Mobile Phone Trace-ನಿಮ್ಮ ಮೊಬೈಲ್ ಕಳುವಾದರೆ ಟ್ರೇಸ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

November 9, 2025 | Siddesh
Mobile Phone Trace-ನಿಮ್ಮ ಮೊಬೈಲ್ ಕಳುವಾದರೆ ಟ್ರೇಸ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!
Share Now:

ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜನ ಸಂಖ್ಯೆಯಂತೆ ಮೊಬೈಲ್ ಬಳಕೆದಾರರು(Online Mobile Phone Trace) ಸಹ ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಮೊಬೈಲ್ ಕಳುವಾಗುವ ಪ್ರಕರಣಗಳು ಸಹ ಏರಿಕೆಯಾಗಿವೆ, ಈ ನಿಟ್ಟಿನಲ್ಲಿ ಮೊಬೈಲ್ ಬಳಕೆದಾರು ತಮ್ಮ ಮೊಬೈಲ್ ಕಳುವಾದರೆ ಇದನ್ನು ಟ್ರೇಸ್ ಮಾಡಲು ಕೇಂದ್ರ ದೂರ ಸಂಪರ್ಕ ಇಲಾಖೆಯು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಎನ್ನುವ ಪೋರ್ಟಲ್ ಅನ್ನು ರೂಪಿಸಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಬಹುತೇಕ ಸಾರ್ವಜನಿಕರಿಗೆ ತಮ್ಮ ಮೊಬೈಲ್ ಕಳುವಾದರೆ ಯಾವ ಕ್ರಮ ಅನುಸರಿಸಬೇಕು? ಎಲ್ಲಿ ದೂರು ಸಲ್ಲಿಸಬೇಕು? ಆನ್ಲೈನ್ ನಲ್ಲಿ ದೂರು ಸಲ್ಲಿಸುವುದು(Mobile Phone Trace Method) ಹೇಗೆ? ಕಳುವಾದ ಮೊಬೈಲ್ ಅನ್ನು ಟ್ರೇಸ್ ಮಾಡುವ ವಿಧಾನದ ಕುರಿತು ಮಾಹಿತಿ ತಿಳಿದಿರುವುದಿಲ್ಲ ಇಂದಿನ ಅಂಕಣದಲ್ಲಿ ಕೇಂದ್ರ ದೂರ ಸಂಪರ್ಕ ಇಲಾಖೆಯು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಎನ್ನುವ ಪೋರ್ಟಲ್ ನಲ್ಲಿ ಮೊಬೈಲ್ ಕಳುವಾದರೆ ಟ್ರೇಸ್ ಮಾಡುವುದಕ್ಕೆ ದೂರು ಸಲ್ಲಿಸುವುದರ ಕುರಿತು ಮತ್ತು ಪೋರ್ಟಲ್ ಬಗ್ಗೆ ಸಂಪೂರ್ಣ ವಿವರವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bima Sakhi-ಬಿಮಾ ಸಖಿ ಯೋಜನೆ: ಎಲ್ಐಸಿ ಯಿಂದ ಮಹಿಳಾ ಏಜೆಂಟರಿಗೆ ತಿಂಗಳಿಗೆ ರೂ 7,000/- ಸ್ಟೈಪೆಂಡ್!

ಸಾಮಾನ್ಯವಾಗಿ ಮೊಬೈಲ್ ಕದ್ದಾಗ ಅಥವಾ ಕಳೆದುಹೋದ ಮೊಬೈಲ್ ಅನ್ನು ದೊರೆತವರು ಅದರಲ್ಲಿರುವ ಸಿಮ್ ಅನ್ನು ತೆಗೆದು ಮೊಬೈಲ್ ಗೆ ಕರೆ ಬರದೇ ಇರುವ ಹಾಗೇ ಮಾಡಿಬಿಡುತ್ತಾರೆ ಇದರಿಂದ ಮೊಬೈಲ್ ಮಾಲೀಕರಿಗೆ ಕಳೆದು ಹೋದ ಮೊಬೈಲ್ ಅನ್ನು ಹುಡುಕುವುದು(Mobile Phone Tracker) ಕಷ್ಟಕರವಾಗಿ ಬಹುತೇಕ ಜನರು ಹಾಗೆಯೇ ಸುಮ್ಮನಾಗಿ ಬಿಡುತ್ತಾರೆ. ಆದರೆ ಕಳೆದುಹೋದ ಮೊಬೈಲ್ ಫೋನ್ ಅನ್ನೂ ಕೂಡ ರಿಕವರ್ ಮಾಡಲು ಸಾಧ್ಯ ಎಂಬುದು ಅನೇಕರಿಗೆ ತಿಳಿದಿಲ್ಲ. ಇದಕ್ಕಾಗಿ ಕೇಂದ್ರ ದೂರ ಸಂಪರ್ಕ ಇಲಾಖೆಯು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಎನ್ನುವ ಪೋರ್ಟಲ್ ಅನ್ನು ರೂಪಿಸಿದೆ.

Mobile Phone Trace-ಕೇಂದ್ರ ಪೋರ್ಟಲ್ ನಲ್ಲಿ ದಾಖಲಾದ ದೂರುಗಳ ಅಂಕಿ-ಅಂಶ:

ಕಳೆದ ಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಲು ಮತ್ತು ಮೊಬೈಲ್ ಎಲ್ಲಿ ಇದೆ ಎನ್ನುವ ಸ್ಥಳವನ್ನು(Mobile Phone Location Tracker) ಟ್ರೇಸ್ ಮಾಡಲು ಈ ಕುರಿತು ದೂರನ್ನು ಸಲ್ಲಿಸಲು ಕೇಂದ್ರ ದೂರ ಸಂಪರ್ಕ ಇಲಾಖೆಯು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಅನ್ನು ಜಾರಿಗೆ ತರಲಾಗಿದ್ದು ಪ್ರಸ್ತುತ ಈ ಪೋರ್ಟಲ್ ನಲ್ಲಿ ದಾಖಲಾಗಿರುವ ದೂರುಗಳ ಅಂಕಿ-ಅಂಶ ವಿವರ ಈ ಕೆಳಗಿನಂತಿವೆ.

  • 2023ರ ಮೇ 16ರಿಂದ ಈಚೆಗೆ ದಾಖಲಾದ ದೂರುಗಳು- 50 ಲಕ್ಷಕ್ಕೂ ಹೆಚ್ಚು
  • ಈ ಪೈಕಿ ಪೋನ್ ಬ್ಲಾಕ್ ಮಾಡಲಾದ ಪ್ರಕರಣಗಳು- 31 ಲಕ್ಷ ಫೋನ್​ಗಳನ್ನು
  • ಟ್ರೇಸ್ ಮಾಡಲಾದ ಮೊಬೈಲ್ ಗಳು- 19 ಲಕ್ಷ
  • ಮರಲಿ ಮಾಲೀಕರಿಗೆ ತಲುಪಿಸಿದ ಮೊಬೈಲ್ ಗಳು- 4.22 ಲಕ್ಷ

ಇದನ್ನೂ ಓದಿ: Crop Details-2025 ನೇ ಸಾಲಿನ ರೈತರ ಜಮೀನ ಬೆಳೆ ಸಮೀಕ್ಷೆ ವರದಿ ಬಿಡುಗಡೆ! ಇಲ್ಲಿದೆ ಪಹಣಿಯ ಬೆಳೆ ಮಾಹಿತಿ!

Why Should Block Your Mobile Phone If It Is Stolen-ಮೊಬೈಲ್ ಕಳುವಾದರೆ ಏಕೆ ಬ್ಲಾಕ್ ಮಾಡಬೇಕು?

ಮೊಬೈಲ್ ಫೋನ್ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ಬ್ಲಾಕ್ ಮಾಡುವುದು ಅತ್ಯಂತ ಮುಖ್ಯ. ಇದರ ಹಿಂದಿನ ಮುಖ್ಯ ಕಾರಣಗಳು ಇಲ್ಲಿವೆ:

1) ಡೇಟಾ ಸುರಕ್ಷತೆ (Data Protection): ನಿಮ್ಮ ಫೋನ್‌ನಲ್ಲಿ ಬ್ಯಾಂಕ್ ಅಪ್ಲಿಕೇಶನ್‌ಗಳು, UPI, ಪಾಸ್‌ವರ್ಡ್‌ಗಳು, ಫೋಟೋ, ವೀಡಿಯೋ, ಸಂದೇಶಗಳು ಇತ್ಯಾದಿ ವೈಯಕ್ತಿಕ ಮಾಹಿತಿ ಇರುತ್ತದೆ, ಕಳ್ಳರು ಅಥವಾ ಕಂಡುಕೊಂಡವರು ಇದನ್ನು ದುರ್ಬಳಕೆ ಮಾಡಬಹುದು ಹಣ ವರ್ಗಾಯಿಸುವುದು, ಬ್ಲ್ಯಾಕ್‌ಮೇಲ್, ಮಾಡಬಹುದು ಆದ್ದರಿಂದ ಮೊಬೈಲ್ ಫೋನ್ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ಬ್ಲಾಕ್ ಮಾಡುವುದು ಅತೀ ಅವಶ್ಯಕ.

2) SIM ಕಾರ್ಡ್ ಬ್ಲಾಕ್ ಮಾಡಿ: ದುರ್ಬಳಕೆ ತಡೆಗೆ SIM ಬ್ಲಾಕ್ ಮಾಡದಿದ್ದರೆ, ಕಳ್ಳರು ನಿಮ್ಮ ಸಂಖ್ಯೆಯಿಂದ OTP ಗಳನ್ನು ಪಡೆದು ಬ್ಯಾಂಕ್ ಖಾತೆ, UPI, ಇಮೇಲ್ ಇತ್ಯಾದಿಗಳನ್ನು ಹ್ಯಾಕ್ ಮಾಡಬಹುದು, ನಿಮ್ಮ ಹೆಸರಿನಲ್ಲಿ ಕರೆ ಮಾಡಿ ಸ್ನೇಹಿತರಿಂದ/ಕುಟುಂಬದಿಂದ ಹಣ ಕೇಳಬಹುದು.

3) IMEI ಬ್ಲಾಕ್ ಮಾಡಿ: ಫೋನ್ ಮರುಬಳಕೆ ತಡೆಗೆ IMEI (International Mobile Equipment Identity) ಎಂಬುದು ಫೋನ್‌ನ ವಿಶಿಷ್ಟ ಸಂಖ್ಯೆ, ಇದನ್ನು ಬ್ಲಾಕ್ ಮಾಡಿದರೆ, ಯಾವುದೇ SIM ಹಾಕಿದರೂ ಫೋನ್ ನೆಟ್‌ವರ್ಕ್‌ಗೆ ಸಂಪರ್ಕವಾಗುವುದಿಲ್ಲ → ಕಳ್ಳರು ಮಾರಾಟ ಮಾಡಲಾಗುವುದಿಲ್ಲ.

ಇದನ್ನೂ ಓದಿ: Free TV Repair Training-ಉಚಿತ ಟಿವಿ ಮತ್ತು ಎಲೆಕ್ಟ್ರಿಕ್ ಉಪಕರಣ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Online Mobile Trace With IMEI-ಆನ್ಲೈನ್ ನಲ್ಲಿ ದೂರು ಸಲ್ಲಿಸುವುದು ಹೇಗೆ?

ಮೊಬೈಲ್ ಬಳಕೆದಾರು ತಮ್ಮ ಮೊಬೈಲ್ ಅನ್ನು ಕಳೆದುಕೊಂಡರೆ ತಕ್ಷಣ ಕೇಂದ್ರ ದೂರ ಸಂಪರ್ಕ ಇಲಾಖೆಯ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಅನ್ನು ಭೇಟಿ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕವೇ ನಿಮ್ಮ ಮೊಬೈಲ್ ಅನ್ನು ಟ್ರೇಸ್ ಮಾಡಲು ದೂರನ್ನು ಸಲ್ಲಿಸಬಹುದು.

Step-1: ಮೊದಲಿಗೆ Online Mobile Trace With IMEI ಇಲ್ಲಿ ಕ್ಲಿಕ್ ಮಾಡಿ ಅಧಿಕೃತ www.ceir.gov.in ಜಾಲತಾಣವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Sprayer Subsidy-ಹೈ ಪ್ರೆಶರ್ ಪವರ್ ಸ್ಪ್ರೇಯರ್ ಸಹಾಯಧನದಲ್ಲಿ ಪಡೆಯಲು ಅರ್ಜಿ ಆಹ್ವಾನ!

Online Mobile Phone Trace

ಇದನ್ನೂ ಓದಿ: PUC ಮತ್ತು SSLC ಅಂತಿಮ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟ!

Step-2: ನಂತರ ಈ ಪೇಜ್ ನಲ್ಲಿ ನಿಮ್ಮ ಮೊಬೈಲ್ ನಂಬರ್, ಮೊಬೈಲ್ IMEI ನಂಬರ್, ಮೊಬೈಲ್ ಮಾಡೆಲ್, ಪೋಲಿಸ್ ಇಲಾಖೆಯಲ್ಲಿ ಸಲ್ಲಿಸಿದ ದೂರು ಪ್ರತಿ, ಮೊಬೈಲ್ ಮಾಲೀಕರ ವಿವರ ಸಲ್ಲಿಸಿ ಕೊನೆಯಲ್ಲಿ Declaration ಮೇಲೆ ಕ್ಲಿಕ್ ಮಾಡಿ "Proceed" ಬಟನ್ ಮೇಲೆ ಕ್ಲಿಕ್ ಮಾಡಿ ದೂರು ಸಲ್ಲಿಸಿ.

ಇದನ್ನೂ ಓದಿ: Narega Scheme Subsidy-ನರೇಗಾ ಯೋಜನೆಯಡಿ 5.0 ಲಕ್ಷದವರೆಗೆ ಆರ್ಥಿಕ ನೆರವು! ಇಲ್ಲಿದೆ ಸಂಪೂರ್ಣ ಮಾಹಿತಿ!

Mobile IMEI Number-ಪ್ರತಿಯೊಬ್ಬರು ಮೊಬೈಲ್ ನಲ್ಲಿರುವ IMEI ನಂಬರ್ ಗಳನ್ನು ಒಂದು ಕಡೆ ಬರೆದುಕೊಳ್ಳಿ:

ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ IMEI ನಂಬರ್ ಗಳನ್ನು ತಪ್ಪದೇ ಒಂದು ಕಡೆ ಸುರಕ್ಷಿತವಾಗಿ ಬರೆದಿಟ್ಟುಕೊಳ್ಳಿ ದೂರು ಸಲ್ಲಿಸಲು ಈ ನಂಬರ್ ಕಡ್ಡಾಯವಾಗಿದೆ IMEI ನಂಬರ್ ಮೊಬೈಲ್ ಹಿಂಬದಿಯಲ್ಲಿ ಅಥವಾ ಮೊಬೈಲ್ ಖರೀದಿ ರಶೀದಿಯಲ್ಲಿ ನಮೂದಿಸಿರಲಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: