Krishi Mela Bengalure-2025: ಬೆಂಗಳೂರು ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ!

November 13, 2025 | Siddesh
Krishi Mela Bengalure-2025: ಬೆಂಗಳೂರು ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ!
Share Now:

ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ ಆವರಣದಲ್ಲಿ(GKVK Krishi Mela) ಇಂದಿನಿಂದ ಒಟ್ಟು ನಾಲ್ಕು ದಿನ "ಸಮೃದ್ದ ಕೃಷಿ-ವಿಕಸಿತ ಭಾರತ" ಎನ್ನುವ ಘೋಷವಾಕ್ಯದೊಂದಿಗೆ ಈ ಬಾರಿಯ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಮೇಳದಲ್ಲಿ ರೈತರು ಯಾವೆಲ್ಲ ಬಗ್ಗೆಯ ಮಾಹಿತಿಯನ್ನು ಪಡೆಯಬಹುದು? ಎನ್ನುವ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

2025-26 ನೇ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ,ತೋಟಗಾರಿಕೆ,ಪಶುಸಂಗೋಪನೆ,ರೇಷ್ಮೆ, ನಬಾರ್ಡ್ ಇನ್ನಿತರೆ ಇಲಾಖೆಯ ಸಹಯೋಗದಲ್ಲಿ ಕೃಷಿ ಮೇಳವನ್ನು(Bengalure Krishi Mela 2025)ಆಯೋಜನೆ ಮಾಡಲಾಗಿದ್ದು ನಾಲ್ಕು ದಿನದ ಕೃಷಿ ಮೇಳಕ್ಕೆ ರಾಜ್ಯಪಾಲರಾದ ಥಾವತ್ ಚಂದ್ ಗೆಹ್ಲೋಟ್ ಅವರು ಇಂದು ಬೆಳಗ್ಗೆ 11-00 ಗಂಟೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: Muthoot Finance Scholarship-ಮುತ್ತೊಟ್ ಫೈನಾನ್ಸ್ ನಿಂದ ₹2.40 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಪ್ರಸ್ತುತ ಲೇಖನದಲ್ಲಿ ಕೃಷಿ ಮೇಳದ ನೇರ ಪ್ರಸಾರವನ್ನು(Krishi Mela Bengalure Live) ನಿಮ್ಮ ಮೊಬೈಲ್ ನೋಡುವ ವಿಧಾನ ಹೇಗೆ? ಮೇಳದ ಏರ್ಪಡಿಸಿರುವ ವಿವಿಧ ಪ್ರಾತ್ಯಕ್ಷಿಕೆಯ ವಿಡಿಯೋ ಸೇರಿದಂತೆ ಮೇಳದ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

GKVK New Varieties Crop-ವಿವಿಯಿಂದ ಹೊಸ ತಳಿ ಅಭಿವೃದ್ದಿ:

ಬಿಳಿ ಜೋಳ, ಹರಳು, ಕಪ್ಪು ಅರಿಶಿಣ, ಸೂರ್ಯಕಾಂತಿ ಸೇರಿ ಒಟ್ಟು 5 ನೂತನ ತಳಿಗಳನ್ನು ವಿಶ್ವವಿದ್ಯಾಲಯದಿಂದ ಅಭಿವೃದ್ದಿಪಡಿಸಲಾಗಿದ್ದು ಇವುಗಳನ್ನು ಬಿಡುಗಡೆ ಮಾಡಿ ರೈತರಿಗೆ ಈ ಬೆಳೆಯ ತಾಕುಗಳನ್ನು ವೀಕ್ಷಣೆಗೆ ಮತ್ತು ಪ್ರಯೋಗಿಕ ಮಾಹಿತಿಗಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: Sportsman Incentive-ಕ್ರ‍ೀಡಾಪಟುಗಳಿಗೆ 10 ಲಕ್ಷದ ವರೆಗೆ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಅಹ್ವಾನ!

Krishi Mela-750 ಕ್ಕೂ ಹೆಚ್ಚಿನ ಪ್ರದರ್ಶನ ಮಳಿಗೆಗಳು:

ಈ ಬಾರಿಯ ಕೃಷಿ ಮೇಳದಲ್ಲಿ ರೈತರಿಗೆ ಕೃಷಿ ಪೂರಕ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಯನ್ನು ಒದಗಿಸಲು ಜಿಕೆವಿಕೆ ಅವರಣದಲ್ಲಿ 750 ಕ್ಕೂ ಹೆಚ್ಚಿನ ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ.

Krishi Mela Dates-ನಾಲ್ಕು ದಿನ ನಡೆಯಲಿದೆ ಮೇಳ:

ಬೆಂಗಳೂರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಈ ವರ್ಷ ಒಟ್ಟು ನಾಲ್ಕು ದಿನ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು ನವೆಂಬರ್ 13,14,15 ಮತ್ತು 16 ರಂದು ಬೆಳಿಗ್ಗೆ 9-00 ರಿಂದ ಸಂಜೆ 6-00 ಗಂಟೆಯವರೆಗೆ ಮೇಳೆ ತೆರೆದಿರುತ್ತದೆ.

ಇದನ್ನೂ ಓದಿ: Bike Repair Training-ಉಚಿತ 30 ದಿನದ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ!

Krishi Mela Demo-ಮೇಳದಲ್ಲಿ ಏರ್ಪಡಿಸಿರುವ ಪ್ರಾತ್ಯಕ್ಷಿಕೆಯ ಮಾಹಿತಿ:

ರೈತರು ಕೃಷಿ ಮೇಳವನ್ನು ಭೇಟಿ ಮಾಡುವ ಮುನ್ನ ಈ ಲಿಂಕ್ "Krishi Mela Demo Videos" ಮೇಳೆ ಕ್ಲಿಕ್ ಮಾಡಿ ಕೃಷಿ ವಿವಿಯ ಅಧಿಕೃತ ಯೂಟ್ಯೂಬ್ ಚಾನಲ್ ಅನ್ನು ಭೇಟಿ ಮಾಡಿ ಈ ಬಾರಿಯ ಮೇಳದಲ್ಲಿ ಯಾವೆಲ್ಲ ಬಗ್ಗೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಲಭ್ಯ ಎನ್ನುವ ಬಗ್ಗೆ ಮುಂಚಿತ ಮಾಹಿತಿಯನ್ನು ಪಡೆದು ಮೇಳಕ್ಕೆ ಭೇಟಿ ಮಾಡಿದಾಗ ಈ ತಾಕುಗಳನ್ನು ಭೇಟಿ ಮಾಡಬಹುದು.

gkvk mela

ಇದನ್ನೂ ಓದಿ: Indira Kit-ರೇಶನ್ ಕಾರ್ಡದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಪ್ರತಿ ತಿಂಗಳು ತೊಗರಿ ಬೇಳೆ!

Krishi Mela 2025-ಮೇಳಕ್ಕೆ ಹೋಗುವವರಿಗೆ ವಿಶೇಷ ಸೂಚನೆಗಳು:

1) ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(GKVK) ಪ್ರವೇಶ ದ್ವಾರಕ್ಕೆ ಈ ಕೆಳಕಂಡ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ ಗಳ ಸಂಚಾರವಿರುತ್ತದೆ.

ಬಸ್ ಸಂಖ್ಯೆ=277,280,281,283,284,284A,284B,284C,284D,285,285M,289,289A,289M,299,402

2) ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಪ್ರವೇಶ ದ್ವಾರದಿಂದ ಕೃಷಿಮೇಳದ ಸ್ಥಳಕ್ಕೆ ಹೋಗಲು ಕೃಷಿ ವಿಶ್ವವಿದ್ಯಾನಿಯದ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

3) ನಿಗದಿತ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: PM Kisan Installment-2025: ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಯಾವಾಗ? ಕೆವೈಸಿ ಮಾಡದವರಿಗಿಲ್ಲ ಆರ್ಥಿಕ ನೆರವು!

Krishi Mela Bengalure Live-ನಿಮ್ಮ ಮೊಬೈಲ್ ನಲ್ಲೇ ಕೃಷಿ ಮೇಳದ ನೇರಪ್ರಸಾರ ವೀಕ್ಷಿಸಿ:

ರೈತರು ಬೆಂಗಳೂರು ಜಿಕೆವಿಕೆ ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ನೇರ ಪ್ರಸಾರವನ್ನು ನೋಡಲು ಅವಕಾಶವಿದ್ದು ಇದಕ್ಕಾಗಿ ಈ ಕೆಳಗೆ ನೀಡಿರುವ ಯೂಟ್ಯೂಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

Krishi Mela Bengalure Live Link-ನೇರ ಪ್ರಸಾದ ಲಿಂಕ್- Watch Now

Krishi Mela Website-ಕೃಷಿ ಮೇಳದ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: