Kuvempu Felloship-ಕುವೆಂಪು ಫೆಲೋಷಿಪ್‍ ಪಡೆಯಲು ಅರ್ಜಿ ಆಹ್ವಾನ! ಫೆಲೋಷಿಪ್ ಮೊತ್ತ ರೂ 3 ಲಕ್ಷ!

January 2, 2026 | Siddesh
Kuvempu Felloship-ಕುವೆಂಪು ಫೆಲೋಷಿಪ್‍ ಪಡೆಯಲು ಅರ್ಜಿ ಆಹ್ವಾನ! ಫೆಲೋಷಿಪ್ ಮೊತ್ತ ರೂ 3 ಲಕ್ಷ!
Share Now:

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ನೀಡಲಾಗುವ ಹಿರಿಯ ಮತ್ತು ಕಿರಿಯ ಫೆಲೋಶಿಪ್ ಗಾಗಿ(Kuvempu Felloship Application) ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ನೀಡುವ ಮಹತ್ವದ ಸಹಾಯಧನವೇ “ಕುವೆಂಪು ಫೆಲೋಷಿಪ್/Kuvempu Felloship In Karnataka” ಕನ್ನಡ ಭಾಷೆ/ಸಾಹಿತ್ಯದಲ್ಲಿ ಸಂಶೋಧನೆ ಮಾಡುತ್ತಿರುವವರು, ಪಿಎಚ್‌ಡಿ, ಪೋಸ್ಟ್ ಡಾಕ್ಟರಲ್ ಅಥವಾ ಸ್ವತಂತ್ರ ಸಂಶೋಧಕರು, ಭಾಷಾ ಅಧ್ಯಯನ, ಅನುವಾದ, ಸಂಸ್ಕೃತಿ ಅಧ್ಯಯನಗಳಲ್ಲಿ ತೊಡಗಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!

Kuvempu Felloship Details-ಅರ್ಜಿ ಸಲ್ಲಿಸುವರಿಗೆ ಪ್ರಾಧಿಕಾರದಿಂದ ಹೊರಡಿಸಿರುವ ವಿಶೇಷ ಸೂಚನೆಗಳು:

1) ಕುವೆಂಪು ಅವರ ಸಾಹಿತ್ಯ, ಕುವೆಂಪು ಅವರ ವಿಚಾರಗಳು ಅಥವಾ ಚಿಂತನೆಗಳಿಗೆ ಸಂಬಂಧಿಸಿದ ಸಂಶೋಧನಾ ಯೋಜನೆಗಳು, ಕುವೆಂಪು ಸಾಹಿತ್ಯದ ಅನುವಾದ ಯೋಜನೆಗಳು ಮುಂತಾದ ವಿಷಯಗಳ ಬಗ್ಗೆ ಕನಿಷ್ಟ 5 ಪುಟಗಳ ಪ್ರಸ್ತಾವನೆಯನ್ನು ಸಲ್ಲಿಸುವುದು.

2) ಅರ್ಜಿದಾರರ ವಯೋಮಿತಿ: 18 ರಿಂದ 35 ವರ್ಷ

3) ಪ್ರಾಧಿಕಾರದಿಂದ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದಲ್ಲಿ ಕೆಳಕಂಡ ಮೂಲ ದಾಖಲೆಗಳು ಹಾಗೂ ಧೃಢೀಕೃತ ನಕಲು ಪ್ರತಿಗಳೊಂದಿಗೆ ಹಾಜರಾಗತಕ್ಕದ್ದು.

A) ವಯಸ್ಸಿನ ದೃಡೀಕರಣ ದಾಖಲೆ (SSLC ಪ್ರಮಾಣಪತ್ರ)

B) ಶೈಕ್ಷಣಿಕ ದಾಖಲೆಗಳು

C) ಜಾತಿ ಪ್ರಮಾಣಪತ್ರ (ಪರಿಶಿಷ್ಠ ಜಾತಿ / ಪಂಗಡಕ್ಕೆ ಸೇರಿದ್ದಲ್ಲಿ)

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

D) ಸಲ್ಲಿಸಲು ಉದ್ದೇಶಿಸಿರುವ ಅಧ್ಯಯನ ವಿಷಯದಲ್ಲಿ ಬೇರೆ ಇಲಾಖೆ/ ಸಂಸ್ಥೆ/ ವಿಶ್ವವಿದ್ಯಾಲಯಗಳಿಂದ ಅನುದಾನ ಪಡೆದಿಲ್ಲ ಎಂಬ ಬಗ್ಗೆ ನೋಟರಿ ಪ್ರಮಾಣಪತ್ರ.

E) ಖಾಯಂ ವೃತ್ತಿಯಲ್ಲಿದ್ದರೆ ಅಥವಾ ಶಿಷ್ಯವೇತನ ಪಡೆಯುತ್ತಿದ್ದರೆ ಈ ಫೆಲೋಷಿಪ್ ಪಡೆಯಲು ಯಾವ ಅಕ್ಷೇಪಣೆಯೂ ಇಲ್ಲವೆಂದು ದೃಢೀಕರಿಸುವ ಪತ್ರವನ್ನು ಸಂಬಂಧಿಸಿದ ಮೇಲಧಿಕಾರಿಗಳಿಂದ/ಮಾರ್ಗದರ್ಶಕರಿಂದ ಪಡೆದು ಸಲ್ಲಿಸಬೇಕು.

7) ಫೆಲೋಶಿಪ್ಪಿನ ಯೋಜನೆಯಲ್ಲಿ ಕೈಗೊಳ್ಳುವ ಕೆಲಸಕ್ಕಾಗಿ ಬೇರೆ ಇಲಾಖೆ/ವಿಶ್ವದ್ಯಾನಿಲಯಗಳಿಂದ ಅನುದಾನ ಪಡೆದಿರಬಾರದು.

8) ಪ್ರಾಧಿಕಾರವು ನಿಗದಿಪಡಿಸುವ ದಿನಾಂಕದ ಒಳಗೆ ಯೋಜನೆಯನ್ನು ಪೂರೈಸಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಾಧಿಕಾರವು ಸೂಚಿಸಿದ ಎರಡು ಕಡೆಗಳಲ್ಲಿ ಉಪನ್ಯಾಸ ನೀಡಬೇಕು.

9) ಹಕ್ಕುಸ್ವಾಮ್ಯಕ್ಕೆ ಒಳಪಟ್ಟ ಸಂದರ್ಭದಲ್ಲಿ ಅನುವಾದ ಮಾಡಲು ಹಾಗೂ ಅದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಕಟಿಸಲು ಮೂಲಲೇಖಕರ ಅನುಮತಿಯ ಅಗತ್ಯವಿರುತ್ತದೆ. ಅಂಥ ಅನುಮತಿಯನ್ನು ಪಡೆಯಲು ಪ್ರಾಧಿಕಾರವು ಯತ್ನಿಸಬಹುದಾದರೂ ಅನುಮತಿ ದೊರೆಯದೆ ಇದ್ದರೆ ಪ್ರಾಧಿಕಾರವು ಹೊಣೆಯಾಗುವುದಿಲ್ಲ ಮತ್ತು ಅನುಮತಿ ದೊರೆಯದ ಸಂದರ್ಭಗಳಲ್ಲಿ ಫೆಲೋಶಿಪ್ ರದ್ದುಗೊಳ್ಳುತ್ತದೆ.

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

10) ಮೂರು ತಿಂಗಳಿಗೊಮ್ಮೆ ಯೋಜನೆಯ ಪ್ರಗತಿವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಯೋಜನೆಯನ್ನು ವಹಿಸಿದ ಮೂರು ತಿಂಗಳ ಒಳಗೆ ತೃಪ್ತಿಕರ ಪ್ರಗತಿಯನ್ನು ತೋರಿಸದಿದ್ದರೆ ಫೆಲೋಶಿಪ್ಪನ್ನು ರದ್ದುಪಡಿಸಲಾಗುವುದು.

11) ಅನುವಾದದ ಯೋಜನೆಯಾದರೆ ಸ್ವತಂತ್ರವಾಗಿ ಮಾಡಿದ ಅನುವಾದವಾಗಿರತಕ್ಕದ್ದು ಸಂಶೋಧನಾ ಯೋಜನೆಯಾದರೆ ಸ್ವತಂತ್ರ ಸಂಶೋಧನೆಯಾಗಿರಬೇಕು.

12) ಯೋಜನೆಯನ್ನು ಪೂರೈಸಿ ಅನುವಾದದ/ಯೋಜನಾ ವರದಿ/ಮಹಾಪ್ರಬಂಧದ ಪಠ್ಯವನ್ನು ನುಡಿ ಏಕಭಾಷೆ ತಂತ್ರಾಂಶದಲ್ಲಿ ಟೈಪ್ ಮಾಡಿ ನಿಗದಿತ ಅವಧಿಯೊಳಗೆ ಹಾರ್ಡ್ ಮತ್ತು ಸಾಫ್ಟ್ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು.

13) ಅಭ್ಯರ್ಥಿಗಳು ಯೋಜನೆಯನ್ನು ಪೂರ್ಣಗೊಳಿಸಿ ಸಲ್ಲಿಸಿದ ಪಠ್ಯವನ್ನು ಮೌಲ್ಯಮಾಪನ ಸಮಿತಿ/ತಜ್ಞರು ಪರಿಶೀಲಿಸಿ ಶಿಫಾರಸು ಮಾಡಿದ ಬಳಿಕ ಫೆಲೋಶಿಪ್ ಮೊತ್ತವನ್ನು ಪಾವತಿಸಲಾಗುವುದು. ಯೋಜನೆಯನ್ನು ತೃಪ್ತಿಕರವಾಗಿ ಪೂರೈಸದಿದ್ದರೆ ಯಾವುದೇ ಮೊತ್ತವನ್ನು ಪಾವತಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

14) ಯೋಜನೆಯ ಮಧ್ಯದಲ್ಲಿ ಯಾವುದೇ ಮೊತ್ತವನ್ನು ಪಾವತಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

15) ಯೋಜನೆಯ ಅಂಗವಾಗಿ ಸಲ್ಲಿಸಿದ ಪಠ್ಯದ ಹಕ್ಕುಗಳು ಪ್ರಾಧಿಕಾರದ್ದಾಗಿರುತ್ತವೆ ಅವುಗಳನ್ನು ಪ್ರಕಟಿಸುವ ಹಕ್ಕನ್ನು ಪ್ರಾಧಿಕಾರವು ಕಾಯ್ದಿರಿಸಿದೆ. ಪ್ರಕಟಣೆಗಾಗಿ ಯಾವುದೇ ಪ್ರತ್ಯೇಕ ರಾಯಧನ ಅಥವಾ ಸಂಭಾವನೆಯನ್ನು ಪಾವತಿಸಲಾಗುವುದಿಲ್ಲ.

Kuvempu Felloship Amount-ಕುವೆಂಪು ಫೆಲೋಷಿಪ್ ಮೊತ್ತ:

  • ಹಿರಿಯರ ಫೆಲೋಷಿಪ್ ಮೊತ್ತ- 3.0 ಲಕ್ಷ,
  • ಕಿರಿಯರ ಫೆಲೋಷಿಪ್ ಮೊತ್ತ- 2.0 ಲಕ್ಷ,

ಇದನ್ನೂ ಓದಿ: Ashraya Vasati Yojana-ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2.0 ಲಕ್ಷ ಸಹಾಯಧನ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31 ಜನವರಿ 2026

Application Download Link-ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಕುವೆಂಪು ಫೆಲೋಷಿಪ್‍ ಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿರುವವರು "Download Now" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

How To Apply-ಅರ್ಜಿ ಸಲ್ಲಿಸುವ ವಿಳಾಸ:

ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಜಾಲತಾಣದಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡ ಅರ್ಜಿಯನ್ನು ಅಂಚೆ / ಕೋರಿಯರ್ ಮೂಲಕ ರಿಜಿಸ್ಟ್ರಾರ್ ಅವರಿಗೆ ಪ್ರಾಧಿಕಾರದ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಅರ್ಜಿಯನ್ನು ಭರ್ತಿಮಾಡಿ ಸಹಿಯೊಂದಿಗೆ ಹಾರ್ಡ್ ಪ್ರತಿಯನ್ನು ರಿಜಿಸ್ಟ್ರಾರ್. ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಜ್ಞಾನಭಾರತಿ ಅಂಚೆ, ಬೆಂಗಳೂರು- 560056 ಈ ವಿಳಾಸಕ್ಕೆ ದಿನಾಂಕ: 31 ಜನವರಿ 2026ರ ಸಾಯಂಕಾಲ 5.00 ಗಂಟೆಯ ಒಳಗಾಗಿ ಸಲ್ಲಿಸುವುದು ಅಪೂರ್ಣ ಅರ್ಜಿ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Website Link-ಇನ್ನು ಹೆಚ್ಚಿನ ಮಾಹಿತಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: