Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsBele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ...

Bele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ಆತ್ಮೀಯ ರೈತ ಬಾಂಧವರೇ, ಇಂದು ಈ ಅಂಕಣದಲ್ಲಿ 2019 ನೇ ಸಾಲಿನಿಂದ 2023ರ ವರೆಗೆ ಬೆಳೆ ಹಾನಿ ಪರಿಹಾರದ ಹಣ ಹಳ್ಳಿವಾರು ಎಷ್ಟು ಜಮಾ ಅಗಿದೆ? ಮತ್ತು ಬೆಳೆ ಹಾನಿ ಪರಿಹಾರದ ಅರ್ಜಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳಬವುದು ಎಂದು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇವೆ.

ಅನೇಕ ಜನ ರೈತರಿಗೆ ಬೆಳೆ ಹಾನಿ ಪರಿಹಾರ ಅರ್ಜಿಯು ಯಾವ ಹಂತದಲ್ಲಿದೆ ಅಥವಾ ಪರಿಹಾರದ ಹಣ ಜಮಾ ಅಗಿದ್ದರೆ ಎಷ್ಟು ಜಮಾ ಅಗಿದೆ ಯಾವ ದಿನಾಂಕ,ಬ್ಯಾಂಕ್, ಸರ್ವೆ ನಂಬರ್ ಇತ್ಯಾದಿ ಮಾಹಿತಿಯನ್ನು ಎಲ್ಲಿ ಕೇಳಿ ಪಡೆಯಬೇಕು ಎನ್ನುವ ಮಾಹಿತಿ ಇರುವುದಿಲ್ಲ. ಈ ಕಾರಣದಿಂದಾಗಿ ಈ ಅಂಕಣದಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ.

Bele parihara- ಬೆಳೆ ಹಾನಿ ಪರಿಹಾರ ಹಣ ವರ್ಗಾವಣೆ ವಿಧಾನ:

ಉದಾಹರಣೆಗೆ ಕಳೆದ ವರ್ಷ ಅಂದರೆ 2022ರಲ್ಲಿ ಅತೀ ಹೆಚ್ಚು ಮಳೆ ಅಗಿ ಅನೇಕ ರೈತರ ಬೆಳೆಯು ನೀರಿನಲ್ಲಿ ಮುಳುಗಿ ಬೆಳೆ ನಾಶವಾಗಿತ್ತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ರೈತರ ಅರ್ಜಿ ಪಡೆದು ಆನ್ಲೈನ್ ನಲ್ಲಿ ದಾಖಲಿಸಲಾಗಿತ್ತು.

ಅಧಿಕಾರಿಗಳು ಬೆಳೆ ಹಾನಿ ಪರಿಹಾರದ ರೈತರ ಅರ್ಜಿಯನ್ನು ರಾಜ್ಯ ಸರಕಾರದ parihara ತಂತ್ರಾಂಶದಲ್ಲಿ ದಾಖಲಿಸುತ್ತಾರ‍ೆ. ರಾಜ್ಯ ಸರಕಾರದಿಂದ ಜಿಲ್ಲಾ ಮಟ್ಟಕ್ಕೆ ಅನುದಾನ ಬಿಡುಗಡೆಯಾದಾಗ NDRF ಮಾರ್ಗಸೂಚಿ ಪ್ರಕಾರ ಈ ತಂತ್ರಾಂಶದಲ್ಲಿ ದಾಖಲಿಸಿರುವ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಬೆಳೆ ಹಾನಿ ಪರಿಹಾರ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: Rabi MSP price- 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

Bele parihara status-2023: ಬೆಳೆ ಹಾನಿ ಪರಿಹಾರ ಯಾವ ವರ್ಷ ಎಷ್ಟು ಜಮಾ ಅಗಿದೆ ಎಂದು ಹೇಗೆ ತಿಳಿಯುವುದು?

ರೈತರು ಬೆಳೆ ಹಾನಿ ಪರಿಹಾರ ಯಾವ ವರ್ಷ ಎಷ್ಟು ಜಮಾ ಅಗಿದೆ ಮತ್ತು ಬೆಳೆ ಪರಿಹಾರ ಯಾವೆಲ್ಲ ಸಾಲಿನಲ್ಲಿ ಬ್ಯಾಂಕ್ ಖಾತೆಗೆ ವರ್ಗಾವಣೆ ಅಗಿದೆ ಎಂದು ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬವುದು.

Step-1: ಮೊದಲಿಗೆ ನಿಮ್ಮ ಮೊಬೈಲ್ ಮೂಲಕ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ> bele parihara status check link ರಾಜ್ಯ ಸರಕಾರದ ಅಧಿಕೃತ ಪರಿಹಾರ ವೆಬ್ಸೈಟ್ ಭೇಟಿ ಮಾಡಬೇಕು. 

Step-2: ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ವರ್ಷ, ಹಂಗಾಮು, ಹಾನಿ ವಿಧಾನ ಆಯ್ಕೆ ಮಾಡಿಕೊಂಡು “Get Report” ಮೇಲೆ ಕಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಎಷ್ಟು ಜನರಿಗೆ ಬೆಳೆ ಹಾನಿ ಪರಿಹಾರದ ಹಣ ಜಮಾ ಅಗಿದೆ ಎಂದು ತೋರಿಸುತ್ತದೆ.

Step-3: ಬಳಿಕ ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ ಅದರ ಮುಂದೆ ಕೊನೆಯ ಕಾಲಂ ನಲ್ಲಿ ಕಾಣುವ “View Status” ಬಟನ್ ಮೇಲೆ ಕ್ಲಿಕ್ ಮಾಡಿದರೆ.

ನಿಮ್ಮ ಯಾವ ದಿನಾಂಕದಂದು ಬೆಳೆ ಪರಿಹಾರ ಜಮಾ ಅಗಿದೆ. ಎಷ್ಟು ಹಣ? ಬ್ಯಾಂಕ್ ಹೆಸರು, ಸರ್ವೆ ನಂಬರ್, ಜಮೀನಿನ ವಿಸ್ತೀರ್ಣ, ಹಾನಿಯದ ಬೆಳೆಯ ಹೆಸರು ಇತರೆ ಸಂಪೂರ್ಣ ಮಾಹಿತಿ ತೋರಿಸುತ್ತದೆ.

ಇದನ್ನೂ ಓದಿ: Cancelled ration card list-ಅಕ್ಟೋಬರ್ ತಿಂಗಳ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಚೆಕ್ ಮಾಡಿ.

ಗಮನಿಸಿ: ಇಲ್ಲಿ ನೀವು Select Year ಆಯ್ಕೆಯಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಂಡು 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ನಿಮಗೆ ಜಮಾ ಅಗಿದೆ ಎಂದು ತಿಳಿದುಕೊಳ್ಳಬವುದು.

Crop loss application- ಬೆಳೆ ಪರಿಹಾರ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://parihara.karnataka.gov.in ಆಧಾರ್ ಸಂಖ್ಯೆ ಆಯ್ಕೆ ಮುಂದೆ ಟಿಕ್ ಮಾಡಿ “Calamity Type”, “ವರ್ಷ” ಆಯ್ಕೆ ಮಾಡಿಕೊಂಡು ನಂತರ ಅರ್ಜಿದಾರರ “ಆಧಾರ್ ಸಂಖ್ಯೆ/Aadhar Number” ಅನ್ನು ಹಾಕಿ ಕ್ಯಾಪ್ಚಾ/Captcha ನಮೂದಿಸಿ “ವಿವರವನ್ನು ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಸ್ಥಿತಿ ತೋರಿಸುತ್ತದೆ.

ಇದನ್ನೂ ಓದಿ: PM kisan 15th installment- ಪಿ ಎಮ್ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾವಾಗ ಬರಲಿದೆ? ಈ ಫಲಾನುಭವಿಗಳಿಗೆ ಮಾತ್ರ ಬರಲಿದೆ 15ನೇ ಕಂತಿನ ಹಣ!

ಇದರ ಜೊತೆಗೆ ಬೆಳೆ ಪರಿಹಾರದ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಈ ತಂತ್ರಾಂಶದ ಮುಖಪುಟ ಭೇಟಿ ಮಾಡಿ.

ಈ ವರ್ಷ ಬರ ಪರಿಹಾರ ಪಡೆಯಲು FID ನಂಬರ್ ತಪ್ಪದೇ ಮಾಡಿಸಿಕೊಳ್ಳಿ:

ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಇಲಾಖೆಯಿಂದ ಈಗಾಗಲೇ ಈ ಕುರಿತು ಪ್ರಕಟಣೆಗಳನ್ನು ಹೊರಡಿಸಿದ್ದು ರೈತರು ಬರ ಪರಿಹಾರವನ್ನು ಪಡೆಯಲು FID ನಂಬರ್ ಹೊಂದಿರುವುದು ಕಡ್ಡಾಯ ಮಾಡಲಾಗಿರುತ್ತದೆ. 

ಈ ಸಂಬಂಧ FID ನಂಬರ್ ಮಾಡಿಕೊಳ್ಳದ ರೈತರು ನಿಮ್ಮ ಹತ್ತಿರದ ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ/ಉತಾರ್/RTC ಯ ಜೆರಾಕ್ಸ್ ಪ್ರತಿಯನ್ನು ಒದಗಿಸಿ FID ಮಾಡಿಕೊಳ್ಳ, ಈಗಾಗಲೇ FID ಹೊಂದಿರುವ ರೈತರು ನಿಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್ ಗಳನ್ನು FID ನಂಬರ್ ಗೆ ಸೇರಿಸಿಕೊಳ್ಳಿ.

ಇದನ್ನೂ ಓದಿ: Gruhalakshmi latest Update- ಈ ವರ್ಗದವರಿಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಬರಲಿದೆ!

Most Popular

Latest Articles

- Advertisment -

Related Articles