ಬಗ್ಗೆ ಸೂಚನೆಯನ್ನು ನೀಡಲಾಗಿದ್ದು ಮುಂದುವರೆದು ಸಮೀಕ್ಷೆಯನ್ನು ನಡೆಸುವ ದಿನಾಂಕದ ಕುರಿತು ಪ್ರಸ್ತುತ ಅಧಿಕೃತ ಆದೇಶ ಹೊರಬಿದ್ದಿದೆ.

"ಸೆಪ್ಟೆಂಬರ್ 22" ರಿಂದ ಸಮೀಕ್ಷೆ ನಡೆಸಲು ಸೂಚನೆ:

ಸರಕಾರಿ ಶಾಲೆಯ ಶಿಕ್ಷಕರ ಮೂಲಕ ಮನೆ ಮನೆ ತೆರಳಿ ಅಗತ್ಯ ಮಾಹಿತಿಯನ್ನು ಪಡೆದು ಸಮೀಕ್ಷೆಯನ್ನು ನಡೆಸಲು ಸರಕಾರವು ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು ಆದೇಶದಲ್ಲಿ ದಿನಾಂಕ: 22 ಸೆಪ್ಟೆಂಬರ್ 2025 ರಿಂದ 07 ಅಕ್ಟೋಬರ್ 2025 ರವರೆಗೆ ಸಮೀಕ್ಷೆಯನ್ನು ನಡೆಸಲು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: HDFC Scholarship-HDFC ಬ್ಯಾಂಕ್ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್!

Karnataka Jati Ganati

ಇದನ್ನೂ ಓದಿ: Deepika Scholarship Scheme-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000/-ಸ್ಕಾಲರ್‌ಶಿಪ್‌!

ಆದೇಶದಲ್ಲಿ ವಿವರಿಸಿರುವ ಅಂಶಗಳ ವಿವರ ಹೀಗಿದೆ:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಜಾತಿಗಣತಿ ಕೈಗೊಳ್ಳಲು ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು ಈ ಆದೇಶದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿ ನಾಗರಿಕರ ಸಾಮಾಣಿಕ ಮತ್ತು ಶೈಕ್ಷಣೀಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸರ್ಕಾರದ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಇದರ ಜೊತೆಗೆ ಈ ಸಮೀಕ್ಷೆಯನ್ನು 22 ಸೆಪ್ಟೆಂಬರ್ 2025 ರಿಂದ 07 ಅಕ್ಟೋಬರ್ 2025 ರವರೆಗೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅವರಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಹಾಗೂ ಸಮೀಕ್ಶಾದಾರರಿಗೆ ಅಗತ್ಯ ತರಬೇತಿಯನ್ನು ಒದಗಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಹಾಗೂ ಸಾರ್ವಜನಿಕರನ್ನು ಸಮೀಕ್ಷಾ ಕಾರ್ಯದಲ್ಲಿ ಪೂರ್ಣವಾಗಿ ಭಾಗವಹಿಸಲು ಮತ್ತು ಈ ಸಮೀಕ್ಷೆ ಕುರಿತು ಅರಿವು ಮೂಡಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Samaja Kalyana Ilake-ಡಾ.ಬಾಬು ಜಗಜೀವನ ಚರ್ಮ ನಿಗಮದಿಂದ ವಸತಿ ಯೋಜನೆಯಡಿ ಅರ್ಜಿ ಆಹ್ವಾನ!

ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಉದ್ದೇಶವೇನು?

ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸುವ ಉದ್ದೇಶವು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳ ಒಟ್ಟಾರೆ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಉನ್ನತಿಗೆ ಸೂಕ್ತ ನೀತಿಗಳನ್ನು ರೂಪಿಸುವುದು. ಈ ಸಮೀಕ್ಷೆಯ ಮೂಲಕ ಜಾತಿಗಳ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಆದಾಯ, ಆರೋಗ್ಯ, ಮತ್ತು ಇತರ ಸಾಮಾಜಿಕ ಸೂಚಕಗಳ ಬಗ್ಗೆ ಡೇಟಾ ಸಂಗ್ರಹಿಸಲಾಗುತ್ತದೆ.

ಇದರಿಂದ ಸರ್ಕಾರಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ, ಕಲ್ಯಾಣ ಕಾರ್ಯಕ್ರಮಗಳು, ಮತ್ತು ಇತರ ಯೋಜನೆಗಳನ್ನು ಯೋಗ್ಯ ರೀತಿಯಲ್ಲಿ ಜಾರಿಗೊಳಿಸಲು ಸಹಾಯವಾಗುತ್ತದೆ. ಕರ್ನಾಟಕದಲ್ಲಿ, ಉದಾಹರಣೆಗೆ, 2015ರ ಜಾತಿಗಣತಿಯಂತಹ ಸಮೀಕ್ಷೆಗಳು (ಹಿಂದಿನ ಸರ್ಕಾರಗಳ ಅಡಿಯಲ್ಲಿ ನಡೆಸಲಾಗಿದ್ದು) ಸಾಮಾಜಿಕ ರಚನೆಯನ್ನು ತಿಳಿಯಲು ಮತ್ತು ಹಿಂದುಳಿದ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡಲು ಉದ್ದೇಶಿಸಿದವು.

ಆದರೆ, ಇಂತಹ ಸಮೀಕ್ಷೆಗಳ ಫಲಿತಾಂಶಗಳ ಬಗ್ಗೆ ರಾಜಕೀಯ ಚರ್ಚೆಗಳು ಮತ್ತು ವಿವಾದಗಳು ಉಂಟಾಗಿರುವುದರಿಂದ, ಫಲಿತಾಂಶಗಳ ಬಳಕೆ ಮತ್ತು ಅನುಷ್ಠಾನವು ಸಂಕೀರ್ಣವಾಗಿದೆ.

ಇದರ ಬಗ್ಗೆ ಇನ್ನು ಹೆಚ್ಚಿನ ಅಗತ್ಯ ಮಾಹಿತಿ ಅವಶ್ಯವಿದ್ದಲ್ಲಿ ಅಧಿಕೃತ ಸಹಾಯವಾಣಿ ಸಂಖ್ಯೆ- 1902

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: