Diploma Application-ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ! ತಿಂಗಳಿಗೆ ರೂ. 2,500/- ಶಿಷ್ಯವೇತನ!

May 10, 2025 | Siddesh
Diploma Application-ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ! ತಿಂಗಳಿಗೆ ರೂ. 2,500/- ಶಿಷ್ಯವೇತನ!
Share Now:

2025-26ನೇ ಶೈಕ್ಷಣಿಕ ವರ್ಷಕ್ಕೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ (ಡಿ.ಹೆಚ್.ಟಿ.ಟಿ) ಕೋರ್ಸ್‌ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ ಅನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಈ ವಿಷಯದಲ್ಲಿ ವ್ಯಾಸಂಗ ಮಾಡಲು ಆಸಕ್ತಿಯನ್ನು ಹೊಂದಿರುವವರು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

ಈ ಕೋರ್ಸ್ ಗೆ  ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅರ್ಜಿ ನಮೂನೆ ದೌನ್ಲೋಡ್ ಮಾಡಿಕೊಳ್ಳುವ ವಿಧಾನ ಮತ್ತು ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಪ್ರಮುಖ ವಿವರಗಳು:

ಶಿಷ್ಯವೇತನ: ಕೋರ್ಸ್ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ. 2,500/- ಶಿಷ್ಯವೇತನ.

ವಸತಿಗೃಹ ಸೌಲಭ್ಯ: ಪುರುಷ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯ ಆಧಾರದ ಮೇಲೆ ವಸತಿಗೃಹ ಸೌಲಭ್ಯ.

ಇದನ್ನೂ ಓದಿ: Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

ಅರ್ಹತೆ:

ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿ (01-07-2025 ರಂತೆ):

ಸಾಮಾನ್ಯ ವರ್ಗ: 15 ರಿಂದ 23 ವರ್ಷ.

ಪ.ಜಾತಿ/ಪ.ಪಂಗಡ: 15 ರಿಂದ 25 ವರ್ಷ.

ಆಯ್ಕೆಯು ಅರ್ಹತಾ ಪರೀಕ್ಷೆಯ ಕ್ರೋಢೀಕೃತ ಅಂಕಗಳ ಮೆರಿಟ್ ಆಧಾರದ ಮೇಲೆ ಇರುತ್ತದೆ.

ಕೋರ್ಸ್ ಲಭ್ಯವಿರುವ ಸಂಸ್ಥೆಗಳು:

ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ-ಬೆಟಗೇರಿ (ಕರ್ನಾಟಕ): 22 ಸೀಟುಗಳು.

ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಸೇಲಂ (ತಮಿಳುನಾಡು): 12 ಸೀಟುಗಳು.

ಎಸ್.ಪಿ.ಕೆ.ಎಂ. ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ವೆಂಕಟಗಿರಿ (ನೆಲ್ಲೂರು, ಆಂಧ್ರಪ್ರದೇಶ): 03 ಸೀಟುಗಳು.

ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕಣ್ಣೂರು (ಕೇರಳ): 02 ಸೀಟುಗಳು.

ಒಟ್ಟು: 39 ಸೀಟುಗಳು.

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

ಪ್ರವೇಶ ಪ್ರಕ್ರಿಯೆ:

ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್‌ಗೆ ಕರೆಯಲಾಗುವುದು.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು Download Now ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪೂರ್ಣಗೊಂಡ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ “ಪ್ರಾಂಶುಪಾಲರು, ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ-582102” ಇವರಿಗೆ ಜೂನ್ 15, 2025 ರೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ದಾಖಲೆಗಳು:

1) ಆಧಾರ್ ಕಾರ್ಡ್ 

2) ಫೋಟೋ 

3) ಅಂಕಪಟ್ಟಿ 

4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ 

5) ಮೊಬೈಲ್ ನಂಬರ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ-ಬೆಟಗೇರಿ (ಮೊಬೈಲ್: 9449162822)

WhatsApp Group Join Now
Telegram Group Join Now
Share Now: