PC Job Notification-3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!

June 8, 2026 | Siddesh
PC Job Notification-3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!
Share Now:

ಬೆಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿದ್ದ ರಾಜ್ಯದ ಯುವಜನತೆಗೆ ಕರ್ನಾಟಕ ಪೊಲೀಸ್ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ 'ಮಿಕ್ಕಿಳಿದ ವೃಂದದ' (ಉಳಿಕೆ ಮೂಲ) ಒಟ್ಟು 3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ(Police Constable Recruitment 2026) ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪೊಲೀಸ್ ನೇಮಕಾತಿ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಾರ್ಯಾಲಯದಿಂದ ಈ ಮಹತ್ವದ ಪ್ರಕಟಣೆ ಹೊರಬಿದ್ದಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ, ಈ ಬಾರಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ ತೃತೀಯ ಲಿಂಗಿ (Transgender) ಅಭ್ಯರ್ಥಿಗಳಿಗೂ ಮೀಸಲಾತಿಯನ್ನು ಕಲ್ಪಿಸಿರುವುದು ವಿಶೇಷವಾಗಿದೆ. ಲಿಖಿತ ಪರೀಕ್ಷೆಯನ್ನು ಆಫ್‌ಲೈನ್-ಒಎಂಆರ್ ಮಾದರಿಯಲ್ಲಿ (Offline-OMR type) ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನೂ ಕೂಡ ನಿಗದಿಪಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Police Constable Job) ಗಳಿಸುವ ಅಂಕಗಳು ಮತ್ತು ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Scholarship Application-ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

ಈ ನೇಮಕಾತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯೊಂದಿಗೆ(Police Constable Salary) ಇಲಾಖೆಯ ಸವಲತ್ತುಗಳು ಸಿಗಲಿವೆ. ನೇರ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳು ಒಟ್ಟು ಎರಡು ವರ್ಷ ಆರು ತಿಂಗಳ ಕಾಲ ಖಾಯಂ ಪೂರ್ವ ಅವಧಿಯಲ್ಲಿ (Probationary Period) ಇರಲಿದ್ದಾರೆ ಹಾಗೂ ಇಲಾಖೆ ನಿಗದಿಪಡಿಸಿದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಒಂಬತ್ತು ತಿಂಗಳ ಕಾಲ ಮೂಲ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಬೇಕಿರುತ್ತದೆ. ಪ್ರಸ್ತುತ ಜೂನ್ 8 ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಒಟ್ಟು ಹುದ್ದೆಗಳು (Total Vacancies)

ಒಟ್ಟು 3,395 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

  • ನೇರ ಪುರುಷ: 2,266 ಹುದ್ದೆಗಳು
  • ನೇರ ಮಹಿಳಾ: 755 ಹುದ್ದೆಗಳು
  • ಸೇವಾನಿರತ ಪುರುಷ: 257 ಹುದ್ದೆಗಳು
  • ಸೇವಾನಿರತ ಮಹಿಳಾ: 82 ಹುದ್ದೆಗಳು
  • ತೃತೀಯ ಲಿಂಗಿ ಅಭ್ಯರ್ಥಿಗಳು: 35 ಹುದ್ದೆಗಳು

ಇದನ್ನೂ ಓದಿ: Free Bus Pass-ವಿದ್ಯಾರ್ಥಿ ಸಮೂಹಕ್ಕೆ ‘ಸಿಹಿ ಸುದ್ದಿ’: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಭಾಗ್ಯ!

ವೇತನ ಶ್ರೇಣಿ (Pay Scale)

  • ರೂ. 37,500 – 76,100/- (ದರ್ಜೆವಾರು ಹೆಚ್ಚಳದ ವಿವರ: ರೂ. 37500-900-39300-1000-43300-1125-47800-1250-52800-1375-58300-1500-64300-1650-74200-1900-76100)

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು(Important Dates)

  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: 08.06.2026
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03.07.2026
  • ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 04.07.2026
  • ಲಿಖಿತ ಪರೀಕ್ಷೆ ನಡೆಯುವ ದಿನಾಂಕ (ತಾತ್ಕಾಲಿಕ): 02.08.2026 (ಬೆಳಿಗ್ಗೆ 10:30 ರಿಂದ 12:00 ರವರೆಗೆ)

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು (Eligibility Criteria)

ಶೈಕ್ಷಣಿಕ ವಿದ್ಯಾರ್ಹತೆ:

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು (CBSE 12ನೇ ತರಗತಿ, ICSE, ಇತರೆ ರಾಜ್ಯ ಮಂಡಳಿಗಳ 12ನೇ ತರಗತಿ, NIOS ಮುಂತಾದವುಗಳನ್ನು ತತ್ಸಮಾನ ಎಂದು ಪರಿಗಣಿಸಲಾಗುವುದು).
  • ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೊಮಾ ಹಾಗೂ ಜೆ.ಓ.ಸಿ (JOC) ಕೋರ್ಸ್‌ಗಳನ್ನು ಕೆಲವು ನಿರ್ದಿಷ್ಟ ಷರತ್ತುಗಳೊಂದಿಗೆ ತತ್ಸಮಾನ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Pension Scheme-14 ಲಕ್ಷ ಜನರ ಮಾಸಿಕ ಪಿಂಚಣಿ ಸ್ಥಗಿತ! ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!

ವಯೋಮಿತಿ (Age Limit):

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರದ ಆದೇಶದಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು, ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:

  • ಸಾಮಾನ್ಯ ಅರ್ಹತೆ (GM) ಅಭ್ಯರ್ಥಿಗಳಿಗೆ: ಗರಿಷ್ಠ 33 ವರ್ಷಗಳು.
  • SC/ST/OBC (2A, 2B, 3A, 3B, ಪ್ರವರ್ಗ-1) ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷಗಳು.
  • ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳು.
  • ಸೇವಾನಿರತ ಅಭ್ಯರ್ಥಿಗಳಿಗೆ: ಸಾಮಾನ್ಯ ವರ್ಗಕ್ಕೆ 38 ವರ್ಷ ಹಾಗೂ SC/ST/OBC ಅಭ್ಯರ್ಥಿಗಳಿಗೆ 40 ವರ್ಷಗಳು.

ದೈಹಿಕ ಗುಣಮಟ್ಟದ ಮಾನದಂಡಗಳು (Physical Standard Test):

  • ಪುರುಷ ಮತ್ತು ಸೇವಾನಿರತ ಪುರುಷ ಅಭ್ಯರ್ಥಿಗಳು: ಕನಿಷ್ಠ ಎತ್ತರ: 168 ಸೆಂ.ಮೀ, ಕನಿಷ್ಠ ಎದೆಯ ಸುತ್ತಳತೆ: 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ ಕನಿಷ್ಠ 5 ಸೆಂ.ಮೀ ವಿಸ್ತರಣೆ ಇರಬೇಕು).
  • ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳು: ಕನಿಷ್ಠ ಎತ್ತರ: 157 ಸೆಂ.ಮೀ, ಕನಿಷ್ಠ ತೂಕ: 45 ಕೆ.ಜಿ.
  • (ಕರ್ನಾಟಕದ ಅರಣ್ಯ ಪ್ರದೇಶದ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 155 ಸೆಂ.ಮೀ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 150 ಸೆಂ.ಮೀ ವಿನಾಯಿತಿ ಇರುತ್ತದೆ).

ಇದನ್ನೂ ಓದಿ: Beauty Parlour Training-ಮಹಿಳೆಯರಿಗೆ 35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

Step-1: ಅಭ್ಯರ್ಥಿಗಳು ಮೊದಲಿಗೆ ಈ "PC Online Application" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ KEA ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಮೇಲೆ ಕಾಣಿಸುವ "ನೇಮಕಾತಿ" ವಿಭಾಗದ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ ಮಾಡಿದ ಬಳಿಕ ಅದರ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Aadhaar History-ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ? 2 ನಿಮಿಷದಲ್ಲಿ ಹೀಗೆ ಪತ್ತೆ ಹಚ್ಚಿ!

ಅರ್ಜಿ ಶುಲ್ಕ(Application Fee):

ಸಾಮಾನ್ಯ/2A/2B/3A/3B ಅಭ್ಯರ್ಥಿಗಳಿಗೆ ರೂ. 750/- ಹಾಗೂ SC/ST/Cat-1/ಮೂಲ ನಿವಾಸಿ ಬುಡಕಟ್ಟು/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ರೂ. 500/- ಆನ್‌ಲೈನ್ ಮೂಲಕವೇ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಮತ್ತು ಪರೀಕ್ಷೆಗೆ ಹಾಜರಾಗಲು ಅವಶ್ಯಕ ದಾಖಲೆಗಳು:

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯ ಜೆರಾಕ್ಸ್ ಪ್ರತಿ ಹಾಗೂ ದೈಹಿಕ/ಲಿಖಿತ ಪರೀಕ್ಷೆಯ ಸಮಯಕ್ಕೆ ಕೆಳಗಿನ ಯಾವುದಾದರೂ ಒಂದು ಮೂಲ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು:

  • ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಜೆರಾಕ್ಸ್ ಪ್ರತಿ (Application Printout).
  • ಪರೀಕ್ಷಾ ಪ್ರವೇಶ ಪತ್ರ (Hall Ticket).
  • ಪಿಯುಸಿ (PUC) / 12ನೇ ತರಗತಿ ಅಂಕಪಟ್ಟಿ.
  • ಮೂಲ ಗುರುತಿನ ಚೀಟಿಗಳು: ಆಧಾರ್ ಕಾರ್ಡ್ (AADHAR CARD), ಪ್ಯಾನ್ ಕಾರ್ಡ್ (PAN Card), ಚಾಲನಾ ಪರವಾನಗಿ ಪತ್ರ (Driving License), ಪಾಸ್‌ಪೋರ್ಟ್ (Passport), ಮತದಾರರ ಗುರುತಿನ ಚೀಟಿ (EPIC), ಅಥವಾ ಭಾವಚಿತ್ರವಿರುವ ಬ್ಯಾಂಕ್ ಪಾಸ್ ಬುಕ್.
  • ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬುಡಕಟ್ಟು ಪ್ರಮಾಣ ಪತ್ರ (ಅನ್ವಯಿಸುವವರಿಗೆ).

(ಗಮನಿಸಿ: ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು 100 ಅಂಕಗಳಿಗೆ ಇರುತ್ತದೆ. ಅವಧಿ 1.5 ಗಂಟೆ. ಪ್ರತಿಯೊಂದು ತಪ್ಪು ಉತ್ತರಕ್ಕೂ 0.25 ರಷ್ಟು ಋಣಾತ್ಮಕ (Negative) ಅಂಕಗಳಿರುತ್ತವೆ).

Contact Number-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು KEA ದೂರವಾಣಿ ಸಂಖ್ಯೆ: 080 - 23460460 ( ಕೆಲಸದ ದಿನಗಳಲ್ಲಿ 10:30 ರಿಂದ 17:30 ಗಂಟೆ)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: