Land Documents Check-ಕೃಷಿ ಜಮೀನು ಖರೀದಿಗೂ ಮುನ್ನ ಕಡ್ಡಾಯವಾಗಿ ಪರಿಶೀಲಿಸಬೇಕಾದ ದಾಖಲೆಗಳು ಯಾವುವು?

September 21, 2025 | Siddesh
Land Documents Check-ಕೃಷಿ ಜಮೀನು ಖರೀದಿಗೂ ಮುನ್ನ ಕಡ್ಡಾಯವಾಗಿ ಪರಿಶೀಲಿಸಬೇಕಾದ ದಾಖಲೆಗಳು ಯಾವುವು?
Share Now:

ನಮ್ಮ ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಕೃಷಿ ಜಮೀನನ್ನು ಖರೀದಿ ಮಾಡುವ ಮುನ್ನ ಖರೀದಿದಾರರು ಕಡ್ಡಾಯವಾಗಿ ಯಾವೆಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು? ಈ ದಾಖಲೆಗಳಲ್ಲಿ ನಾವು ಯಾವೆಲ್ಲ ವಿಷಯಗಳನ್ನು ಪರಿಶೀಲನೆ ಮಾಡಬಹುದು? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಲೇಕನದಲ್ಲಿ ಹಂಚಿಕೊಳ್ಳಲಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ವಿವಿಧ ರೀತಿಯ ನಕಲಿ ದಾಖಲೆಗಳನ್ನು ಸಿದ್ದಪಡಿಸಿ ಜಮೀನು ಮಾರಾಟದ ಸಮಯದಲ್ಲಿ ವಂಚನೆ ಮಾಡಲಾಗುತ್ತದೆ ಈ ಸಂಬಂಧ ಕೃಷಿ ಜಮೀನನ್ನು ಖರೀದಿ ಮಾಡುವ ಮೊದಲು ಸಾರ್ವಜನಿಕರು ಯಾವೆಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Sprinkler Subsidy-PMKSY ಯೋಜನೆಯಡಿ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್!

Land Ownership Proof-ಕೃಷಿ ಜಮೀನು ಖರೀದಿಗೂ ಮುನ್ನ ಕಡ್ಡಾಯವಾಗಿ ಪರಿಶೀಲಿಸಬೇಕಾದ ದಾಖಲೆಗಳು:

1) ಆರ್ ಟಿ ಸಿ/RTC
2) ಆಕಾರ ಬಂದ್/Akar Band
3) ಇ.ಸಿ/EC
4) ಎಂ ಆರ್/MR
5) ಸೇಲ್ ಡೀಡ್/Sell Deed
6) ಮದರ್ ಡೀಡ್/Mother Deed
7) ಫಾರ್ಮ್ 10/Form 10
8) 11ಇ ಸ್ಕೆಚ್/11E Skech
9) ಸರ್ವೆ ಸ್ಕೆಚ್/Survey Skech
10) ಟಿಪ್ಪಣಿ/Tippani
11) ವಂಶವೃಕ್ಷ/Vamsharuksha
12) ಪಿ.ಟಿ.ಸಿ.ಎಲ್/PTCL
13) ಸಾಗುವಳಿ ಚೀಟಿ/Saguvali Cheeti
14) ಕಂದಾಯ ರಶೀದಿ/Kandaya Rashidi

ಇದನ್ನೂ ಓದಿ: Karnataka Jati Ganati-ರಾಜ್ಯದಲ್ಲಿ ಜಾತಿಗಣತಿಗೆ ಸಮೀಕ್ಷೆ ನಡೆಸಲು ಅಧಿಕೃತ ಆದೇಶ ಪ್ರಕಟ!

1) RTC/ಪಹಣಿ(RTC-Record of Rights, Tenancy and Crops):

ಜಮೀನಿನ ಪಹಣಿ ಅಥವಾ RTC ದಾಖಲೆಯು ಅ ಜಮೀನಿನ ಖರಬ್ ಮತ್ತು ವಿವಿಧ ಬ್ಯಾಂಕ್ ಗಳಲ್ಲಿ ಜಮೀನಿನ ಮೇಲೆ ತೆಗೆದಿರುವ ಸಾಲಗಳ ಮಾಹಿತಿಯನ್ನು ನೀಡುತ್ತದೆ. ಇದರ ಜೊತೆಗೆ ಜಮೀನಿನ ಹಕ್ಕು ಬದಲಾವಣೆ,ಮಾಲೀಕರು ಎಷ್ಟು ಜನ ಇದ್ದರೆ ಎನ್ನುವ ಮಾಹಿತಿಯನ್ನು ತಿಳಿಯಬಹುದು.

2) ಆಕಾರ ಬಂದ್/Ahara Band:

ಪಹಣಿ ದಾಖಲೆಗಿಂತಲು ಆಕಾರ ಬಂದ್/Ahara Band ದಾಖಲೆಯಲ್ಲಿ ನಿಖರವಾಗಿ ಜಮೀನಿನ ವಿಸ್ತೀರ್ಣವನ್ನು ದಾಖಲಿಸಲಾಗಿರುತ್ತದೆ.

ಇದನ್ನೂ ಓದಿ: HDFC Scholarship-HDFC ಬ್ಯಾಂಕ್ ವತಿಯಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್!

Land Documents Check

3) ಇ.ಸಿ/(EC-Encumbrance Certificate):

ನೀವು ಖರೀದಿಸಲು ಇಚ್ಚಿಸಿರುವ ಜಮೀನಿನ ಮೇಲೆ ಸಾಲ ತೆಗೆದಿದ್ದರೆ ಇದರ ವಿವರವನ್ನು ಈ ದಾಖಲೆಯಲ್ಲಿ ತಿಳಿಯಬಹುದು.

4) ಎಂ ಆರ್(MR-Mutation Record):

ಮ್ಯೂಟೇಷನ್ ರೇಕಾರ್ಡ ದಾಖಲೆಯಲ್ಲಿ ಜಮೀನಿನ ಮಾಲೀಕತ್ವದ ಹಕ್ಕ ಬದಲಾವಣೆ ಯಾರಿಂದ ಯಾರಿಗೆ ಎಷ್ಟು ಬಾರಿ ಬದಲಾವಣೆ ಅಗಿದೆ ಇದರ ವಿವರವನ್ನು ಇಲ್ಲಿ ನೀವು ನೋಡಬಹುದು.

5) ಕ್ರಯಪತ್ರ/ಸೇಲ್ ಡೀಡ್/Sale Deed:

ಕ್ರಯಪತ್ರ/ಸೇಲ್ ಡೀಡ್ ದಾಖಲೆಯನ್ನು ಪರಿಶೀಲನೆ ಮಾಡುವ ಮೂಲಕ ಈ ಜಮೀನು ಹಿಂದೆ ಯಾರ ಹೆಸರಲ್ಲಿ ಇತ್ತು ಮತ್ತು ಜಮೀನಿನ ಅಕ್ಕ-ಪಕ್ಕ ಮಾಲೀಕರ ವಿವರವನ್ನು(ಚೆಕ್ಕುಬಂದಿ) ಅನ್ನು ಇಲ್ಲಿ ತಿಳಿಯಬಹುದು.

ಇದನ್ನೂ ಓದಿ: Bank Account KYC-ನಿಮ್ಮ ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಇ-ಕೆವೈಸಿ ಮಾಡಿಸಲು ಸೂಚನೆ!

6) ಮದರ್ ಡೀಡ್/ಮೂಲಪತ್ರ/Mother Deed:

ಈ ದಾಖಲೆಯಲ್ಲಿ ಜಮೀನಿನ ಮೂಲ ಮಾಲೀಕರ ವಿವರವನ್ನು ಮತ್ತು ಜಮೀನಿನ ಮೂಲವನ್ನು ಇಲ್ಲಿ ನೀವು ತಿಳಿಯಬಹುದು.

7) ಫಾರ್ಮ್ 10/Form-10:

ಒಂದು ಸರ್ವೆ ನಂಬರಿನಲ್ಲಿರುವ ಎಲ್ಲಾ ಹಿಸ್ಸಾ ಸಂಖ್ಯೆಯ ವಿವರವನ್ನು ಈ ದಾಖಲೆಯಲ್ಲಿ ನೀವು ಪರಿಶೀಲನೆ ಮಾಡಬಹುದು.

8) ಫಾರ್ಮ್ 11ಇ ಸ್ಕೆ/11 E SETCH:

ಒಂದು ಸರ್ವೆ ನಂಬರಿನ ಜಮೀನಿಂದ ವಿಭಾಗ ಆಗಿರುವ ಭಾಗದ ಬಗ್ಗೆ ಈ ದಾಖಲೆಯಲ್ಲಿ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Deepika Scholarship Scheme-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000/-ಸ್ಕಾಲರ್‌ಶಿಪ್‌!

9) ಸರ್ವೆ ಸ್ಕೆಚ್/Survey Sketch:

ಸರ್ವೆ ಸ್ಕೆಚ್/Survey Sketch ನಿಂದ ಜಮೀನಿನ ನಕ್ಷೆ ಮತ್ತು ಜಮೀನಿಗೆ ಹೋಗಲು ಬಂಡಿದಾರಿ,ಕಾಲುದಾರಿ ಯಾವ ಕಡೆ ಇದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು.

10) ಟಿಪ್ಪಣಿ: ಟಿಪ್ಪಣಿ ದಾಖಲೆಯಿಂದ ಜಮೀನಿನ ಆಕಾರ, ಅಂಕಿ ಸಂಖ್ಯೆ,ಗುಣ ಲಕ್ಷಣಗಳನ್ನು ತಿಳಿಯಬಹುದು.

11) ವಂಶವೃಕ್ಷ: ವಂಶವೃಕ್ಷ ದಾಖಲೆಯಿಂದ ಭೂ ಮಾಲೀಕರು ಎಷ್ಟು ಜನ ಇದ್ದಾರೆ ಯಾರಿಗೆಲ್ಲ ಈ ಜಮೀನಿನಲ್ಲಿ ಹಕ್ಕಿದೆ ಎನ್ನುವ ಅಂಶವನ್ನು ಪಡೆಯಬಹುದು.

12) ಪಿ.ಟಿ.ಸಿ.ಎಲ್: ಜಮೀನು ಮಾಲೀಕರು SC/ST ವರ್ಗಕ್ಕೆ ಸೇರಿದ್ದರೆ ಈ ದಾಖಲೆ ಅವಶ್ಯಕ.

13) ಸಾಗುವಳಿ ಚೀಟಿ: ನೀವು ಖರೀದಿ ಮಾಡಲು ಹೊರಟಿರುವ ಜಮೀನು ಸರ್ಕಾರದಿಂದ ಮಂಜೂರು ಅಗಿದ್ದರೆ ಈ ದಾಖಲೆ ಅವಶ್ಯಕ.

14) ಕಂದಾಯ ರಶೀದಿ: ಕಂದಾಅ ಪಾವತಿ ರಶೀದಿಯಿಂದ ಕಂದಾಯ ಪಾವತಿ ಮಾಡಿರುವ ಬಗ್ಗೆ ವಿವರವನ್ನು ಪಡೆಯುವುದರ ಜೊತೆಗೆ ಈ ಜಮೀನಿನ ಮೇಲೆ ಯಾವುದೇ ಕಾನೂನು ಸಮಸ್ಯೆಗಳು/ವ್ಯಾಜ್ಯಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಬಹುದು.

ಆನ್ಲೈನ್ ನಲ್ಲಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆಯಲು ಅಧಿಕೃತ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: