LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

January 2, 2026 | Siddesh
LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!
Share Now:

ಹೊಸ ವರ್ಷದ ಸಂಭ್ರಮವನ್ನು ಇನ್ನೂ ಈಗಷ್ಟೇ ಮುಗಿಸಿದ್ದು, ವರ್ಷದ ಮೊದಲ ದಿನಗಳಲ್ಲೇ ಗ್ರಾಹಕರಿಗೆ ಭರ್ಜರಿ ಶಾಕಿಂಗ್ ನ್ಯೂಸ್! (Commercial LPG price hike)ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಹೊಡೆತವನ್ನು ತಂದಿದೆ. ದೀರ್ಘ ಕಾಲ ಇಳಿಕೆಯಲ್ಲಿದ್ದ ಕಮರ್ಷಿಯಲ್ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ ಅಚ್ಚರಿಯಾಗುವಂತೆ ಭರ್ಜರಿ ಏರಿಕೆಯಾಗಿದ್ದು, ಹೋಟೆಲ್‌, ರೆಸ್ಟೋರೆಂಟ್‌, ಕ್ಯಾಂಟೀನ್‌ಗಳು ಹಾಗೂ ಆಹಾರ ಉದ್ಯಮದಾರರಿಗೆ ಭಾರೀ ಆಘಾತ ಉಂಟುಮಾಡಿದೆ.

2025ರ ಅವಧಿಯಲ್ಲಿ 200 ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಗ್ಯಾಸ್ ಬೆಲೆ ಇದೀಗ ಮತ್ತೆ ಏರಿಕೆಯಾಗಿರುವುದನ್ನು(LPG price hike India) ನೋಡಬಹುದು. ಗೃಹಬಳಕೆ ಗ್ಯಾಸ್ ದರದಲ್ಲಿ ಬದಲಾವಣೆ ಆಗದಿದ್ದರೂ, 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿರುವುದನ್ನು ನೋಡಬಹುದು.

ಇದನ್ನೂ ಓದಿ: Kuvempu Felloship-ಕುವೆಂಪು ಫೆಲೋಷಿಪ್‍ ಪಡೆಯಲು ಅರ್ಜಿ ಆಹ್ವಾನ! ಫೆಲೋಷಿಪ್ ಮೊತ್ತ ರೂ 3 ಲಕ್ಷ!

ಪ್ರಸ್ತುತ ಇಲ್ಲಿ ಯಾವ ಯಾವ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಎಷ್ಟು ಏರಿಕೆಯಾಗಿದೆ? ಈ ಗ್ಯಾಸ್ ಏರಿಕೆ ಇಂದ ಉದ್ಯಮದಾರರ ಮೇಲೆ ಏನೆಲ್ಲಾ ಪರಿಣಾಮ ಉಂಟಾಗುತ್ತದೆ? ಯಾವ ಯಾವ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ನೋಡಬಹುದು? ಇತರ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಯಾವ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ?

1) 19 ಕಿಲೋ ತೂಕದ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಏರಿಕೆ:

19 ಕಿಲೋ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆಯು 110 ರೂ ನಿಂದ 112 ರೂವರೆಗೆ ಏರಿಕೆ ಮಾಡಲಾಗಿದ್ದು, ಬೆಂಗಳೂರು ನಗರಗಳಲ್ಲಿ ಈ ಸಿಲಿಂಡರ್ ಬೆಲೆಯನ್ನು 110.50 ರೂ ಹೆಚ್ಚಳ ಮಾಡಲಾಗಿದೆ.

2) 47.50 ಕಿಲೋ ತೂಕದ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಏರಿಕೆ:

47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, ಈ ಸಿಲಿಂಡರ್ ಬೆಲೆ ಏರಿಕೆಯಿಂದ 4,407 ರೂ ತಲುಪಲಾಗಿದೆ.

ಇದನ್ನೂ ಓದಿ: Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!

ಗೃಹಬಳಕೆ ಗ್ಯಾಸ್ ಬೆಲೆ ವಿವರ ಇಲ್ಲಿದೆ?

ಬಹಳ ತಿಂಗಳುಗಳಿಂದ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚೇನೂ ಏರಿಕೆ ಆಗಿಲ್ಲ. ಕಳೆದ 1–2 ವರ್ಷಗಳ ಅವಧಿಯಲ್ಲಿ 14.2 ಕಿಲೋ ತೂಕದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಟ್ಟಾರೆ ಸುಮಾರು 50 ರೂ ಮಾತ್ರ ಹೆಚ್ಚಳವಾಗಿದೆ. ಆದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಮತ್ತು ಆಹಾರ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಅಡುಗೆ ವೆಚ್ಚ ಹೆಚ್ಚುವ ಮೂಲಕ ಅದರ ಹೊರೆ ಕೊನೆಗೂ ಗ್ರಾಹಕರ ಊಟದ ಬಿಲ್ ಮೇಲೆ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

cylinder hike price

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

ಹೋಟೆಲ್ ಉದ್ಯಮ ಮತ್ತು ಗ್ರಾಹಕರ ಮೇಲೆ ಪರಿಣಾಮ:

ಕಮರ್ಷಿಯಲ್ ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಅಡುಗೆ ವೆಚ್ಚ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಆಹಾರ ಪದಾರ್ಥಗಳ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಅಂತಿಮವಾಗಿ ಈ ಹೊರೆ ಗ್ರಾಹಕರ ಊಟದ ಬಿಲ್‌ನಲ್ಲಿ ಹೆಚ್ಚಳವಾಗುವ ಸಾಧ್ಯತೆಯನ್ನು ನೋಡಬಹುದು.

ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

ಯಾವ ಯಾವ ನಗರಗಳಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ?

ಪ್ರಮುಖ ನಗರಗಳು ಹಿಂದಿನ ದರ ಪ್ರಸ್ತುತ ದರ
ದೆಹಲಿ1,580.501,691.50
ಮುಂಬೈ1,531.501,642.50
ಕೋಲ್ಕತಾ1,6841,795
ಚೆನ್ನೈ1,739.501,849.50

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: