Free Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

May 10, 2025 | Siddesh
Free Mobile Repair Training-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಸ್ವಂತ ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಯುವಕರಿಗೆ ಉಚಿತವಾಗಿ(Free Mobile Repair Training Application) ಒಂದು ತಿಂಗಳ ಮೊಬೈಲ್ ರಿಪೇರಿ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮೊಬೈಲ್ ರಿಪೇರಿ ಕ್ಷೇತ್ರದಲ್ಲಿ(Mobile Repair Training) ಕೌಶಲ್ಯವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಯುವಕರು ಈ ಸುವರ್ಣಾವಕಾಶವನ್ನು ಬಳಕೆ ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಿ ಈ ಕ್ಷೇತ್ರದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು.

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

ಈ ಅಂಕಣದಲ್ಲಿ ಮೊಬೈಲ್ ರಿಪೇರಿ(Mobile Repair) ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ತರಬೇತಿ ಆರಂಭ ದಿನಾಂಕ ಇನ್ನಿತರೆ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಅವಶ್ಯವಿರುವ ಯುವಕರಿಗೆ ಈ ಮಾಹಿತಿಯನ್ನು ತಲುಪಿಸಲು ನಮ್ಮೊಂದಿಗೆ ಸಹಕರಿಸಿ.

Mobile Repair Business-ಮೊಬೈಲ್ ಉದ್ಯಮದಲ್ಲಿ ಉತ್ತಮ ಅವಕಾಶ:

ಪ್ರಸ್ತುತ ಡಿಜಿಟಲ್ ಯುಗದಲ್ಲಿ ದಿನೇ ದಿನೇ ಸ್ಮಾರ್ಟ್ ಪೋನ್ ಬಳಕೆದಾರರು ಏರುಗತಿಯಲ್ಲೇ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಮೊಬೈಲ್ ಮಾರಾಟ, ರಿಪೇರಿ ಉದ್ಯಮ ವಲಯದಲ್ಲಿ ಹೆಚ್ಚು ಬೇಡಿಕೆ ಇದ್ದು ನಿರುದ್ಯೋಗಿ ಯುವಕರು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

Who Can Apply For Mobile Repair Training-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಮೊಬೈಲ್ ರಿಪೇರಿ ತರಬೇತಿಯನ್ನು ಪಡೆಯಲು ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 

ಅಭ್ಯರ್ಥಿಗೆ ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯ. 

ಅಭ್ಯರ್ಥಿಯು ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಬಿ.ಪಿ.ಎಲ್ ಕಾರ್ಡ ಹೊಂದಿರುವ ಅರ್ಜಿದಾರರಿಗೆ ತರಬೇತಿಯಲ್ಲಿ ಪಾಲ್ಗೊಳಲು ಪ್ರಥಮ ಅದ್ಯತೆ.

ಅಭ್ಯರ್ಥಿಗೆ ತರಬೇತಿಯನ್ನು ಮುಗಿಸಿದ ಬಳಿಕ ಸ್ವಂತ ಉದ್ಯೋಗವನ್ನು ಆರಂಭಿಸುವ ಇಚ್ಚೆಯನ್ನು ಹೊಂದಿರಬೇಕು.

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

free mobile repair training

Mobile Shop-ವಸತಿ ಮತ್ತು ಊಟ ಸಂಪೂರ್ಣ ಉಚಿತ:

ಮೊಬೈಲ್ ರಿಪೇರಿ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಅರ್ಜಿದಾರ ಅಭ್ಯರ್ಥಿಯು ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಇದಲ್ಲದೇ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗೆ ವಸತಿ ಮತ್ತು ಊಟ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ.

Free Mobile Repair Training Application-ಅರ್ಜಿ ಸಲ್ಲಿಸುವುದು ಹೇಗೆ?

ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮುಂಚಿತವಾಗಿ ಈ ಕೆಳಗೆ ನೀಡುವ ಮೊಬೈಲ್ ನಂಬರ್ ಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು ಜೊತೆಗೆ ತರಬೇತಿಯಲ್ಲಿ ಭಾಗವಹಿಸುವ ದಿನ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.

ಇದನ್ನೂ ಓದಿ: Diploma Admission-2025: ಸರ್ಕಾರಿ ಕೋಟಾದಡಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

Mobile Repair Training Duration-ತರಬೇತಿಯ ಒಟ್ಟು ಅವಧಿ:

ಉಚಿತ ಮೊಬೈಲ್ ರಿಪೇರಿ ತರಬೇತಿಯು ಒಟ್ಟು 30 ದಿನ ನಡೆಯಲಿದ್ದು ಈ ತರಬೇತಿಯಲ್ಲಿ ಮೊಬೈಲ್ ರಿಪೇರಿ ಕುರಿತು ಸಂಪೂರ್ಣ ಮಾಹಿತಿಯ ಜೊತೆಗೆ ಈ ಉದ್ದಿಮಿಯನ್ನು ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವುದರ ಕುರಿತು ಮಾರ್ಗದರ್ಶನವನ್ನು ನೀಡಲಾಗುತ್ತದೆ. ಜೂನ್-2025 ತಿಂಗಳಲ್ಲಿ ಈ ತರಬೇತಿಯು ಆರಂಭವಾಗಲಿದೆ.

Documents for Training-ತರಬೇತಿ ಪಡೆಯಲು ಒದಗಿಸಬೇಕಾದ ದಾಖಲೆಗಳು:

ಅರ್ಜಿದಾರರ ಅಧಾರ್ ಕಾರ್ಡ ಪ್ರತಿ

ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್

ಅರ್ಜಿದಾರರ ರೇಶನ್ ಕಾರ್ಡ

ಅರ್ಜಿದಾರರ ಮೊಬೈಲ್ ನಂಬರ್

ಇದನ್ನೂ ಓದಿ: Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

Training Center Address-ತರಬೇತಿ ನೀಡುವ ಕೇಂದ್ರದ ವಿಳಾಸ:

ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ, ಹಾವೇರಿ ಜಿಲ್ಲೆ.

ಹೆಚ್ಚಿನ ವಿವರ ಪಡೆಯಲು ಸಹಾಯವಾಣಿ: 8660219375

WhatsApp Group Join Now
Telegram Group Join Now
Share Now: