- Advertisment -
HomeGovt SchemesKisan credit card loan-2023: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಡ್ಡಿ ರಿಯಾಯಿತಿಯಲ್ಲಿ ರೂ 3 ಲಕ್ಷದವರೆಗೆ...

Kisan credit card loan-2023: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಡ್ಡಿ ರಿಯಾಯಿತಿಯಲ್ಲಿ ರೂ 3 ಲಕ್ಷದವರೆಗೆ ಸಾಲ ಸೌಲಭ್ಯ!

Last updated on October 1st, 2024 at 06:05 am

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌(Kisan credit card) ಯೋಜನೆಯಡಿ ಅರ್ಹ ರೈತರಿಗೆ ಪಶುಸಂಗೋಪನ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಸಾಲ ಅಭಿಯಾನ ಕಾರ್ಯಕ್ರಮವನ್ನು ಅನುಷ್ಥಾನ ಮಾಡಲಾಗುತ್ತಿದೆ.

ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ 3 ಲಕ್ಷಗಳವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂ.1.60 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ. 

ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಸಾಲಕ್ಕೆ(kisan credit card loan) ಶೇ.2 ರನ್ನು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ.3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ. ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿದರಕ್ಕೆ ಒಟ್ಟಾರೆ ಶೇ.5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರ ದಿಂದ ಪಡೆಯ ಬಹುದಾಗಿರುತ್ತದೆ ಎಂದು ಈ ಯೋಜನೆಯ ಕುರಿತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಟ್ವಿಟರ್(X) ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Ration Card Update- ರೇಷನ್ ಕಾರ್ಡ ತಿದ್ದುಪಡಿ ಕುರಿತು ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ!

ಯಾವೆಲ್ಲ ಪಶುಸಂಗೋಪನ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಪಡೆಯಬವುದು?

ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ವಯ (KCC) ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ, ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಕೆಳಗೆ ತಿಳಿಸಲಾದ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ಪಡೆಯಬವುದಾಗಿದೆ.

1. ಹೈನುಗಾರಿಕೆ:- A)ಮಿಶ್ರತಳಿ ದನಗಳ ನಿರ್ವಹಣೆ (1+1)- ಪ್ರತಿ ಹಸುವಿಗೆ ಗರಿಷ್ಠ ರೂ. 18,000/- ರಂತೆ ಒಟ್ಟು ಎರಡು ಹಸುಗಳಿಗೆ ರೂ. 36,000/- ಸಾಲ ಸೌಲಭ್ಯ ಅಥವಾ ಸುಧಾರಿತ
B)ಎಮ್ಮೆಗಳ ನಿರ್ವಹಣೆ(1+1)ಗೆ ಪ್ರತಿ ಎಮ್ಮೆ ಗರಿಷ್ಠ ರೂ. 21,000/- ರಂತೆ ಒಟ್ಟು ಎರಡು ಎಮ್ಮೆಗಳಿಗೆ ರೂ 42,000/- ಸಾಲ ಸೌಲಭ್ಯ ಪಡೆಯಬವುದು.

2. ಕುರಿಗಳ ಸಾಕಾಣಿಕೆ:- A)ಕುರಿಗಳ ನಿರ್ವಹಣೆ (10+1) (8 ತಿಂಗಳ ಸಾಕಾಣಿಕೆ ಅವಧಿಗೆ)- ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 29,950/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 14,700/- ಸಾಲ ಸೌಲಭ್ಯ ಸಿಗುತ್ತದೆ.
B)ಕುರಿಗಳ ನಿರ್ವಹಣೆ (20+1) (8 ತಿಂಗಳ ಸಾಕಾಣಿಕೆ ಅವಧಿಗೆ)- ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 57,200/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 28,200/- ಸಾಲ ಸೌಲಭ್ಯ ಸಿಗುತ್ತದೆ.
C) ಕುರಿಮರಿಗಳ ಕೊಬ್ಬಿಸುವುದು(10)- ರೂ 13,120 ರಂತೆ ಸಾಲ ಸೌಲಭ್ಯ.
D) ಕುರಿಮರಿಗಳ ಕೊಬ್ಬಿಸುವುದು(20)- ರೂ 26,200 ರಂತೆ ಸಾಲ ಸೌಲಭ್ಯ.

3. ಮೇಕೆ ಸಾಕಾಣಿಕೆ:-  A) ಮೇಕೆ ನಿರ್ವಹಣೆ (10+1) (8 ತಿಂಗಳ ಸಾಕಾಣಿಕೆ ಅವಧಿಗೆ)- ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 29,950/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 14,700/- ಸಾಲ ಸೌಲಭ್ಯ ಸಿಗುತ್ತದೆ.
B) ಮೇಕೆ ನಿರ್ವಹಣೆ (20+1) (8 ತಿಂಗಳ ಸಾಕಾಣಿಕೆ ಅವಧಿಗೆ)- ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 57,200/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 28,200/- ಸಾಲ ಸೌಲಭ್ಯ ಸಿಗುತ್ತದೆ.

4.  ಹಂದಿ ನಿರ್ವಹಣೆ:- 10 ಕೊಬ್ಬಿಸುವ ಹಂದಿಗಳ ಸಾಕಾಣಿಕೆge:- ರೂ 60,000 ವನ್ನು ಸಾಲ ಪಡೆಯಬವುದು.

5. ಕೋಳಿ ಸಾಕಾಣಿಕೆ:- A) ಮಾಂಸದ ಕೋಳಿ ಸಾಕಾಣಿಕೆ(ಒಂದು ಕೋಳಿಗೆ ರೂ 80 ರಂತೆ)- 1000 ಕೋಳಿಗಳಿಗೆ ಗರಿಷ್ಥ ರೂ 80,000 ವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ.

B)ಮೊಟ್ಟೆ ಕೋಳಿ ಸಾಕಾಣಿಕೆ- (ಒಂದು ಕೋಳಿಗೆ 180 ರಂತೆ) – 1000 ಕೋಳಿಗಳಿಗೆ ಗರಿಷ್ಥ ರೂ 1,80,000 ವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ.

6. ಮೊಲ ಸಾಕಾಣಿಕೆ:- ಮೊಲ ಸಾಕಾಣಿಕೆ (50+10) ಗರಿಷ್ಠ ರೂ. 50,000/-ವರೆಗೆ ಸಾಲ ಸೌಲಭ್ಯ ಪಡೆಯಬವುದಾಗಿದೆ.

ಇದನ್ನೂ ಓದಿ: ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಆಸಕ್ತ ಅರ್ಜಿದಾರರು ನಿಮ್ಮ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಕೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ನಂತರ  ಅಗತ್ಯ  ದಾಖಲಾತಿಗಳ ಸಮೇತ ನಿಮ್ಮ ಬ್ಯಾಂಕ್ ಖಾತೆಯಿರುವ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8277100 200 ರವರನ್ನು ಸಂಪರ್ಕಿಸುವುದು. ಇಲಾಖೆಯ ಜಾಲತಾಣದ ವಿಳಾಸ: https://ahvs.karnataka.gov.in

ಕಿಸಾನ್‌ ಕ್ರೆಡಿಟ್‌ ಕಾರ್ಡ್‌  ಯೋಜನೆಯ ಮಾರ್ಗಸೂಚಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

- Advertisment -
LATEST ARTICLES

Related Articles

- Advertisment -

Most Popular

- Advertisment -