Last updated on September 30th, 2024 at 02:37 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:18-10-2023 ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ 2024-25 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಅಧಿಕೃತ ಅನುಮೋದನೆಯನ್ನು ನೀಡಲಾಗಿದೆ.
ಇದರನ್ವಯ ದೇಶ ವ್ಯಾಪ್ತಿ ಅತೀ ಹೆಚ್ಚು ಬೆಳೆಯುವ ಆರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಏರಿಕೆ ಮಾಡಲಾಗಿದ್ದು, ಗೋಧಿ, ಬಾರ್ಲಿ, ಕಡಲೆ, ಸಾಸಿವೆ, ಚನ್ನಂಗಿ ಬೇಳೆ/ಮಸೂರ್(Lentil), ಕುಸುಬೆ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ.
ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಚಿವ ಸಂಪುಟ ಸಭೆ ಅನುಮೋದನೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಚನ್ನಂಗಿ ಬೇಳೆ/ಮಸೂರ್(Lentil) ಪ್ರತಿ ಕ್ವಿಂಟಾಲ್ ಗೆ ಕನಿಷ್ಟ ಬೆಂಬಲ ಬೆಲೆ 425 ರೂ. ಹೆಚ್ಚಳ ಮಾಡಿದ್ದು, ಒಟ್ಟು ಒಂದು ಕ್ವಿಂಟಾಲ್ ಗೆ 6,425 ರೂ. ನಿಗದಿಪಡಿಸಲಾಗಿದೆ. ಇದೆ ರೀತಿ ಗೋಧಿಗೆ 150 ರೂ. ಏರಿಕೆ ಮಾಡುವುದರ ಮೂಲಕ ಪ್ರತಿ ಕ್ವಿಂಟಾಲ್ ಗೆ 2,275 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Cancelled ration card list-ಅಕ್ಟೋಬರ್ ತಿಂಗಳ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಚೆಕ್ ಮಾಡಿ.
ಕಡಲೆ 105 ರೂ. ಹೆಚ್ಚಳ ಮಾಡಿದ್ದು ಇದರಂತೆ ಪ್ರತಿ ಕ್ವಿಂಟಾಲ್ ಗೆ 5,440 ರೂ. ನಿಗದಿಪಡಿಸಲಾಗಿದೆ. ಬಾರ್ಲಿಗೆ 115 ರೂ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಾಲ್ ಗೆ 1,850 ರೂ. ನಿಗದಿಪಡಿಸಲಾಗಿದೆ. ಸಾಸಿವೆಗೆ 200 ರೂ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಪ್ರತಿ ಕ್ವಿಂಟಾಲ್ ಗೆ 5,650 ರೂ. ನಿಗದಿ ಮಾಡಲಾಗಿದೆ. ಕುಸುಬೆಗೆ 150 ರೂ. ಹೆಚ್ಚಳ ಮಾಡುವುದರೊಂದಿಗೆ ಒಂದು ಕ್ವಿಂಟಾಲ್ ಗೆ 5,800 ರೂ. ನಿಗದಿ ಮಾಡಲಾಗಿದೆ.
MSP price list- 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆಗಳ ಪಟ್ಟಿ(ರೂ, ಪ್ರತಿ ಕ್ವಿಂಟಲ್‌ಗೆ)
ಬೆಳೆ | 2023-24 | 2024-25 | ಹೆಚ್ಚಳ |
ಗೋಧಿ | 2125 | 2275 | 150 |
ಬಾರ್ಲಿ | 1735 | 1850 | 115 |
ಕಡಲೆ | 5335 | 5440 | 105 |
ಮಸೂರ್(Lentil) | 6000 | 6425 | 425 |
ಸಾಸಿವೆ | 5450 | 5650 | 200 |
ಕುಸುಬೆ | 5650 | 5800 | 150 |
ಇದನ್ನೂ ಓದಿ: PM kisan 15th installment- ಪಿ ಎಮ್ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾವಾಗ ಬರಲಿದೆ? ಈ ಫಲಾನುಭವಿಗಳಿಗೆ ಮಾತ್ರ ಬರಲಿದೆ 15ನೇ ಕಂತಿನ ಹಣ!
ಎಣ್ಣೆ ಕಾಳು ಮತ್ತು ದ್ವಿದಳ ದಾನ್ಯ ಬೆಳೆಯುವುದನ್ನು ಉತೇಜಿಸಲು ಕೇಂದ್ರದಿಂದ ಯೋಜನೆಗಳು:
ಕೇಂದ್ರ ಸರಕಾರವು ಎಣ್ಣೆ ಕಾಳು ಮತ್ತು ದ್ವಿದಳ ದಾನ್ಯ ಬೆಳೆಯುವುದನ್ನು ರೈತರಿಗೆ ಉತೇಜನ ನೀಡುವ ದೇಸೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಆಹಾರ ಭದ್ರತೆಯನ್ನು ಹೆಚ್ಚಿಸಲು, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಣ್ಣೆಕಾಳುಗಳು, ಬೇಳೆಕಾಳುಗಳು ಮತ್ತು ಶ್ರೀ ಅನ್ನ/ರಾಗಿ ಬೆಳೆಗಳ ವೈವಿಧ್ಯೀಕರಣವನ್ನು ಸರ್ಕಾರವು ಉತ್ತೇಜಿಸುತ್ತಿದ್ದು.
ಬೆಲೆ ನೀತಿಯ ಜೊತೆಗೆ, ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (NFSM), ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ (PMKSY), ಮತ್ತು ಎಣ್ಣೆಬೀಜಗಳು ಮತ್ತು ಎಣ್ಣೆ ತಾಳೆ ರಾಷ್ಟ್ರೀಯ ಮಿಷನ್ (NMOOP) ನಂತಹ ವಿವಿಧ ಯೋಜನೆಗಳ ಮೂಲಕ ರೈತರಿಗೆ ಬೆಳೆ ವಿಸ್ತರಣೆಗೆ ಅರ್ಥಿಕ ಸಹಾಯಧನ ನೀಡುತ್ತಿದೆ.
ಎಣ್ಣೆ ತಾಳೆ ರಾಷ್ಟ್ರೀಯ ಮಿಷನ್ (NMOOP) ಈ ಯೋಜನೆಯ ಅರ್ಥಿಕ ಸಹಾಯಧನ ಸೌಲಭ್ಯ ಪಡೆಯಲು ರೈತರು ತಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ.
ಇದನ್ನೂ ಓದಿ: Gruhalakshmi latest Update- ಈ ವರ್ಗದವರಿಗೂ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000 ಬರಲಿದೆ!
Kisan rin portal- ಶೀಘ್ರವಾಗಿ ಸಾಲ ಮತ್ತು ಸಾಲಕ್ಕೆ ಬಡ್ಡಿ ಸಹಾಯಧನ ವಿತರಣೆಗೆ ಕಿಸಾನ್ ರಿನ್ ಪೋರ್ಟಲ್ (KRP):
ಇದಲ್ಲದೆ, ಕಳೆದ ತಿಂಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯ ಪ್ರಯೋಜನಗಳನ್ನು ರಾಷ್ಟ್ರದಾದ್ಯಂತದ ಪ್ರತಿಯೊಬ್ಬ ರೈತರಿಗೆ ವಿಸ್ತರಿಸಲು, ಸರ್ಕಾರವು ಕಿಸಾನ್ ರಿನ್ ಪೋರ್ಟಲ್ (KRP), ಕೆಸಿಸಿ ಘರ್ ಘರ್ ಅಭಿಯಾನ್ ವನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ರೈತರು ಕೃಷಿಯ ಉಪಕಸುಬುಗಳನ್ನು ಪ್ರಾರಂಭಿಸಲು ಶೀಘ್ರವಾಗಿ ಸಾಲ ಮತ್ತು ಸಾಲಕ್ಕೆ ಬಡ್ಡಿ ಸಹಾಯಧನವನ್ನು ಪಡೆಯಬವುದಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ> click here
ಇದನ್ನೂ ಓದಿ: PMUY Yojana- ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಅರ್ಜಿ ಆಹ್ವಾನ!