Skill Training Application-10 ತಿಂಗಳ ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ! ಪ್ರತಿ ತಿಂಗಳು ಶಿಷ್ಯವೇತನ!

May 11, 2025 | Siddesh
Skill Training Application-10 ತಿಂಗಳ ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನ! ಪ್ರತಿ ತಿಂಗಳು ಶಿಷ್ಯವೇತನ!
Share Now:

ಕರ್ನಾಟಕ ರಾಜ್ಯ ಶಿಶುಕಲ್ಯಾಣ ಸಂಸ್ಥೆಯು ಗ್ರಾಮೀಣ ಹಾಗೂ ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಯುವತಿಯರಿಗೆ ಮತ್ತು ಮಹಿಳೆಯರಿಗೆ ವೃತ್ತಿಪರ ತರಬೇತಿ(Skill Training Application) ನೀಡುತ್ತಿರುವ 2025 ನೇ ಸಾಲಿನ ವೃತ್ತಿಪರ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ./ ಪಿಯುಸಿ ಪಾಸ್ ಅಥವಾ ಫೇಲ್ ಆದ 17 ರಿಂದ 35 ವರ್ಷದೊಳಗಿನ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿದೆ. ತರಬೇತಿ ಪಡೆದ ಅಭ್ಯರ್ಥಿಗಳು ಬಾಲವಾಡಿ, ಶಿಶುವಿಹಾರ, ಹಗಲು ಪೋಷಣಾ ಕೇಂದ್ರ(Skill improvement Training), ವಿಶೇಷ ಮಕ್ಕಳ ಶಾಲೆ, ಗಾಮೆರ್ಂಟ್ಸ್ ಕಂಪೆನಿಗಳಲ್ಲಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಲು ಅರ್ಹರಾಗುತ್ತಾರೆ.

ಇದನ್ನೂ ಓದಿ: Diploma Application-ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ! ತಿಂಗಳಿಗೆ ರೂ. 2,500/- ಶಿಷ್ಯವೇತನ!

ಜೂನ್ 10 ರಿಂದ ಬೆಂಗಳೂರಿನ ಜಯಮಹಲ್ ಬಡಾವಣೆಯ ಬಾಲಸೇವಿಕಾ ತರಬೇತಿ ಕೇಂದ್ರದಲ್ಲಿ(Skill Training Center) ತರಬೇತಿ ಆರಂಭವಾಗಲಿದೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅವಶ್ಯಕತೆ ಇರುವವರಿಗೆ, ಉಚಿತ ವಸತಿ ಮತ್ತು ಊಟದ ಸೌಲಭ್ಯವಿದೆ. ಅಭ್ಯರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನವಿರುತ್ತದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 10 ಜೂನ್ 2025
ತರಬೇತಿ ಪ್ರಾರಂಭ ದಿನಾಂಕ- 31 ಮೇ 2025

Documents Fofr Training-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ ಪ್ರತಿ
ಪೋಟೋ
ಬ್ಯಾಂಕ್ ಪಾಸ್ ಬುಕ್ ಪ್ರತಿ
ಶಾಲಾ ವ್ಯಾಸಂಗ ಪ್ರಮಾಣ ಪತ್ರ
ಅಂಕಪಟ್ಟಿ
ಮೊಬೈಲ್ ನಂಬರ್

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

skill training

How To Apply-ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬೆಂಗಳೂರಿನ ಜಯಮಹಲ್ ಬಡಾವಣೆಯ ಬಾಲಸೇವಿಕಾ ತರಬೇತಿ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Training Duration-ತರಬೇತಿ ಅವಧಿ:

ವೃತ್ತಿಪರ ತರಬೇತಿಯು ಒಟ್ಟು ತಿಂಗಳು ನಡೆಯಲಿದ್ದು ಈ ತರಬೇತಿಯಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೆ ಉಚಿತವಾಗಿ ವೃತ್ತಿಪರ ಕೌಲಶ್ಯದ ಕುರಿತು ತರಬೇತಿಯನ್ನು ನೀಡಲಾಗುತ್ತದೆ.

Free Skill Training-ಉಚಿತ ತರಬೇತಿ:

ಈ ವೃತ್ತಿಪರ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಈ ತರಬೇತಿಯಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

Skill Training Center Address-ತರಬೇತಿ ನಡೆಯುವ ಸ್ಥಳ:

ಕರ್ನಾಟಕ ರಾಜ್ಯ ಶಿಶುಕಲ್ಯಾಣ ಸಂಸ್ಥೆ, ಬಾಲಸೇವಿಕಾ ತರಬೇತಿ ಕೇಂದ್ರ, ನಂ.135, 3ನೇ ಅಡ್ಡರಸ್ತೆ, ನಂದಿದುರ್ಗ ರಸ್ತೆ, ಜಯಮಹಲ್ ಬಡಾವಣೆ, ಬೆಂಗಳೂರು-46

For More Information-ಹೆಚ್ಚಿನ ಮಾಹಿತಿಗಾಗಿ:

ದೂರವಾಣಿ ಸಂಖ್ಯೆ 080-22925898 ಹಾಗೂ ಕರ್ನಾಟಕ ರಾಜ್ಯ ಶಿಶುಕಲ್ಯಾಣ ಸಂಸ್ಥೆ, ಬಾಲಸೇವಿಕಾ ತರಬೇತಿ ಕೇಂದ್ರ, ನಂ.135, 3ನೇ ಅಡ್ಡರಸ್ತೆ, ನಂದಿದುರ್ಗ ರಸ್ತೆ, ಜಯಮಹಲ್ ಬಡಾವಣೆ, ಬೆಂಗಳೂರು-46 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!

WhatsApp Group Join Now
Telegram Group Join Now
Share Now: