kharab land details- ಖರಾಬು ಜಮೀನು ಎಂದರೇನು? ಅ ಮತ್ತು ಬ ಖರಾಬ ವ್ಯತ್ಯಾಸಗಳೇನು?

ಕೃಷಿ ಜಮೀನು ಹೊಂದಿರುವ ಪ್ರತಿ ಒಬ್ಬ ಕೃಷಿಕರು ಈ ಮಾಹಿತಿಯನ್ನು ತಪ್ಪದೇ ತಿಳಿದಿರಬೇಕು, ಬಹಳಷ್ಟು ಜನರಿಗೆ ತಮ್ಮ ಜಮೀನಿನ ದಾಖಲಾತಿಗಳ ಕುರಿತು ಸ್ಪಷ್ಟ ಮಾಹಿತಿ ಇರುವುದಿಲ್ಲ ಇಂದು ಈ ಲೇಖನದಲ್ಲಿ ಪಹಣಿ/ಉತಾರ್/RTC ಅಲ್ಲಿ ನಮೂದಿಸಿರುವ ಖರಾಬು(A kharab/B kharab)ಜಮೀನಿನ ಕುರಿತು ವಿವರಿಸಲಾಗಿದೆ.

kharab land details- ಖರಾಬು ಜಮೀನು ಎಂದರೇನು? ಅ ಮತ್ತು ಬ ಖರಾಬ ವ್ಯತ್ಯಾಸಗಳೇನು?
kharab land details-2024

ಕೃಷಿ ಜಮೀನು ಹೊಂದಿರುವ ಪ್ರತಿ ಒಬ್ಬ ಕೃಷಿಕರು ಈ ಮಾಹಿತಿಯನ್ನು ತಪ್ಪದೇ ತಿಳಿದಿರಬೇಕು, ಬಹಳಷ್ಟು ಜನರಿಗೆ ತಮ್ಮ ಜಮೀನಿನ ದಾಖಲಾತಿಗಳ ಕುರಿತು ಸ್ಪಷ್ಟ ಮಾಹಿತಿ ಇರುವುದಿಲ್ಲ ಇಂದು ಈ ಲೇಖನದಲ್ಲಿ ಪಹಣಿ/ಉತಾರ್/RTC ಅಲ್ಲಿ ನಮೂದಿಸಿರುವ ಖರಾಬು(A kharab/B kharab)ಜಮೀನಿನ ಕುರಿತು ವಿವರಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಎಲ್ಲಾ ಬಗ್ಗೆಯ ಜಮೀನಿನ ಮೂಲ ದಾಖಲಾತಿಗಳ ನಿರ್ವಹಣೆಯನ್ನು ಕಂದಾಯ ಇಲಾಖೆಯಿಂದ(Karnataka revenu department) ಮಾಡಲಾಗುತ್ತದೆ ಇಲ್ಲಿ ದೊರೆಯುವ ದಾಖಲಾತಿಗಳಲ್ಲಿನ ಕೆಲವೊಂದು ಮಾಹಿತಿಯು ಸುಲಭವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟಕರ ಇದರಲ್ಲಿ ಒಂದಾದ ಖರಾಬು ಜಮೀನ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

ಜಮೀನಿನ ದಾಖಲೆಯನ್ನು ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆ, ಒಂದು ಕೃಷಿಗೆ ಯೋಗ್ಯವಾದ ಜಮೀನು ಮತ್ತೊಂದು ಕೃಷಿಗೆ ಯೋಗ್ಯವಲ್ಲದ ಜಮೀನು ಇದನ್ನು ಖರಾಬು ಭೂಮಿ ಎಂದು ಕರೆಯುತ್ತೆವೆ. ಯಾವುದೇ ಜಮೀನನ್ನು ಖರೀದಿ ಮಾಡುವ ಮುಂಚಿತವಾಗಿ ಆರ್ ಟಿ ಸಿ/ಉತಾರ್/ಪಹಣಿ ಇತರೆ ಜಮೀನಿನ ದಾಖಲೆಗಳನ್ನು ಪರೀಶಿಲಿಸಿದಾಗ ಅದರಲ್ಲಿ ಕೃಷಿ ಯೋಗ್ಯವಾದ ಜಮೀನಿನ ವಿಸ್ತೀರ್ಣ ಮತ್ತು ಕೃಷಿಗೆ ಯೋಗ್ಯವಲ್ಲದ ಜಮೀನಿನ(ಖರಾಬು) ವಿಸ್ತೀರ್ಣ ಪ್ರತ್ಯೇಕವಾಗಿ ನಮೂದಿಸಲಾಗಿರುತ್ತದೆ.

ಇದನ್ನೂ ಓದಿ: Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

kharab land details- ಅ ಮತ್ತು ಬ ಖರಾಬ ವ್ಯತ್ಯಾಸಗಳೇನು?

ಕೃಷಿಗೆ ಯೋಗ್ಯವಾಗಿಲ್ಲದಿರುವ ಭೂಮಿಯನ್ನು ಖರಾಬ ಜಮೀನು ಎನ್ನುತ್ತಾರ‍ೆ. ಖರಾಬ ಜಮೀನನ್ನು ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆ 1)ಅ(A) ಖರಾಬ 2)ಬ (B)ಖರಾಬ ಎಂದು.


ಮೊದಲಿಗೆ ಅ ಖರಾಬ ಬಗ್ಗೆ ತಿಳಿಯೋಣ ಇದು ಕೂಡಾ ಕೃಷಿಗೆ ಯೋಗ್ಯವಲ್ಲದ ಜಮೀನು, ಹಿಂದಿನ ಕಾಲದಲ್ಲಿ  ಸರ್ವೇ ಮಾಡುವಾಗ ಯಾವ ಜಮೀನಲ್ಲಿ ವ್ಯವಸಾಯ ಮಾಡುವುದಕ್ಕಾಗುವುದಿಲ್ಲವೊ ಅಂತಾ ಜಮೀನನ್ನು ಗುರುತಿಸಿ ಅ ಖರಾಬ ಎಂದು ನಮೂದಿಸಲಾಗಿರುತ್ತದೆ. ಉದಾಹರಣೆಗೆ: ಹಳ್ಳಗಳಿರುವ ಜಾಗ, ಕಲ್ಲು ಪ್ರದೇಶ,ಮನೆಗಳು ಕಟ್ಟಿರುವ ಜಾಗ.

ಎರಡನೇಯದು ಬ ಖರಾಬ ಇದು ಸಹ ಕೃಷಿಗೆ ಯೋಗ್ಯವಲ್ಲದ ಜಮೀನಾಗಿರುತ್ತದೆ. ಅದರೆ ಜಮೀನಿನ ಹಕ್ಕಿಗೆ ಸಂಬಂದಿಸಿದಂತೆ ಇದು ಅ ಖರಾಬನಂತೆ ಪ್ರೈವೇಟ್‌ಒನರ್‌ಗಳಿಗೆ ಸೇರಿರುವುದಿಲ್ಲ, ಬದಲಾಗಿ ಸರ್ಕಾರಕ್ಕೆ ಸೇರಿರುತ್ತದೆ. 

ಇದನ್ನೂ ಓದಿ: land registration- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

ಸಾರ್ವಜನಿಕರ ಬಳಕೆ ಸಲುವಾಗಿ ಈ ಜಮೀನು ಸರ್ಕಾರದ ಹಕ್ಕಿನಲಿರುತ್ತದೆ. ಉದಾಹರಣೆಗೆ: ಒಂದು ಜಮೀನಿಂದ ಇನ್ನೊಂದು ಜಮೀನಿಗೆ ಹೋಗುವಂತಹ ಕಾಲು ದಾರಿ, ಬಂಡಿ ದಾರಿ, ನಾಲಾ, ಎಲ್ಲೆಲ್ಲಿ ನೀರು ಹರಿಯುವಂತಾ ಜಾಗ, ಗೋಮಾಳ,ರುದ್ರಭೂಮಿ, ಸರಕಾರಕ್ಕೆ ಸೇರಿದ ಎಲ್ಲಾ ಜಮೀನು ಬ ಖರಾಬಿನಲ್ಲಿ ಬರುತ್ತದೆ. ಬ ಖರಾಬ ಜಮೀನನ್ನು ಸರ್ಕಾರದವರೆ ಮಾರಾಟ ಮಾಡಿದಲ್ಲಿ ನೀವು ಆ ಜಮೀನನ್ನು ಖರೀದಿ ಮಾಡಿ ಪ್ರೈವೆಟಾಗಿ ಬದಲಾಯಿಸಬವುದಾಗಿದೆ. 

ಇದನ್ನೂ ಓದಿ: Bele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.