Free Training-ಕುರಿ ಕಾಯುವವರಿಗೆ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ!

March 19, 2025 | Siddesh
Free Training-ಕುರಿ ಕಾಯುವವರಿಗೆ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ!
Share Now:

ಕುರಿ ಕಾಯುವಾಗ ಇತ್ತೀಚೇಗೆ ಕೆಲವು ಜಿಲ್ಲೆಗಳಲ್ಲಿ ಕುರಿಗಳನ್ನು(kuri sakanike) ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಲು ಬರುವವರು ಕುರಿ ಕಾಯುವವರ ಮೇಲೆ ಹಲ್ಲೆ ಮಾಡುವಂತಹ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ ಬಾಗಲಕೋಟೆ(Bagalkot) ಜಿಲ್ಲಾ ಪೋಲಿಸ್ ಘಟಕದಿಂದ ಕುರಿ ಕಾಯುವವರಿಗೆ ಬಂದೂಕು ತರಬೇತಿ ನೀಡಲು ಅರ್ಜಿಯನ್ನು ಆಹ್ವಾನಿಸಿದೆ.

Free Gun Training for Shepherds 2025-ಕರ್ನಾಟಕ ರಾಜ್ಯದ ಪೊಲೀಸ್(Police Department) ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಕುರಿ ಕಾಯುವ ಯುವಕರಿಗೆ ತಮ್ಮ ಸುರಕ್ಷಾತೆಗಾಗಿ ಬಂದೂಕು ತರಬೇತಿ ನೀಡಲು ಮುಂದಾಗಿದ್ದು, ಬಂದೂಕು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಂದೂಕು ತರಬೇತಿ ನೀಡುತ್ತಿರುವ ಪೊಲೀಸ ಇಲಾಖೆಯ ಉದ್ದೇಶವೇನು? ಇದರಿಂದ ರಾಜ್ಯದ ಕುರಿಗಾಹಿಗಳಿಗೆ ಆಗುವ ಲಾಭವೇನು? ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳಾವುವು ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Agriculture Loan-13,689 ರೈತರ ಖಾತೆಗೆ ಶೂನ್ಯ ಬಡ್ಡಿದರದಲ್ಲಿ ₹589 ಕೋಟಿ ಸಾಲ!

Karnataka State Police-ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಉದ್ದೇಶವೇನು?

ಈ ಒಂದು ವಿನೂತನ ಪ್ರಯತ್ನವನ್ನು ಬಾಗಲಕೋಟೆ ಜಿಲ್ಲೆಯ ಪೊಲೀಸರು ಆರಂಭಿಸಿದ್ದು, ಇದು ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಪ್ರಯತ್ನ ಎನ್ನಲಾಗಿದೆ. ಇವರ ಮುಖ್ಯ ಉದ್ದೇಶವೇನೆಂದರೆ, ಕುರಿಗಾಹಿಗಳ ಮೇಲೆ ನಡೆಯುವ ಹಲ್ಲೆ, ಕಾಡುಪ್ರಾಣಿಗಳ ದಾಳಿ, ಕುರಿಗಳ ಕಳ್ಳತನ ಸೇರಿದಂತೆ ವಿವಿಧ ತೊಂದರೆಗಳಿಂದ ತಮ್ಮ ಸ್ವಯಂ ಆತ್ಮ ರಕ್ಷಣೆಗಾಗಿ ಈ ಬಂದೂಕು ತರಬೇತಿ ಯೋಜನೆಯನ್ನು ಆರಂಭಿಸಿದೆ.

ಇದನ್ನೂ ಓದಿ: RTC Joint Owner-ನಿಮ್ಮ ಪಹಣಿಯಲ್ಲಿ ಜಂಟಿಯಿರುವ ಖಾತೆಯನ್ನು ಸರಿಪಡಿಸಿಕೊಳ್ಳುವುದು ಹೇಗೆ?

police

ಇತ್ತೀಚಿಗೆ ನಡೆದ ಘಟನೆ:

ಕೆಲ ದಿನಗಳ ಹಿಂದೆ ಬಾದಾಮಿ ತಾಲೂಕಿನ ಉಗಲವಾಟಿ ಗ್ರಾಮದಲ್ಲಿ ಕುರಿಗಳನ್ನು ಕಳ್ಳತನ ಮಾಡಲು ಬಂದಿದ್ದ ಕಳ್ಳರು, ರಕ್ಷಣೆಗಾಗಿ ಮುಂದಾಗಿದ್ದ ಕುರಿಗಾಹಿಯನ್ನೇ ಬರಬರವಾಗಿ ಹತ್ಯೆ ಮಾಡಿದ್ದರು. ಇದು ರಾಜ್ಯದ ಕುರಿಗಾಹಿಗಳನ್ನು ಬೆಚ್ಚಿ ಬೀಳಿಸಿತ್ತು. ಆದರೆ ಪೊಲೀಸರು ಈ ದುಷ್ಟರನ್ನು ಪತ್ತೆಹಚ್ಚುವುದರಲ್ಲಿ ಯಶಸ್ವಿಯಾಗಿದ್ದರು.

ಈ ಘಟನೆ ನಡೆದ ನಂತರ ಹಲವು ಕಡೆ ಪ್ರತಿಭಟನೆ ನಡೆದಿದ್ದರಿಂದ, ಇದರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಪೊಲೀಸರು ಈ ಒಂದು ನಿರ್ಧಾರವನ್ನು ಕೈಗೊಂಡು ಕುರಿಗಾಹಿಗಳು ಆತ್ಮ ರಕ್ಷಣೆಗಾಗಿ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Karmika Card-ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ 2 ಲಕ್ಷ ರೂ. ಸಿಗುವ ಹೊಸ ಯೋಜನೆ!

ಈ ತರಬೇತಿಯಲ್ಲಿ ಕುರಿಗಾಹಿಗಳು ಏನೆಲ್ಲಾ ಕಲಿಯಬಹುದು?

ಈ ತರಬೇತಿಯಲ್ಲಿ ಕುರಿ ಕಾಯುವವರು, ಬಂದೂಕು ಹಿಡಿಯುವುದು ಹೇಗೆ, ಇದರ ಬಳಕೆಯ ಮುಖ್ಯ ಗುರಿ ಏನು? ಬಂದೂಕು ಬಳಕೆಗಾಗಿ ಇರುವ ಸಂವಿಧಾನದ ಕಾನೂನುಗಳೇನು? ಇದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬ ಇತ್ಯಾದಿ ಪ್ರಮುಖ ಮಾಹಿತಿಯನ್ನು ಅವರಿಗೆ ತರಬೇತಿಯಲ್ಲಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ತರಬೇತಿಯು 6 ದಿನಗಳವರೆಗೆ ಇರಲಿದೆ.

Who Can Apply-ಯಾರು ಅರ್ಜಿ ಸಲ್ಲಿಸಬಹುದು?

18 ವರ್ಷ ಮೇಲ್ಪಟ್ಟ ಹಾಗೂ ಅರವತ್ತು ವರ್ಷದ ಒಳಗಿನ ಕುರಿ ಕಾಯುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಯಾವುದೇ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಿಲ್ಲ.

ಇದನ್ನೂ ಓದಿ: Mudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

Last Date For Application-ಪ್ರಮುಖ ದಿನಾಂಕಗಳು:

ಸದ್ಯಕ್ಕೆ 400 ಜನರಿಗೆ ಈ ತರಬೇತಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವವರು ಏಪ್ರಿಲ್ 5ನೇ ತಾರೀಖಿನ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅದೇ ರೀತಿ ಈ ತರಬೇತಿಯು ಏಪ್ರಿಲ್ 7ರಿಂದ ಏಪ್ರಿಲ್ 13ರವರೆಗೆ ಇರಲಿದೆ.

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲೆಯ ಪೊಲೀಸ್ ಶಸ್ತ್ರಗಾರದಿಂದ ಅರ್ಜಿ ಪಡೆದು ಈ ಕೆಳಗಿನ ಪ್ರಮುಖ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.

  • ಅಭ್ಯರ್ಥಿಯ ಗುರುತಿನ ಚೀಟಿ
  • ಪೊಲೀಸ್ ಪರಿಶೀಲನೆ ಪತ್ರ
  • ಅಭ್ಯರ್ಥಿಯ 3 ಭಾವಚಿತ್ರ

ಇದನ್ನೂ ಓದಿ: Mudra loan-2025: ಮುದ್ರಾ ಯೋಜನೆಯಡಿ 10 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

For More Information-ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗೆ ಕರೆ ಮಾಡಿ:
9480803937, 9480803906

Share Now: