Kharif Crop Survey-ರೈತರೇ ಸ್ವಂತ ಬೆಳೆ ವಿವರ ದಾಖಲಿಸಲು ಅಪ್ಲಿಕೇಶನ್ ಬಿಡುಗಡೆ!

July 29, 2025 | Siddesh
Kharif Crop Survey-ರೈತರೇ ಸ್ವಂತ ಬೆಳೆ ವಿವರ ದಾಖಲಿಸಲು ಅಪ್ಲಿಕೇಶನ್ ಬಿಡುಗಡೆ!
Share Now:

ರಾಜ್ಯದ್ಯಂತ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಿದ್ದು ಕೃಷಿಕರು(Farmers) ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಲೆಯ ಮಾಹಿತಿಯನ್ನು(Farmer Crop Survey App) ಖುದ್ದು ತಮ್ಮ ಮೊಬೈಲ್ ಮೂಲಕ ನಿಖರವಾಗಿ ದಾಖಲಿಸಲು ಕೃಷಿ ಇಲಾಖೆಯಿಂದ(Karnataka Agriculture Department)ಬೆಳೆ ಸಮೀಕ್ಷೆ ರೈತರ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೈ ಸ್ಟೋರ್ ನಲ್ಲಿ ಬಿಡುಗಡೆಗೊಳಿಸಿದೆ.

ಇಂದಿನ ಈ ಲೇಖನದಲ್ಲಿ ರೈತರು ಬೆಳೆ ಸಮೀಕ್ಷೆ(Crop Survey Mobile App)ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಬೆಳೆ ಮಾಹಿತಿಯನ್ನು ಅಪ್ಲೋಡ್ ಮಾಡುವ ವಿಧಾನ ಹೇಗೆ? ಇದರಿಂದ ರೈತರಿಗೆ ಅಗುವ ಪ್ರಯೋಜನಗಳೇನು? ಬೆಳೆ ಸಮೀಕ್ಷೆ ಮಾಹಿತಿಯನ್ನು ಯಾವೆಲ್ಲ ಯೋಜನೆಯಡಿ ಸೌಲಭ್ಯವನ್ನು ಒದಗಿಸಲು ಬಳಕೆ ಮಾಡಿಕೊಳ್ಳಲಾಗುತ್ತದೆ? ಈ ಕುರಿತು ಸಂಪೂರ್ಣ ವಿವರಣೆಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Fertilizer Shortage-ರಾಜ್ಯದಲ್ಲಿ ರಸಗೊಬ್ಬರ ಕೊರತೆ ಕೃಷಿ ಇಲಾಖೆಯಿಂದ ನೂತನ ಪ್ರಕಟಣೆ!

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ರೈತರಿಗೆ ಸ್ವಂತವಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು 'ಮುಂಗಾರು ಬೆಳೆ ಸಮೀಕ್ಷೆ-2025/Kharif Crop Survey Application' ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಈ ಜಿಪಿಎಸ್ ಆಧಾರಿತ ಆಪ್ ರೈತರಿಗೆ ತಮ್ಮ ಜಮೀನಿನ ಬೆಳೆ ವಿವರವನ್ನು ದಾಖಲಿಸಲು ನೆರವು ನೀಡುತ್ತದೆ. ಈ ಆಪ್ಲಿಕೇಶನ್ ಮೂಲಕ ಬೆಳೆ ಮಾಹಿತಿಯನ್ನು ಸುಲಭವಾಗಿ, ಸಕಾಲಿಕವಾಗಿ ದಾಖಲಿಸಬಹುದು.

What Is Crop Survey-ಏನಿದು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್? ಹೇಗೆ ಕಾರ್ಯನಿರ್ವಹಿಸುತ್ತದೆ?:

ಕೃಷಿ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ಬೆಳೆ ಸಮೀಕ್ಷೆ ಆಪ್(Bele Samikshe App), ರೈತರಿಗೆ ತಮ್ಮ ಜಮೀನಿನ ಬೆಳೆ ವಿವರಗಳನ್ನು ಸ್ವತಃ ದಾಖಲಿಸುವ ಅವಕಾಶವನ್ನು ಒದಗಿಸುತ್ತದೆ. ಈ ಆಪ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಮುಂಗಾರು, ಹಿಂಗಾರು, ಮತ್ತು ಬೇಸಿಗೆ ಹಂಗಾಮಗಳಿಗೆ ಬೆಳೆ ಮಾಹಿತಿಯನ್ನು ದಾಖಲಿಸಲು ಬಳಸಲಾಗುತ್ತದೆ. ಈ ಆಪ್ ರೈತರಿಗೆ ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬೆಳೆ ಮಾಹಿತಿಯನ್ನು ದಾಖಲಿಸಬಹುದು.

ರೈತರು ತಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಬಳಿಕ ತಮ್ಮ ಜಮೀನಿನ ಸರ್ವೆ ನಂಬರ್ ವಿವರವನ್ನು ಡೌನ್ಲೋಡ್ ಮಾಡಿಕೊಂಡು ಇದಾದ ಬಳಿಕ ಆ ಸರ್ವೆ ನಂಬರಿನ ಜಮೀನಿನ ತಾಕನ್ನು ಭೇಟಿ ಮಾಡಿ ಬೆಳೆಯ ಜಿಪಿಎಸ್ ಆಧಾರಿತ ಪೋಟೋ ವನ್ನು ತೆಗೆದು ಬಳಿಕ ಬೆಳೆ ಹೆಸರು,ಜಮೀನಿನ ವಿಸ್ತೀರ್ಣ ಮತ್ತು ಮಾಲೀಕರ ವಿವರವನ್ನು ಅಪ್ಲೋಡ್ ಮಾಡಬೇಕು.

ಇದನ್ನೂ ಓದಿ: Urea Usage-ಯೂರಿಯಾ ಬಳಕೆ ಮಾಡುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

Crop Survey App User Manual--ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಳಸುವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಅಧಿಕೃತ "ಮುಂಗಾರು ರೈತರ ಬೆಳೆ ಸಮೀಕ್ಷೆ 2025" ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ದಾಖಲಿಸಬಹುದು.

Step-1: ಇಲ್ಲಿ ಕ್ಲಿಕ್ "Crop Survey App Download Link" ಮಾಡಿ ಗೂಗಲ್ ಪ್ಲೈ ಸ್ಟೋರ್ ಭೇಟಿ ಮಾಡಿ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ದೃಡೀಕರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಮತ್ತು OTP ಅನ್ನು ನಮೂದಿಸಿ ನಿಮ್ಮ ವೈಯಕ್ತಿಕ ವಿವರವನ್ನು ಖಚಿತಪಡಿಸಿ ಅಪ್ಲಿಕೇಶನ್ ಅನ್ನು ಲಾಗಿನ್ ಅಗಬೇಕು.

Step-3: ತದನಂತರ ನಿಮ್ಮ ಸರ್ವೆ ನಂಬರ್ ವಿವರವನ್ನು ಡೌನ್ಲೋಡ್ ಮಾಡಿಕೊಂಡು ಬಳಿಕ ನಿಮ್ಮ ಜಮೀನನ್ನು ಭೇಟಿ ಮಾಡಿ ಜಿಪಿಎಸ್ ಆಧಾರಿತ ಬೆಳೆಯ ಪೋಟೋ ಮತ್ತು ಬೆಳೆ ಮಾಹಿತಿ ಮತ್ತು ವಿಸ್ತೀರ್ಣದ ವಿವರವನ್ನು ದಾಖಲಿಸಿ "ವಿವರ ಉಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಬೆಳೆ ಪೋಟೋ ತೆಗೆದು ವಿವರವನ್ನು ದಾಖಲಿಸಿದ ಬಳಿಕ ಇಂಟರ್ ನೆಟ್ ಉತ್ತಮವಾಗಿರುವ ಸ್ಥಳಕ್ಕೆ ಬಂದು "ಅಪ್ಲೋಡ್" ಬಟನ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆ ವಿವರವನ್ನು ಅಪ್ಲೋಡ್ ಮಾಡಿದರೆ ನಿಮ್ಮ ಜಮೀನಿನ ಬೆಳೆ ಮಾಹಿತಿ Crop Survey ಡಿಜಿಟಲ್ ತಂತ್ರಾಂಶದಲ್ಲಿ ದಾಖಲಾಗುತ್ತದೆ.

ರೈತರು ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವುದರ ಕುರಿತು ಯಾವುದೇ ಬಗ್ಗೆ ಸಲಹೆ ಮತ್ತು ತಾಂತ್ರಿಕ ನೆರವನ್ನು ಪಡೆಯಲು ನಿಮ್ಮ ಗ್ರಾಮದ ಖಾಸಗಿ ನಿವಾಸಿಗಳ(PR) ಸಹಾಯ ಪಡೆಯಬಹುದು. ಇದಕ್ಕಾಗಿ ಸ್ಥಳೀಯ ರೈತ ಸಂಪರ್ಕ ಕೇಂದ್ರವನ್ನು(RSK) ಸಂಪರ್ಕಿಸಬೇಕು.

crop survey

Crop Survey Benefits-ಬೆಳೆ ಸಮೀಕ್ಷೆಯಿಂದ ರೈತರಿಗೆ ಪ್ರಯೋಜನಗಳು:

ಬೆಳೆ ಸಮೀಕ್ಷೆ ಆಪ್ ಬಳಸುವುದರಿಂದ ರೈತರಿಗೆ ಹಲವು ಪ್ರಯೋಜನಗಳಿವೆ ಇವುಗಳ ಪಟ್ಟಿ ಈ ಕೆಳಗಿನಂತಿದೆ:

ಬೆಳೆ ವಿಮೆ/Crop Insurance: ಬೆಳೆ ನಷ್ಟದ ಸಂದರ್ಭದಲ್ಲಿ ವಿಮಾ ಪರಿಹಾರ ಪಡೆಯಲು ಸಹಾಯವಾಗುತ್ತದೆ.

ಬೆಳೆ ಪರಿಹಾರ/Bele Parihara: ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆ ಹಾನಿಗೆ ಪರಿಹಾರ ಸಿಗಲು ಅಗತ್ಯವಾದ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.

ಬೆಂಬಲ ಬೆಲೆ (MSP): ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಲು ಈ ಬೆಳೆ ಸಮೀಕ್ಷೆಯ ಮಾಹಿತಿಯನ್ನೇ ಬಳಸಲಾಗುತ್ತದೆ.

ಕೃಷಿ ಯೋಜನೆಗಳು/Krishi Yojanegalu: ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಯಡಿ ಪ್ರಯೋಜನ ಪಡೆಯಲು ಬೆಳೆ ಸಮೀಕ್ಷೆ ವರದಿ ಸಹಕಾರಿಯಾಗಿದೆ.

ಪಹಣಿ ದಾಖಲಾತಿ/RTC Crop Details: ಜಮೀನಿನ ಬೆಳೆ ವಿವರಗಳನ್ನು RTC/ಊತಾರ್/ಪಹಣಿ ದಾಖಲೆಯಲ್ಲಿ ನಮೂದಿಸಲು ಬಳಕೆ ಮಾಡಲಾಗುತ್ತದೆ.

ಡೇಟಾ ವಿಶ್ಲೇಷಣೆ ಮತ್ತು ನಿಖರ ಅಂಕಿ-ಅಂಶ ಪಡೆಯಲು: ಋತುವಾರು ಬೆಳೆ ವಿಸ್ತೀರ್ಣ ವರದಿ, ಕೃಷಿ ಇಲಾಖೆಯ ಯೋಜನೆಗಳಿಗೆ ಡೇಟಾಬೇಸ್ ರಚನೆಗೆ ಈ ಮಾಹಿತಿಯನ್ನು ಬಳಸಲಾಗುತ್ತದೆ.

Crop Survey Website-ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್- Click Here
Crop Survey Helpline-ಸಹಾಯವಾಣಿ ಸಂಖ್ಯೆ- 1800 425 3553

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: