Labour Card-ಹೊಸದಾಗಿ ಲೇಬರ್ ಕಾರ್ಡ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ!

March 20, 2025 | Siddesh
Labour Card-ಹೊಸದಾಗಿ ಲೇಬರ್ ಕಾರ್ಡ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ!
Share Now:

ಕರ್ನಾಟಕ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು(Required documents for Registration of Labour Card) ರಾಜ್ಯದಲ್ಲಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ನಿಮ್ಮ ಹತ್ತಿರ ಕಾರ್ಮಿಕರ ಗುರುತಿನ ಚೀಟಿಯಾದ ಲೇಬರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ.

ಈ ಲೇಬರ್ ಕಾರ್ಡನ್ನು ನೀವು ಪಡೆಯಲು ಅಥವಾ ನೋಂದಣಿಯಾಗಲು ಬೇಕಾಗುವಂತಹ ಅಗತ್ಯ ದಾಖಲಾತಿಗಳು ಯಾವುವು? ಲೇಬರ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ? ಇದರಿಂದ ಇರುವ ಯೋಜನೆಗಳೇನು ಎಂಬ ಮಾಹಿತಿ ಈ ಅಂಕಣದಲ್ಲಿದೆ.

ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!

Labour Card Benefits-ಮೊದಲು ಲೇಬರ್ ಕಾರ್ಡ್ ಇದ್ದರೆ ಸಿಗುವ ಲಾಭಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ:

ರಾಜ್ಯದಲ್ಲಿರುವರುವ ಪ್ರತಿ ನೊಂದಾಯಿತ ಕಟ್ಟಡ ಅಥವಾ ನಿತರೆ ನಿರ್ಮಾಣ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳಿದ್ದು ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪಿಂಚಣಿ ಸೌಲಭ್ಯ- ಹೌದು, 60 ವರ್ಷದ ನಂತರ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಿಗೆ ಮಾಸಿಕ 3,000ರೂ. ಪಿಂಚಣಿ ಸಿಗಲಿದೆ.

ಕಾರ್ಮಿಕ ಅರೋಗ್ಯ ಭಾಗ್ಯ- ಈ ಯೋಜನೆಯ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ, ಕಾರ್ಮಿಕರಿಗೆ ವೈದ್ಯಕೀಯ ಸಹಾಯಧನ ನೀಡಲಾಗುತ್ತದೆ.

ಶೈಕ್ಷಣಿಕ ಸಹಾಯಧನ- ಕಾರ್ಮಿಕರ ಅರ್ಹ ಇಬ್ಬರೂ ಮಕ್ಕಳಿಗೆ ಶೈಕ್ಷಣಿಕ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಗೃಹಲಕ್ಷ್ಮಿ ಬಾಂಡ್- ಈ ಯೋಜನೆಯ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಅಥವಾ ಕಾರ್ಮಿಕನ ಅವಲಂಬಿತರ ಮದುವೆಗೆ ಸಹಾಯಧನ ನೀಡಲಾಗುವುದು.

ಹೆರಿಗೆ ಸೌಲಭ್ಯ- ನೊಂದಾಯಿತ ಮಹಿಳಾ ಕಾರ್ಮಿಕರು ಮೊದಲ ಎರಡು ಜೀವಂತ ಮಕ್ಕಳಿಗೆ 50,000ರೂ. ಸಹಾಯಧನ ನೀಡಲಾಗುವುದು. ಇಷ್ಟೇ ಅಲ್ಲದೇ ಇನ್ನೂ ಹಲವಾರು ಕಾರ್ಮಿಕ ಇಲಾಖೆಯ ಲಾಭಗಳನ್ನು ನೀವು ಪಡೆಯಬಹುದು.

ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?

karnataka karmika ilake

Who Can Apply For Labour Card-ಹಾಗಿದ್ದರೆ ಲೇಬರ್ ಕಾರ್ಡ್ ಪಡೆಯಲು ಯಾರು ಅರ್ಹರು?

ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕರಾಗಿರಾಗಿ ನೋಂದಣಿಯಾಗಲು ಅಥವಾ ಲೇಬರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಮುಂಚೆ 1 ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

ಕಾರ್ಮಿಕರ ವಯೋಮಿತಿ 18 ರಿಂದ 60 ವರ್ಷದ ಒಳಗಿರಬೇಕು.

Documents For Labour Card-ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

  • ಉದ್ಯೋಗ ದೃಡೀಕರಣ ಪತ್ರ
  • ಕಾರ್ಮಿಕನ ಅವಲಂಬಿತ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪ್ರತಿ
  • ಅರ್ಜಿದಾರನ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಅರ್ಜಿದಾರನ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್
  • ರೇಷನ್ ಕಾರ್ಡ್

ಇದನ್ನೂ ಓದಿ: Karmika Card-ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ 2 ಲಕ್ಷ ರೂ. ಸಿಗುವ ಹೊಸ ಯೋಜನೆ!

Application Fee-ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ಶುಲ್ಕಗಳು:

ಲೇಬರ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವು ಇರುವುದಿಲ್ಲ. ಆದ್ದರಿಂದ ಉಚಿತವಾಗಿ ಅರ್ಜಿ ಸಲ್ಲಿಸಿರಿ.

Apply Method-ಹೇಗೆ ಅರ್ಜಿ ಸಲ್ಲಿಸುವುದು?

ಲೇಬರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರ, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿರಿ.

Official Website-ಇಲಾಖೆಯ ಅಧಿಕೃತ ಜಾಲತಾಣ- Click here

Share Now: