Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsKEB Office: ಹೆಸ್ಕಾಂ ವಿದ್ಯುತ್ ಸರಬರಾಜು ಕಂಪನಿ ಕಚೇರಿಗೆ ಮೊಸಳೆ ತಂದು ಬಿಟ್ಟ ರೈತರು!

KEB Office: ಹೆಸ್ಕಾಂ ವಿದ್ಯುತ್ ಸರಬರಾಜು ಕಂಪನಿ ಕಚೇರಿಗೆ ಮೊಸಳೆ ತಂದು ಬಿಟ್ಟ ರೈತರು!

ಈ ಬಾರಿ ರಾಜ್ಯಾದ್ಯಂತ ಬೀಕರ ಮಳೆ ಕೊರತೆಯಿಂದಾಗ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ತೀವ್ರ ತೊಂದರೆಯಾಗಿದೆ. ನೀರಾವರಿ ಹೊಂದಿರುವ ರೈತರು ತಮ್ಮ ಬೆಳೆಗಳಿಗೆ ನೀರನ್ನು ಹಾಯಿಸಲು ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದೆ ಕಂಗೆಟ್ಟು ಹೋಗಿದ್ದಾರೆ.

ಪರಿಸ್ಥಿತಿಯ ಸೂಕ್ಷ್ಮತೆಯನ್ನು ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನಮುಟ್ಟುವಂತೆ ಮಾಡಲು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳದಲ್ಲಿ ರೈತರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (hescom) ಕಚೇರಿಗೆ ಮೊಸಳೆಯನ್ನು ತಂದು ಪ್ರತಿಭಟನೆ ನಡೆಸಿದ್ದಾರೆ.

ಹಗಲು ವೇಳೆಯಲ್ಲಿ ಸಮರ್ಪಕವಾಗಿ ಕರೆಂಟ್ ಕೊಡದೆ ರಾತ್ರಿ ವೇಳೆಯಲ್ಲಿ ಮಾತ್ರ ವಿದ್ಯುತ್ ನೀಡವ ಕ್ರಮದಿಂದ ಆಕ್ರೋಶಗೊಂಡ ಆ ಭಾಗದ ರೈತರು ಟ್ರಾಕ್ಟರ್ ನಲ್ಲಿ ರೋಣಿಹಾಳದ ವಿದ್ಯುತ್ ವಿತರಣಾ ಘಟಕಕ್ಕೆ ಮೊಸಳೆಯನ್ನು ತಂದು ಬಿಟ್ಟಿರುವ ಘಟನೆ ನಡೆದಿದೆ.

ಇದನ್ನೂ ಓದಿ: Sugarcane rate in karnataka-2023: ಕಬ್ಬು ಪೂರೈಕೆ ಮತ್ತು ದರ ಕುರಿತು ಪ್ರಕಟಣೆ ಹೊರಡಿಸಿದ ಶುಗರ್ ಪ್ಯಾಕ್ಟರಿಗಳು!

ರೈತರು ರಾತ್ರಿ ವೇಳೆಯಲ್ಲಿ ತಮ್ಮ ಜಮೀನಿನಲ್ಲಿ ನೀರು ಹಾಯಿಸುವಾಗ ಈ ಮೊಸಳೆಯು ಕಂಡುಬಂದಿದ್ದು ರಾತ್ರಿ ವೇಳೆಯಲ್ಲಿ ಬೆಳೆಗಳಿಗೆ ನೀರು ಬೀಡುವಾಗ ರೈತರು ಅನುಭವಿಸುವ ಸವಾಲುಗಳು ಸರಕಾರ ಮತ್ತು ಅಧಿಕಾರಿಗಳಿಗೂ ತಿಳಿಯಬೇಕು ಎಂದು ಈ ರೀತಿ ಪ್ರತಿಭಟಣೆ ಮಾಡಲಾಗಿತ್ತು ಎಂದು ರೈತರು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Bele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ಹಗಲಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರಾತ್ರಿ ವೇಳೆ ಪಂಪ್‌ ಚಾಲೂ ಮಾಡುವ ಸಲುವಾಗಿ ಹೊಲಗಳಿಗೆ ಹೋಗುವ ಅನಿವಾರ್ಯತೆಯಿದೆ. ಈ ವೇಳೆ ಕಾಡುಪ್ರಾಣಿಗಳು ಮತ್ತು ಹಾವುಗಳ ಕಾಟದಿಂದ ಆತಂಕ ಕೃಷಿಕರನ್ನು ಕಾಡುತ್ತಿದೆ. 

ಕಳೆದ ವಾರ ತಡರಾತ್ರಿ ರೈತರೊಬ್ಬರು ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ ತಮ್ಮ ಜಮೀನಿನಲ್ಲಿ ಮೊಸಳೆ ಇರುವುದನ್ನು ನೋಡಿದ್ದಾರೆ. ನಂತರ ಆತ ಕೂಡಲೇ ಗ್ರಾಮಸ್ಥರಿಗೆ ಕರೆ ಮಾಡಿದ್ದು, ಮೊಸಳೆಯನ್ನು ಕಟ್ಟಿ ಹೆಸ್ಕಾಂ ಕಚೇರಿಗೆ ಕೊಂಡೊಯ್ದು ತಮಗಿರುವ ಅಪಾಯದ ಕುರಿತು ಈ ಮಾರ್ಗ ಅನುಸರಿಸಿ ಮನದಟ್ಟು ಮಾಡಿದ್ದಾರೆ. 

ಈ ಘಟನೆ ಜರುಗಿದ ಬಳಿಕ ತಮ್ಮ ಕಚೇರಿ ಎದುರು ‘ಅಸಾಮಾನ್ಯ ಅತಿಥಿ’ಯನ್ನು ಕಂಡು ಗಾಬರಿಗೊಂಡ ಹೆಸ್ಕಾಂ ಅಧಿಕಾರಿಗಳು, ಪೊಲೀಸರು ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಗಲಿನಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ನಂತರ ಅರಣ್ಯಾಧಿಕಾರಿಗಳು ಮೊಸಳೆಯನ್ನು ಆಲಮಟ್ಟಿ ಅಣೆಕಟ್ಟೆ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಇನ್ನಾದರು ಸರಕಾರ ಪರಿಸ್ಥಿತಿಯ ಗಂಬೀರತೆಯನ್ನು ಅರಿತು ಶೀಘ್ರದಲ್ಲಿ ಮತ್ತು ತ್ವರಿತವಾಗಿ ವಿದ್ಯುತ್ ಅಭಾವಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ರೈತರ ಬೆಂಬಲಕ್ಕೆ ನಿಲ್ಲಬೇಕು.

ಈ ಕುರಿತು ಘಟನೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ> click here

ಇದನ್ನೂ ಓದಿ: Rabi MSP price- 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

Most Popular

Latest Articles

Related Articles