Pumpset Repair Training-ಉಚಿತ ಮೋಟಾರ್ ರಿವೈಂಡಿಂಗ್ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

November 28, 2026 | Siddesh

ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿ ಜಿಲ್ಲೆ ಕೇಂದ್ರದಿಂದ ಸ್ವ-ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ 30 ದಿನದ ಉಚಿತ ಉಚಿತ ಮೋಟಾರ್ ರಿವೈಂಡಿಂಗ್ ಮತ್ತು ರಿಪೇರಿ(Free Motor Rewinding Training ) ಹಾಗೂ ಹೌಸ್ ವೈರಿಂಗ್ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸ್ವಂತ ಉದ್ಯಮ ಆರಂಭಿಸಬೇಕು, ಕೈತುಂಬಾ ಆದಾಯ ಗಳಿಸಬೇಕು ಎಂದು ಯೋಚಿಸುತ್ತಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾವೇರಿ ವತಿಯಿಂದ ಉಚಿತ ಮೋಟಾರ್ ರಿವೈಂಡಿಂಗ್ ಮತ್ತು ಹೌಸ್ ವೈರಿಂಗ್(House Wiring Training) ತರಬೇತಿಯನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Bara Parihara List-ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದೆಯೇ ಎಂದು ಮೊಬೈಲ್‌ನಲ್ಲೇ ಪರಿಶೀಲಿಸಿ!

ಈ ತರಬೇತಿಯ ವಿಶೇಷವೆಂದರೆ ಯಾವುದೇ ಶುಲ್ಕವಿಲ್ಲದೆ ತಾಂತ್ರಿಕ ಕೌಶಲ್ಯವನ್ನು ಕಲಿಯಬಹುದು. ತರಬೇತಿ ಪೂರ್ಣಗೊಳಿಸಿದ ನಂತರ ಸ್ವಂತವಾಗಿ ಮೋಟಾರ್ ರಿಪೇರಿ ಅಂಗಡಿ(Pumpset Repair Shop), ಎಲೆಕ್ಟ್ರಿಕಲ್ ಸರ್ವಿಸ್ ಸೆಂಟರ್(Electrician) ಆರಂಭಿಸಲು ಅಥವಾ ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಜೊತೆಗೆ ತರಬೇತಿ ಮುಗಿದ ಬಳಿಕ ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ. ಈ ತರಬೇತಿ ಕುರಿತು ಸಂಸ್ಥೆಯಿಂದ ಹೊರಡಿಸಿರುವ ಅಧಿಕೃತ ಪ್ರಕಟಣೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Application Last Date-ನೋಂದಣಿಗೆ ಕೊನೆಯ ದಿನಾಂಕ- 17 ಡಿಸೆಂಬರ್ 2026

Free Motor Rewinding Training-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

30 ದಿನಗಳ ಉಚಿತ ಮೋಟಾರ್ ರಿವೈಂಡಿಂಗ್ ಮತ್ತು ರಿಪೇರಿ ತರಬೇತಿಯನ್ನು ಪಡೆಯಲು ತರಬೇತಿ ಕೇಂದ್ರದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಪಟ್ಟಿ ಹೀಗಿದೆ:

  • ಅರ್ಜಿದಾರರ ವಯಸ್ಸು 18 ರಿಂದ 50 ವರ್ಷದ ಒಳಗಿರಬೇಕು.
  • ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ನಿರುದ್ಯೋಗಿ ಯುವಕರು.
  • ಮೋಟಾರ್ ರಿಪೇರಿ ಮತ್ತು ಎಲೆಕ್ಟ್ರಿಕಲ್ ಕೆಲಸ ಕಲಿಯಲು ಆಸಕ್ತಿ ಇರುವವರು.
  • ಗ್ರಾಮೀಣ ಪ್ರದೇಶದ ಸ್ವಯಂ ಉದ್ಯೋಗ ಆಕಾಂಕ್ಷಿಗಳಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Salon Subsidy Scheme: ಸವಿತಾ ಸಮಾಜ ನಿಗಮದಿಂದ ಸಲೂನ್ ಆರಂಭಿಲು ₹10 ಲಕ್ಷ ಆರ್ಥಿಕ ನೆರವು!

Motor Rewinding Training Topic-ತರಬೇತಿಯಲ್ಲಿ ಏನೆಲ್ಲ ಕಲಿಸಲಾಗುತ್ತದೆ?

1) ಮೋಟಾರ್ ರಿವೈಂಡಿಂಗ್ ತರಬೇತಿ

  • ಸಬ್‌ಮರ್ಸಿಬಲ್ ಮೋಟಾರ್ ರಿಪೇರಿ.
  • ಮೊನೊಬ್ಲಾಕ್ ಹಾಗೂ 3 ಫೇಸ್ ನೀರಾವರಿ ಮೋಟಾರ್ ರಿಪೇರಿ.
  • ಸಿಂಗಲ್ ಫೇಸ್ ಮೋಟಾರ್ ರಿಪೇರಿ.

2) ಹೌಸ್ ವೈರಿಂಗ್ ತರಬೇತಿ

  • ಇನ್ವರ್ಟರ್ ಕನೆಕ್ಷನ್.
  • ಸೋಲಾರ್ ವೈರಿಂಗ್.
  • ತ್ರೀ ಫೇಸ್ ಇಂಡಸ್ಟ್ರಿಯಲ್ ವೈರಿಂಗ್.

ಸಂಸ್ಥೆಯ ಪ್ರಕಟಣೆಯಲ್ಲಿ ಮೋಟಾರ್ ರಿವೈಂಡಿಂಗ್, ಎಲೆಕ್ಟ್ರಿಕಲ್ ವೈರಿಂಗ್ ಹಾಗೂ ಸಂಬಂಧಿತ ರಿಪೇರಿ ಕೌಶಲ್ಯಗಳಿಗೆ ತರಬೇತಿ ನೀಡುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: Free Sewing Machine-ವಿಶ್ವಕರ್ಮ ನಿಗಮದಿಂದ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಮಹಿಳೆಯರಿಗೆ ಸುವರ್ಣಾವಕಾಶ!

Training Registration Method-ನೋಂದಣಿ ಮಾಡಿಕೊಳ್ಳುವುದು ಹೇಗೆ?

ಈ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವವರು ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ಈ ಮೊಬೈಲ್ 8660219375 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

Motor Rewinding Business-ಪ್ರಸ್ತುತ ಈ ಕ್ಷೇತ್ರದಲ್ಲಿದೆ ಉತ್ತಮ ಬೇಡಿಕೆ:

ಇಂದಿನ ದಿನಗಳಲ್ಲಿ ಮೋಟಾರ್ ರಿವೈಂಡಿಂಗ್ ಮತ್ತು ಎಲೆಕ್ಟ್ರಿಕಲ್ ವೈರಿಂಗ್ ಕೆಲಸಗಳಿಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉತ್ತಮ ಬೇಡಿಕೆಯಿದೆ. ರೈತರ ಜಮೀನುಗಳಲ್ಲಿ ಕೊಳವೆಬಾವಿ ಮತ್ತು ನೀರಾವರಿ ಪಂಪ್‌ಸೆಟ್‌ಗಳ ಬಳಕೆ ಹೆಚ್ಚಿದೆ. ಮೋಟಾರ್ ಸುಟ್ಟಾಗ ಅಥವಾ ದುರಸ್ತಿಯಾದಾಗ ರಿಪೇರಿ ಮಾಡುವ ತಂತ್ರಜ್ಞರ ಅವಶ್ಯಕತೆ ಇರುತ್ತದೆ.

ಇದನ್ನೂ ಓದಿ: Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

Govt Subsidy Scheme For Business-ಈ ಉದ್ದಿಮೆಯನ್ನು ಆರಂಭಿಸಲು ಯಾವೆಲ್ಲ ಯೋಜನೆಯಡಿ ಆರ್ಥಿಕ ನೆರವು ಪಡೆಯಬಹುದು?

1) ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY)
2) ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP)
3) ರಾಜ್ಯದಲ್ಲಿರುವ ವಿವಿಧ ಅಭಿವೃದ್ದಿ ನಿಗಮಗಳಲ್ಲಿರುವ ಸ್ವ-ಉದ್ಯೋಗ ನೇರ ಸಾಲ ಯೋಜನೆ.

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP) ಅಡಿಯಲ್ಲಿ ಉದ್ದಿಮೆ ಪ್ರಾರಂಭಿಸಲು ಅವಶ್ಯವಿರುವ ಮಶಿನರಿ/ಯಂತ್ರಗಳನ್ನು ಖರೀದಿ ಮಾಡಲು ನೆರವು ಪಡೆಯಲು ನಿಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕೆ ಕೇಂದ್ರ(DIC) ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬ್ಯಾಂಕ್ ಮೂಲಕ ಸಾಲವನ್ನು ಪಡೆದು ಗರಿಷ್ಠ ಶೇ 35% ಸಬ್ಸಿಡಿಯೊಂದಿಗೆ ಉದ್ದಿಮೆಯನ್ನು ಆರಂಭಿಸಬಹುದು.

ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY) ಈ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೇ ಉದ್ದಿಮೆಯನ್ನು ಆರಂಭಿಸಲು ಅಥವಾ ವಿಸ್ತರಣೆ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯಿರುವ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಅಗತ್ಯ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಿ.

ರಾಜ್ಯದಲ್ಲಿರುವ ವಿವಿಧ ಅಭಿವೃದ್ದಿ ನಿಗಮಗಳಲ್ಲಿರುವ ಸ್ವ-ಉದ್ಯೋಗ ನೇರ ಸಾಲ ಯೋಜನೆಯಡಿ ಶೇ 50% ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ನಿಮ್ಮ ಜಿಲ್ಲೆಯ ದೇವರಾಜ್ ಅರಸು ನಿಗಮದ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸುವ ಕುರಿತು ಅಗತ್ಯ ಮಾಹಿತಿಯನ್ನು ಪಡೆಯಬಹುದು.

Helpline-ತರಬೇತಿ ಮತ್ತು ಬ್ಯಾಂಕ್ ಲೋನ್ ಪಡೆಯುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8660219375

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: