Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

November 19, 2025 | Siddesh
Loreal India Scholarship-ಲೋರಿಯಲ್ ಇಂಡಿಯಾ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

2025-2026 ನೇ ಸಾಲಿನ ಲೋರಿಯಲ್ ಇಂಡಿಯಾ ದ್ವಿತೀಯ ಪಿಯುಸಿ ಯಲ್ಲಿಉತ್ತೀರ್ಣರಾಗಿ ವಿಜ್ಞಾನದಲ್ಲಿ(Loreal India Scholarship) ಉನ್ನತ ಶಿಕ್ಷಣವನ್ನು ಪಡೆಯಲು ಆಸಕ್ತಿ ಇರುವ ಬಾಲಕಿಯರಿಗೆ ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಆರ್ಥಿಕ ಸಹಾಯ ಅತ್ಯಂತ ಅಗತ್ಯವಾಗಿದ್ದು,(Loreal India Scholarship Online Application,)ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಕೊರತೆ ಇಲ್ಲದೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಆರ್ಥಿಕ ನೆರವನ್ನು ಸಹಾಯ ಮಾಡಿ ಎಲ್ಲರಿಗೂ ಶಿಕ್ಷಣವನ್ನು ಸುಲಭವಾಗಿ ಪಡೆದುಕೊಳ್ಳುವುದ ಉದ್ದೇಶವಾಗಿದೆ.

ಇದನ್ನೂ ಓದಿ: PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

ಈ ಲೇಖನದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಕೊನೆಯ್ ದಿನಾಂಕ ಯಾವುದು ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last Date To APply-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಕೊನೆಯ ದಿನಾಂಕ: ನವೆಂಬರ್ 21 2025

Scholorship Amount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ಇದರ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಲೋರಿಯಲ್ ಇಂಡಿಯಾ ವತಿಯಿಂದ 1,00,000 ರೂಪಾಯಿಗಳವರೆಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Scholarship e-authentication-ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯಲು ಇ-ದೃಡೀಕರಣ ಮಾಡುವುದು ಕಡ್ಡಾಯ!

ಹೆಚ್ಚಿನ ಮಾಹಿತಿಗಾಗಿ: ಶೈಕ್ಷಣಿಕ ವೆಚ್ಚಗಳು (ಬೋಧನಾ ಶುಲ್ಕ, ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಪುಸ್ತಕಗಳು, ಇತ್ಯಾದಿ), ಜೀವನ ವೆಚ್ಚಗಳು (ಹಾಸ್ಟೆಲ್ ಶುಲ್ಕ, ಊಟದ ಶುಲ್ಕ, ಸಮವಸ್ತ್ರ, ಇತ್ಯಾದಿ), ಸಾಧನಗಳು (ಲ್ಯಾಪ್‌ಟಾಪ್, ಮೊಬೈಲ್, ಸಲಕರಣೆಗಳು, ಇತ್ಯಾದಿ), ಮಾಸಿಕ ಭತ್ಯೆ, ಸಂಶೋಧನಾ ಕೆಲಸ ಇತ್ಯಾದಿ ಸೇರಿದಂತೆ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ವಿದ್ಯಾರ್ಥಿವೇತನ.

Who Can Apply-ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ‍ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಮಹಿಳಾ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿದಾರ ವಿದ್ಯಾರ್ಥಿಯು ಪದವಿಪೂರ್ವ ಕೋರ್ಸ್‌ನಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.

ಅರ್ಜಿದಾರ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 6,00,000 ದ ಒಳಗಿರಬೇಕು.

ಅಭ್ಯರ್ಥಿಯು ತಂತ್ರಜ್ಞಾನ, ವಿಜ್ಞಾನ, ಔಷಧ, ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿಯನ್ನು (ಯಾವುದೇ ವರ್ಷ) ಪಡೆಯುತ್ತಿರಬೇಕು (ಅಂತಿಮ ವರ್ಷದಲ್ಲಿರುವವರನ್ನು ಹೊರತುಪಡಿಸಿ).

ಲೋರಿಯಲ್ ಇಂಡಿಯಾ ಮತ್ತು ಬಡ್ಡಿ4ಸ್ಟುಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಗಮನಿಸಿ: ಅಂತಿಮ ಆಯ್ಕೆಯು ಭಾರತದ ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದ ಪ್ರವೇಶ ಪತ್ರವನ್ನು ಸಲ್ಲಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ಆಧಾರ್ ಕಾರ್ಡ

ಆದಾಯ ಪ್ರಮಾಣಪತ್ರ.

10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ.

ಪ್ರಸ್ತುತ ಸಂಸ್ಥೆಯಲ್ಲಿನ ಪ್ರವೇಶದ ಪುರಾವೆ

ಫಾರ್ಮ್ 16

ಫೋಟೊ

ಇದನ್ನೂ ಓದಿ: Dhanashree Yojana-ಧನಶ್ರೀ ಯೋಜನೆಯಡಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ₹ 30,000 ಸಹಾಯಧನಕ್ಕೆ ಅರ್ಜಿ ಆಹ್ವಾನ!

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ?

ಲೋರಿಯಲ್ ಫಾರ್ ಯಂಗ್ ವುಮೆನ್ ಇನ್ ಸೈನ್ಸ್ ಪ್ರೋಗ್ರಾಂ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಕೆಳಗೆ ತಿಳಿಸಿರುವ ವಿಧಾನಗಳನ್ನು ಪಾಲನೆ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲು ಈ ಲಿಂಕ್ "Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಅಧಿಕೃತ ವೆಬ್ಸೈಟ್ ಭೇಟಿ ಮಾಡಿದ ನಂತರ ಇಲ್ಲಿ”Apply Now” ಬಟನ್ ಮೇಲೆ ಕ್ಲಿಕ್ ಮಾಡಿ, ಮೊದಲ ಬಾರಿಗೆ ಈ ವೆಬ್ಸೈತ್ ಗೆ ಭೇಟಿ ಮಾಡುತ್ತಿರುವ ವಿದ್ಯಾರ್ಥಿಗಳು “Create an Account” ಬಟನ್ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು. ನಂತರ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಗೆ ಸಂಬಂದಿಸಿದ ಅಗತ್ಯ ವಿವರವನ್ನು ಹಾಕಿ ಲಾಗಿನ್ ಆಗಬೇಕು.

Step-3: “Login” ಆದ ಬಳಿಕ ಅರ್ಜಿ ನಮೂನೆ ಒಪನ್ ಅಗುತ್ತದೆ. ಇಲ್ಲಿ ಕೇಳುವ ಎಲ್ಲಾ ಅಗತ್ಯ ಮಾಹಿತಿಯನ್ನು ಹಾಕಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: PM Kisan List-ಪಿಎಂ ಕಿಸಾನ್ 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ ಬಿಡುಗಡೆ!

More Information-ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: