MSP Price-2025: ರಾಗಿ ಸೇರಿದಂತೆ 14 ಬೆಳೆಯ ಬೆಂಬಲ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ!

May 30, 2025 | Siddesh
MSP Price-2025: ರಾಗಿ ಸೇರಿದಂತೆ 14 ಬೆಳೆಯ ಬೆಂಬಲ ಬೆಲೆ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ!
Share Now:

ಕೇಂದ್ರ ಸರ್ಕಾರದಿಂದ ಪ್ರತಿ ವರ್ಷದಂತೆ ಮುಂಗಾರು ಹಂಗಾಮಿಗಿಂತ ಮುಂಚಿತವಾಗಿ ಬೆಂಬಲ ಬೆಲೆ ಯೋಜನೆಯಡಿ(MSP Price Hike) ಕೃಷಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಳ ಮಾಡುವ ರೀತಿಯಲ್ಲಿ ಈ ಬಾರಿಯು ಮುಂಗಾರು ಪೂರ್ವದಲ್ಲಿ 14 ಬೆಳೆಯ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲು ಅಧಿಕೃತ ಅನುಮೋದನೆಯನ್ನು ನೀಡಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2025-26ರ ಮುಂಗಾರು ಹಂಗಾಮಿನ ಒಟ್ಟು 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಯನ್ನು ಹೆಚ್ಚಳ ಮಾಡಲು ಅಧಿಕೃತ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: Student Scholarship-ರೂ 6,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಬೆಂಬಲ ಬೆಲೆ(Bembala bele) ಏರಿಕೆಯಿಂದಾಗಿ ರೈತರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸಿಕೊಳ್ಳಲು ಬಿತ್ತನೆಗೂ ಮುಂಚಿತವಾಗಿ ಅನುಮೋದನೆ ನೀಡಿರುವುದು ಅನುಕೂಲವಾಗಿದೆ. ಈ ಲೇಖನದಲ್ಲಿ ಯಾವೆಲ್ಲ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ? ಬೆಳೆವಾರು ಬೆಂಬಲ ಬೆಲೆ ಏರಿಕೆ ಮೊತ್ತದ ವಿವರ ಹಾಗೂ ರೈತರು ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ಸಂಪೂರ್ಣ ವಿವರವನ್ನು ಸಹ ಈ ಕೆಳಗೆ ಹಂಚಿಕೊಳ್ಳಲಾಗಿದೆ.

MSP Price Hike News-ಯಾವೆಲ್ಲ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ?

1) ಭತ್ತ
2) ಭತ್ತ ಎ ಗೇಡ್
3) ಜೋಳ(ಹೈಬ್ರಿಡ್)
4) ಮಾಲ್ದಂಡಿ ಜೋಳ
5) ಸಜ್ಜೆ
6) ರಾಗಿ
7) ಮೆಕ್ಕೆಜೋಳ
8) ತೊಗರಿ
9) ಹೆಸರುಕಾಳು

ಇದನ್ನೂ ಓದಿ: Free Vehicle Training-ಉಚಿತ ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ!

10) ಉದ್ದು
11) ನೆಲಗಡಲೆ
12) ಸೂರ್ಯಕಾಂತಿ
13) ಸೋಯಾಬೀನ್
14) ಎಳ್ಳು
15) ಹುಚ್ಚೆಳ್ಳು
16) ಹತ್ತಿ(ಮಧ್ಯಮ ಎಳೆ)
17) ಹತ್ತಿ(ಉದ್ದನೆಯ ಎಳೆ)

MSP Price

Crop Wise MSP Price-2025: ಬೆಳೆವಾರು ಬೆಂಬಲ ಬೆಲೆ ಏರಿಕೆ ವಿವರ(ಕ್ವಿಂಟಾಲ್ ಗೆ):

ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಪ್ರಸ್ತುತ ಸಾಲಿಗೆ ಬೆಳೆವಾರು ಹೆಚ್ಚಳ ಮಾಡಿದ ಬೆಲೆ ವಿವರ ಈ ಕೆಳಗಿನಂತಿದೆ:

ಇದನ್ನೂ ಓದಿ: Diesel Pump Subsidy-ಶೇ 90% ಸಬ್ಸಿಡಿಯಲ್ಲಿ ಡಿಸೇಲ್ ಪಂಪ್ ಪಡೆಯಲು ಅರ್ಜಿ!

ಬೆಳೆ2024-252025-26ಹೆಚ್ಚಳ
ಭತ್ತ2,3002,36969
ಭತ್ತ ಎ ಗೇಡ್2,3202,38969
ಜೋಳ(ಹೈಬ್ರಿಡ್)3,3713,699328
ಮಾಲ್ದಂಡಿ ಜೋಳ3,4213,749328
ಸಜ್ಜೆ2,6252,775150
ರಾಗಿ4,2904,886596
ಮೆಕ್ಕೆಜೋಳ2,2252,400175
ತೊಗರಿ7,5508,000450
ಹೆಸರುಕಾಳು8,6828,76886
ಉದ್ದು7,4007,800400
ನೆಲಗಡಲೆ6,7837,721441
ಸೂರ್ಯಕಾಂತಿ7,2807,721441
ಸೋಯಾಬೀನ್4,8925,328436
ಎಳ್ಳು9,2679,846579
ಹುಚ್ಚೆಳ್ಳು8,7179,537820
ಹತ್ತಿ(ಮಧ್ಯಮ ಎಳೆ)-7,1217,710589
ಹತ್ತಿ(ಉದ್ದನೆಯ ಎಳೆ)-7,1218,110589

ಈ ಬಾರಿ ಬೆಂಬಲ ಬೆಲೆ ಯೋಜನೆಯಡಿ ಹುಚ್ಚೆಳು ಬೆಳೆಗೆ ಅತ್ಯಧಿಕ ರೂ 820/- ಪ್ರತಿ ಕ್ವಿಂಟಾಲ್ ಗೆ ಏರಿಕೆ ಮಾಡಲಾಗಿದೆ ಭತ್ತ ಅತೀ ಕಡಿಮೆ ಏರಿಕೆ ಮಾಡಿರುವ ಬೆಳೆಯಾಗಿದ್ದು ಪ್ರತಿ ಕ್ವಿಂಟಾಲ್ ಗೆ ರೂ 69/- ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: Free Hostel-ಉಚಿತ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ!

Raagi MSP Price-2025: ರಾಗಿ ಬೆಳೆಗಾರರಿಗೆ ಉತ್ತಮ ದರ:

ರಾಜ್ಯದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಕೃಷಿಕರು ರಾಗಿಯನ್ನು ಬೆಳೆಯುತ್ತಿದ್ದು ಇಂತಹ ರೈತರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಪ್ರತಿ ಕ್ವಿಂಟಾಲ್ ರಾಗಿಗೆ ರೂ 4,886 ನಿಗದಿ ಮಾಡಿ ರುವುದರಿಂದ ರೈತರಿಗೆ ಉತ್ತಮ ದರ ದೊರೆಯುತ್ತದೆ.

ಕಳೆದ ವರ್ಷ ಪ್ರತಿ ಕ್ವಿಂಟಾಲ್ ರಾಗಿಗೆ ರೂ 4,290/- ನಿಗದಿಪಡಿಸಲಾಗಿತ್ತು ಅದರೆ ಪ್ರಸ್ತುತ ವರ್ಷ ಪ್ರತಿ ಕ್ವಿಂಟಾಲ್ ಗೆ ರೂ 596/- ಏರಿಕೆ ಮಾಡಿ ರೂ 4,886 ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Bus Pass Application- ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

Bembala Bele Yojane-ಬೆಂಬಲ ಬೆಲೆಯಲ್ಲಿ ಉತ್ಪನ್ನವನ್ನು ಮಾರಾಟ ಮಾಡುವುದು ಹೇಗೆ?

ರೈತರು ಈ ಮೇಲೆ ತಿಳಿಸಿರುವ ಕೃಷಿ ಉತ್ಪನ್ನಗಳನ್ನು ತಮ್ಮ ಜಮೀನಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದರೆ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲು ಕೇಂದ್ರಗಳನ್ನು ಬಹುತೇಕ ಡಿಸೆಂಬರ್ ನಂತರ ತೆರೆದಾಗ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಉತ್ಪನ್ನವನ್ನು ಬೆಂಬಲೆ ಬೆಲೆಯಲ್ಲಿ ಮಾರಾಟ ಮಾಡಲು ಮುಂಚಿತವಾಗಿ ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬೇಕು.

ಗಮನಿಸಿ: ಬೆಳೆ ಸಮೀಕ್ಷೆ(Crop Survey) ಮೊಬೈಲ್ ಅಪ್ಲಿಕೇಶನ್ ನಲ್ಲಿ ಬೆಳೆ ವಿವರವನ್ನು ತಪ್ಪದೇ ಸರಿಯಾಗಿ ದಾಖಲಿಸಿದ್ದಲ್ಲಿ ಮಾತ್ರ ಬೆಂಬಲೆ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Sub Registrar Office-ಸಾರ್ವಜನಿಕ ಪ್ರಕಟಣೆ ಇನ್ಮುಂದೆ ಈ ದಿನವು ಸಹ ಸಬ್ ರಿಜಿಸ್ಟ್ರಾರ್ ತೆರೆದಿರುತ್ತದೆ!

Millets Crop-ಸಿರಿದಾನ್ಯ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ:

ಪ್ರಸ್ತುತ ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಸಿರಿದಾನ್ಯ ಬೆಳೆಗಳನ್ನು ಬೆಳೆಯಲು ಉತೇಜನ ನೀಡಲು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ಬೆಳೆಗಳಿಗೆ ಹೆಚ್ಚು ಬೆಲೆಯನ್ನು ನೀಡಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಕಾಳುಗಳು, ಎಣ್ಣೆಕಾಳುಗಳು ಬೆಳೆಗಳಿಗೆ ಅಧಿಕ ಉತೇಜನ ಒದಗಿಸಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Minimum Support Price Scheme-ಬೆಂಬಲ ಬೆಲೆ ಯೋಜನೆಯಡಿ ರೈತರ ಖಾತೆಗೆ 16.35 ಲಕ್ಷ ಕೋಟಿ:

ಕೇಂದ್ರ ಸರ್ಕಾರದ ಅಧಿಕೃತ ಅಂಕಿ-ಅಂಶದ ಮಾಹಿತಿಯ ಪ್ರಕಾರ 2014-15ರಿಂದ 2024-25ರವರೆಗೆ ಭತ್ತ ಬೆಳೆಗಾರರಿಗೆ 14.16 ಲಕ್ಷ ಕೋಟಿ ರೂ. ಮತ್ತು 14 ಮುಂಗಾರು ಹಂಗಾಮಿನ ಬೆಳೆಗಳಿಗೆ 16.35 ಲಕ್ಷ ಕೋಟಿ ರೂ. ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡಿದ ಉತ್ಪನ್ನದ ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇದಕ್ಕೆ ಹೋಲಿಕೆಯಾಗಿ, 2004-05ರಿಂದ 2013-14ರವರೆಗೆ ಈ ಮೊತ್ತವು ಕ್ರಮವಾಗಿ 4.44 ಲಕ್ಷ ಕೋಟಿ ರೂ. ಮತ್ತು 4.75 ಲಕ್ಷ ಕೋಟಿ ರೂ. ಅಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

WhatsApp Group Join Now
Telegram Group Join Now
Share Now: